Seetha Rama : ರಾಮನಿಗಾಗಿ ಮಿಡಿದ ಸೀತಾ ; ಗೆಳೆಯನಿಗೆ ರಕ್ತ ಕೊಟ್ಟ ಪ್ರೇಯಸಿ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ರಾಮನ ಮೇಲೆ ರುದ್ರಪ್ರತಾಪ್ ಅಟ್ಯಾಕ್ ಮಾಡಿಸಿದ್ದಾನೆ. ಬೇಕಂತಲೇ ಅಪಘಾತ ಮಾಡಿಸಿರುವ ಕಾರಣ ರಾಮ ತಲೆಗೆ ತೀರಾ ಪೆಟ್ಟಾಗಿದೆ. ರಾಮನಿಗೆ ಇನ್ನೂ ಪ್ರಜ್ಞೆಯೇ ಬಂದಿಲ್ಲ. ವೈದ್ಯರಿಗೂ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ತೀವ್ರ ರಕ್ತ ಸ್ರಾವವಾಗಿದ್ದು, ರಕ್ತ ಸಿಗದೇ ವೈದ್ಯರು ಒದ್ದಾಡುತ್ತಿದ್ದಾರೆ. ಪೊಲೀಸರು ಅಪಘಾತವಾದ ಸ್ಥಳದಲ್ಲಿ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಮೇಲ್ನೋಟಕ್ಕೆ ಆಕಸ್ಮಿಕ ಎನಿಸಿದರೂ, ಇದು ರಾಮ ಮೇಲಿನ ಕೊಲೆಯ ಯತ್ನವಿರಬಹುದು ಎಂದು ಊಹಿಸಿದ್ದಾರೆ.

ಒಂದೇ ಸಮನೆ ಕಣ್ಣೀರು ಹಾಕುತ್ತಿರುವ ಸಿಹಿ

ಇತ್ತ ಸಿಹಿ ಒಂದೇ ಸಮನೆ ಅಳುತ್ತಿದ್ದಾಳೆ. ಫ್ರೆಂಡ್ ರಾಮನನ್ನು ನೋಡಲೇ ಬೇಕು ಎಂದು ಹಠ ಮಾಡುತ್ತಿದ್ದಾಳೆ. ಅಜ್ಜಿ ತಾತ ಇಬ್ಬರೂ ಕೂಡ ಸಿಹಿ ಅನ್ನು ಸಮಾಧಾನ ಮಾಡಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ನ್ಯೂಸ್ ನೋಡುತ್ತಲೇ ಫ್ರೆಂಡ್ ಸ್ಥಿತಿ ಹೇಗಿದೆ ಎಂಬ ವಿಚಾರವನ್ನು ಸಿಹಿ ತಿಳಿದುಕೊಳ್ಳುತ್ತಿದ್ದಾಳೆ. ಊಟ ತಿಂಡಿ ಮಾಡದೇ, ದೇವರ ಎದುರು ಕುಳಿತುಕೊಂಡು ಪ್ರಾರ್ಥಿಸುತ್ತಿದ್ದಾಳೆ. ಅಜ್ಜಿ-ತಾತ ಕೂಡ ರಾಮ ಬೇಗ ಹುಷಾರಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಸೀತಾ ಮನೆಯಿಂದ ಆಸ್ಪತ್ರೆವರೆಗೂ ನಡೆದುಕೊಂಡೇ ಹೋಗಿದ್ದಾಳೆ. ತನ್ನಿಂದಲೇ ರಾಮಗೆ ಈ ಪರಿಸ್ಥಿತಿ ಬಂತು ಎಂದು ಪಶ್ಚಾತಾಪ ಪಡುತ್ತಿದ್ದಾಳೆ. ರಾಮ ತನಗೋಸ್ಕರ ಎಷ್ಟೆಲ್ಲಾ ಸಹಾಯ ಮಾಡಿದರೂ, ರಾಮಗೆ ನೋವಾಗುವಂತೆ ನಡೆದುಕೊಂಡಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾಳೆ.

Written update on episode 21 February seetha rama serial

ರಾಮನಿಗಾಗಿ ರಕ್ತ ಕೊಟ್ಟ ಸೀತಾ

ಆಸ್ಪತ್ರೆಯಲ್ಲಿ ರಾಮ ಎದುರ ನಿಂತು ಅಳುತ್ತಿರುವ ಸೀತಾ ಪದೇ ಪದೇ ಕ್ಷಮೆ ಕೇಳಿದ್ದಾಳೆ. ರಾಮಗೆ ರಕ್ತ ಬೇಕು ಎಂಬ ವಿಚಾರ ತಿಳಿದ ಕೂಡಲೇ ತನ್ನದು ಒ ಪಾಸಿಟಿವ್ ಎಂದು ಹೇಳಿ ರಕ್ತ ಕೊಟ್ಟಿದ್ದಾಳೆ. ರಾಮ್ ಏನೋ ಹೇಳಲು ಮನೆಗೆ ಬಂದಿದ್ದರು. ಆದರೆ, ನಾನು ಅವರ ಮಾತನ್ನು ಕೇಳದೇ, ಮನಸ್ಸಿಗೆ ಬಂದ ಹಾಗೆ ಬೈದು ಕಳಿಸಿದೆ. ಜನರ ಮಾತಿಗೆ ಕಿವಿಗೊಟ್ಟು ಒಳ್ಳೆಯ ಸ್ನೇಹಿತನಿಗೆ ಇಂಥಹ ಸ್ಥಿತಿ ಬರುವಂತೆ ಮಾಡಿದೆ ಎಂದು ಅಳುತ್ತಲೇ ಇರುತ್ತಾಳೆ. ಸೀತಾ ರಕ್ತ ಕೊಡುತ್ತಿರುವುದನ್ನು ಅಶೋಕ ನೋಡುತ್ತಾನೆ. ರಾಮ ಬಾಡಿಗಾರ್ಡ್ಸ್ ಗಳಿಗೆ ಬೈಯುತ್ತಾನೆ. ರಾಮ ಜೀವಕ್ಕೆ ಅಪಾಯವಿದೆ ಎಂಬುದು ಗೊತ್ತಿದ್ದರೂ ಅವನ ಜೊತೆಗೆ ಇಲ್ಲದ್ದಕ್ಕೆ ಕಪಾಳಕ್ಕೆ ಹೊಡೆದು ಕಳಿಸುತ್ತಾನೆ.

ಅಪಘಾತದ ಹಿಂದಿನ ರಹಸ್ಯ ತಿಳಿದ ಸತ್ಯ

ಇತ್ತ ಸೂರಿ ತಾತ ಕೊರಗುತ್ತಿದ್ದಾರೆ. ಮೊಮ್ಮೊಗ ರಾಮ ಗೆ ಹೀಗೆಲ್ಲಾ ಆಯ್ತು. ಅವನ್ನು ನೋಡಲು ಕೂಡ ವೈದ್ಯರು ಬಿಡುತ್ತಿಲ್ಲ ಎಂದು ಒದ್ದಾಡುತ್ತಿದ್ದಾರೆ. ಭಾರ್ಗವಿಗೆ ಇದೆಲ್ಲವೂ ರುದ್ರಪ್ರತಾಪ್ ನದ್ದೇ ಕೆಲಸ ಎಂಬುದು ಅರ್ಥವಾಗಿದೆ. ರಾಮ ಮಲೇಷಿಯಾಗೆ ಹೋಗಿದ್ದರೆ, ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲ ಎಂದು ಮನದೊಳಗೆ ಮಾತನಾಡಿಕೊಂಡಿದ್ದಾಳೆ. ಸತ್ಯ ಭಾರ್ಗವಿ ಬಳಿ ಹೋಗಿ ಇದೆಲ್ಲಾ ನೀನೇ ಮಾಡಿಸಿರುವುದು ಎಂದು ಆರೋಪಿಸುತ್ತಾನೆ. ಭಾರ್ಗವಿ ಸತ್ಯ ಮಾತಿಗೆ ಕೊಂಚವೂ ಹೆದರುವುದಿಲ್ಲ.

Written update on episode 21 February seetha rama serial

ಮತ್ತೆ ರಾಮನ ಬಾಳಲ್ಲಿ ಚಾಂದಿನಿ ಎಂಟ್ರಿ

ರಾಮಗೆ ಪ್ರಜ್ಞೆಯೇ ಬಂದಿಲ್ಲ. ಹೀಗಿರುವಾಗಲೇ ರಾಮ ಬಾಳಲ್ಲಿ ಹಳೆಯ ಪ್ರೀತಿ ಮತ್ತೆ ಕಾಣಿಸಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿದೆ. ರಾಮ ಹಳೆಯ ಪ್ರೇಯಸಿ ಚಾಂದಿನಿಯ ಎಂಟ್ರಿಯಾಗಲಿದೆ. ಈ ಬಗ್ಗೆ ಸೀತಾರಾಮ ಧಾರಾವಾಹಿಯ ಪ್ರೋಮೋ ಕೂಡ ಪ್ರಸಾರವಾಗಿದ್ದು, ಆದರೆ, ಆ ಚಾಂದಿನಿ ಯಾರು ಎಂಬುದನ್ನು ತೋರಿಸಿಲ್ಲ. ರಾಮ ಮುಂದೆ ತನ್ನ ಹಳೆಯ ಪ್ರೇಯಸಿ ಚಾಂದಿನಿ ಬಂದರೆ, ಸೀತಾಳನ್ನು ಮರೆತು ಬಿಡುತ್ತಾನಾ ಎಂಬ ಕುತೂಹಲ ಮೂಡಿದೆ.

More from Filmibeat

English summary
Seetha gives blood for Ram. Sihi is crying non stopably.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X