Shrirastu Shubhamasthu: ತುಳಸಿ ರಕ್ಷಣೆಗೆ ಬಂದ ಅವಿ: ಸಮರ್ಥ್‌ಗಾಗಿ ಸಿರಿ ಏನು ಮಾಡಬಹುದು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಿರಿ ಮನದಲ್ಲಿ ಗಂಡ ಸುಳ್ಳು ಹೇಳಿದ್ದಾನೆ. ಸತ್ಯ ಹೇಳುವ ಮನಸ್ಸು ಮಾಡುತ್ತಿಲ್ಲ ಎಂದು ಮನದಲ್ಲೇ ನಿತ್ಯ ಕೊರಗುತ್ತಿದ್ದಾಳೆ.
ಸಂಧ್ಯಾ ಹಣ ಹೊಂದಿಸಲಾಗದೇ ಒದ್ದಾಡುತ್ತಿದ್ದಾಳೆ. ಆದರೆ, ನಂದಿನಿ ಪದೇ ಪದೇ ಫೋನ್ ಮಾಡಿ ಹಣ ಕೊಡು, ಡಬಲ್ ಸೈಟ್ ಕೊಡಿಸುತ್ತೀನಿ ಎಂದು ಪೀಡಿಸುತ್ತಿದ್ದಾಳೆ.
ಹಣಕ್ಕಾಗಿ ಸಂಧ್ಯಾ ಈಗಾಗಲೇ ತನಗೆ ತಿಳಿದ ದಾರಿಯಲ್ಲೆಲ್ಲಾ ಪ್ರಯತ್ನಪಟ್ಟು ಸೋತಿದ್ದಾಳೆ. ಇನ್ಮುಂದೆ ಯಾವ ಪ್ಲಾನ್ ಮಾಡಿ ಹಣ ಪೀಕುತ್ತಾಳೋ ಕಾದು ನೋಡಬೇಕಿದೆ.

ಜನಾರ್ಧನ್ ಮನೆಗೆ ಬಂದ ತುಳಸಿ
ಅಭಿ ಹಾಗೂ ದೀಪಿಕಾ ಮದುವೆ ನಿಂತು ಹೋಗಿದ್ದಕ್ಕೆ ತುಳಸಿ ಮತ್ತು ಮಾಧವ್ ವಿವಾಹವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅಭಿಗೆ ಇದರಿಂದ ಅನ್ಯಾಯವಾಗಿದ್ದು, ಇಬ್ಬರ ಮದುವೆ ಮಾಡಿಸಬೇಕು ಎಂದು ತುಳಸಿ ಈ ಹಿಂದೆಯೇ ಪ್ರಯತ್ನಪಟ್ಟಿದ್ದಳು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಅಭಿಗೆ ಮತ್ತೆ ಮಾತು ಕೊಟ್ಟ ತುಳಸಿ ಧೈರ್ಯ ಮಾಡಿ ಒಬ್ಬಳೇ ಜನಾರ್ಧನ್ ಮನೆಗೆ ಹೋಗಿದ್ದಾಳೆ. ತುಳಸಿ ಒಬ್ಬಳೇ ಹೋಗುವುದು ಬೇಡ ಎಂದು ಅವಿನಾಶ್ ತುಳಸಿಗೆ ಮನೆಯವರೆಗೂ ಡ್ರಾಪ್ ಕೂಡ ಮಾಡಿದ್ದಾನೆ.
ಪೂರ್ಣಿಮಾ ಬಳಿ ಶಾರ್ವರಿ ಪ್ರಶ್ನೆ
ಇತ್ತ ಶಾರ್ವರಿಗೆ ಅಭಿ ಮದುವೆಯಾಗುವುದು ಕೊಂಚವೂ ಇಷ್ಟವಿಲ್ಲ. ಈ ಬಗ್ಗೆ ಅನುಮಾನ ಬಂದು ಪೂರ್ಣಿಮಾಗೆ ಪ್ರಶ್ನೆ ಕೂಡ ಮಾಡಿದ್ದಾಳೆ. ಶಾರ್ವರಿ ಈ ಮದುವೆ ನನಗೆ ಸುತಾರಾಂ ಇಷ್ಟವಿಲ್ಲ. ಜನಾರ್ಧನ್ ಮಗಳಿಗಿಂತಲೂ ಅಭಿಗೆ ಬೇರೆ ಹುಡುಗಿಯ ಜೊತೆಗೆ ಮದುವೆ ಮಾಡಿಸುವುದು ಸರಿ ಎಂದು ಏನೋ ಒಂದು ಹೇಳಿ ಪೂರ್ಣಿಮಾಳನ್ನು ಯಾಮಾರಿಸುತ್ತಾಳೆ.
ತುಳಸಿ ರಕ್ಷಣೆಗೆ ಬಂದ ಅವಿ
ತುಳಸಿ, ಜನಾರ್ಧನ್ ಬಳಿ ದೀಪಿಕಾ ಹಾಗೂ ಅಭಿ ಮದುವೆಗೆ ಒಪ್ಪಿಗೆ ಕೊಡುವಂತೆ ಕೇಳುತ್ತಾಳೆ. ಆದರೆ ಜನಾರ್ಧನ್ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಅಲ್ಲದೇ, ವಾಚ್‌ಮ್ಯಾನ್ ಮೂಲಕ ತುಳಸಿಯನ್ನು ಮನೆಯಿಂದ ಹೊರ ಹಾಕಿಸಲು ಯತ್ನಿಸುತ್ತಾನೆ. ಅದೇ ಸಮಯಕ್ಕೆ ಅವಿನಾಶ್ ಬಂದು ತುಳಸಿಯನ್ನು ರಕ್ಷಿಸುತ್ತಾನೆ.

ಅಭಿ ಆಫೀಸಿಗೆ ಬಂದ ಸಿರಿ
ಇನ್ನು ಸಿರಿಗೆ ಸಮರ್ಥ್ ಅಭಿ ಆಫೀಸಿನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿರುವುದು ಸಂಧ್ಯಾ ಮೂಲಕ ಗೊತ್ತಾಗಿದೆ. ಆದರೆ, ಸಮರ್ಥ್ ತನ್ನ ಬಳಿ ಮ್ಯಾನೇಜರ್ ಎಂದು ಸುಳ್ಳು ಹೇಳಿರುವುದು ಬೇಸರ ಮೂಡಿಸಿದೆ. ಈ ಬಗ್ಗೆ ದತ್ತ ತಾತ ಹಾಗೂ ತುಳಸಿ ಬಳಿ ಮಾತನಾಡಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಸಿರಿ ಹೀಗೆ ಬಿಟ್ಟರೆ, ಸಮರ್ಥ್ ತನಗೆ ಸತ್ಯ ಹೇಳುವುದಿಲ್ಲ ಎಂದು ತಾನೇ ಆಫಿಸಿಗೆ ಹೋಗಿದ್ದಾಳೆ.
ಸಮರ್ಥ್‌ಗೆ ಫೋನ್ ಮಾಡಿ ಎಲ್ಲಿದ್ದೀಯಾ, ನಿನಗೆ ಊಟ ತಂದಿದ್ದೀನಿ ಎನ್ನುತ್ತಾಳೆ. ಸಮರ್ಥ್ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಆದರೂ ಕೂಡ ಮ್ಯಾನೇಜರ್ ರೂಮ್ ಖಾಲಿ ಇರುವುದನ್ನು ನೋಡಿ, ಸಿರಿಯನ್ನು ಇದೇ ನನ್ನ ಕ್ಯಾಬಿನ್ ಎಂದು ತೋರಿಸುತ್ತಾನೆ. ಬಳಿಕ ಅಭಿಯನ್ನು ಮಾತನಾಡಿಸಲು ಸಿರಿ ಹೋಗುತ್ತಾಳೆ.
ಹೆಂಡತಿ ಎದುರು ಸಿಕ್ಕಿ ಬಿದ್ದ ಸಮರ್ಥ್
ಗಂಡನ ಜೊತೆ ಮಾತನಾಡಿ ಹೋಗುತ್ತಿದ್ದ ಸಿರಿಯನ್ನು ಅಭಿ ತನ್ನ ಕ್ಯಾಬಿಗ್ ಕರೆಸಿಕೊಳ್ಳುತ್ತಾನೆ. ಅಭಿ ಬೇಕಂತಲೇ ಸಮರ್ಥ್ ಇಲ್ಲಿ ಮ್ಯಾನೇಜರ್ ಅಲ್ಲ. ಸರ್ವರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂಬುದನ್ನು ತೋರಿಸುತ್ತಾನೆ. ಬೇಕಂತಲೇ ಸರ್ವಿಂಗ್ ಮಾಡಿಸುತ್ತಾನೆ. ಈಗ ಹರ್ಟ್ ಆಗುತ್ತಿದೆಯಾ ಎಂದು ಸಿರಿಗೆ ಪ್ರಶ್ನೆ ಮಾಡುತ್ತಾನೆ. ಆಗ ಸಿರಿ ಇಲ್ಲ ಈ ಎಲ್ಲಾ ಸತ್ಯವೂ ನನಗೆ ಗೊತ್ತಿದೆ ಎನ್ನುತ್ತಾಳೆ. ಆಗ ಸಮರ್ಥ್ ಹಾಗೂ ಅಭಿ ಇಬ್ಬರಿಗೂ ಶಾಕ್ ಆಗುತ್ತದೆ. ಇನ್ನು ಸಿರಿ ಈಗ ಆಫಿಸಿಗೆ ಬಂದಿರುವುದೇ, ಸಮರ್ಥ್ ಕೆಲಸವನ್ನು ಬಿಡಿಸುವ ಸಲುವಾಗಿ.


Click it and Unblock the Notifications











