Shrirastu Shubhamasthu: ದೀಪಿಕಾ ಬಗ್ಗೆ ಸತ್ಯ ತಿಳಿದ ಮಾಧವ್ ಮನೆಯವರು : ಅಭಿಗೆ ಖುಷಿ ಜೊತೆಗೆ ಆತಂಕ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಮತ್ತು ದೀಪಿಕಾ ಇಬ್ಬರ ಮದುವೆಯನ್ನು ಮಾಡಿಸಬೇಕು ಎಂದು ತುಳಸಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾಳೆ.
ಜನಾರ್ಧನ್ ಮಾತ್ರ ತನ್ನ ನಿರ್ಧರವನ್ನು ಕೊಂಚವೂ ಬದಲಾಯಿಸದೇ, ಮಾಧವ್ ಹಾಗೂ ತುಳಸಿ ಮದುವೆಯಾಗಿದ್ದೇ ತಪ್ಪು ಎಂಬಂತೆ ನಡೆದುಕೊಳ್ಳುತ್ತಿದ್ದಾನೆ.
ತುಳಸಿಯ ನಿಷ್ಕಲ್ಮಶವಾದ ಪ್ರಯತ್ನಕ್ಕೆ ಅವಿನಾಶ್ ಕೂಡ ಸಹಾಯ ಹಸ್ತ ಚಾಚಿದ್ದಾನೆ. ದೀಪಿಕಾಳನ್ನು ದುಬೈನಿಂದ ಕರೆದುಕೊಂಡು ಬಂದರೆ ಸಾಕು. ಮದುವೆ ಮಾಡಿಸುವುದು ತನ್ನ ಕೆಲಸ ಎಂದಿದ್ದಾನೆ.

ತುಳಸಿಗೆ ಮಾವನಿಂದ ಸಹಾಯ
ತುಳಸಿ ತನಗೆ ತಿಳಿದ ರೀತಿಯಲ್ಲೆಲ್ಲಾ ಪ್ರಯತ್ನ ಪಟ್ಟಿದ್ದು, ಈಗ ಇನ್ನು ನಾಲ್ಕು ದಿನದೊಳಗೆ ಅಭಿ ಹಾಗೂ ದೀಪಿಕಾಳನ್ನು ಒಂದು ಮಾಡಬೇಕಿದೆ. ಆದರೆ, ಯಾವುದೇ ದಾರಿಯೂ ಕಾಣಿಸುತ್ತಿಲ್ಲ. ವನಜಾ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಇತ್ತ ದತ್ತ ತಾತ ತನ್ನ ಮಗಳು ತುಳಸಿಗೆ ನೋವು ಮಾಡಿದ ಜನಾರ್ಧನ್‌ಗೆ ಪಾಠ ಕಲಿಸಲು ಮನೆಗೆ ಹೋಗಿದ್ದು, ಅಲ್ಲಿ ನಡೆಯಬೇಕಿದ್ದ ಶಾಸ್ತ್ರಕ್ಕೆ ಕಲ್ಲು ಹಾಕಿ, ದೀಪಿಕಾಳಿಗೆ ಈಗಲೂ ಅಭಿ ಎಂದರೆ ಇಷ್ಟ ಎಂಬ ಸತ್ಯ ತಿಳಿಸಿದ್ದಾನೆ. ಇದೇ ವಿಚಾರವನ್ನು ತುಳಸಿಗೂ ಹೇಳಿದ್ದಾನೆ. ಅಲ್ಲದೇ, ದೀಪಿಕಾ ದುಬೈನಿಂದ ಬಂದಿದ್ದು, ಈಗ ತಂದೆಯ ಮನೆಯಲ್ಲಿ ಬೆಂಗಳೂರಿನಲ್ಲೇ ಇರುವ ಸುದ್ದಿಯನ್ನು ಹೇಳಿದ್ದಾನೆ.
ತುಳಸಿ ಮಾತಿಗೆ ಒಪ್ಪಿದ ವನಜಾ
ಈ ಮಾತುಗಳನ್ನು ಕೇಳಿ ಖುಷಿಪಟ್ಟ ತುಳಸಿಗೆ ವನಜಾ ಕೂಡ ಕರೆ ಮಾಡಿದ್ದಾಳೆ. ಅಲ್ಲಿನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿವರಿಸಿದ್ದಾಳೆ. ದೀಪಿಕಾ ದುಬೈಗೆ ಹೋಗಿಲ್ಲ. ಅವಳು ನಮ್ಮ ಮನೆಯಲ್ಲೇ ಇದ್ದಾಳೆ. ಅವಳ ಫೋನ್ ಜನಾರ್ಧನ್ ಬಳಿಯೇ ಇದ್ದು, ಅಭಿಗೆ ಮೆಸೇಜ್ ಮಾಡುತ್ತಿರುವುದು ಕೂಡ ಜನಾರ್ಧನ್ ಎಂಬ ವಿಚಾರ ತಿಳಿಸಿದ್ದಾಳೆ. ಅಲ್ಲದೇ, ತನ್ನ ಮಗಳಿಗೆ ಅಭಿ ಬಿಟ್ಟು ಬೇರೆ ಯಾರ ಜೊತೆಗೂ ಮದುವೆಯಾಗಲು ಇಷ್ಟವಿಲ್ಲ, ಎಂದು ವನಜಾ ಎಲ್ಲಾ ವಿಚಾರವನ್ನು ತುಳಸಿ ಬಳಿ ಹಂಚಿಕೊಳ್ಳುತ್ತಾಳೆ. ತುಳಸಿ ಕೂಡ ದೀಪಿಕಾಳನ್ನು ಭೇಟಿ ಮಾಡಬೇಕು. ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾಳೆ. ವನಜಾ ಅದಕ್ಕೂ ಸಿದ್ಧವಾಗಿದ್ದಾಳೆ.

ಅಭಿ ಮನಸ್ಸಿಗೆ ಖುಷಿ ಕೊಟ್ಟ ಸುದ್ದಿ
ಅಭಿಗೆ ಜನಾರ್ಧನ್ ದೀಪಿಕಾ ಫೋನ್‌ನಿಂದ ಮೆಸೇಜ್ ಮಾಡಿದ್ದು, ನನ್ನನ್ನು ಮರೆತುಬಿಡು. ನಾನು ಬೇರೆ ಮದುವೆಯಾಗುತ್ತಿದ್ದೇನೆ. ನಿನಗೋಸ್ಕರ ನನ್ನ ಅಪ್ಪನನ್ನು ದೂರ ಮಾಡಿಕೊಳ್ಳುವುದಿಲ್ಲ. ಅಪ್ಪ ನೋಡಿರುವ ಹುಡುಗ ನಿನಗಿಂತಲೂ ಚೆನ್ನಾಗಿದ್ದಾನೆ ಎಂದು ಮಸೇಜ್ ಮಾಡಿರುತ್ತಾಳೆ. ಇದನ್ನು ನೋಡಿದ ಅಭಿ ಶಾಕ್ ಆಗಿ ಎಲ್ಲರ ಎದುರು ತನ್ನ ಸಂಕಟನ್ನು ಹೇಳಿಕೊಳ್ಳುತ್ತಾನೆ. ಆದರೆ ತುಳಸಿ, ಪೂರ್ಣಿಮಾ ಹಾಗೂ ಮಾಧವ್ ಅಭಿಗೆ ನೀನು ಪೆದ್ದ. ಆ ಮೆಸೇಜ್ ಅನ್ನು ಜನಾರ್ಧನ್ ಕಳಿಸಿರುವುದು, ದೀಪಿಕಾ ಅಲ್ಲ. ದೀಪಿಕಾ ದುಬೈಗೆ ಹೋಗೇ ಇಲ್ಲ. ಅವಳು ಇಲ್ಲೇ ಇದ್ದಾಳೆ. ನಿನ್ನ ನೆನಪಲ್ಲೇ ಇದ್ದಾಳೆ ಎಂದು ಹೇಳುತ್ತಾರೆ.
ಇಬ್ಬರನ್ನು ಒಂದು ಮಾಡುತ್ತಾಳಾ ತುಳಸಿ?
ಅಭಿಗೆ ಈ ಸುದ್ದಿ ಖುಷಿ ಕೊಟ್ಟರೂ ಕೂಡ, ಮದುವೆಯಾಗುತ್ತಾ? ಎಂಬ ಅನುಮಾನ ಮೂಡಿದೆ. ಇನ್ನು ಶಾರ್ವರಿಗೆ ಈ ತುಳಸಿ ಏನೋ ಮಾಡುತ್ತಿದ್ದಾಳೆ. ಪರಿಸ್ಥಿತಿ ತನ್ನ ಕೈ ಮೀರುತ್ತಿದೆ ಎಂದು ಒಳಗೊಳಗೆ ಹೊಸ ಲೆಕ್ಕಾಚಾರ ಹಾಕಲು ಮುಂದಾಗಿದ್ದಾಳೆ. ಇನ್ನು ಅವಿನಾಶ್, ದೀಪಿಕಾಳನ್ನು ಭೇಟಿ ಮಾಡಿ ಆದಷ್ಟು ಬೇಗ ಮದುವೆ ಮಾಡಿಸಬೇಕು ಎಂದು ಯೋಚಿಸುತ್ತಿದ್ದು, ತುಳಸಿ ಎಲ್ಲಾ ಶುಭ ಕಾರ್ಯವೂ ಸುಲಭವಾಗಿ ನೆರವೇರುತ್ತೆ ಎಂಬ ಭರವಸೆಯಲ್ಲಿದ್ದಾಳೆ.


Click it and Unblock the Notifications











