Seetha Rama ; ಹಳೆಯ ಪ್ರೇಮಿ ರಾಮ ನನ್ನು ನೋಡಲು ಬಂದ ಚಾಂದಿನಿ
ಸೀತಾರಾಮ ಧಾರಾವಾಹಿಯಲ್ಲಿ ರಾಮ ಗೆ ಅಪಘಾತ ಸಂಭವಿಸಿದ್ದು. ಪ್ರಜ್ಞೆ ಇಲ್ಲದೇ ಮಲಗಿದ್ದಾನೆ. ರಾಮ ಸ್ಥಿತಿ ಬಗ್ಗೆ ವೈದ್ಯರು ಕೂಡ ಏನೂ ಹೇಳದೇ ಸುಮ್ಮನಿದ್ದಾರೆ. ಅಶೋಕ್ ಸ್ನೇಹಿತನ ಪರಿಸ್ಥಿತಿ ಕಂಡು ಕೊರಗುತ್ತಿದ್ದು, ಆದಷ್ಟು ಬೇಗ ರಾಮ ಹುಷಾರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾನೆ. ಇದರ ನಡುವೆ ರಾಮ ಕನವರಿಸಲು ಆರಂಭಿಸಿದ್ದು, ಕುಟುಂಬದವರೆಲ್ಲಾ ರಾಮ ನನ್ನು ನೋಡಲು ಆಗಮಿಸಿದ್ದಾರೆ. ಸತ್ಯ ಚಿಕ್ಕಪ್ಪನಿಗೆ ರಾಮ ಸ್ಥಿತಿಯನ್ನು ಕಂಡು ತೀರಾ ಬೇಸರವಾಗಿದೆ.
ಭಾಷೆ ತೆಗೆದುಕೊಂಡ ಸೀತಾ
ಸೀತಾ ರಾಮ ಗಾಗಿ ರಕ್ತ ನೀಡಿದ್ದು, ಈ ವಿಚಾರ ಅಶೋಕನಿಗೆ ಗೊತ್ತಾಗಿದೆ. ಸೀತಾಳ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳಲು ಬಂದ ಅಶೋಕನ ಬಳಿ ಸೀತಾ ಮಾತು ತೆಗೆದುಕೊಂಡಿದ್ದಾಳೆ. ರಾಮ ಗೆ ತಾನೇ ರಕ್ತ ನೀಡಿದ ಬಗ್ಗೆ ಯಾವುದೇ ಕಾರಣಕ್ಕೂ ಯಾರಿಗೂ ಹೇಳಬಾರದು ಎಂದು ಭಾಷೆ ತೆಗೆದುಕೊಳ್ಳುತ್ತಾಳೆ. ಅಶೋಕ್ ಕೂಡ ಮಾತು ಕೊಟ್ಟು ಸುಮ್ಮನಾಗುತ್ತಾನೆ. ಅಶೋಕ ಸೀತಾ ಬಳಿ ರಾಮ ಏನು ಮಾತನಾಡಿದ ಎಂದು ಕೇಳುತ್ತಾನೆ. ಅಷ್ಟರಲ್ಲಿ ನರ್ಸ್ ಬಂದು ರಾಮ ಕನವರಿಸುತ್ತಿರುವ ವಿಚಾರವನ್ನು ಹೇಳುತ್ತಾರೆ. ಆಗ ಇಬ್ಬರೂ ರಾಮ ನನ್ನು ನೋಡಲೆಂದು ಹೊರಡುತ್ತಾರೆ.

ಕಣ್ಣೀರು ಹಾಕಿದ ಸೂರಿ ತಾತ
ಇತ್ತ ಸೂರಿ ತಾತ ಮೊಮ್ಮಗನ ಸ್ಥಿತಿಯನ್ನು ಕಂಡು ಕಣ್ಣೀರು ಹಾಕುತ್ತಾರೆ. ಈ ವಯಸ್ಸಲ್ಲಿ ನಾನು ನನ್ನ ಮೊಮ್ಮಗನನ್ನು ಹೀಗೆ ನೋಡಬೇಕಾ. ಯಾಕೆ ಹೀಗೆಲ್ಲಾ ಆಯ್ತು ಎಂದು ನೊಂದುಕೊಳ್ಳುತ್ತಾರೆ. ಬಳಿಕ ಅಶೋಕನನ್ನು ಭೇಟಿ ಮಾಡುವ ಸೂರಿ ತಾತ ನಾನೇ ರಾಮ ಗೆ ಸೀತಾ ಜೊತೆಗೆ ಮಾತನಾಡಲು ಬಲವಂತ ಮಾಡಿದೆ. ಇದರಿಂದಲೇ ರಾಮಗೆ ಇಂತಹ ಪರಿಸ್ಥಿತಿ ಬಂದಿದೆ. ಆದಷ್ಟು ಬೇಗ ನಾನು ಸೀತಾಳನ್ನು ಭೇಟಿ ಮಾಡಬೇಕು. ಅವರಿಬ್ಬರು ಏನು ಮಾತನಾಡಿದರು ಎಂದು ಹೇಳುತ್ತಾರೆ. ಅಶೋಕ ಕೂಡ ಸೀತಾಳನ್ನು ಕರೆಸುವ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ.
ಚಾಂದಿನಿ ಪಾತ್ರದಲ್ಲಿ ರಮೋಲಾ
ಇನ್ನು ಸೀತಾಳನ್ನು ರಾಮ ಇರುವ ರೂಮ್ ಗೆ ಕರೆದುಕೊಂಡು ಹೋದಾಗ ಭಾರ್ಗವಿ ಬೇಕಂತಲೇ ರೇಗುತ್ತಾಳೆ. ಕುಟುಂಬದವರಿಗೆ ಮಾತ್ರವೇ ರಾಮ ನನ್ನು ನೋಡಬೇಕು ಎಂದು ಹೇಳಿ ಕಳಿಸುತ್ತಾಳೆ. ಸ್ವಲ್ಪ ಹೊತ್ತಿಗೆ ರಾಮ ಎಕ್ಸ್ ಲವರ್ ಚಾಮದಿನಿ ಎಂಟ್ರಿ ಕೊಡುತ್ತಾಳೆ. ಹೂವಿನ ಬೊಕ್ಕೆ ಹಿಡಿದು ಬಂದು ರಾಮ ನನ್ನು ನೋಡಬೇಕು ಎನ್ನುತ್ತಾಳೆ. ಭಾರ್ಗವಿ ಚಾಂದಿನಿಗೆ ಅವಕಾಶ ಮಾಡಿಕೊಡುತ್ತಾಳೆ. ಇದನ್ನು ಅಶೋಕ್ ಖಂಡಿಸುತ್ತಾನೆ. ಆದರೆ, ಭಾರ್ಗವಿ ಅಶೋಕನಿಗೆ ಬೈಯುತ್ತಾಳೆ. ರಾಮ ಗೆ ಯಾವಗ ಏನು ಕೊಡಬೇಕು. ಅವನ ಅವಶ್ಯಕತೆಗಳು ಎಷ್ಟು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿ ಹೋಗುತ್ತಾಳೆ.

ನಟಿ ರಮೋಲಾ ಇತರೆ ಪಾತ್ರಗಳು
ಇನ್ನು ಚಾಂದಿನಿ ಪಾತ್ರದಲ್ಲಿ ನಟಿ ರಮೋಲಾ, ಸೀತಾರಾಮ ಧಾರಾವಾಹಿಗೆ ಎಂಟ್ರಿಕೊಟ್ಟಿದ್ದಾರೆ. ಮಾಡೆಲ್ ಕಮ್ ನಟಿಯಾಗಿರುವ ರಮೋಲಾ ಅವರು ಮೊದಲು ಕನ್ನಡತಿ ಧಾರಾವಾಹಿಯಲ್ಲಿ ಸ್ವೀಟ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಬಳಿಕ ಫ್ಯಾಷನ್ ಡಿಸೈನಿಂಗ್ ವ್ಯಾಸಂಗವನ್ನು ಕಂಪ್ಲೀಟ್ ಮಾಡುವ ಸಲುವಾಗಿ ಕಿರುತೆರೆಯಿಂದ ಬ್ರೇಕ್ ಪಡೆದಿದ್ದರು. ಇತ್ತೀಚೆಗಷ್ಟೇ ರಮೋಲಾ ಅವರು ಅಂತರಪಟ ಧಾರಾವಾಹಿಯಲ್ಲಿ ವೆಡ್ಡಿಂಗ್ ಪ್ಲಾನರ್ ಆಗಿ ನಟಿಸಿದ್ದರು. ಇನ್ನು ಈ ಮಧ್ಯೆ ರಿಚ್ಚಿ, ಟೇಲ್ಸ್ ಆಫ್ ಮಹಾನಗರ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ. ಸದ್ಯ ರಮೋಲಾ ಅವರು ಸೀತಾರಾಮ ಧಾರಾವಾಹಿಯಲ್ಲಿ ರಾಮ ನ ಹಳೆಯ ಪ್ರೇಯಸಿ ಚಾಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











