Seetha Rama ; ಚಾಂದಿನಿ ಹಿಂದೆ ಬಿದ್ದ ಅಶೋಕನ ಮೇಲೆ ಹಲ್ಲೆ : ಇದೆಲ್ಲವೂ ಮಾಡಿಸಿದ್ದು ಭಾರ್ಗವಿನಾ..?
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಮತ್ತು ಸೀತಾ ಒಂದಾಗುವಕಾಲ ಬಂದಿದೆ. ಭಾರ್ಗವಿಯೇ ಮುಂದೆ ನಿಂತು ಮದುವೆ ಮಾಡಿಸಲು ಮನಸ್ಸು ಮಾಡಿದ್ದಾಳೆ. ಎಲ್ಲರೂ ಕುಟುಂಬ ಸಮೇತರಾಗಿ ಸೀತಾ ಮನೆಗೆ ಹೆಣ್ಣು ನೋಡುವ ಶಾಸ್ತ್ರಕ್ಕೆಂದು ಆಗಮಿಸಿದ್ದಾರೆ. ತಾವು ತಂದಿರುವ ಸೀರೆಯನ್ನು ಉಡುವಂತೆ ಸೀತಾಳಿಗೆ ಭಾರ್ಗವಿ ಹೇಳುತ್ತಾಳೆ. ಆದರೆ, ಸೀತಾ ತಾನು ಉಟ್ಟಿರುವ ಸೀರೆಯೂ ಕೂಡ ರಾಮ ತಂದು ಕೊಟ್ಟಿರುವುದೇ ಎನ್ನುತ್ತಾಳೆ. ಆಗ ಭಾರ್ಗವಿ ನಾವು ತಂದ ಬಳೆಯನ್ನಾದರೂ ತಗೋ ಎಂದು ಚಿನ್ನದ ಬಳಗಳನ್ನು ಕೊಡುತ್ತಾಳೆ.
ಸೀತಾ-ರಾಮನ ಮಾತನ್ನು ಕದ್ದು ಕೇಳಿದ ಸಾಧನಾ
ಇನ್ನು ಸಿಹಿ ಹೆಣ್ಣು ನೋಡುವ ಶಾಸ್ತ್ರದ ಬಗ್ಗೆ ಹಿಂದಿನ ದಿನವೇ ಪಕ್ಕದ ಮನೆಯವರ ಬಳಿ ಕೇಳಿ ತಿಳಿದುಕೊಂಡಿದ್ದು, ಎಲ್ಲಾ ಕೆಲಸದಲ್ಲೂ ಮುಂದಿದ್ದಾಳೆ. ಹೆಚ್ಚು ಮಾತನಾಡುವ ಸಿಹಿಯನ್ನು ಕಂಡರೆ ಭಾರ್ಗವಿಗೆ ಸಿಟ್ಟು ಬಂದಿದೆ. ಆದರೆ, ಮದುವೆ ಆಗುವವರೆಗೂ ಏನೂ ಮಾಡಲಾಗುವುದಿಲ್ಲ ಎಂದು ಸುಮ್ಮನಿದ್ದಾಳೆ. ಇನ್ನು ಸೀತಾ ಮತ್ತು ರಾಮ ಮಾತನಾಡಬೇಕು ಎಂದು ಹೋದಾಗ ಅಲ್ಲಿಗೆ ಸಾಧನಾ ಬಂದು ಕದ್ದು ಕೇಳಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ಅವಳಿಗೆ ಸೀತಾ ಮತ್ತು ರಾಮನ ಮಾತುಗಳು ಕೇಳಿಸಿಲ್ಲ. ಅಷ್ಟರಲ್ಲಿ ಅನಿ ಬಂದು ಚಿಕ್ಕಿ ಎಂದು ಕೂಗಿದ್ದಾನೆ. ಆಗ ಸಾಧನಾ ಅನಿಗೆ ವಾಶ್ ರೂಮ್ ಗೆ ಹೋಗಬೇಕಂತೆ. ಇಲ್ಲಿ ಎಲ್ಲಿದೆ ಅಂತ ಗೊತ್ತಾಗಲಿಲ್ಲ. ಹಾಗಾಗಿ ಹುಡುಕುತ್ತಾ ಬಂದೆ ಎನ್ನುತ್ತಾಳೆ.

ಗಲಾಟೆ ಮಾಡಿದ ಅನಿಕೇತನ್
ವಾಶ್ ರೂಮ್ ತೋರಿಸಿದ ಬಳಿಕ ಅನಿಕೇತನ್ ಗಲಾಟೆ ಮಾಡುತ್ತಾನೆ. ಬಾತ್ ರೂಮ್ ತುಂಬಾ ಒದ್ದೆಯಾಗಿದೆ. ನನಗೆ ಇಷ್ಟವಿಲ್ಲ. ಈ ಮನೆಯಲ್ಲಿ ಗಾಳಿಯೂ ಬರುತ್ತಿಲ್ಲ. ತುಂಬಾ ಚಿಕ್ಕಮನೆ. ಇಲ್ಲಿಂದ ಬೇಗ ಹೋಗೋಣ ಎಂದು ಹೇಳುತ್ತಾನೆ. ಸಿಹಿ ಬಂದು ನಿಮ್ಮ ಮನೆಯಲ್ಲಿ ಬಾತ್ ರೂಮ್ ಒದ್ದೆ ಆದ ಹಾಗೆ ನಮ್ಮ ಮನೆಯಲ್ಲೂ ಆಗಿದೆ ಅನಿ ಎಂದು ಬುದ್ಧಿ ಹೇಳುತ್ತಾಳೆ. ಆದರೆ, ಅನಿ ನಾನು ಬಾತ್ ಟಬ್ ನಲ್ಲಿ ಸ್ನಾನ ಮಾಡೋದು ಎಂದು ಕಿರುಚಾಡುತ್ತಾನೆ. ಕೊನೆಗೆ ರಾಮ್ ಬಂದು ಈ ಮನೆಯೂ ನಮ್ಮದೇ, ಅಡ್ಜಸ್ಟ್ ಮಾಡಿಕೊಳ್ಳಬೇಕು. ಆಗೆಲ್ಲಾ ಕೂಗಾಡಬಾರದು ಅನಿ ಎಂದು ಬುದ್ಧಿ ಹೇಳುತ್ತಾನೆ.
ತಾಂಬೂಲ ಬದಲಾಯಿಸಿದ ಸಿಹಿ-ಸೂರಿ
ಇನ್ನು ರಾಮ್ ತಾನು ಈ ಮನೆಯನ್ನು ಖರೀದಿಸಿದ್ದು, ಇದಕ್ಕಾಗಿ ಸೀತಾ ಪ್ರತೀ ತಿಂಗಳೂ ಬಾಡಿಗೆ ಕೊಡುತ್ತಿರುವ ವಿಚಾರವನ್ನು ಹೇಳುತ್ತಾನೆ. ಸೀತಾಳ ಸ್ವಾಭಿಮಾನವನ್ನು ಕಂಡು ಸೂರಿ ತಾತನಿಗೆ ಖೂಷಿಯಾಗುತ್ತದೆ. ಸಿಹಿ ಸಂಪ್ರದಾಯ ಬದ್ಧವಾಗಿ ತಾಂಬೂಲವನ್ನು ಬದಲಾಯಿಸಿಕೊಳ್ಳಲು ಮುಂದಾಗುತ್ತಾಳೆ. ಆದರೆ, ಸೂರಿ ತಾತನಿಗೆ ಕಂಡೀಷನ್ ಹಾಕುತ್ತಾಳೆ. ಯಾವುದೇ ಕಾರಣಕ್ಕೂ ಸೀತಮ್ಮನನ್ನು ಅಳಿಸಬಾರದು ಎಂದು ಹೇಳುತ್ತಾಳೆ. ಸೂರಿ ಹಾಗೂ ರಾಮ್ ಇಬ್ಬರೂ ಸಿಹಿ ಕಂಡೀಷನ್ ಗೆ ಒಪ್ಪಿಕೊಳ್ಳುತ್ತಾರೆ. ಇನ್ನು ಈ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು. ಅದಕ್ಕೆ ಎಲ್ಲಾ ವ್ಯವಸ್ಥೆಯನ್ನು ದೇಸಾಯಿ ಕುಟುಂಬವೇ ನೋಡಿಕೊಳ್ಳುವುದಾಗಿ ಸೂರಿ ಹೇಳುತ್ತಾರೆ. ಇರುವ ಒಬ್ಬ ಮೊಮ್ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂಬುದೇ ತಮ್ಮ ಆಸೆ ಎಂದು ಹೇಳುತ್ತಾರೆ.

ಅಶೋಕನಿಗೆ ಹೊಡೆದವರಾರು..?
ಇತ್ತ ಅಶೋಕ್ ಕೆಲಸ ಬಿಟ್ಟು ಚಾಂದಿನಿ ಹಿಂದೆ ಬಿದ್ದಿದ್ದಾನೆ. ಸೀತಾ ಮನೆಗೂ ಬಾರದೇ ತಾನು ಮಲೇಷಿಯಾಗೆ ಹೋಗಿರುವುದಾಗಿ ಪ್ರಿಯಾ ಬಾಯಲ್ಲಿ ಸುಳ್ಳು ಹೇಳಿಸಿದ್ದಾನೆ. ಚರನ್ ಡಿ ಅನ್ನು ಭೇಟಿ ಮಾಡಿ ರುದ್ರ ಪ್ರತಾಪ್ ಏನು ಮಾಡುತ್ತಿದ್ದಾನೆ. ಅವನು ಯಾರ ಜೊತೆಗೆ ಮಾತನಾಡುತ್ತಿದ್ದಾನೆ ಎಂಬೆಲ್ಲಾ ಮಾಹಿತಿಯನ್ನು ತಿಳಿದುಕೊಂಡಿದ್ದಾನೆ. ಆದರೆ, ರುದ್ರಪ್ರತಾಪ್ ಬಲೆಯಲ್ಲಿ ಅಂಜಲಿ ಬಿದ್ದಿರುವ ಸತ್ಯ ಇನ್ನೂ ಅಶೋಕನಿಗೆ ಗೊತ್ತಾಗಿಲ್ಲ. ಮಾತನಾಡಿಕೊಂಡು ಬರುವಾಗ ಯಾರೋ ಅವನ ತಲೆಗೆ ಹೊಡೆದಿದ್ದು, ನಿಂತ ಜಾಗದಲ್ಲೇ ಅಶೋಕ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.


Click it and Unblock the Notifications











