Seetha Raama: ಡೇಟಿಂಗ್ ಹೊರಟ ಸೀತಾ-ರುದ್ರಪ್ರತಾಪ್: ರಾಮನಿಗೆ ಪ್ರಾಣ ಸಂಕಟ
ಸೀತಾ ರಾಮ ಧಾರಾವಾಹಿಯಲ್ಲಿ ಸೀತಾಳಿಗೆ ಮದುವೆಯಾಗುವುದರಿಂದ ಸಿಹಿ ಹಾಗೂ ಸೀತಾ ಇಬ್ಬರೂ ಕೂಡ ಚೆನ್ನಾಗಿರುತ್ತಾರೆ ಎಂಬ ಭಾವನೆಯಲ್ಲಿ ರಾಮ ಮದುವೆಗೆ ಒಪ್ಪಿಸಿದ್ದಾನೆ.
ಆಫೀಸಿನಲ್ಲಿ, ವಠಾರದಲ್ಲಿ ಎಲ್ಲಾ ಕಡೆಯೂ ಸೀತಾ ಮದುವೆಯಾಗುತ್ತಿರುವ ವಿಚಾರವೇ ದೊಡ್ಡ ಸುದ್ದಿಯಾಗಿದೆ. ಇದರಿಂದ ಸೀತಾ ಮುಜುಗರಕ್ಕೆ ಒಳಗಾಗಿದ್ದಾಳೆ.
ಸಿಹಿಗಂತೂ ಫುಲ್ ಖುಷಿಯಾಗಿದೆ. ಸೀತಮ್ಮನಿಗೆ ಮದುವೆಯಾದರೆ, ತನಗೆ ಅಪ್ಪ ಸಿಗುವುದಕ್ಕಿಂತಲೂ ಹೆಚ್ಚಾಗಿ ಸೀತಮ್ಮನಿಗೆ ಕಷ್ಟಗಳು ಇರುವುದಿಲ್ಲ. ಕೆಲಸಕ್ಕೆ ಹೋಗುವಂತಿಲ್ಲ ಎಂದು ಹ್ಯಾಪಿಯಾಗಿದ್ದಾಳೆ.

ಸೀತಾ ಮದುವೆಗೆ ತಯಾರಿ ನಡೆಯುತ್ತಿದೆ
ಸೀತಾ ಅತ್ತಿಗೆ, ಅಜ್ಜಿ ಇಬ್ಬರೂ ಸೇರಿ ಅವಳ ಮದುವೆಗೆ ತಯಾರಿಯನ್ನು ನಡೆಸುತ್ತಿದ್ದಾರೆ. ಮದುವೆಗೆ ಏನೆಲ್ಲಾ ಬೇಕಾಗುತ್ತದೆ ಎಂದು ಲಿಸ್ಟ್ ಮಾಡುತ್ತಿದ್ದಾರೆ. ಶುಕ್ರವಾರವೇ ಸೀತಾ ಮದುವೆ ಇರುವುದರಿಂದ ಸಮಯ ಕಡಿಮೆ ಇದೆ. ಆದರೆ, ಸೀತಾ ತನಗೆ ಮದುವೆ ಫಿಕ್ಸ್ ಆಗಿದ್ದಾಗಿನಿಂದಲೂ ಮೌನಕ್ಕೆ ಜಾರಿದ್ದಾಳೆ. ವಿಧಿ ಇಲ್ಲದೇ, ಮಗಳಿಗೋಸ್ಕರ ಈ ಮದುವೆಗೆ ಒಪ್ಪಿಕೊಂಡಿರುವ ಸೀತಾ ಅನವಶ್ಯಕವಾಗಿ ರಾಮನ ಮೇಲೂ ಕೋಪ ಮಾಡಿಕೊಂಡಿದ್ದಾಳೆ. ಇದು ರಾಮನಿಗೆ ಹಿಂಸೆಯಾಗುತ್ತಿದೆ. ಆಕೆ ಆಫಿಸಿನಲ್ಲಿ ಎಲ್ಲರಿಗೂ ವಿಚಾರ ಗೊತ್ತಾಗಿರುವುದಕ್ಕೂ ಬೇಸರ ಮಾಡಿಕೊಂಡಿದ್ದಾಳೆ.
ಆಫಿಸಿಗೆ ಬಂದ ರುದ್ರಪ್ರತಾಪ್
ಸೀತಾ ಆಫಿಸಿಗೆ ಬರುತ್ತಿದ್ದಂತೆ ಹಿಂದೆಯೇ ಬರುವ ರುದ್ರಪ್ರತಾಪ್ ನಾನು ಸೀತಾಳ ಫಿಯಾನ್ಸೆ. ನನ್ನ ಅವಳ ಮದುವೆ ಫಿಕ್ಸ್ ಆಗಿದೆ ಎಂದು ಸ್ವೀಟ್ ಕೊಡುತ್ತಾನೆ. ಅಶೋಕ, ರಾಮನಿಗೆ ಸಂಕಟವಾಗಲಿ ಎಂದೇ, ಬಂದು ವಿಶ್ ಮಾಡುತ್ತಾನೆ. ರುದ್ರ ಪ್ರತಾಪ್ ಜೊತೆಗೆ ಸೀತಾಳನ್ನು ಡೇಟಿಂಗ್‌ಗೆ ಎಂದು ಕಳಿಸಿಕೊಡುತ್ತಾನೆ.

ಸೀತಾ ಮಾತಿಗೆ ಪ್ರತಿಕ್ರಿಯಿಸದ ರುದ್ರ
ಸೀತಾಳನ್ನು ಹೊರಗಡೆ ಕರೆದುಕೊಂಡು ಹೋಗುವ ರುದ್ರ ಪ್ರತಾಪ್, ಆಕೆಗೆ ಏನು ಬೇಕು ಎಂಬುದನ್ನು ಕೇಳದೇ, ತನಗೆ ಬೇಕಾದುದನ್ನು ಆರ್ಡರ್ ಮಾಡುತ್ತಾನೆ. ಸೀತಾ ನನ್ನ ಒಪ್ಪಿಗೆ ಬಗ್ಗೆ ಒಂದು ಮಾತನ್ನೂ ಕೇಳದೆ ಮದುವೆ ತಯಾರಿ ಮಾಡುತ್ತಿದ್ದೀರಾ? ಎಂದು ಹೇಳುತ್ತಾಳೆ. ಆದರೆ, ರುದ್ರ ಪ್ರತಾಪ್ ಈ ಮಾತಿನ ಗಂಭೀರತೆ ಬಗ್ಗೆ ಕೊಂಚವೂ ಅರ್ಥಮಾಡಿಕೊಳ್ಳುವುದಿಲ್ಲ. ಅಷ್ಟೇ ಅಲ್ಲದೇ, ಮನೆಗೆ ಬಂದು ಇನ್ವಿಟೇಷನ್ ಸೆಲೆಕ್ಟ್ ಮಾಡಲು ಹೇಳುತ್ತಾನೆ.
ರಾಮನಿಗೆ ಪ್ರಾಣ ಸಂಕಟ
ಸೀತಾಳನ್ನು ದೂರ ಮಾಡಿಕೊಳ್ಳುತ್ತಿರುವುದು ರಾಮನಿಗೆ ಕಷ್ಟವಾಗುತ್ತಿದೆ. ಆದರೆ ಈ ಸತ್ಯವನ್ನು ರಾಮ ಯಾರ ಬಳಿಯೂ ಹಂಚಿಕೊಳ್ಳಲು ಆಗುತ್ತಿಲ್ಲ. ಅಶೋಕನಿಗೆ ರಾಮನ ಸಂಕಷ್ಟ ಅರ್ಥವಾಗುತ್ತಿದ್ದರೂ ಕೂಡ ತಾನೇ ಈ ತಪ್ಪುಗಳನ್ನು ಮಾಡಿಕೊಂಡಿದ್ದು ಎಂಬ ಕಾರಣಕ್ಕೆ ಇನ್ನಷ್ಟು ಹಿಂಸೆಯಾಗುವಂತೆ ಮಾತನಾಡುತ್ತಿದ್ದಾನೆ. ರಾಮನಿಗೆ ಚುಚ್ಚಿ ಚುಚ್ಚಿ ಹೇಳುತ್ತಿದ್ದಾನೆ. ರಾಮ ಕೂಡ ಸೀತಾಳ ಮದುವೆಯಾದ ಬಳಿಕ ತಾನು ವಾಪಸ್ ದುಬೈಗೆ ಹೋಗಬೇಕು ಎಂದುಕೊಂಡಿದ್ದಾನೆ. ಆದರೆ, ನಿಜವಾಗಲೂ ಸೀತಾ ಮತ್ತು ರುದ್ರಪ್ರತಾಪ್ ಮದುವೆಯಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಸಿಹಿಗೋಸ್ಕರ ಮದುವೆಗೆ ಒಪ್ಪಿರುವ ಸೀತಾ
ರಾಮ ಬೇಸರದಲ್ಲಿ ಆಫಿಸಿನಿಂದ ಮಧ್ಯಾಹ್ನವೇ ಮನೆಗೆ ಬರುತ್ತಾನೆ. ಇನ್ನು ಸೀತಾ ಮದುವೆಯಾಗುತ್ತಿರುವ ವಿಚಾರವನ್ನು ಚರಣ್ ಡಿ, ಶಕುಂತಲಾಳಿಗೆ ಫೋನ್ ಮಾಡಿ ಹೇಳಿದ್ದಾನೆ. ಈ ಮಾತನ್ನು ಕೇಳಿ ರಾಮ ಬೇಸರದಲ್ಲಿರುವುದು ಇದಕ್ಕೆ ಇರಬೇಕು ಎಂದು ಖುಷಿ ಪಡುತ್ತಾಳೆ. ಇತ್ತ ಸೀತಾ ಕೂಡ ಈ ಮದುವೆಯನ್ನು ಸಿಹಿಗೋಸ್ಕರವೇ ಒಪ್ಪಿಕೊಂಡಿದ್ದಾಳೆ. ಈ ವಿಚಾರವನ್ನು ತಾನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೂ ಅರ್ಥವಾಗುತ್ತಿಲ್ಲ. ಸುಮ್ಮನೆ ತಾನೇಕೆ ರಾಮನ ಮೇಲೆ ಕೋಪ ಮಾಡಿಕೊಳ್ಳಬೇಕು ಎಂದು ತಾನೇ ರಾಮನಿಗೆ ಫೋನ್ ಮಾಡಿ ಮಾತನಾಡುತ್ತಾಳೆ. ಸೀತಾ, ರಾಮನಿಗೆ ಫೋನ್ ಮಾಡಿದ ಮೇಲೆ ಖುಷಿಯಾಗುತ್ತದೆ. ಆಕೆಗೆ ತನ್ನ ಮೇಲೆ ಕೋಪವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.


Click it and Unblock the Notifications











