Seetha Rama ; ಹೊಸ ಸ್ಕೆಚ್ ಹಾಕಿ ಅಂಜಲಿಯನ್ನು ಭೇಟಿ ಮಾಡಿದ ರುದ್ರಪ್ರತಾಪ್ ಮಾಡಿದ್ದೇನು..?
ಸೀತಾರಾಮ ಧಾರಾವಾಹಿಯಲ್ಲಿ ಸೂರಿ ತಾತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಸಿಹಿಗಾಗಿ ಸೀತಾ ಮತ್ತು ರಾಮ ಒದ್ದಾಟ ನಡೆಸುವಂತಾಗಿದೆ. ಇತ್ತ ಭಾರ್ಗವಿಗೆ ದೇಸಾಯಿ ಕುಟುಂಬದ ಇಡೀ ಆಸ್ತಿಯನ್ನು ತಾನೊಬ್ಬಳೇ ಅನುಭವಿಸುವ ದುರಾಸೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಆದರೆ, ಈಗ ವಿಲ್ ಹೊಸ ಸಮಸ್ಯೆ ನ ತಂದೊಡ್ಡಿದೆ. ಆಸ್ತಿಗೋಸ್ಕರವೇ ರಾಮ ಮದುವೆಯಾಗದಂತೆ ತಡೆದು, ಸೂರಿ ಮಾವನನ್ನು ಇನ್ನಿಲ್ಲದಂತೆ ಮಾಡಬೇಕು ಎನ್ನುವುದು ಭಾರ್ಗವಿ ಪ್ಲಾನ್. ಆದರೆ, ಅದಕ್ಕೀಗ ಸೀತಾ ಅಡ್ಡ ಬಂದಿದ್ದಾಳೆ.
ಆಸ್ತಿಗಾಗಿ ಭಾರ್ಗವಿ-ವಿಶ್ವ ಪಾರ್ಟನರ್..!
ಹೀಗಾಗಿ ಈ ಗ ಭಾರ್ಗವಿ ಆಸ್ತಿ ಏನಾಗಿದೆ ಎಂದು ತಿಳಿದುಕೊಳ್ಳಲು ಸೀದಾ ಲಾಯರರ ಆಫೀಸಿಗೆ ಭೇಟಿ ಕೊಟ್ಟಿದ್ದಾಳೆ. ಫೋನ್ ಕೂಡ ಮಾಡದೆ ಇದ್ದಕ್ಕಿದ್ದ ಹಾಗೆಯೇ ಭಾರ್ಗವಿ ಬಂದಿರುವುದು ಲಾಯರ್ ಗೆ ಅನುಮಾನ ಮೂಡುವಂತೆ ಮಾಡಿದೆ. ಅಲ್ಲದೇ, ಬರೆದಿರುವ ವಿಲ್ ನಲ್ಲಿ ಸೂರಿ ಮಾವನಿಗೆ ಅನುಮಾನವಿದೆಯಂತೆ. ಅದರ ಬಗ್ಗೆ ತಿಳಿದುಕೊಂಡು ಬಾ ಎಂದು ನನ್ನನ್ನು ಕಳಿಸಿದ್ದಾರೆ ಎಂದು ಸುಳ್ಳು ಹೇಳುತ್ತಾಳೆ. ಲಾಯರ್ ಗೆ ಭಾರ್ಗವಿ ಮೇಲೆ ನಂಬಿಕೆ ಬಾರದ ಕಾರಣ, ಅದನ್ನೆಲ್ಲಾ ಹಾಗೆ ಹೇಳಲು ಸಾಧ್ಯವಿಲ್ಲ ಎಂದು ವಾಪಸ್ ಕಳಿಸಿದ್ದಾರೆ. ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಕೋಪದಲ್ಲಿ ಹೋಗುವ ಭಾರ್ಗವಿಯನ್ನು ಅಶೊಕ್ ನೋಡಿದ್ದಾನೆ. ಭಾರ್ಗವಿ ಪ್ಲಾನ್ ಬಗ್ಗೆ ಸ್ವಲ್ಪವೂ ತಿಳಿಯದ ಅಶೋಕ್ ಗೆ ಸೂರಿ ಮತ್ತು ರಾಮ ನನ್ನು ಕಾಪಾಡುವುದೊಂದೇ ಗುರಿ.

ಆರ್ ಪಿ ಕಂಡು ಹೆದರಿದ ಸಿಹಿ
ಇನ್ನು ಅಂಜಲಿ ಜೊತೆಗೆ ಸಿಹಿ ಆರಾಮವಾಗಿ ಆಟವಾಡಿಕೊಂಡಿದ್ದಳು. ಅಕಸ್ಮಾತ್ ಆಗಿ ರುದ್ರಪ್ರತಾಪ್ ಫೋಟೋವನ್ನು ನೋಡಿ ತೀರಾ ಗಾಬರಿಯಾಗಿದ್ದಾಳೆ. ಸೀತಮ್ಮನನ್ನು ನೋಡಲೇಬೇಕು ಎಂದು ಇದ್ದಕ್ಕಿದ್ದ ಹಾಗೆಯೇ ಹಠ ಹಿಡಿದಿದ್ದಾಳೆ. ಸಿಹಿಯನ್ನು ನೋಡಲೆಂದೇ ಬಂದ ರಾಮ ಮತ್ತು ಸೀತಾ ಬಳಿ ಸಿಹಿ ಎಲ್ಲಾ ವಿಚಾರವನ್ನೂ ಹಂಚಿಕೊಂಡಿದ್ದಾಳೆ. ಬ್ಯಾಡ್ ಅಂಕಲ್ ನಮ್ಮ ಸುತ್ತ-ಮುತ್ತವೇ ಇದ್ದಾರೆ. ಮತ್ತೆ ನಮಗೆ ತೊಂದರೆ ಕೊಡುತ್ತಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಸೀತಾ ಮತ್ತು ರಾಮ ಗೂ ಆತಂಕವಾಗುತ್ತದೆ.

ಭಾವಿ ಅಪ್ಪನಿಂದ ಸಿಹಿಗೆ ಬಾರ್ಡಿಗಾರ್ಡ್ಸ್
ಇದೇ ಸಂದರ್ಭದಲ್ಲಿ ಸೀತಾಳ ಅಣ್ಣ ಮತ್ತು ಅತ್ತಿಗೆ ರಾಮ ಮೊರೆ ಹೋಗಿದ್ದಾರೆ. ರುದ್ರಪ್ರತಾಪ್ ತಮ್ಮ ಮನೆಯಲ್ಲೇ ಇದ್ದಾನೆ. ಸೀತಾಳ ಜೊತೆಗೆ ಮದುವೆ ಮಾಡಿಕೊಡಿ ಎಂದು ಪೀಡಿಸುತ್ತಿದ್ದಾನೆ. ಅವನ ಕಾಟದಿಂದ ನಮ್ಮನ್ನು ಕಾಪಾಡಿ ಎಂದು ಹೇಳುತ್ತಾರೆ. ಆದರೆ, ಅವರ ಮನೆಗೆ ಹೋಗಿ ನೋಡುವಷ್ಟರಲ್ಲಿ ಆರ್ ಪಿ ಕಾಲ್ಕಿತ್ತಿರುತ್ತಾನೆ. ರುದ್ರಪ್ರತಾಪ್ ಸಾಮಾನ್ಯದವನಲ್ಲ. ಸಮಸ್ಯೆ ಮಾಡಬಹುದು ಎಂಬ ಆತಂಕದಿಂದ ಈಗ ಸಿಹಿಗಾಗಿ ರಾಮ ಇಬ್ಬರು ಬಾಡಿಗಾರ್ಡ್ಸ್ ನ ವ್ಯವಸ್ಥೆ ಮಾಡಿದ್ದಾನೆ. ಬಾಡಿಗಾರ್ಡ್ಸ್ ಗಳು ಸಿಹಿ ನ ಮೇಡಂ ಎಂದು ಕರೆಯುವುದು ಪುಟಾಣಿಗೆ ಖುಷಿ ಕೊಟ್ಟಿದೆ.

ಅಂಜಲಿಗೆ ಸ್ಕೆಚ್ ಹಾಕಿದ ಆರ್ ಪಿ
ಇತ್ತ ಅಂಜಲಿಗೆ ಆರ್ ಪಿ ರಾತ್ರಿ ವೇಳೆ ವೀಡಿಯೋ ಕಾಲ್ ಮಾಡಿದ್ದಾನೆ. ತಕ್ಷಣವೇ ಹೊರಟು ಬನ್ನಿ, ನನಗೆ ಸಮಸ್ಯೆ ಆಗಿದೆ ಎಂದು ಕೇಳಿಕೊಂಡಿದ್ದಾನೆ. ಅಂಜಲಿ ಕೂಡ ಅವನ ಮಾತನ್ನು ನಂಬಿ ಕ್ಲಿನಿಕ್ ಬಳಿ ಹೋಗಿದ್ದಾಳೆ. ಅಲ್ಲಿ, ಅವನು ಯಾರನ್ನೋ ಪ್ರೀತಿಸಿದ್ದು, ಆಕೆ ಮೋಸ ಮಾಡಿ ಬೇರೆಯವರನ್ನು ಮದುವೆಯಾಗುತ್ತಿದ್ದು, ತನಗೆ ತೊಂದರೆ ಕೊಡುತ್ತಿರುವುದಾಗಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾನೆ. ಉಳಿದುಕೊಳ್ಳುವುದಕ್ಕೆ ಅಂಜಲಿ ಕ್ಲಿನಿಕ್ ನಲ್ಲೇ ಜಾಗ ಪಡೆದಿದ್ದಾನೆ. ಅಂಜಲಿ ಜೊತೆಗೆ ಆರ್ ಪಿ ಸೆಲ್ಫಿ ಕೂಡ ತೆಗೆದುಕೊಂಡಿದ್ದು, ಮುಂದೇನು ಮಾಡುತ್ತಾನೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











