Seetha Rama ; ಸೂರಿ ತಾತನಿಗಾಗಿ ಸಿಹಿ ವಿಚಾರವನ್ನು ಮುಚ್ಚಿಡುತ್ತಾಳಾ ಸೀತಾ..?
ಸೀತಾರಾಮ ಧಾರಾವಾಹಿಯಲ್ಲಿ ಸೀತಾಳಿಗೆ ಮಗಳು ಸಿಹಿಯನ್ನು ಒಂದು ರಾತ್ರಿ ಬಿಟ್ಟಿದ್ದಕ್ಕೆ ಬಹಳ ಕಷ್ಟವಾಗುತ್ತಿದೆ. ಅವಳನ್ನು ನೋಡಬೇಕು ಎಂದು ಬೆಳಗ್ಗೆ ಎದ್ದು ಪ್ರಿಯಾ ಮನೆ ಕಡೆ ಹೊರಟಿದ್ದಾಳೆ. ಅಷ್ಟರಲ್ಲಿ ರಾಮ ಬಂದಿದ್ದು, ಸೀತಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ.ತಾತನಿಗೆ ಹುಷಾರಿಲ್ಲ ನಿಮ್ಮ ಜೊತೆ ಮಾತನಾಡಬೇಕಂತೆ ಬನ್ನಿ ಎಂದು ಕರೆದಿದ್ದಾನೆ. ಸೀರೆ ಉಟ್ಟುಕೊಂಡು ಬರುತ್ತೀನಿ ಎಂದು ಸೀತಾ ಹೇಳಿದರೂ, ಅಷ್ಟೆಲ್ಲಾ ಬೇಡ ಎನ್ನುತ್ತಾನೆ. ಸಿಹಿಯನ್ನು ಕರೆದುಕೊಂಡು ಹೋಗೋಣ ಎಂದರೂ ಬೇಡ ಎಂದು ಮನೆಗೆ ಕರೆದುಕೊಂಡು ಹೋಗುತ್ತಾನೆ.
ಸಿಹಿ ಬಗ್ಗೆ ಹೇಳಬೇಡಿ ಎಂದ ಭಾರ್ಗವಿ
ರಾಮ ಮನೆಗೆ ಬಂದ ಸೀತಾಳಿಗೆ ದೊಡ್ಡ ಶಾಕ್ ಕಾದಿರುತ್ತದೆ. ಭಾರ್ಗವಿ ಸೀತಾಳ ಬಳಿ ಬಂದು ಮಾವನ ಆರೋಗ್ಯದ ಸ್ಥಿತಿ ಕೈ ಮೀರುವಂತಿದೆ. ಅವರ ಬಳಿ ಮಾತನಾಡುವಾಗ ಸ್ವಲ್ಪ ಎಚ್ಚರವಾಗಿ ಮಾತನಾಡಿ ಎನ್ನುತ್ತಾಳೆ. ಇದು ಸೀತಾಳಿಗೆ ಅರ್ಥವಾಗುವುದಿಲ್ಲ. ಆಗ ವಿಶ್ವ ಬಂದು ಈ ಸಂದರ್ಭದಲ್ಲಿ ನಿಮಗೆ ಮಗಳು ಸಿಹಿ ಇರುವ ವಿಚಾರವನ್ನು ಹೇಳಬೇಡಿ. ಅಪ್ಪ ಹೇಗೆ ಈ ವಿಚಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾನೆ. ಸೀತಾಳಿಗೆ ಈ ಮಾತನ್ನು ಕೇಳಿದ ಕೂಡಲೇ ಶಾಕ್ ಆಗುತ್ತದೆ. ಭಾರ್ಗವಿ ಈಗ ಈ ವಿಚಾರವನ್ನು ಹೇಳಬೇಡಿ ಅಷ್ಟೇ ಸಮಯ ಬಂದಾಗ ನಾನೇ ಹೇಳುತ್ತೀನಿ ಎನ್ನುತ್ತಾಳೆ.

ತಾತನ ಜೊತೆಗೆ ಮಾತನಾಡಿದ ಸೀತಾ
ಆಗ ಸೀತಾ ಸಿಹಿ ಇಲ್ಲದೇ ನಾನಿಲ್ಲ. ಹಾಗಂದ ಮೇಲೆ ನಾನು ಹೇಗೆ ಸಿಹಿ ವಿಚಾರವನ್ನು ಮುಚ್ಚಿಡಲಿ ಎಂದು ಹೇಳುತ್ತಾಳೆ. ಅದಕ್ಕೆ ರಾಮ್ ನಿಮ್ಮ ಮನಸ್ಸಿಗೆ ಯಾವುದು ಸರಿ ಅನಿಸುತ್ತೋ ಹಾಗೆ ಮಾಡಿ ಸೀತಾ ಎಂದು ಹೇಳಿ ಕಳಿಸುತ್ತಾನೆ. ಸೀತಾ ಸೂರಿ ಜೊತೆಗೆ ಮಾತನಾಡಲು ಮುಂದಾದಾಗ ಸೂರಿಗೆ ಖುಷಿಯಾಗುತ್ತದೆ. ಸೀತಾ ಆದಷ್ಟು ಬೇಗ ನನ್ನ ಮೊಮ್ಮಗನನ್ನು ಮದುವೆಯಾಗು. ನನಗೆ ಆಗ ಸಮಾಧಾನವಾಗುತ್ತದೆ. ಆದಷ್ಟು ಬೇಗ ನಿಮ್ಮ ಮನೆಗೆ ಬಂದು ಮದುವೆ ಮಾತುಕತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆಗ ಸೀತಾ ತನ್ನ ಮನೆಯಲ್ಲಿ ಯಾರೂ ಇಲ್ಲ. ಅಣ್ಣ ಅತ್ತಿಗೆ ಅವರ ಮನೆಯಲ್ಲಿದ್ದಾರೆ. ಇನ್ನು ತಂದೆ ತಾಯಿ ಸ್ಥಾನದಲ್ಲಿ ಶಾಂತಜ್ಜಿ ಹಾಗೂ ಮೂರ್ತಿ ತಾತ ಇದ್ದಾರೆ ಎಂದು ಹೇಳುತ್ತಾಳೆ. ಸಿಹಿ ವಿಚಾರವನ್ನು ಅನಿವಾರ್ಯವಾಗಿ ಮುಚ್ಚಿಡುತ್ತಾಳೆ.
ಅಂಜಲಿ ಫೋನ್ ನಲ್ಲಿ ರುದ್ರಪ್ರತಾಪ್ ಫೋಟೋ
ಇತ್ತ ಸಿಹಿ ಅಂಜಲಿ ಫೋನ್ ನಿಂದ ಸೂರಿ ತಾತನಿಗೆ ಕಾಲ್ ಮಾಡುತ್ತಾಳೆ. ನಿಮಗೆ ಹುಷಾರಿಲ್ಲವಂತೆ. ಹೇಗಿದ್ದೀರಾ ಎಂದು ವಿಚಾರಿಸುತ್ತಾಳೆ. ಸಿಹಿ ಜೊತೆ ಮಾತನಾಡಲು ಇಷ್ಟ ಪಡುವ ಸೂರಿ ಖುಷಿ ಖುಷಿಯಾಗಿ ಮಾತನಾಡುತ್ತಾರೆ. ನಿನ್ನನ್ನು ನೋಡಬೇಕು ಎನಿಸುತ್ತಿದೆ ಬಾ ಎಂದು ಕರೆದಿದ್ದಕ್ಕೆ, ನೀವೆ ಬಂದು ಕರೆದುಕೊಂಡು ಹೋಗಿ ಎನ್ನು ಸೀತಮ್ಮನ ಬಗ್ಗೆಯೂ ಹೇಳುತ್ತಾಳೆ. ಆದರೆ, ಸೂರಿ ಸೀತಮ್ಮ ಎಂದಿದ್ದನ್ನು ಗಮನಕ್ಕೆ ಹಾಕಿಕೊಳ್ಳುವುದಿಲ್ಲ. ಫೊನ್ ಇಟ್ಟ ಕೂಡಲೇ ಸಿಹಿ ಅಕಸ್ಮಾತ್ ಆಗಿ ರುದ್ರಪ್ರತಾಪ್ ಫೋಟೋವನ್ನು ಅಂಜಲಿ ಫೋನ್ ನಲ್ಲಿ ನೋಡಿ ಗಾಬರಿಯಾಗುತ್ತಾಳೆ.

ನೊಂದುಕೊಂಡ ಸೀತಾಳಿಗೆ ರಾಮನ ಹೆಗಲು
ತಾತನ ಬಳಿ ಮಾತನಾಡಿದ ಬಳಿಕ ಸೀತಾಳಿಗೆ ಬಹಳ ಬೇಸರವಾಗುತ್ತದೆ. ಹೊರಗೆ ಬಂದ ಕೂಡಲೇ ನಾನು ಹೋಗಿ ಬರುತ್ತೇನೆ ಎಂದು ಹೇಳಿ ಹೊರಟು ಬಿಡುತ್ತಾಳೆ. ರಾಮ್ ಸೀತಾಳ ಹಿಂದೆಯೇ ಬಂದು ಸಮಾಧಾನ ಮಾಡಲು ಯತ್ನಿಸುತ್ತಾನೆ. ಆದರೆ, ಸೀತಾಳಿಗೆ ಬೇಸರವಾದ ಕಾರಣ ನಾನು ಈಗಲೇ ಸಿಹಿಯನ್ನು ನೋಡಬೇಕು. ಅವಳಿಲ್ಲದೇ ನಾನಿಲ್ಲ ಎನ್ನುತ್ತಾಳೆ. ಅದಕ್ಕೆ ರಾಮ ನೀವು ನನ್ನನ್ನು ಒಪ್ಪಿಕೊಂಡ ದಿನವೇ ನಾನು ಸಿಹಿ ಅನ್ನು ನನ್ನ ಮಗಳು ಎಂದು ಒಪ್ಪಿಕೊಂಡಿದ್ದೇನೆ ಎಂದು ಹೇಳುತ್ತಾನೆ. ಇಬ್ಬರೂ ಕೂಡ ಸಿಹಿಯನ್ನು ನೋಡಲು ಹೊರಡುತ್ತಾರೆ.


Click it and Unblock the Notifications











