Seetha Rama ; ಅಶೋಕ್ ಪ್ರೀತಿ ಬಗ್ಗೆ ತಿಳಿದ ಭಾರ್ಗವಿ ಮದುವೆಗೆ ಅಡ್ಡ ಮಾಡುತ್ತಾಳಾ..?
ಸೀತಾರಾಮ ಧಾರಾವಾಹಿಯಲ್ಲಿ ಚಾಂದಿನಿಯನ್ನೇ ರಾಮಗೆ ಕೊಟ್ಟು ಮದುವೆ ಮಾಡಿಸಬೇಕು. ಆಗ ತನ್ನ ಆಸೆಗಳೆಲ್ಲವೂ ಸುಲಭವಾಗಿ ನೆರವೇರುತ್ತವೆ ಎಂದು ಭಾರ್ಗವಿ ಪ್ಲಾನ್ ಮಾಡಿಕೊಂಡಿದ್ದಾಳೆ.
ಆದರೆ, ಚಾಂದಿನಿಗೆ ತನ್ನ ಮನದಲ್ಲಿ ಅಷ್ಟೇ ಅಲ್ಲ, ಆಕೆಗೆ ತನ್ನ ಜೀವನದಲ್ಲಿ ಜಾಗವೇ ಇಲ್ಲ ಎಂಬಂತೆ ಭಾರ್ಗವಿ ಚಿಕ್ಕಿ ಬಳಿ ರಾಮ ಮಾತನಾಡಿದ್ದಾನೆ. ಚಾಂದಿನಿಗೂ ಕೂಡ ರಾಮ ಮೇಲೆ ಪ್ರೀತಿ ಇಲ್ಲದೆ ಹೋದರೂ ಹಣ ಹಾಗೂ ಸಂಪತ್ತಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ. ದೇಸಾಯಿ ಕುಟುಂಬದಲ್ಲಿ ತಾನೊಬ್ಬಳಾಗುವ ಆಸೆಯನ್ನು ಹೊಂದಿದ್ದಾಳೆ.

ಮುಗ್ಧೆ ಅಂಜಲಿ ಬಾಳಲ್ಲಿ ಕಂಟಕವಾದ ರುದ್ರ
ಇತ್ತ ಸೀತಾಳಿಗೋಸ್ಕರ ರುದ್ರ ಹೊಸ ಪ್ಲಾನ್ ಮಾಡಿಕೊಂಡದ್ದಾನೆ. ರಾಮ ತಂಗಿ ಅಂಜಲಿ ಬಾಳಲ್ಲಿ ಕಂಟಕವಾಗಲು ಮುಂದಾಗಿದ್ದಾನೆ. ಟ್ರೀಟ್ಮೆಂಟ್ ತೆಗೆದುಕೊಳ್ಳುವ ನೆಪದಲ್ಲಿ ಪದೇ ಪದೇ ಅಂಜಲಿಗೆ ತೊಂದರೆ ಕೊಡುತ್ತಲೇ ಇದ್ದಾನೆ. ಪ್ರತಿಯೊಂದು ವಿಚಾರಕ್ಕೂ ಫೊನ್ ಮಾಡಿ ಪ್ರಶ್ನಿಸುತ್ತಲೇ ಇರುತ್ತಾನೆ. ಅಂಜಲಿಗೆ ರುದ್ರ ರಾಮ್ ಹೆಸರಲ್ಲಿ ಪರಿಚಯವಾಗಿದ್ದು, ತುಂಬಾ ಒಳ್ಳೆಯ ವ್ಯಕ್ತಿ ಎಂದು ಭಾವಿಸಿದ್ದಾಳೆ. ಆದರೆ, ಸೀತಾಳಿಗೋಸ್ಕರ ರಾಮ ಗೆ ತೊಂದರೆ ಕೊಡಲು ರುದ್ರ ಪ್ಲಾನ್ ಮಾಡಿರುವ ಸತ್ಯ ಅಂಜಲಿಗೆ ಇನ್ನೂ ಗೊತ್ತಾಗಿಲ್ಲ. ಮನೆಯಲ್ಲೇ ಕುಳಿತು ದೇವಸ್ಥಾನದಲ್ಲಿದ್ದೀನಿ ಇಲ್ಲಿ ನಿಮ್ಮಂತೆ ಒಬ್ಬರಿದ್ದಾರೆ ಎಂದು ನೆಪ ಮಾಡಿಕೊಂಡು ಫೋನ್ ಮಾಡಿ ಅಂಜಲಿಯನ್ನು ಯಾಮಾರಿಸಿದ್ದಾನೆ.
ಸುಬ್ಬಲಕ್ಷ್ಮೀನೇ ಪ್ರಿಯಾ ನಾದಿನಿ
ಇನ್ನು ಅಶೋಕ್ ಮದುವೆ ತಯಾರಿಯ ಮೊದಲ ಹೆಜ್ಜೆ ಎಂಬಂತೆ ತನ್ನ ಸಹೋದರಿ ಅಂಜಲಿಯನ್ನು ಪ್ರಿಯಾಳಿಗೆ ಪರಿಚಯ ಮಾಡಿಸಲು ಮುಂದಾಗಿದ್ದಾನೆ. ಹಾಗಾಗಿ ಮನೆಗೆ ಬರುವಂತೆ ಅಂಜಲಿ ಮತ್ತು ಪ್ರಿಯಾ ಇಬ್ಬರಿಗೂ ಹೇಳುತ್ತಾನೆ. ಅಂಜಲಿ ಮತ್ತು ಪ್ರಿಯಾ ಒಂದೇ ಪಿಜಿಯಲ್ಲಿದ್ದರೂ ಇಬ್ಬರೂ ಅತ್ತಿಗೆ ನಾದಿನಿ ಎಂಬ ಸತ್ಯ ಅವರಿಗೂ ಗೊತ್ತಿರುವುದಿಲ್ಲ. ಅಶೋಕ್ ಮನೆಗೆ ಇಬ್ಬರಿಗೂ ಒಟ್ಟಿಗೆ ಬಂದ ಮೇಲೆಯೇ ಸತ್ಯ ಗೊತ್ತಾಗುತ್ತದೆ. ಇನ್ನು ಅಂಜಲಿಗೆ ಸುಬ್ಬಲಕ್ಷ್ಮೀ ಎಂದು ಪ್ರಿಯಾ ಹೆಸರಿಟ್ಟಿರುವುದನ್ನು ಕೇಳಿ ಅಶೋಕ್ ಬಿದ್ದು ಬಿದ್ದು ನಗುತ್ತಾನೆ. ಅಂಜಲಿ ಕೂಡ ಅಣ್ಣನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ. ಇನ್ನೇನಿದ್ದರೂ ರಾಮ ಮನೆಯಲ್ಲಿ ವಿಷಯ ಹೇಳಿ ಮದುವೆಯಾಗುವುದೊಂದು ಬಾಕಿ ಇದೆ.

ಹುಡುಗಿ ಫೋಟೋ ತೋರಿಸಿದ ಭಾರ್ಗವಿ
ಭಾರ್ಗವಿ ಆದಷ್ಟು ಬೇಗ ಅಶೋಕನ ಮದುವೆ ಮಾಡಿ, ರಾಮಗೆ ಚಾಂದಿನಿ ಜೊತೆಗೆ ವಿವಾಹ ಮಾಡಿಸಲು ಮುಂದಾಗಿದ್ದಾಳೆ. ಅಶೋಕನಿಗೆ ಯಾವ ಹುಡುಗಿ ಆದರೇನು ಎಂದು ಲೋ ಪ್ರೊಫೈಲ್ ಹುಡುಗಿಯರ ಫೋಟೋಗಳನ್ನು ಸೂರಿಗೆ ತೋರಿಸುತ್ತಾಳೆ. ಇದೇ ಫೋಟೋಗಳನ್ನು ಸೂರಿ ತಾತ ರಾಮ ಗೆ ತೋರಿಸಲು ಮುಂದಾದಾಗ, ಇದರ ಅವಶ್ಯಕತೆ ಇಲ್ಲ. ಅಶೋಕ್ ಹುಡುಗಿಯನ್ನು ನಾನೇ ತೋರಿಸುತ್ತೇನೆ ಎಂದು ಹೇಳಿ ಹೋಗುತ್ತಾನೆ. ಆಗ ಸಾಧನಾ ಆಫೀಸ್ ನಲ್ಲಿರುವ ಟೊಮೆಟೋ ಹಣ್ಣಿನಂತಹ ಹುಡುಗಿಯನ್ನು ಅಶೋಕ್ ಪ್ರೀತಿಸುತ್ತಿರುವ ವಿಚಾರದ ಬಗ್ಗೆ ಭಾರ್ಗವಿ ಜೊತೆಗೆ ಮಾತನಾಡುತ್ತಾಳೆ. ಭಾರ್ಗವಿ ಆ ಹುಡುಗಿಯನ್ನು ತಾನೂ ಒಮ್ಮೆ ನೋಡಬೇಕು ಎಂದು ಕೆಟ್ಟ ಉದ್ದೇಶದಿಂದ ಬಯಸುತ್ತಾಳೆ. ಅಶೋಕ್ ಮತ್ತು ಪ್ರಿಯಾ ಮದುವೆಗೆ ಭಾರ್ಗವಿ ಅಡ್ಡಿ ಆಗುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

ಪಿಜ್ಜಾ ಪಾರ್ಟಿ ಮಾಡಿದ ಸಿಹಿ-ರಾಮ
ಸಿಹಿಗೆ ಪಿಜ್ಜಾ ತಿನ್ನುವ ಆಸೆಯಾಗಿದೆ. ಆದರೆ, ಸೀತಾ ಅದೆಲ್ಲಾ ಬೇಡ, ಸುಮ್ಮನೇ ದುಡ್ಡು ಖರ್ಚಾಗುತ್ತೆ ಎಂದು ಹೇಳುತ್ತಿದ್ದಾಳೆ. ಇದೇ ಸಮಯಕ್ಕೆ ಸರಿಯಾಗಿ ರಾಮ ಫೋನ್ ಮಾಡಿದ್ದು, ಸೀತಮ್ಮ ಕಂಜೂಸ್ ಎಂದು ಸಿಹಿ ತನ್ನ ಪಿಜ್ಜಾ ತಿನ್ನುವ ಬಯಕೆಯನ್ನು ಹೇಳಿಕೊಂಡಿದ್ದಾಳೆ. ರಾಮ ಡೆಲಿವರಿ ಬಾಯ್ ವೇಷದಲ್ಲಿ ಪಿಜ್ಜಾ ತಂದು ಮನೆ ಮುಂದೆ ನಿಂತಿದ್ದು, ಸೀತಾ ಮನಸ್ಸನ್ನು ಒಲಿಸಿ ಸಿಹಿ ಜೊತೆಗೆ ಪಿಜ್ಜಾ ಪಾರ್ಟಿ ಮಾಡಲು ರಾಮ ಮುಂದಾಗಿದ್ದಾನೆ.


Click it and Unblock the Notifications











