Seetha Rama ; ಭಾರ್ಗವಿಗೆ ವಾರ್ನಿಂಗ್ ಕೊಟ್ಟ ರುದ್ರ ಪ್ರತಾಪ್ ; ಹೋಳಿ ಹಬ್ಬದ ನೆಪದಲ್ಲಿ ಹೊಸ ಸ್ಕೆಚ್..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಈಗ ಪ್ರಿಯಾ, ಅಂಜಲಿ ಹಾಗೂ ಅಶೋಕ್ ಮೂವರು ಕುಳಿತುಕೊಂಡು ಇಷ್ಟು ದಿನ ನಡೆದ ವಿಚಾರಗಳ ಬಗ್ಗೆ ಭಾರೀ ಚರ್ಚೆ ನಡೆಸುತ್ತಿದ್ದಾರೆ. ಅಂಜಲಿಗೆ ಪ್ರಿಯಾ ತನ್ನ ಅತ್ತಿಗೆ ಆಗುತ್ತಿರುವುದಕ್ಕೆ ಬಹಳ ಖುಷಿ ಇದೆ. ರಾಮ ಮದುವೆ ಆಗುವ ಮುನ್ನ ಅಶೋಕ ನನ್ನ ಮದುವೆ ನಡೆಯಬೇಕು ಎಂದಿದ್ದಾನೆ. ಹಾಗಾಗಿ ಈಗ ನಾನು ಮದುವೆ ಮಾಡಿಕೊಳ್ಳಬೇಕು. ನನಗೆ ಆದಷ್ಟು ಬೇಗ ರಾಮ ಸೀತಾ ಒಂದಾಗಬೇಕು ಎಂದು ಹೇಳುತ್ತಾನೆ. ಆಗ ಪ್ರಿಯಾ ಕೂಡ ತಾನೂ ಮದುವೆಗೆ ಸಿದ್ಧ ಎಂದು ಹೇಳುತ್ತಾಳೆ. ಈಗ ಪ್ರಿಯಾ ಹಾಗೂ ರಾಮ ಮನೆಯಲ್ಲಿ ಅಶೋಕ್ ಮದುವೆಯ ಬಗ್ಗೆ ಮಾತನಾಡುವುದಷ್ಟೇ ಬಾಕಿ ಇದೆ.

ರಾಮ ಮೇಲಿನ ಆಸೆ ಕಡಿಮೆಯಾಗಿಲ್ಲ

ಇತ್ತ ಚಾಂದಿನಿಗೆ ರಾಮ ತನ್ನನ್ನು ರಿಜೆಕ್ಟ್ ಮಾಡಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತನ್ನನ್ನೇ ರಾಮ ರಿಜೆಕ್ಟ್ ಮಾಡುವಷ್ಟು ದೊಡ್ಡವನಾಗಿದ್ದಾನಾ..? ಒಂದು ಕಾಲದಲ್ಲಿ ಸದಾ ತನ್ನ ಹಿಂದೆಯೇ ಬಿದ್ದಿರುತ್ತಿದ್ದ ರಾಮ, ಚಾಂದಿನಿ ಬಿಟ್ಟರೆ ಬದುಕಿಲ್ಲ ಎಂದು ಕೊಂಡಿದ್ದ ರಾಮ ಈಗ ಇಷ್ಟೊಂದು ಬದಲಾಗಿದ್ದಾನಾ. ಒಂದು ಸಲ ರಾಮ ನನ್ನನ್ನು ಒಪ್ಪಿಕೊಂಡರೆ ಸಾಕು. ದೇಸಾಯಿ ಕುಟುಂಬದವಳಾದ ಮೇಲೆ ನಾನು ಏನು ಎಂಬುದನ್ನು ರಾಮಗೆ ತೋರಿಸಬೇಕು ಎಂದು ಮನದೊಳಗೆ ಲೆಕ್ಕಾಚಾರ ಹಾಕುತ್ತಾಳೆ. ಭಾರ್ಗವಿ ಮಾತನ್ನು ನಂಬಿಕೊಂಡು ಚಾಂದಿನಿ ದೊಡ್ಡ ಮನೆಯ ಸೊಸೆಯಾಗಲು ಬಯಸಿದ್ದಾಳೆ. ಆದರೆ, ಭಾರ್ಗವಿ ಲೆಕ್ಕಾಚಾರ ಏನಿದೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ.

written update on episode 22 March seetha rama serial

ಭಾರ್ಗವಿಗೆ ವಾರ್ನಿಂಗ್ ಕೊಟ್ಟ ರುದ್ರ ಪ್ರತಾಪ್

ಇನ್ನು ರಾಮನ ಬದುಕಿನಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಅಂಜಲಿ ಮುಖಾಂತರ ರುದ್ರ ಪ್ರತಾಪ್ ಮಾಹಿತಿ ಪಡೆಯುತ್ತಿದ್ದಾನೆ. ಸೀತಾಳನ್ನು ಆದಷ್ಟು ಬೇಗ ಮದುವೆ ಆಗಬೇಕು ಎಂದು ಈಗಾಗಲೇ ಒಂದು ಸಲ ರಾಮಗೆ ತೊಂದರೆ ಕೊಟ್ಟಿದ್ದಾನೆ. ಆದರೆ, ರಾಮ ಬೇಗನೇ ಚೇತರಿಸಿಕೊಂಡಿದ್ದು, ಮತ್ತೆ ಸೀತಾ ಜೊತೆಗೆ ಓಡಾಡುತ್ತಿದ್ದಾನೆ. ಇದರಿಂದ ರುದ್ರ ಪ್ರತಾಪ್ ಗೆ ಸಮಸ್ಯೆ ಆಗುತ್ತಿದೆ. ಅಲ್ಲದೇ, ಸೀತಾಳ ಅಣ್ಣ ಮತ್ತು ಅತ್ತಿಗೆ ಇಬ್ಬರೂ ಕೂಡ ರಾಮ ಹಾಗೂ ಸೀತಾ ಮದುವೆ ಮಾಡಿಸಿದರೆ ತಮಗೆ ಲಾಭ ಎಂದು ಮಾತನಾಡಿಕೊಳ್ಳುತ್ತಿರುತ್ತಾರೆ. ಈ ಮಾತನ್ನು ಕೇಳಿದ ರುದ್ರ ಪ್ರತಾಪ್ ಭಾರ್ಗವಿಗೆ ಫೋನ್ ಮಾಡಿ ರಾಮ ನನ್ನು ನಿಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ. ನನ್ನ ಹಾಗೂ ಸೀತಾ ತಂಟೆಗೆ ಬಂದರೆ ಸರಿ ಇರುವುದಿಲ್ಲ ಎಂದು ವಾರ್ನಿಂಗ್ ಕೊಡುತ್ತಾನೆ.

written update on episode 22 March seetha rama serial

ಸಿಹಿ ಬಳಿ ಸತ್ಯ ಹೇಳಲು ಮುಂದಾದ ರಾಮ

ಸಿಹಿಗೆ ಪಿಜ್ಜಾ ಪಾರ್ಟಿ ಕೊಡಿಸಿದ ರಾಮ, ಸೀತಾ ಜೊತೆಗೆ ಫುಲ್ ಎಂಗೇಜ್ ಆಗಿದ್ದಾನೆ. ಇಬ್ಬರೂ ಪಿಸು ಪಿಸು ಎಂದು ಮಾತನಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಸಿಹಿ ಪದೇ ಪದೇ ಏನದು ಸೀಕ್ರೆಟ್ ಟಾಕ್ ಎಂದು ಕೇಳುತ್ತಲೇ ಇದ್ದಾಳೆ. ಈ ವಿಚಾರವನ್ನು ಇನ್ನಷ್ಟು ಮುಚ್ಚಿಡುವುದು ಸರಿ ಅಲ್ಲ ಎಂದು ಭಾವಿಸಿದ ರಾಮ ಸಿಹಿಗೆ ತನ್ನ ಹಾಗೂ ಸೀತಾ ಮದುವೆ ಬಗ್ಗೆ ಹೇಳಲು ಮುಂದಾಗುತ್ತಾನೆ. ಅಷ್ಟರಲ್ಲಿ ಭಾರ್ಗವಿ ಫೋನ್ ಮಾಡಿ ರಾಮನನ್ನು ಈ ಕೂಡಲೇ ಮನೆಗೆ ಬರುವಂತೆ ಹೇಳಿದ್ದಾಳೆ. ಹಾಗಾಗಿ ರಾಮ ಮನೆಗೆ ಹೊರಡುತ್ತಾನೆ.

written update on episode 22 March seetha rama serial

ಹೋಲಿ ಹಬ್ಬದ ನೆಪದಲ್ಲಿ ಭಾರ್ಗವಿ ಕೈ ಚಳಕ

ಆದಷ್ಟು ಬೇಗ ಅಶೋಕ್ ಮದುವೆಯನ್ನು ಮಾಡಿಸಿದರೆ, ಚಾಂದಿನಿ ಜೊತೆಗೆ ರಾಮ ಲೈಫ್ ಕಟ್ಟಿ ಹಾಕಬಹುದು. ತದನಂತರ ತನ್ನ ಪ್ಲಾನ್ ಗಳೆಲ್ಲವೂ ಸಕ್ಸಸ್ ಆಗುತ್ತವೆ ಎಂದು ಭಾರ್ಗವಿ ಹೊಸ ಸ್ಕೆಚ್ ಹಾಕಿದ್ದಾಳೆ. ಹೋಳಿ ಹಬ್ಬಕ್ಕೆ ಆಫೀಸ್ ನವರನ್ನೆಲ್ಲಾ ಮನೆಗೆ ಕರೆಸಲು ಭಾರ್ಗವಿ ಪ್ಲಾನ್ ಮಾಡಿದ್ದು, ಇದು ರಾಮಗೆ ಖುಷಿ ಕೊಟ್ಟಿದೆ.

More from Filmibeat

English summary
bhargavi planned holi celebration to do ashok marriage as soon as possibel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X