Seetha Rama ; ರಾಮ ಹಾಗೂ ಚಾಂದಿನಿ ಪ್ರೇಮ ಕಥೆಯನ್ನು ರಿವೀಲ್ ಮಾಡಿದ ಅಶೋಕ್

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ರಾಮನ ಸ್ಥಿತಿ ಗಂಭೀರವಾಗಿದ್ದು, ಇನ್ನೂ ಎಚ್ಚರವಾಗಿಲ್ಲ. ರಾಮ ಸ್ಥಿತಿಯನ್ನು ಕಂಡು ಎಲ್ಲರೂ ಗಾಬರಿಯಾಗಿದ್ದಾರೆ. ಸೂರಿ ತಾತ ಅಂತೂ ಮೊಮ್ಮಗನ ಸ್ಥಿತಿ ಕಂಡು ಕುಗ್ಗಿ ಹೋಗಿದ್ದಾರೆ. ಸೀತಾ ಜೊತೆಗೆ ಮಾತನಾಡಬೇಕು ಎಂದು ಸೂರಿ ತಾತ ಬಯಸಿದ್ದು, ಅಶೋಕನ ಬಳಿ ಹೇಳಿಕೊಂಡಿದ್ದಾರೆ.

ಅಶೋಕ್ ಕೂಡ ಸೀತಾಳಿಗೆ ಫೋನ್ ಮಾಡಿದ್ದು, ದೊಡ್ಡ ಬಾಸ್ ನಿಮ್ಮ ಜೊತೆಗೆ ಮಾತನಾಡಬೇಕು ಎಂದಿದ್ದಾರೆ. ಅಭ್ಯಂತರವಿಲ್ಲ ಎಂದರೆ, ಭೇಟಿ ಮಾಡಿಸುವೆ ಎಂದು ಕೇಳುತ್ತಾನೆ. ಇದಕ್ಕೆ ಸೀತಾ ಕೂಡ ಸರಿ ಎನ್ನುತ್ತಾಳೆ.

written update on episode 24 February seetha rama serial

ಚಾಂದಿನಿಯನ್ನು ಹೊರಗೆ ಕಳಿಸಿದ ಅಶೋಕ

ಇತ್ತ ಚಾಂದಿನಿ ಆಸ್ಪತ್ರೆಗೆ ಬಂದು ರಾಮನನ್ನು ಭೇಟಿ ಮಾಡಿದ್ದಾಳೆ. ರಾಮ ಬೆಡ್ ಪಕ್ಕದಲ್ಲೇ ಹೂವಿನ ಬೊಕ್ಕೆಯನ್ನು ಇಟ್ಟು. ನಿನ್ನ ಬಿಟ್ಟು ಹೋಗಿದ್ದಕ್ಕೆ ಕ್ಷಮಿಸುಬಿಡು. ನಿನ್ನ ಬಿಟ್ಟಿದ್ದು ನನ್ನ ತಪ್ಪು. ಆದರೆ, ಇನ್ನು ಮುಂದೆ ಯಾವತ್ತೂ ನಿನ್ನ ಬಿಟ್ಟು ಹೋಗೋದಿಲ್ಲ.

ನಿನ್ನ ಜೊತೆಗೆ ಸದಾ ಇರ್ತಿನಿ. ಐ ಲವ್ ಯೂ ರಾಮ ಎಂದು ಹೇಳುತ್ತಾಳೆ. ತಕ್ಷಣವೇ ಬರುವ ಅಶೋಕ ಚಾಂದಿನಿಗೆ ಬೈಯುತ್ತಾನೆ. ನೀನ್ಯಾಕೆ ಬಂದೆ. ಇನ್ನೊಂದು ಸಲ ರಾಮನನ್ನು ನೋಡಲು ಬಂದರೆ ಸುಮ್ಮನೆ ಇರೋದಿಲ್ಲ. ಅವನಿಗೆ ನಿನ್ನ ನೆನಪೇ ಇಲ್ಲ. ಪ್ರೀತಿ ಅಂತ ನಾಟಕ ಮಾಡಿ ಅರ್ಧಕ್ಕೆ ಬಿಟ್ಟು ಹೋದವಳು ನೀನು ಎಂದು ಕಳಿಸುತ್ತಾನೆ.

written update on episode 24 February seetha rama serial

ಚಾಂದಿನಿ ಧ್ವನಿಗೂ ಪ್ರತಿಕ್ರಿಯಿಸದ ರಾಮ

ಇದೇ ಸಮಯಕ್ಕೆ ಸರಿಯಾಗಿ ಭಾರ್ಗವಿ ಬರುತ್ತಾಳೆ. ಭಾರ್ಗವಿ ರಾಮ ರೆಸ್ಪಾನ್ಸ್ ಮಾಡಿದನಾ ಎಂದು ಪ್ರಶ್ನಿಸುತ್ತಾಳೆ. ಆಗ ಚಾಂದಿನಿ ಇಲ್ಲ ಎಂದು ಹೇಳುತ್ತಾಳೆ. ಭಾರ್ಗವಿ ಮನದಲ್ಲೇ ಸರಿಯಾದ ಟೈಂಗೆ ಚಾಂದಿನಿ ಎಂಟ್ರಿಕೊಟ್ಟಿದ್ದಾಳೆ ಎಂದು ಖುಷಿ ಪಡುತ್ತಾಳೆ. ಅಶೋಕ್ ಚಾಂದಿನಿಗೆ ಬೈಯುತ್ತಾನೆ.

ಇನ್ಯಾವತ್ತೂ ಬರಬೇಡ ಎಂದು ಹೇಳುತ್ತಾನೆ. ಆದರೆ ಚಾಂದಿನಿ ಇಲ್ಲ ಬಂದೇ ಬರುತ್ತೀನಿ. ನೀನ್ಯಾರು ನಮ್ಮಿಬ್ಬರ ಮಧ್ಯೆ ಬರುವುದಕ್ಕೆ ಎಂದು ಹೇಳಿ ಹೊರಟು ಬಿಡುತ್ತಾಳೆ. ಚಾಂದಿನಿಯನ್ನು ಗಮನಿಸಿದ ಸತ್ಯಜಿತ್ ಅಶೋಕ್ ಬಳಿ ಅವಳ್ಯಾರು ಎಂದು ಕೇಳುತ್ತಾನೆ.

written update on episode 24 February seetha rama serial

ಚಾಂದಿನಿ ರಾಮ್ ಪ್ರೀತಿ ಶುರುವಾಗಿದ್ದೇಗೆ..?

ಆಗ ಅಶೋಕ್, ರಾಮ ಹಾಗೂ ಚಾಂದಿನಿ ಕಾಲೇಜಿನಲ್ಲಿ ಓದುವಾಗಲೇ ಸ್ನೇಹಿತರಾಗಿದ್ದು, ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸಿದ್ದು. ರಾಮ ಚಾಂದಿನಿ ಜೊತೆಗೆ ಸುತ್ತಾಡಿದ್ದು, ಅವಳಿಗೋಸ್ಕರ ತನ್ನ ಬದುಕಿನ ಕನಸನ್ನು ಕಟ್ಟಿಕೊಂಡಿದ್ದು ಹಾಗೂ ಅವಳ ಜೊತೆಗೆ ಇಡೀ ಜೀವನವನ್ನು ಕಳೆಯುವ ಆಸೆ ಪಟ್ಟ ಎಲ್ಲಾ ವಿಚಾರವನ್ನು ಸತ್ಯಜಿತ್ ಗೆ ಹೇಳುತ್ತಾನೆ.

ಆದರೆ, ಚಾಂದಿನಿ ಇದ್ದಕ್ಕಿದ್ದ ಹಾಗೆಯೇ ರಾಮನನ್ನು ಬಿಟ್ಟು ಹೋಗಿದ್ದು, ಕಾರಣವಿಲ್ಲದೇ, ಫೋನ್, ಮೆಸೇಜ್ ಮಾಡದೇ ಇದ್ದಿದ್ದಕ್ಕೆ ರಾಮ ಡಿಪ್ರೆಷನ್ ಗೆ ಹೋಗಿ ಒದ್ದಾಡಿರುತ್ತಾನೆ. ಈಗ ವಾಪಸ್ ಚಾಂದಿನಿ ಬಂದಿರುವುದು ಅಶೋಕನಿಗೆ ಸ್ವಲ್ಪವೂ ಇಷ್ಟವಿಲ್ಲ.

ಫ್ರೆಂಡ್ ಗಾಗಿ ಸಿಹಿ ಹೆಜ್ಜೆ ನಮಸ್ಕಾರ

ಇತ್ತ ಸೀತಾ, ಸಿಹಿ ತಿಂಡಿ ತಿನ್ನಲಿ ಎಂದು ಚಪಾತಿಯನ್ನು ಮಾಡಿರುತ್ತಾಳೆ. ಆದರೆ, ಸಿಹಿ ಎಲ್ಲೂ ಕಾಣಿಸಿರುವುದಿಲ್ಲ. ಸೀತಾ ಅವಳನ್ನು ಹುಡುಕುತ್ತಾ ದೇವಸ್ಥಾನಕ್ಕೆ ಹೋಗುತ್ತಾಳೆ. ಅಲ್ಲಿ ನೋಡಿದರೆ, ಸಿಹಿ, ರಾಮಗೆ ಒಳ್ಳೆಯದಾಗಲಿ ಎಂದು ಸಿಹಿ ಹೆಜ್ಜೆ ನಮಸ್ಕಾರ ಹಾಕುತ್ತಿರುತ್ತಾಳೆ.

ಇದನ್ನು ನೋಡಿದ ಸೀತಾ ಖುಷಿಪಟ್ಟು ಅವಳೂ ಕೂಡ ಹೆಜ್ಜೆಯನ್ನು ಹಾಕುತ್ತಾಳೆ. ಸೀತಾ ಹಾಗೂ ಸೂರಿ ಇಬ್ಬರೂ ಭೇಟಿಯಾಗಿ ಏನು ಮಾತನಾಡುತ್ತಾರೆ ಎಂಬ ಕುತೂಹಲ ಒಂದಾದರೆ, ರಾಮ ಈಗ ಸೀತಾಳನ್ನು ಒಪ್ಪುತ್ತಾನಾ ಇಲ್ಲ ಚಾಂದಿನಿ ಪ್ರೀತಿಯನ್ನೇ ಬಯಸುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Ashok talks back to Sriram ex-lover chandini and he tries to refuse her presence
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X