Seetha Raama: ಸೀತಾಳ ಕೊರಳಿಗೆ ಕರಿಮಣಿ ಹಾಕಿದ ಶ್ರೀರಾಮ : ಸಿಹಿಗೆ ಖಷಿಯೋ ಖುಷಿ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸೀತೆಯನ್ನು ಭಾರ್ಗವಿ ಬೇಕಂತಲೇ ಮನೆಗೆ ಕರೆಸುತ್ತಾಳೆ. ಮದುವೆಯಾಗಿ ನಮ್ಮ ಕಂಪನಿಯಿಂದ ಹೊರಡುತ್ತಿರುವುದಕ್ಕೆ ಸಣ್ಣ ಉಡುಗೊರೆ ಕೊಡಲು ಮುಂದಾಗುತ್ತಾಳೆ.

ರಾಮನಿಂದಲೇ ಉಡುಗೊರೆ ಕೊಡಿಸಿದರೆ ಚೆನ್ನಾಗಿರುತ್ತದೆ ಎಂದು ರಾಮನನ್ನು ಕರೆಯಲು ಭಾರ್ಗವಿ ಹೋದಾಗ ಸೀತಾ ಅಲ್ಲಿಂದ ಹೊರಟು ಬಂದಿರುತ್ತಾಳೆ.

ಈಗಲೂ ಸೀತಾಳಿಗೆ ರಾಮ, ದೇಸಾಯಿ ಕುಟುಂಬದವನು ಎಂಬ ಸತ್ಯ ಗೊತ್ತಾಗುವುದಿಲ್ಲ. ರಾಮ ಕೂಡ ಸೀತಾಳ ಜೊತೆಗೆ ಮಾತನಾಡಲು ಬೇಸರದಿಂದ ಅವಾಯ್ಡ್ ಮಾಡುತ್ತಿರುತ್ತಾನೆ.

 written update on episode 21 December seetha raama serial

ರಾಮನ ಬಣ್ಣ ಬಯಲಾಗೋ ಸಮಯ

ರಾಮನನ್ನು ಸಂದರ್ಶನ ಮಾಡಲೆಂದು ಮನೆಗೆ ಪತ್ರಕರ್ತರು ಬಂದಿದ್ದಾರೆ. ಆದರೆ, ರಾಮ ಸಂದರ್ಶನ ಕೊಡಲು ಹಿಂಜರಿಯುತ್ತಾನೆ. ಯಾಕೆಂದರೆ, ಆತನ ಫೋಟೋ ಪೇಪರ್‌ನಲ್ಲಿ ಬಂದರೆ, ಎಲ್ಲರಿಗೂ ತಾವು ಆಫಿಸಿನಲ್ಲಿ ಮಾಡುತ್ತಿರುವ ನಾಟಕ ಗೊತ್ತಾಗಿ ಬಿಡುತ್ತದೆ ಎಂಬುದು ರಾಮ ಮತ್ತು ಅಶೋಕನ ಆಲೋಚನೆ. ಆದರೆ, ಭಾರ್ಗವಿ ಸುಮ್ಮನಿರದೇ, ಫ್ಯಾಮಿಲಿ ಫೋಟೋಗಾದರೂ ನಮ್ಮ ಜೊತೆಗೆ ಫೋಟೋ ತೆಗೆಸಿಕೋ ರಾಮ್ ಎಂದು ಕರೆಯುತ್ತಾಳೆ.

ಸಂದರ್ಶನ ನೀಡಿದ ರಾಮ

ತಾತ ಹಾಗೂ ರಾಮ್ ಇಬ್ಬರೂ ಅಶೋಕನನ್ನೂ ಕೂಡ ಫೋಟೋಗೆ ಬರುವಂತೆ ಕರೆಯುತ್ತಾರೆ. ಆಗ ಭಾರ್ಗವಿ ಕಣ್ಣಿನಲ್ಲೇ ಗುರಾಯಿಸುತ್ತಾ ಅಶೋಕ ಫೊಟೋ ತೆಗೆಸಿಕೊಳ್ಳದಂತೆ ಮಾಡುತ್ತಾಳೆ. ಇನ್ನು ರಾಮ ಸಂದರ್ಶನವನ್ನು ಕೂಡ ನೀಡುತ್ತಾನೆ. ಆದರೆ, ಈ ಸುದ್ದಿ ಯಾವಾಗ ಸೀತಾಳಿಗೆ ತಿಳಿಯುತ್ತದೋ ಗೊತ್ತಿಲ್ಲ.

 written update on episode 21 December seetha raama serial

ಆಸ್ತಿಗಾಗಿ ಮೋಸ ಮಾಡುತ್ತಿರುವ ರುದ್ರಪ್ರತಾಪ್

ಇತ್ತ ರುದ್ರಪ್ರತಾಪ್, ಸೀತಾಳನ್ನು ಮದುವೆಯಾಗುವ ಹಿಂದಿನ ಕಹಿ ಸತ್ಯವೇನೆಂದರೆ, ತನ್ನ ಕ್ಲೈಂಟ್ ಒಬ್ಬರಿಗೆ ಶಾರದಮ್ಮನ ವಠಾರದಲ್ಲಿ ಸೀತಾಳ ಮನೆ ತಮಗೆ ಬೇಕಾಗಿದೆ. ಇದಕ್ಕಾಗಿ ಈಗಾಗಲೇ ರುದ್ರಪ್ರತಾಪ್ ಆ ವಠಾರದಲ್ಲಿರುವ ಮನೆಗಳೆಲ್ಲವೂ ಲಿಟಿಗೇಶನ್‌ನದ್ದು ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಈಗ ರುದ್ರ ಪ್ರತಾಪ್, ಸೀತಾಳನ್ನು ಮದುವೆಯಾಗಿ ಅವಳ ಮನೆಯನ್ನು ತನ್ನ ಮನೆಗೆ ಬರೆಸಿಕೊಂಡು ಕ್ಲೈಂಟ್‌ಗೆ ನೀಡಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೇ, ರುದ್ರಪ್ರತಾಪ್ ಒಬ್ಬ ಸ್ಯಾಡಿಸ್ಟ್. ಸೀತಾಳನ್ನು ಮದುವೆಯಾದ ಮೇಲೆ ಸಿಹಿಗೆ ಹೇಗೆಲ್ಲಾ ಹಿಂಸೆ ಕೊಡುತ್ತಾನೋ ಎಂಬ ಭಯ ಕಾಡುತ್ತಿದೆ.

ಸೀತಾ ಕೊರಳಿಗೆ ಕರಿಮಣಿ ಸರ ಹಾಕಿದ ರಾಮ

ಮದುವೆಗೋಸ್ಕರ ಮಾಂಗಲ್ಯ ಸರವನ್ನು ಖರೀದಿಸಲು ಸೀತಾ, ಅತ್ತಿಗೆ, ಅಜ್ಜಿ, ಅಜ್ಜ ಹಾಗೂ ಸಿಹಿ ಬಂದಿದ್ದಾರೆ. ರುದ್ರ ಪ್ರತಾಪ್‌ಗೋಸ್ಕರ ಕಾಯುತ್ತಿದ್ದಾರೆ. ಈ ವೇಳೆಯಲ್ಲಿ ಸೀತಾ ಕರಿಮಣಿ ಸರವನ್ನು ಆರಿಸಿಕೊಳ್ಳುತ್ತಿದ್ದು, ಸಿಹಿಗೆ ಸಿಕ್ಕಾಪಟ್ಟೆ ಬೋರ್ ಆಗಿದೆ. ಹಾಗಾಗಿ ತನ್ನ ಫ್ರೆಂಡ್ ರಾಮ್‌ಗೆ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಕರಿಮಣಿ ಸರವನ್ನು ಕೊರಳಿಗೆ ಧರಿಸಿ ನೋಡಲು ಸೀತಾ ಮುಂದಾಗಿದ್ದಾಳೆ.

ಅಮ್ಮನ ಮದುವೆ ಮಾಡಿ ಖುಷಿ ಪಟ್ಟ ಸಿಹಿ

ಈ ವೇಳೆಗೆ ಸೀತಾಳಿಗೆ ಕಷ್ಟವಾದ್ದರಿಂದ ರಾಮ್ ಸಹಾಯ ಮಾಡಲು ಮುಂದಾಗುತ್ತಾನೆ. ಸೀತಾಳ ಕೊರಳಿಗೆ ಕರಿಮಣಿ ಸರವನ್ನು ರಾಮ್ ಹಾಕುತ್ತಾನೆ. ಇದನ್ನು ನೋಡಿದ ಸಿಹಿ ನನ್ನ ಫ್ರೆಂಡ್‌ಗೂ ಸೀತಮ್ಮನಿಗೂ ಮದುವೆ ಆಗೋಯ್ತು ಎಂದು ಚಪ್ಪಾಳೆ ತಟ್ಟುತ್ತಾಳೆ. ತಕ್ಷಣವೇ ಎಲ್ಲರೂ ಶಾಕ್ ಆಗಿ ಬಿಡುತ್ತಾರೆ. ಇದೆಂತಹ ಕೆಲಸವಾಯ್ತು ಎಂದು ಗಾಬರಿಯಾಗುತ್ತಾರೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಒಂದು ಕಡೆಯಾಗಿದ್ದರೆ, ವೀಕ್ಷಕರಲ್ಲಿ ಗೊಂದಲೂ ಹೆಚ್ಚಿದೆ. ಆದರೆ ಸೀತಾ ಹಾಗೂ ರಾಮನ ಮದುವೆಯನ್ನು ಎದುರು ನೋಡುತ್ತಿದ್ದವರಿಗೆ ಈ ಸೀನ್ ಬಹಳ ಇಷ್ಟವಾಗಿರುವಿರುವುದಂತೂ ನಿಜ.

More from Filmibeat

English summary
Seetharaama kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X