Seetha Rama ; ಶುರುವಾಗಿದೆ ಸೀತಾರಾಮನ ಹೊಸ ಅಧ್ಯಾಯ ...!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ರಾಮ ಎಲ್ಲಿ ಪ್ರಾಣ ಕಳೆದುಕೊಳ್ಳುತ್ತಾನೋ. ತನ್ನನ್ನು ಬಿಟ್ಟು ಬಹು ದೂರ ಹೊರಟು ಬಿಡುತ್ತಾನೋ ಎಂಬ ಭಯದಲ್ಲಿ ಸೀತಾ ಸತ್ಯ ಒಪ್ಪಿಕೊಂಡಿದ್ದಾಳೆ. ಮೊದಲ ಸಲ ಮನಬಿಚ್ಚಿ ಮಾತನಾಡಿದ ಸೀತಾ ತನ್ನ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾಳೆ. ಸೀತಾ ಪ್ರೀತಿಯನ್ನು ಒಪ್ಪಿಕೊಂಡ ಖುಷಿ ರಾಮ ಗೆ ಸಿಕ್ಕಿದೆ. ಅಶೋಕ್ ಮತ್ತು ಪ್ರಿಯಾ ಪ್ರೀತಿಯನ್ನು ಸೆಲಬ್ರೇಟ್ ಮಾಡಲು ತಯಾರಿಸಿದ್ದ ಜಾಗದಲ್ಲಿ ಸೀತಾಳಿಗೆ ರಾಮ ಗುಲಾಬಿ ಗುಚ್ಛವನ್ನು ಕೊಟ್ಟು ಸದಾ ಜೊತೆಗಿರುವಂತೆ ಕೇಳಿಕೊಂಡಿದ್ದಾನೆ.

ದಿನವಿಡೀ ಕಾದರೂ ಬಾರದ ರಾಮ

ಸಿಹಿಯನ್ನು ಒಪ್ಪಿಸದೇ ಮದುವೆ ಸಾಧ್ಯವಿಲ್ಲ ಎಂದ ಸೀತಾ ಮಾತಿಗೆ ನಕ್ಕ ರಾಮ, ಅವಳಿಗೆ ನಾನೆಂದರೆ ಇಷ್ಟ. ಸಿಹಿಯನ್ನು ಈ ಮದುವೆಗೆ ಒಪ್ಪಿಸುವ ಜವಾಬ್ದಾರಿ ತನ್ನದು ಎಂದು ಹೇಳಿದ್ದಾನೆ. ಇತ್ತ ಭಾರ್ಗವಿ ಮಾತು ಕೇಳಿ ಮನೆಗೆ ಬಂದ ಚಾಂದಿನಿ ಬೆಳಗ್ಗಿನಿಂದ ರಾಮ ಗಾಗಿ ಕಾದು ಕುಳಿತಿದ್ದಾಳೆ. ಆಫೀಸ್ ಕೆಲಸದ ಮೇಲೆ ಬಂದಿರುವುದಾಗಿ ನಟಿಸುತ್ತಿರುವ ಚಾಂದಿನಿಗೆ ಕಾದು ಕಾದು ಸಾಕಾಗಿದೆ. ಭಾರ್ಗವಿ ರಾಮ ನಿನಗೋಸ್ಕರ 3 ವರ್ಷ ಕಾದಿದ್ದಾನೆ. ನೀನು ಕಾಯಬೇಕು ಎಂದು ಬುದ್ಧಿ ಹೇಳಿದ್ದಾಳೆ. ಆದರೆ, ರಾಮ ಅಲ್ಲಿ ಸೀತಾ ಜೊತೆಗೆ ಕಾಲ ಕಳೆಯುತ್ತಿದ್ದು, ಚಾಂದಿನಿಯನ್ನು ಸಂಪೂರ್ಣವಾಗಿ ದೂರ ಮಾಡಿಕೊಂಡಿದ್ದಾನೆ. ಆದರೆ, ತಾತನ ಬಳಿ ಅವರು ತೋರಿಸಿದ ಹುಡುಗಿಯನ್ನೇ ಮದುವೆಯಾಗುತ್ತೇನೆ ಎಂದಿರುವ ರಾಮ ಈಗ ಏನು ಮಾಡುತ್ತಾನೋ ಗೊತ್ತಿಲ್ಲ.

Written update on episode 19 March seetha rama serial

ಆಹಾ.. ನನ್ನ ಮದುವೆಯಂತೆ ಎಂದ ಪ್ರಿಯಾ

ಇನ್ನು ಪ್ರಿಯಾ ಮತ್ತು ಅಶೋಕ್ ಗೆ ರಾಮ ಸಂಜೆ ಬರಲು ಹೇಳಿರುತ್ತಾನೆ. ಆದರೆ, ಇವರಿಬ್ಬರು ಟೆರೆಸ್ ಮೇಲೆ ಕುಳಿತು ಐಸ್ ಕ್ರೀಂ ಪಾರ್ಟಿ ಮಾಡಿದ್ದಾರೆ. ರಾಮ ಮತ್ತು ಸೀತಾ ಒಂದಾಗಿದ್ದು, ಈ ಸಂದರ್ಭದಲ್ಲಿ ತಾವು ಹೋಗುವುದು ಸರಿಯಲ್ಲ ಎಂದುಕೊಂಡಿದ್ದಾರೆ. ಅಶೋಕ್ ಇಷ್ಟರಲ್ಲಿ ಇಬ್ಬರ ಮದುವೆ ನಡೆಯಲಿದೆ. ನಾಳೆ ನನ್ನ ತಂಗಿ ಅಂಜಲಿಯನ್ನು ಮೀಟ್ ಮಾಡಿಸುತ್ತೇನೆ ಎಂದ ಕೂಡಲೇ ಪ್ರಿಯಾ ಕುಣಿದಾಡಿದ್ದಾಳೆ. ಆಹಾ ನನ್ನ ಮದುವೆಯಂತೆ ಎಂದು ಹಾಡಿ ನಲಿದಿದ್ದಾಳೆ. ಅಶೋಕ್ ಮತ್ತು ಪ್ರಿಯಾ ಮದುವೆ ನೆರವೇರುತ್ತಿದ್ದಂತೆ ರಾಮ ಹಾಗೂ ಸೀತಾ ಮದುವೆ ನಡೆಯುವುದಂತೂ ಪಕ್ಕಾ ಆಗಿದೆ.

ಸೀತಾ ರಾಮನ ಹೊಸ ಅಧ್ಯಾಯ ಶುರು

ಸೀತಾ ರಾಮನ ಹೊಸ ಅಧ್ಯಾಯ ಶುರುವಾಗಿದ್ದು, ಇಬ್ಬರೂ ಭವಿಷ್ಯದ ಬಗ್ಗೆ ಯೋಚಿಸಲು ಶುರು ಮಾಡಿದ್ದಾರೆ. ಮನೆಯವರನ್ನೆಲ್ಲಾ ಒಪ್ಪಿಸುವ ಜವಾಬ್ದಾರಿಯನ್ನು ರಾಮ ಹೊತ್ತುಕೊಂಡಿದ್ದು, ಸೀತಾಳನ್ನು ಎತ್ತಿಕೊಂಡು ನಡೆದಿದ್ದಾನೆ. ಸೀತಾಳನ್ನು ಮನೆಯವರೆಗೂ ಡ್ರಾಪ್ ಮಾಡಿದ್ದು, ಅವಳೊಂದಿಗೆ ಖುಷಿ ಖುಷಿಯಾಗಿ ಕಾಲ ಕಳೆದಿದ್ದಾನೆ. ಸೀತಾ ಕೂಡ ರಾಮ ಜೊತೆಗೆ ಯಾವುದೇ ಅಂಜಿಕೆ ಇಲ್ಲದಂತೆ ನಡೆದುಕೊಂಡಿದ್ದಾಳೆ. ಇಬ್ಬರೂ ಈಗ ಪ್ರೇಮಿಗಳಾಗಿದ್ದು, ವೀಕ್ಷಕರಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡಿದ್ದಾರೆ.

Written update on episode 19 March seetha rama serial

ಇಡೀ ದಿನವನ್ನು ಮೆಲುಕು ಹಾಕಿದ ಸೀತಾ

ಮನೆಗೆ ಬಂದ ಬಳಿಕ ಸೀತಾ ಫುಲ್ ಹ್ಯಾಪಿ ಮೂಡ್ ನಲ್ಲಿ ಇದ್ದಾಳೆ. ಇಡೀ ದಿನ ನಡೆದ ಘಟನೆಗಳನ್ನು ಮೆಲುಕು ಹಾಕುತ್ತಾ ಖುಷಿಯಾಗಿ ದಿನವನ್ನು ಕಳೆದಿದ್ದಾಳೆ. ಮನೆಗೆ ಬಂದವನೇ ರಾಮ ಕೂಡ ಸೀತಾ ಜೊತೆಗೆ ಟೆಲಿಪತಿಯಲ್ಲಿ ಮಾತನಾಡಿದ್ದಾನೆ. ಇಬ್ಬರ ಖುಷಿಗೂ ಪಾರಾವೇ ಇಲ್ಲ. ಹಕ್ಕಿಗಳಂತೆ ಆಗಸದಲ್ಲಿ ತೇಲಾಡುತ್ತಿದ್ದಾರೆ. ಆದರೆ, ರುದ್ರಪ್ರತಾಪ್ ಸೀತಾ ಮತ್ತು ರಾಮ ನನ್ನು ಒಂದಾಗಲು ಬಿಡುತ್ತಾನಾ..? ಇಲ್ಲ ಸೀತಾಳಿಗೆ ಇನ್ನಷ್ಟು ತೊಂದರೆ ಕೊಡುತ್ತಾನಾ ಎಂಬುದನ್ನು ಕಾದುನೋಡಬೇಕಿದೆ.

More from Filmibeat

English summary
finally seethe tells her love to ram they both started new chapter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X