Shrirastu Shubhamasthu: ನೋವು ತೋಡಿಕೊಂಡ ತುಳಸಿ: ಜನಾರ್ಧನ್ ಮನೆಗೆ ಬಂದ ದತ್ತ ತಾತ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಆಫಿಸಿನಲ್ಲಿ ಅಭಿ ಬಳಿ ಸಿರಿ ಮಾತನಾಡುತ್ತಿದ್ದಾಳೆ. ಇದೇ ವೇಳೆಯಲ್ಲಿ ಅವಮಾನ ಮಾಡಲೆಂದೇ ಅಭಿ ಕಾಫಿ ಚೆಲ್ಲಿದ್ದಾನೆ.

ಬೇಕಂತಲೇ ಚೆಲ್ಲಿದ ಕಾಫಿಯನ್ನು ಸಮರ್ಥ್ ಕೈಯಲ್ಲಿ ಕ್ಲೀನ್ ಮಾಡಿಸಲು ಮುಂದಾಗಿದ್ದಾನೆ. ಸಮರ್ಥ್ ಅನ್ನು ನೋಡಲಾರದೇ ಸಿರಿ, ಅಭಿಗೆ ಬೈಯುತ್ತಾಳೆ.

ಇನ್ಮುಂದೆ ಸಮರ್ಥ್ ಈ ಕೆಲಸವನ್ನು ಮಾಡುವುದಿಲ್ಲ. ನಿನ್ನ ಮಾತನ್ನು ಅವನು ಕೇಳುವ ಅಗತ್ಯವಿಲ್ಲ ಎಂದು ಜೋರು ಮಾಡುತ್ತಾಳೆ. ಆದರೆ ಅಭಿಗೆ ಸಿರಿ ಹೇಳುತ್ತಿರುವುದು ಅರ್ಥವಾಗುವುದಿಲ್ಲ.

written update on episode 20th December Shrirastu Shubhamasthu serial

ಸಮರ್ಥ್ ಕೆಲಸ ಬಿಡಿಸಿದ ಸಿರಿ

ನಿನ್ನ ಆಫಿಸಿನಲ್ಲಿ ಇನ್ಮುಂದೆ ಸಮರ್ಥ್ ಕೆಲಸ ಮಾಡುವುದಿಲ್ಲ. ನಿನ್ನಂಥಹ ಸ್ಯಾಡಿಸ್ಟ್ ಜೊತೆಗೆ ಸಮರ್ಥ್ ಕೆಲಸ ಮಾಡುವುದು ಬೇಡ. ಸಮರ್ಥ್‌ಗೆ ಇದಕ್ಕಿಂತ ಒಳ್ಳೆಯ ಕೆಲಸ ಸಿಗುತ್ತೆ. ಅಪ್ಪ ಮಾಡಿದ ಆಸ್ತಿಯಲ್ಲಿ ನಿನ್ನಂತೆ ಮೆರೆಯುವುದಿಲ್ಲ. ಮುಂದೊಂದು ದಿನ ನೀನು ನಮ್ಮ ಜಾಗದಲ್ಲಿರುತ್ತೀಯಾ. ನಾವು ನಿನ್ನ ಜಾಗದಲ್ಲಿರುತ್ತೇವೆ. ಆವಾಗ ಮಾತನಾಡುತ್ತೇವೆ. ಸಮರ್ಥ್ ರೆಸಿಗ್ನೇಷನ್ ಲೆಟರ್ ಅನ್ನು ನೀಡುವ ಸಿರಿ, ಅಭಿಗೆ ಕೊನೆಯದಾಗಿ ಮಾತೊಂದನ್ನು ಹೇಳುತ್ತಾಳೆ. ನಿನಗಿಂತಲೂ ಉತ್ತಮ ಸ್ಥಾನದಲ್ಲಿ ಮುಂದೊಂದು ದಿನ ಇರುತ್ತೇವೆ ಎಂದು ಹೇಳುವುದರ ಜೊತೆಗೆ ವಾರ್ನಿಂಗ್ ಕೊಡ ಕೊಟ್ಟು ಬರುತ್ತಾಳೆ.

ತುಳಸಿ ಪರ ಮಾತನಾಡಿದ ಅವಿ

ಇನ್ನು ಜನಾರ್ಧನ್ ಮನೆಗೆ ಹೋಗಿ ದೀಪಿಕಾ ಹಾಗೂ ಅಭಿ ಮದುವೆ ಬಗ್ಗೆ ತುಳಸಿ ಮಾತನಾಡಿದ್ದಕ್ಕೆ, ಜನಾರ್ಧನ್, ಅಭಿಗೆ ಫೋನ್ ಮಾಡಿ ಬೈಯುತ್ತಾನೆ. ಆ ಹೆಂಗಸನ್ನು ಕಳಿಸಿದ್ದಕ್ಕೆ ನನಗೆ ಬೇಸರವಾಗಿದೆ. ಯಾವುದೇ ಕಾರಣಕ್ಕೂ ನಿನಗೆ ದೀಪಿಕಾಳನ್ನು ಕೊಡುವುದಿಲ್ಲ ಎಂದು ಹೆದರಿಸುತ್ತಾನೆ. ಇದರಿಂದ ಬೇಸರಗೊಂಡ ಅಭಿ, ತುಳಸಿಯನ್ನು ಬೈಯುತ್ತಾನೆ. ನಿನ್ನಿಂದ ನನ್ನ ಬದುಕೇ ಹಾಳಾಗುತ್ತಿದೆ ಎಂದು ಹೇಳುತ್ತಾನೆ ಆಗ ಅವಿ, ತುಳಸಿ ಪರ ಮಾತನಾಡುತ್ತಾನೆ. ಜನಾರ್ಧನ್ ಅನ್ನು ಬೈದಿದ್ದು, ತುಳಸಿ ಅವರಲ್ಲ. ನಾನು ಅಲ್ಲಿಗೆ ಹೋಗಿದ್ದೆ. ಎಲ್ಲಾ ತಪ್ಪು ಜನಾರ್ಧನ್‌ನದ್ದೇ. ದುಬೈನಿಂದ ದೀಪಿಕಾ ಇಲ್ಲಿಗೆ ಬಂದರೆ ಸಾಕು. ಅಭಿ ಜೊತೆಗೆ ದೀಪಿಕಾ ಮದುವೆ ಮಾಡಿಸುವುದು ಸುಲಭ ಎಂದು ಅವಿ ಹೇಳುತ್ತಾನೆ.

written update on episode 20th December Shrirastu Shubhamasthu serial

ದೀಪಿಕಾಳಿಗೆ ಬೇರೆ ಮದುವೆ ತಯಾರಿ

ಜನಾರ್ಧನ್ ಬೇಕಂತಲೇ ಯಾವುದೋ ಒಂದು ಸಂಬಂಧವನ್ನು ನೋಡಿದ್ದಾನೆ. ಈಗಲೇ ದೀಪಿಕಾ ಮದುವೆ ಮಾಡಬೇಕು ಎಂದು ತೀರ್ಮಾನಿಸಿದ್ದಾನೆ. ವನಜಾ, ಜನಾರ್ಧನ್‌ಗೆ ಎಷ್ಟೇ ಹೇಳಿದರೂ ಕೇಳುವುದಿಲ್ಲ. ನನ್ನ ಮಾತು ಕೇಳದೇ ತುಳಸಿಯನ್ನು ಮನೆಗೆ ಬಿಟ್ಟಿದ್ದಕ್ಕೆ ಜನಾರ್ಧನ್, ವನಜಾಳ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ತನ್ನ ಬಳಿಯೇ ಇಟ್ಟುಕೊಳ್ಳುತ್ತಾನೆ. ದೀಪಿಕಾಳಿಗೆ ಇಷ್ಟವಿಲ್ಲದಿದ್ದರೂ ಮದುವೆ ಮಾಡಿಸಲು ಮುಂದಾಗಿದ್ದಾನೆ.

ಮಗಳಿಗಾಗಿ ಮಿಡಿದ ದತ್ತ ತಾತ

ಇನ್ನು ತುಳಸಿ, ವನಜಾಳಿಗೆ ಎಷ್ಟೇ ಫೋನ್ ಮಾಡಿದರೂ ಸ್ವಿಚ್ ಆಫ್ ಎಂದೇ ಬರುತ್ತಿದೆ. ಅಲ್ಲದೇ, ಜನಾರ್ಧನ್ ಆಡಿದ ಮಾತುಗಳಿಂದ ತುಳಸಿಗೆ ಕೊಂಚ ಬೇಸರವಾಗಿರುತ್ತದೆ. ಹೀಗಾಗಿ ದತ್ತ ತಾತನಿಗೆ ತುಳಸಿ ಫೋನ್ ಮಾಡಿ ನಡೆದ ವಿಚಾರವನ್ನೆಲ್ಲಾ ಹೇಳಿಕೊಳ್ಳುತ್ತಾಳೆ. ಜನಾರ್ಧನ್, ತುಳಸಿಗೆ ಅವಮಾನಿಸಿದ್ದು, ಹಾಗೂ ದೀಪಿಕಾ ಮತ್ತು ಅಭಿ ಮದುವೆಗೆ ಒಪ್ಪದಿದ್ದಕ್ಕೆ ಕೋಪ ಮಾಡಿಕೊಳ್ಳುತ್ತಾರೆ. ಸೀದಾ ಫೋನ್ ಇಟ್ಟು ಜನಾರ್ಧನ್ ಮನೆಗೆ ದತ್ತ ತಾತ ಬರುತ್ತಾರೆ. ದೀಪಿಕಾಳಿಗೆ ಇಷ್ಟವಿಲ್ಲದ ಮದುವೆ ಮಾಡಿಸುತ್ತಿದ್ದೀಯಾ ಎಂದು ಗಂಡಿನವರ ಎದುರಿಗೇ ಮಾತು ಶುರು ಮಾಡುತ್ತಾರೆ. ಜನಾರ್ಧನ್‌ಗೆ ಕೋಪ ಬರುತ್ತದೆ. ಆದರೆ, ಈಗ ದತ್ತ ತಾತನೇ ಮುಂದೆ ನಿಂತು ದೀಪಿಕಾ ಹಾಗೂ ಅಭಿಯ ಮದುವೆಯನ್ನು ಮಾಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Shrirastu Shubhamasthu serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X