Seetha Raama: ಅಶೋಕನಿಗೆ ಬೆಂಕಿ ಇಟ್ಟ ಭಾರ್ಗವಿ: ರಾಮ್ ಪ್ರಾಣ ಸ್ನೇಹಿತನನ್ನು ಕಳೆದುಕೊಳ್ಳುತ್ತಾನಾ..?
ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮ್ ಇಬ್ಬರೂ ಮಾತನಾಡುತ್ತಿಲ್ಲ. ಇದಕ್ಕೆ ಕಾರಣವೇ ರಾಮ್ ತಾನು ಯಾರು ಎಂಬ ಸತ್ಯವನ್ನು ಸೀತಾಳಿಂದ ಮುಚ್ಚಿಟ್ಟಿದ್ದು.
ಸುಳ್ಳು ಹೇಳಿ ಸ್ನೇಹ ಗಳಿಸುವ ಅವಶ್ಯಕತೆ ರಾಮ್‌ಗೆ ಏನಿತ್ತು. ರಾಮ್ ಸುಳ್ಳು ಹೇಳಿ ನಂಬಿಕೆ ಗಳಿಸಿದ್ದು, ಮಹಾತಪ್ಪು ಎಂದು ಸೀತಾ ಕೋಪಿಸಿಕೊಂಡಿದ್ದಾಳೆ.
ಇತ್ತ ರಾಮ್ ಮತ್ತು ಸಿಹಿ ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟಿರಲು ಆಗುತ್ತಿಲ್ಲ. ಸಿಹಿಗೆ ಈ ಸುಳ್ಳು, ತಪ್ಪುಗಳ ಬಗ್ಗೆ ಗೊತ್ತಿಲ್ಲ. ಆದರೂ ಸೀತಮ್ಮನ ಮಾತನ್ನು ಕೇಳಬೇಕಿದೆ.

ಮಗಳಿಗಾಗಿ ರಜೆ ಹಾಕಿದ ಸೀತಾ
ಹೀಗಾಗಿ ಸಿಹಿ ಅಮ್ಮ ಸೀತಾ ಮೇಲೂ ಕೋಪಿಸಿಕೊಂಡಿದ್ದಾಳೆ. ನಿತ್ಯ ಫ್ರೆಂಡ್ ರಾಮ್ ಮನೆಗೆ ಬರಬಹುದು ಎಂದು ಕಾಯುತ್ತಲೇ ಇದ್ದಾಳೆ. ಬೇಸರದಲ್ಲಿರುವ ಸಿಹಿಗೆ ಖುಷಿ ನೀಡಬೇಕು. ಅವಳ ಮನಸ್ಸನ್ನು ಡೈವರ್ಟ್ ಮಾಡಬೇಕು ಎಂದು ಹೊರಗೆ ಕರೆದುಕೊಂಡು ಹೊರಟಿದ್ದಾಳೆ. ಇದಕ್ಕೋಸ್ಕರ ಸೀತಾ ಆಫಿಸಿಗೆ ರಜೆ ಹಾಕಿದ್ದಾಳೆ. ಸಿಹಿಗೆ ಇಷ್ಟವಾಗುವಂತಹ ಜಾಗಕ್ಕೆ ಕರೆದುಕೊಂಡು ಹೋಗಿದ್ದು, ಇಡೀ ದಿನ ಸಿಹಿಯನ್ನು ಅವಳಿಷ್ಟದಂತೆ ಆಡಲು ಬಿಟ್ಟಿದ್ದಾಳೆ. ಆದರೆ, ಇದೇ ಸಮಯದಲ್ಲೇ ಸೀತಾಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸೀತಾಗಾಗಿ ಮಿಡಿಯುತ್ತಿರುವ ರಾಮ್
ಸೀತಾ ಮನೆಯಲ್ಲಿ ಇಲ್ಲದಾಗ ನೋಟಿಸ್ ಒಂದು ಬಂದಿದೆ. ಅದು ಸೀತಾ ಅತ್ತಿಗೆ ಸುಲೋಚನಾ ಕೈ ಸೇರಿದೆ. ಸೀತಾ ಮನೆಯನ್ನು ಸೀಜ್ ಮಾಡುವುದಾಗಿ ಬ್ಯಾಂಕ್ ನೋಟೀಸ್ ಕಳುಹಿಸಿದೆ. ಇದನ್ನು ನೋಡಿ ಗಾಬರಿಯಾದ ಸುಲೋಚನಾ, ಸೀತಾ ಆಫಿಸಿನಲ್ಲಿ ಇಲ್ಲಾ ಎಂಬುದು ಗೊತ್ತಿದ್ದರೂ ಆಫಿಸಿನಲ್ಲಿ ರಾಮ್‌ನನ್ನು ಭೇಟಿಯಾಗಿದ್ದಾಳೆ. ಎಮೋಷನಲ್ ಆಗಿ ಮಾತನಾಡಿದ್ದು, ಸೀತಾ ಮನೆ ಸೀಜ್ ಆದರೆ ಅವಳಿಗೆ ಯಾರು ಗತಿ ಎಂದೆಲ್ಲಾ ಗೋಳಾಡಿದ್ದಾಳೆ. ಸೀತಾಗಾಗಿ ಮಿಡಿಯುತ್ತಿರುವ ರಾಮ್ ಮನಸ್ಸು ಸುಲೋಚನಾ ಮಾತಿಗೆ ಕರಗಿದ್ದು, ತಾನು ಹಣ ಕೊಟ್ಟರೆ ಸೀತಾ ತೆಗೆದುಕೊಳ್ಳುವುದಿಲ್ಲ. ಬದಲಿಗೆ ಇವರಿಗೆ ನೀಡೋಣ ಎಂದು ತೀರ್ಮಾನಿಸಿ, ಕೋಟಿ ಕೋಟಿ ಹಣವನ್ನು ಸುಲೋಚನಾ ಅಕೌಂಟ್‌ಗೆ ಟ್ರಾನ್ಸ್ ಫರ್ ಮಾಡುವುದಾಗಿ ತಿಳಿಸಿದ್ದಾನೆ. ಈ ಮಾತನ್ನು ಕೇಳಿದ ಸುಲೋಚನಾ ಫುಲ್ ಖುಷಿಯಾಗಿದ್ದಾಳೆ.

ಭಾರ್ಗವಿ ಮಾಡಿದ ಮಹಾಮೋಸ
ಇನ್ನು ಭಾರ್ಗವಿ ಏನೋ ಹೊಸ ಪ್ಲಾನ್ ಮಾಡಿಕೊಂಡೇ ಆಫಿಸಿಗೆ ಬಂದಿದ್ದಾಳೆ. ಆಫಿಸಿನಲ್ಲಿ ಆಗುತ್ತಿರುವ ಫ್ರಾಡ್‌ಗೆ ಯಾರು ಕಾರಣ ಎಂದು ತಿಳಿಸಲು ರಾಮ್ ಚರಣ್ ಡಿ ಅನ್ನು ಕೇಳುತ್ತಾನೆ. ಭಾರ್ಗವಿ, ಚರಣ್ ಡಿ ಅನ್ನು ಮುಂದಿಟ್ಟುಕೊಂಡು ಕಂಪನಿಗೆ ಸಾಕಷ್ಟು ಸಾಕಷ್ಟು ಮೋಸ ಮಾಡಿದ್ದಾಳೆ. ಆದರೆ ಇದು ತನ್ನ ಚಿಕ್ಕಿಯೇ ಮಾಡಿರುವುದು ಎಂಬ ಸಣ್ಣ ಸುಳಿವೂ ಕೂಡ ರಾಮ್‌ಗಿಲ್ಲ. ರಾಮ್ ತನ್ನ ಚಿಕ್ಕಿಯಿಂದಲೇ ಮನೆ ಮತ್ತು ಆಫಿಸ್ ಅಚ್ಚುಕಟ್ಟಾಗಿ ನಡೆದುಕೊಂಡು ಹೋಗುತ್ತಿದೆ ಎಂದು ನಂಬಿದ್ದಾನೆ. ಆದರೆ, ಆಸ್ತಿಗೋಸ್ಕರ ಭಾರ್ಗವಿ ರಾಮ್ ಕುಟುಂಬಕ್ಕೆ ಮಾಡಿರುವ ಮೋಸದ ಬಗ್ಗೆ ಕೊಂಚವೂ ಅರಿವಿಲ್ಲ.
ಅಶೋಕನ ಮೇಲೆ ದೊಡ್ಡ ಆರೋಪ
ಚರಣ್ ಡಿ, ಭಾರ್ಗವಿ ಹೇಳಿಕೊಟ್ಟಂತೆ ಸುಳ್ಳು ಹೇಳಿದ್ದಾನೆ. ಪಾಪ ರಾಮ್ ಪ್ರಾಣ ಸ್ನೇಹಿತನ ಮೇಲೆ ಗೂಬೆ ಕೂರಿಸಿದ್ದಾನೆ. ಭಾರ್ಗವಿ ಹೇಳಿಕೊಟ್ಟಂತೆ ಅಶೋಕನ ಮೇಲೆ ಆರೋಪ ಮಾಡಿದ್ದಾನೆ. ಭಾರ್ಗವಿಗೆ ಸದ್ಯ ಅಶೋಕ, ರಾಮ್‌ನಿಂದ ದೂರಾಗಬೇಕಿದೆ. ಹೀಗಾಗಿ ಸುಳ್ಳು ಹೇಳಿಸಿದ್ದಾಳೆ. ಆದರೆ, ಭಾರ್ಗವಿ ಬಗ್ಗೆ ಎಲ್ಲಾ ಸತ್ಯವನ್ನೂ ತಿಳಿದಿರುವ ಅಶೋಕ್ ಏನು ಮಾಡುತ್ತಾನೋ ಗೊತ್ತಿಲ್ಲ. ಇತ್ತ ರಾಮ್ ಯಾವ ನಿರ್ಧಾರವನ್ನು ಕೈಗೊಳ್ಳುತ್ತಾನೋ ಅದೂ ಅರ್ಥವಾಗುತ್ತಿಲ್ಲ.


Click it and Unblock the Notifications











