Seetha Raama: ಸೀತಾ ಬಗ್ಗೆ ಸೂರಿಗೆ ಹೆಚ್ಚಿದ ಕಾಳಜಿ: ಅನುಮಾನಗೊಂಡ ಭಾರ್ಗವಿ
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಬಹಳ ಸ್ಟ್ರಿಕ್ಟ್ ಆಗಿ ನಡೆದುಕೊಂಡಿದ್ದಾಳೆ. ಮಗಳ ಮುಗ್ಧ ಮನಸ್ಸನ್ನು ಕೂಡ ನೋವಿಸಿರುವ ಸೀತಾ ನಡವಳಿಕೆ ರಾಮ್‌ಗೆ ಬೇಸರ ತಂದಿದೆ.
ಸಿಹಿ ಇನ್ನು ಚಿಕ್ಕವಳಾಗಿದ್ದು, ದೊಡ್ಡವರಂತೆ ನಡೆದುಕೊಳ್ಳಲು ಸೀತಾ ಬಲವಂತವಾಗಿ ಅವಳ ಮೇಲೆ ಒಂದಷ್ಟು ನಿಯಮಗಳನ್ನು ಹೇಳಿದ್ದಾಳೆ. ಹೀಗಾಗಿಯೇ ಸಿಹಿ, ಸೀತಮ್ಮ ಹೇಳಿದ್ದನ್ನು ಫೈನಲ್ ಎಂದು ನಂಬಿದ್ದಲ್ಲದೇ, ಅಮ್ಮನ ಮಾತನ್ನು ಕೇಳುತ್ತಾಳೆ.

ಯಾಕೆಂದರೆ ಸಿಹಿಗೆ ಸೀತಮ್ಮನೇ ಮೊದಲು, ನಂತರವಷ್ಟೇ ಬೇರೆಯವರ ಮಾತು. ಆದರೆ, ಫ್ರೆಂಡ್ ರಾಮ್ ತುಂಬಾ ಕ್ಲೋಸ್ ಆಗಿದ್ದು, ಈಗ ಸೀತಮ್ಮನ ಕೋಪಕ್ಕೆ ಗುರಿಯಾಗಲು ಸಾಧ್ಯವಾಗುತ್ತಿಲ್ಲ.
ರಾಮ್ ಮಾತಿಗೆ ಬೆಲೆ ಕೊಡದ ಸೀತಾ
ಸೀತಾ ಮತ್ತು ರಾಮ್ ಗಾಳಿಪಟವನ್ನು ಆರಿಸುತ್ತಿದ್ದು, ರಾಮ್ ಪದೇ ಪದೇ ಸೀತಾಳಿಗೆ ತನ್ನ ಪರಿಸ್ಥಿತಿ ಅನ್ನು ಅರ್ಥ ಮಾಡಿಸಲು ಯತ್ನಿಸುತ್ತಿದ್ದಾನೆ. ಸುಳ್ಳು ಹೇಳಲು ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ. ಸೀತಾ ಮತ್ತು ಸಿಹಿ ಅನ್ನು ತನ್ನ ಜೀವನದಲ್ಲಿ ಒಂದು ಭಾಗವಾಗಿದ್ದು, ಇಬ್ಬರನ್ನು ಬಿಟ್ಟಿರುವುದು ಕಷ್ಟ ಎಂಬುದನ್ನು ಹೇಳುತ್ತಲೇ ಇದ್ದಾನೆ. ಆದರೆ, ಸೀತಾ ಸ್ವಲ್ಪ ದಿನ ಕಳೆದರೆ, ಎಲ್ಲವೂ ಬದಲಾಗುತ್ತದೆ. ಇಲ್ಲದೇ ಹೋದರೆ ಈಗಿರುವ ಬಾಂಡೇಜ್ ಇನ್ನಷ್ಟು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಸಮಸ್ಯೆ ಆಗಬಹುದು ಎಂದು ಸೀತಾ ಮುಂದಾಲೋಚನೆ ಮಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಹಾಗಾಗಯೇ ರಾಮ್ ಮಾತನ್ನು ಕೂಡ ಸೀತಾ ಕೇಳಿಸಿಕೊಳ್ಳಲು ಕೊಂಚವೂ ಇಷ್ಟಪಡುತ್ತಿಲ್ಲ. ಇದರಿಂದ ರಾಮ್ ಇನ್ನಷ್ಟು ಕುಗ್ಗಿದ್ದಾನೆ.
ಸೀತಮ್ಮನ ಮೇಲೆ ಸಿಹಿಗೆ ಕೋಪ
ಈಗ ಸೀತಾ ಸಂಕ್ರಾಂತಿ ಹಬ್ಬದಂದು ಕೂಡ ಆಫಿಸಿಗೆ ಹೋಗಿದ್ದಾಳೆ. ಸೀತಾಳಿಗೆ ವೀಡಿಯೋ ಕಾಲ್ ಮಾಡಿದ ಸಿಹಿಗೆ ಅಮ್ಮ ಆಫೀಸಿನಿಂದ ಹೊರಗಡೆ ಹೋಗಿರುವುದು ತಿಳಿಯುತ್ತದೆ. ಫ್ರೆಂಡ್ ಜೊತೆ ಮಾತನಾಡಲು ಸಿಹಿ ಬಯಸುತ್ತಾಳೆ. ಆದರೆ ಸೀತಾ, ರಾಮ್‌ಗೆ ಫೋನ್ ಕೊಡುವುದಿಲ್ಲ. ಸ್ವಲ್ಪ ದಿನ ಕಳೆದರೆ, ಸಿಹಿ ರಾಮ್‌ನನ್ನು ಮರೆಯುತ್ತಾಳೆ ಎಂಬುದು ಸೀತಾಳ ಲೆಕ್ಕಾಚಾರ. ಇನ್ನು ಅಮ್ಮ ಹೊರಗಡೆ ಹೋಗಿರುವುದಕ್ಕೆ ಸಿಹಿಗೆ ಕೋಪ ಬರುತ್ತದೆ. ಮೊದಲೇ ಫ್ರೆಂಡ್ ವಿಚಾರವಾಗಿ ಸೀತಮ್ಮ ಬಹಳ ಸ್ಟ್ರಿಕ್ಟ್ ಆಗಿದ್ದಾಳೆ. ಅದರ ಜೊತೆಗೆ ಈಗ ಫೋನ್ ಕೂಡ ಮಾಡಲು ಬಿಡುತ್ತಿಲ್ಲ. ಹೀಗಾಗಿ ಸಿಹಿ ನನಗೆ ಅಮ್ಮ ಮೋಸ ಮಾಡುತ್ತಿದ್ದಾಳೆ. ಸುಳ್ಳು ಹೇಳಲು ಶುರು ಮಾಡಿದ್ದಾಳೆ ಎಂದು ಮುನಿಸಿಕೊಂಡಿದ್ದಾಳೆ.

ಸೀತಾ-ಸೂರಿ ನಡುವೆ ಮಾತುಕತೆ
ಇನ್ನು ಸೂರ್ಯ ಪ್ರಕಾಶ್‌ಗೆ ತನ್ನ ಮೊಮ್ಮಗ ಶ್ರೀರಾಮನ ಮದುವೆ ನೋಡುವ ಆಸೆ. ಅಲ್ಲದೇ, ಸೀತಾ ತನ್ನ ಮನೆಗೆ ಸರಿಯಾದ ಸೊಸೆ ಎಂದು ಗೆಸ್ ಮಾಡಿದ್ದಾರೆ. ಹೀಗಾಗಿ ಸೂರಿ, ಸೀತಾಳನ್ನು ಮಾತನಾಡಿಸುತ್ತಿರುತ್ತಾನೆ. ಪದೇ ಪದೇ ಬಿಗ್ ಬಾಸ್ ಸೀತಾ ಜೊತೆ ಮಾತನಾಡುವುದನ್ನು ನೋಡಿದ ಪ್ರಿಯಾಳಿಗೂ ಅನುಮಾನ ಮೂಡಿಸುತ್ತದೆ. ಆದರೆ ಇದು ಸೀತಾಳಿಗೆ ಅರ್ಥವೇ ಆಗುವುದಿಲ್ಲ. ಸೂರಿ, ಸೀತಾ ಬಗ್ಗೆ ಹೆಚ್ಚು ಕಾಳಜಿ ವಹಿಸಿ, ಮನೆಯವರ ಬಗ್ಗೆ ವಿಚಾರಿಸುತ್ತಾನೆ.
ಭಾರ್ಗವಿಗೆ ಸಿಗದ ಲೆಕ್ಕಾಚಾರ
ಇದೆಲ್ಲವೂ ಭಾರ್ಗವಿಗೆ ಅನುಮಾನ ಮೂಡಿಸುತ್ತದೆ. ಮಾವ ಯಾಕೆ ಸೀತಾ ಮೇಲೆ ಕಾಳಜಿ ತೋರಿಸುತ್ತಿದ್ದಾರೆ. ಸೀತಾಳನ್ನು ರಾಮ್‌ನಿಂದ ದೂರ ಇಡಲು ಪ್ರಯತ್ನಿಸುತ್ತಿರುವ ಭಾರ್ಗವಿಗೆ ಸೀತಾ ಬಗ್ಗೆ ಯಾವ ಲೆಕ್ಕಾಚಾರವೂ ಸರಿಯಾಗಿ ಸಿಗುತ್ತಿಲ್ಲ. ಏನೇ ಆಗಲಿ ಸೀತಾ ಮತ್ತು ರಾಮ್ ಅನ್ನು ಒಂದಾಗಲು ಬಿಡಬಾರದು, ಹೇಗಾದರೂ ಮಾಡಿ ರಾಮ್‌ನನ್ನು ಮತ್ತೆ ಫಾರಿನ್‌ಗೆ ಕಳಿಸಿ ಎಲ್ಲಾ ಆಸ್ತಿ ತಾನೊಬ್ಬಳೇ ಅನುಭವಿಸಬೇಕು ಎಂದುಕೊಂಡಿದ್ದಾಳೆ.


Click it and Unblock the Notifications











