Seetha Rama ; ಸೀತಾಳಿಂದ ದೂರವಾದನಾ ರಾಮ್ : ರುದ್ರಪ್ರತಾಪ್ ಆಟ ಶುರು..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿ , ಸೀತಾ ಹಾಗೂ ರಾಮ ಒಂದಾಗದಂತೆ ಮಾಡಿದ್ದಾಳೆ. ಬೇಕಂತಲೇ ರಾಮ್ ಖರೀದಿಸಿರುವ ಸೀತಾ ವಠಾರಕ್ಕೆ ಆಗಮಿಸಿದ್ದಾಳೆ. ಅಲ್ಲಿಗೆ ಬಂದು ನನ್ನ ಮಗ ರಾಮ ಈ ಮನೆಯನ್ನು ಖರೀದಿ ಮಾಡಿದ್ದಾನೆ. ಹಾಗಾಗಿ ನೋಡಿಕೊಂಡು ಹೋಗೋಣ ಎಂದು ಬಂದೆ ಎಂದು ಎಲ್ಲರಿಗೂ ಹೇಳಿ ಹೋಗುತ್ತಾಳೆ. ರಾಮ ಮನೆಯನ್ನು ಖರೀದಿಸಿರುವ ವಿಚಾರ ತಿಳಿದ ವಠಾರದ ಜನ ಸೀತಾ ಬಗ್ಗೆ ತಪ್ಪು ತಪ್ಪಾಗಿ ಮಾತನಾಡುತ್ತಾರೆ. ರಾಮ್ ಮತ್ತು ಸೀತಾ ಮಧ್ಯೆ ಏನೋ ಇದೆ. ಅದಕ್ಕೆ ರಾಮ ಇಷ್ಟೋಂದು ಸಹಾಯ ಮಾಡುತ್ತಿದ್ದಾನೆ. ಪದೇ ಪದೇ ಮನೆಗೆ ಬರುತ್ತಾನೆ ಎಂದು ಮಾತನಾಡಿಕೊಳ್ಳುತ್ತಾರೆ.

ಪ್ರಪೋಸ್ ಮಾಡಲು ಬಂದ ರಾಮ

ಸೀತಾಳಿಗೆ ತನ್ನ ಮನೆಯನ್ನು ರಾಮ ಖರೀದಿಸಿರುವ ವಿಚಾರ ತಿಳಿಯುತ್ತಿದ್ದಂತೆ ಅವಳಿಗೆ ಬೇಸರವಾಗುತ್ತದೆ. ಜನರ ಮಾತುಗಳು ನೋವನ್ನುಂಟು ಮಾಡುತ್ತದೆ. ಹಾಗಾಗಿ ಸೀತಾ, ದೇಸಾಯಿ ಕಂಪನಿಯಲ್ಲಿನ ಕೆಲಸಕ್ಕೆ ಗುಡ್ ಬೈ ಹೇಳಲು ತೀರ್ಮಾನಿಸಿದ್ದಾಳೆ. ರಾಮ ಸ್ನೇಹವನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಆಲೋಚಿಸಿದ್ದಾಳೆ. ಆದರೆ, ಇತ್ತ ರಾಮ ಸೀತಾಳಿಗೆ ಆದಷ್ಟು ಬೇಗ ಪ್ರಪೋಸ್ ಮಾಡಬೇಕು. ಇಲ್ಲದೇ, ಹೋದರೆ, ಸೂರಿ ತಾತ ಸೀತಾಳನ್ನು ಭೇಟಿ ಮಾಡುತ್ತಾರೆ. ಅದಕ್ಕೂ ಮುನ್ನವೇ ತಾನೇ ಸೀತಾಳಿಗೆ ಪ್ರಪೋಸ್ ಮಾಡಬೇಕು ಎಂದು ತಯಾರಿ ನಡೆಸುತ್ತಿದ್ದಾನೆ. ಸೀತಾಳಿಗೆ ಇಷ್ಟವಾಗುವಂತೆ ರೆಡಿಯಾಗಿ ಮನೆಯಿಂದ ಸೈಕಲ್ ನಲ್ಲಿ ಹೋಗುತ್ತಾನೆ. ಸೀತಾಳಿಗೆ ಡೈಮಂಡ್ ಕೊಟ್ಟು ಪ್ರಪೋಸ್ ಮಾಡುವುದಾ ಇಲ್ಲ ರೆಡ್ ರೋಸ್ ಕೊಡೋದಾ ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಾನೆ.

written update on episode 20 February seetha rama serial

ರಾಮನಿಗೆ ಬೈದು ಕಳಿಸಿದ ಸೀತಾ

ದಾರಿಯಲ್ಲಿ ಹೋಗುವಾಗ ರಾಮ ಕಣ್ಣಿಗೆ ಮಲ್ಲಿಗೆ ಹೂವು ಕಾಣಿಸುತ್ತದೆ. ಅದನ್ನು ಖರೀದಿಸಿ, ಸೀರೆ ಅಂಗಡಿಗೆ ಹೋಗುತ್ತಾನೆ. ಸೀರೆಯನ್ನು ಖರೀದಿಸಿ, ಸೀತಾಳಿಗೆ ಹೂವು ಹಾಗೂ ಸೀರೆ ಕೊಡೋಣ ಎಂದು ನಿರ್ಧರಿಸುತ್ತಾನೆ. ಸೀರೆಯಲ್ಲಿ ಸೀತಾ ಏಂಜಲ್ ರೀತಿ ಕಾಣಿಸುತ್ತಾಳೆ. ಅವಳ ಮನದಲ್ಲೂ ನನ್ನ ಬಗ್ಗೆ ಒಲವಿದೆ. ನಾನು ಪ್ರಪೋಸ್ ಮಾಡಿದರೆ ಅವಳಿಗೆ ಅರ್ಥವಾಗುತ್ತದೆ ಎಂದು ರಾಮ್ ಒಬ್ಬನೇ ಮಾತನಾಡುತ್ತಾ ಹೋಗುತ್ತಾಣೆ. ಬಹಳ ಖುಷಿಯಲ್ಲಿ ವಠಾರಕ್ಕೆ ಹೋಗುತ್ತಾನೆ. ರಾಮನನ್ನು ನೋಡಿದ ವಠಾರದ ಜನ ಪಿಸು ಪಿಸು ಎನ್ನಲು ಶುರು ಮಾಡುತ್ತಾರೆ. ಸೀತಾ ರಾಮ ನನ್ನು ನೋಡಿದ್ದೇ ಸರ್ ಎಂದು ಮಾತನಾಡಿಸಲು ಶುರು ಮಾಡುತ್ತಾಳೆ. ಮನೆ ಬಾಡಿಗೆ ಕೊಡಲು ಇನ್ನೂ ಸಮಯವಿದೆ ಸರ್. ಟೈಂ ಟೈಂಗೆ ಸರಿಯಾಗಿ ಕೊಟ್ಟು ಬಿಡುತ್ತೀನಿ ಎಂದು ಹೇಳುತ್ತಾಳೆ. ರಾಮಗೆ ಸೀತಾ ಮಾತುಗಳು ಶಾಕ್ ಆಗುವಂತೆ ಮಾಡುತ್ತದೆ. ಅಲ್ಲದೇ, ರಾಮ ಸೀತಾ ನಾನು ನಿನ್ನ ಜೊತೆಗೆ ಸ್ವಲ್ಪ ಮಾತನಾಡಬೇಕಿತ್ತು ಎಂದು ಕೇಳಿದರೂ ಸೀತಾ ಬೈಯ್ಯಲು ಆರಂಭಿಸುತ್ತಾಳೆ. ನನ್ನ ಜೀವನದಲ್ಲಿ ಹೀರೋ ಆಗೋದಕ್ಕೆ ಹೀಗೆಲ್ಲಾ ಮಾಡುತ್ತಿದ್ದೀರಾ. ನಿಮ್ಮ ಸಹಾಯದ ಅಗತ್ಯ ನನಗಿಲ್ಲ. ನಿಮ್ಮ ಪಾಡಿಗೆ ನೀವಿರಿ, ನಮ್ಮ ನಡುವೆ ಏನೂ ಇಲ್ಲ. ನೀವು ಹೀಗೆ ಪದೇ ಪದೇ ಮನೆಗೆ ಬಂದರೆ ಜನ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅದರಿಂದ ನನಗೂ ಸಮಸ್ಯೆ ನಿಮಗೂ ಸಮಸ್ಯೆ ಎನ್ನುತ್ತಾಳೆ.

written update on episode 20 February seetha rama serial

ರಾಮಗೆ ಅಪಾಯ ತಂದ ರುದ್ರಪ್ರತಾಪ್

ಅಷ್ಟೇ ಅಲ್ದೇ, ಇದೆಲ್ಲವೂ ನನ್ನ ಮಗಳು ಸಿಹಿ ಭವಿಷ್ಯಕ್ಕೆ ತೊಂದರೆ ಮಾಡುತ್ತದೆ. ನನ್ನ ಮಗಳಿಗೆ ಏನಾದರೂ ಆದರೆ ನಾನಂತೂ ಸುಮ್ಮನಿರುವುದಿಲ್ಲ. ದಯವಿಟ್ಟು ಹೊರಟು ಬಿಡಿ ಎಂದು ಹೇಳಿ ಕಳಿಸುತ್ತಾಳೆ. ರಾಮ ಸೀತಾಳ ಮಾತುಗಳಿಂದ ಬೇಸರಗೊಂಡು ಮಳೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. ಇದೇ ಸಮಯ ಸರಿ ಎಂದು ಭಾವಿಸಿದ ರುದ್ರಪ್ರತಾಪ್ ಆಕ್ಸಿಡೆಂಟ್ ಮಾಡಿಸುತ್ತಾನೆ.

written update on episode 20 February seetha rama serial

ಸಾವು-ಬದುಕಿನ ನಡುವೆ ರಾಮ ನರಳಾಟ

ರಾಮ ಆಸ್ಪತ್ರೆಗೆ ದಾಖಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿರುತ್ತಾನೆ. ಈ ವಿಚಾರ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತದೆ. ಸೀತಾ ನ್ಯೂಸ್ ನೋಡಿದವಳೇ ಗಾಬರಿಯಾಗುತ್ತಾಳೆ. ರಾಮ ತನಗೆ ಮಾಡಿದ್ದೆಲ್ಲವೂ ಒಳ್ಳೆಯದೇ, ಆದರೆ ಈ ಜನ ಸರಿಯಿಲ್ಲ. ಅವರಿಂದ ರಾಮಗೆ ತೊಂದರೆಯಾಗಬಾರದು ಎಂದು ಬೈದು ಕಳಿಸಿರುತ್ತಾಳೆ. ಆದರೆ, ಈ ಸಂದರ್ಭದಲ್ಲೇ ರಾಮಗೆ ಹೀಗಾಗಿರುವುದನ್ನು ತಿಳಿದು ಶಾಕ್ ಆಗುತ್ತಾಳೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಮೂಡಿದೆ.

More from Filmibeat

English summary
Ram tries to propose seetha. But vidhi plays big role and ram met with accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X