Seetha Rama ; ರಾಮಗೆ ತಲೆನೋವು ತಂದ ಚಿಕ್ಕಿ : ಭಾರ್ಗವಿಗೆ ಎಚ್ಚರಿಕೆ ಕೊಟ್ಟ ಸತ್ಯ ..!
ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್ ಹಾಗೂ ಪ್ರಿಯಾ ಮದುವೆ ಕುಟುಂಬಸ್ಥರ ನಡುವೆ ಅದ್ಧೂರಿಯಾಗಿ ನಡೆದಿದೆ. ಇಬ್ಬರ ಫಸ್ಟ್ ನೈಟ್ ಕೂಡ ಮುಗಿದಿದೆ. ಅಶೋಕ್ ಆಫೀಸಿನಲ್ಲಿ ಕೆಲಸ ಇದೆ ಎಂದು ಮದುವೆಯಾದ ಮರು ದಿನವೇ ಹೊರಟಿದ್ದಾನೆ. ಇದನ್ನು ನೋಡಿದ ಪ್ರೇಮಾಳಿಗೆ ಹೊಸ ಆತಂಕವಾಗಿದೆ.ಮಗಳು ಮತ್ತು ಅಳಿಯ ಈಗಷ್ಟೇ ಮದುವೆಯಾಗಿದ್ದು, ಇಬ್ಬರೂ ಕೂಡ ಹನಿಮೂನ್ ಗೆ ಹೋಗಿ ಬರಲಿ ಎಂಬುದು ಪ್ರೇಮಾ ಆಸೆ. ಆದರೆ, ಅಶೋಕ್ ಮತ್ತು ಪ್ರಿಯಾಳಿಗೆ ಹನಿಮೂನ್ ಗೆ ಹೋಗಬೇಕು ಎಂಬುದೇನೂ ಇಲ್ಲ.
ಹನಿಮೂನ್ ಬಗ್ಗೆ ತಲೆಕೆಡಿಸಿಕೊಂಡ ಪ್ರೇಮಾ
ಅಶೋಕ್ ಕೂಡ ಹನಿಮೂನ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪ್ರಿಯಾಳಿಗೂ ಹನಿಮೂನ್ ಬೇಕಿಲ್ಲ. ಇದು ಪ್ರೇಮಾ ತಲೆಯಲ್ಲಿ ಹೊಸ ಹುಳವನ್ನು ಬಿಟ್ಟಂತಾಗಿದೆ. ಇದ್ಯಾಕೆ ಇಬ್ಬರೂ ಹೀಗೆ ಎಂದು ಯೋಚಿಸಲು ಶುರು ಮಾಡಿದ್ದಾರೆ. ಪ್ರೇಮಾ ಮಗಳು ಪ್ರಿಯಾಳಿಗೆ ಬುದ್ಧಿ ಹೇಳಲು ಮುಂದಾಗಿದ್ದು, ಪ್ರಿಯಾ ನಮ್ಮ ತಲೆಯಲ್ಲಿ ಏನೇನೋ ತುಂಬಬೇಡ. ನಮ್ಮಿಬ್ಬರ ಆಲೋಚನೆಗಳು ಸರಿಯಾಗಿವೆ ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ. ಇನ್ನು ಮನೆಯಲ್ಲಿ ಸಿಹಿ ಉಳಿದುಕೊಂಡಿದ್ದು, ಅವಳಿಗೆ ಹನಿಮೂನ್ ಎಂದರೆ ಏನು ಎಂಬ ಪ್ರಶ್ನೆ ಎದ್ದಿದೆ. ಸೀತಾಳಿಗೆ ಸಿಹಿಯನ್ನು ಬಿಟ್ಟಿರಲಾರದ ಕಾರಣ, ಬೆಳಗ್ಗೆಯೇ ಫೋನ್ ಮಾಡಿ ಮನೆಗೆ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾಳೆ.

ತಾತನ ಆರೋಗ್ಯದಲ್ಲಿ ಹೆಚ್ಚಿದ ಸಮಸ್ಯೆ
ಇತ್ತ ಭಾರ್ಗವಿ ಕಾಯುತ್ತಿದ್ದ ಸಮಯ ಬಂದಿದೆ. ಸೂರಿ ಆರೋಗ್ಯದಲ್ಲಿ ಇದ್ದಕ್ಕಿದ್ದ ಹಾಗೆಯೇ ಏರುಪೇರಾಗಿದೆ. ಇದರಿಂದ ಮನೆಯವರೆಲ್ಲರೂ ಗಾಬರಿಯಾಗಿದ್ದಾರೆ. ಸೂರಿಗೆ ಬಿಪಿ ಹೆಚ್ಚಾಗಿದ್ದು, ಬಹಳ ಎಚ್ಚರದಿಂದ ನೋಡಿಕೊಳ್ಳಲು ವೈದ್ಯರು ಹೇಳಿದ್ದಾರೆ. ಆದರೆ, ಸೂರಿಗೆ ಈಗ ಮೊಮ್ಮಗ ರಾಮ ಮದುವೆಯನ್ನು ಮಾಡಬೇಕು ಎಂಬ ಆಸೆ. ಹಾಗಾಗಿ ಸೀತೆಯನ್ನು ಮನೆಗೆ ಕರೆಸು. ಅವಳ ಜೊತೆಗೆ ಮಾತನಾಡಬೇಕು. ನಿಮ್ಮಿಬ್ಬರ ಮದುವೆ ಬಗ್ಗೆ ಚರ್ಚಿಸಬೇಕು. ಹಾಗೆಯೇ ಸೀತಾ ಮನೆಯಲ್ಲಿ ಯಾರು ಯಾರು ಇದ್ದಾರೆ ಎಂದು ತಿಳಿದುಕೊಳ್ಳಬೇಕು ಎಂದು ಹೇಳಿದಾಗ ರಾಮ್ ಗೆ ಕೋಪ ಬರುತ್ತದೆ. ಅದಕ್ಕೆ ಈಗಲೇ ಅವಸರವೇನು. ಮೊದಲು ನೀನು ಚೇತರಿಸಿಕೋ, ಸೀತಾ ಮನೆಯಲ್ಲಿ ಇರೋದು ಇಬ್ಬರೇ ಎಂದಾಗ ರಾಮ ನನ್ನು ಭಾರ್ಗವಿ ತಡೆಯುತ್ತಾಳೆ.

ರಾಮಗೆ ತಲೆನೋವು ಕೊಟ್ಟ ಭಾರ್ಗವಿ
ರಾಮನನ್ನು ಸೈಡ್ ಗೆ ಕರೆದುಕೊಂಡು ಹೋಗಿ ಮಾತನಾಡಿಸುವ ಭಾರ್ಗವಿ, ಈಗಲೇ ತಾತನಿಗೆ ಸತ್ಯ ಹೇಳಬೇಡ. ನಾನು ಮಾವನ ಬಳಿ ಸೀತಾಳಿಗೆ ಸಿಹಿ ಮಗಳು ಎಂಬ ಸತ್ಯವನ್ನು ಹೇಳಿಲ್ಲ. ಆ ವಿಚಾರವನ್ನು ಹೇಳಿದರೆ, ಮಾವ ಸೀತಾಳನ್ನು ಒಪ್ಪುವುದಿಲ್ಲ ಎಂದು ಮುಚ್ಚಿಟ್ಟಿದ್ದೀನಿ. ನಿಧಾನವಾಗಿ ಹೇಳಬೇಕು ಎಂದುಕೊಂಡೆ. ಆದರೆ, ಮಾವನ ಆರೋಗ್ಯ ದಿನೇ ದಿನೇ ಕ್ಷಿಣಿಸುತ್ತಿದೆ ಎಂದು ಹೇಳುತ್ತಾಳೆ. ಈಗ ರಾಮ ಗೆ ಇದೊಂದು ದೊಡ್ಡ ತಲೆನೋವಾಗಿದೆ.
ಭಾರ್ಗವಿಗೆ ವಾರ್ನಿಂಗ್ ಕೊಟ್ಟ ಸತ್ಯ
ಭಾರ್ಗವಿ ಮಾತುಗಳನ್ನು ಕೇಳಿಸಿಕೊಂಡ ಸತ್ಯ ಸುಮ್ಮನಿರಲಾರದೇ, ಅತ್ತಿಗೆಗೆ ವಾರ್ನಿಂಗ್ ಕೊಟ್ಟಿದ್ದಾನೆ. ವಾಣಿ ಅತ್ತಿಗೆಯನ್ನು ನೀನು ಕೊಲೆ ಮಾಡಿ ನನ್ನ ತಲೆಗೆ ಕಟ್ಟಿದೆ. ಆದರೆ, ಇವತ್ತಲ್ಲ ನಾಳೆ ಆ ಸತ್ಯ ಎಲ್ಲರಿಗೂ ಗೊತ್ತಾಗೇ ಗೊತ್ತಾಗುತ್ತೆ.

ಈಗ ರಾಮ ಮತ್ತು ಸೀತಾ ಮದುವೆ ವಿಚಾರದಲ್ಲಿ ಆಟವಾಡಲು ನೋಡಬೇಡ. ಅವರಿಬ್ಬರ ಮದುವೆ ನಡೆದೇ ನಡೆಯುತ್ತದೆ. ನೀನು ಸೀತಾ ರಾಮನನ್ನು ಬೇರೆ ಮಾಡುವುದಕ್ಕೆ ಆಗುವುದಿಲ್ಲ. ರಾಮ್ ಬಾಳಲ್ಲಿ ಆಟವಾಡಲು ನೋಡಿದರೆ, ನಾನಂತೂ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ.


Click it and Unblock the Notifications











