Seetharaama: ಮನೆಗೆ ಬಂದ ಸೀತಾಳಿಗೆ ರಾಮ್, ಬಾಸ್ ಎನ್ನುವುದು ಗೊತ್ತಾಗುತ್ತಾ..?
ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಹಾಗೂ ರಾಮ್‌ನನ್ನು ದೂರ ಮಾಡಬೇಕು ಎಂದು ಭಾರ್ಗವಿ ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ.
ಸೀತಾಳಿಗೆ ಟ್ರಾನ್ಸ್‌ಫರ್ ಆರ್ಡರ್ ಕೊಟ್ಟಾಗ ರಾಮನಿಗೆ ಅವಳನ್ನು ಬಿಟ್ಟಿರಲಾರದೇ ಒದ್ದಾಡುತ್ತಾನೆ. ತನಗಿದ್ದ ಅಧಿಕಾರವನ್ನು ಬಳಸಿಕೊಂಡು ಸೀತಾ ಇಲ್ಲೇ ಉಳಿಯುವಂತೆ ಮಾಡುತ್ತಾನೆ.

ಆಫೀಸಿನಿಂದ ಬಂದ ಟ್ರಾನ್ಸ್‌ಫರ್ ಆರ್ಡರ್ ಮತ್ತೆ ಕ್ಯಾನ್ಸಲ್ ಆಗಿದ್ದಕ್ಕೆ ಸೀತಾಳಿಗೆ ಅನುಮಾನ ಕಾಡುತ್ತದೆ. ಆದರೆ, ಅವಳ ಪ್ರಶ್ನೆಗಳಿಗೆ ಉತ್ತರ ಸಿಗದ ಕಾರಣ ಸುಮ್ಮನಾಗುತ್ತಾಳೆ.
ಸೀತಾ ವಾಪಸ್ ಬಂದಿದ್ದಕ್ಕೆ ಭಾರ್ಗವಿಗೆ ಕೋಪ
ಸೀತಾ ಪುನಃ ಆಫಿಸಿಗೆ ಬಂದಿರುವುದು, ಅವಳ ಟ್ರಾನ್ಸ್‌ಫರ್ ಆರ್ಡರ್ ಕ್ಯಾನ್ಸಲ್ ಆಗಿರುವುದು ಭಾರ್ಗವಿಗೆ ತಿಳಿಯುತ್ತದೆ. ಇದು ಭಾರ್ಗವಿಗೆ ಕೋಪ ಬರುವಂತೆ ಮಾಡುತ್ತದೆ. ವಿಶ್ವನಿಗೆ ಕೊಟ್ಟ ಒಂದು ಕೆಲಸವನ್ನೂ ನೆಟ್ಟಗೆ ಮಾಡಲು ಸಾಧ್ಯವಿಲ್ಲ ಎಂದು ಬೈಯುತ್ತಾಳೆ. ಆದರೆ, ಸೀತಾ ವಾಪಸ್ ಹೇಗೆ ಬಂದಳು ಎಂಬುದು ಭಾರ್ಗವಿಗೆ ಗೊತ್ತಿರುವುದಿಲ್ಲ.
ಸೀತಾ ಮೇಲೆ ರಾಮನಿಗೆ ಪ್ರೀತಿ
ಸೀತಾ ಇಲ್ಲಿದ್ದಷ್ಟೂ ದಿನ ರಾಮ ನಗು ನಗುತ್ತಿರುತ್ತಾನೆ. ಸೀತಾಳನ್ನು ಮದುವೆಯಾದರೆ, ತನಗೇ ಕಷ್ಟ ಎಂದು ಈಗ ಭಾರ್ಗವಿ ಕೋಪ ಮಾಡಿಕೊಂಡಿದ್ದಾಳೆ. ಮುಂದೆ ಸೀತಾಳನ್ನು ರಾಮನಿಂದ ಹೇಗೆ ದೂರ ಮಾಡುತ್ತಾಳೋ ಗೊತ್ತಿಲ್ಲ. ಆದರೆ, ರಾಮನಿಗೆ ಸೀತಾಳ ಮೇಲೆ ಪ್ರೀತಿ ಹುಟ್ಟಿರುವುದಂತೂ ಪಕ್ಕಾ ಆಗಿದೆ.

ರಾಮನಿಗೆ ಮದುವೆಯಾಗುವಂತೆ ಹೇಳಿದ ಅಜ್ಜಿ
ಸಿಹಿಗೆ ರಾಮ ಬೆಸ್ಟ್ ಫ್ರೆಂಡ್. ಏನೇ ಬೇಕಿದ್ದರೂ ಮೊದಲು ಫ್ರೆಂಡ್‌ಗೆ ಫೋನ್ ಮಾಡುತ್ತಾಳೆ. ದೀಪಾವಳಿ ಹಬ್ಬಕ್ಕೆ ಆಕಾಶ ಬುಟ್ಟಿಯನ್ನು ಮಾಡಬೇಕು ಎಂದು ಸಿಹಿ ಬಯಸಿದ್ದಾಳೆ. ಹೀಗಾಗಿ ಫ್ರೆಂಡ್‌ಗೆ ಫೋನ್ ಮಾಡಿ ಸಹಾಯ ಮಾಡಲು ಕೇಳಿದ್ದಾಳೆ. ಆಫೀಸ್ ಕೆಲಸದಲ್ಲಿ ಬ್ಯುಸಿ ಇದ್ದ ರಾಮ್ ಸಿಹಿಯನ್ನು ಮರೆತು ಬಿಟ್ಟಿರುತ್ತಾನೆ. ರಾತ್ರಿ ನೆನಪು ಮಾಡಿಕೊಂಡು ಆಕಾಶಬುಟ್ಟಿಯನ್ನು ಖರೀದಿಸಿ ಸಿಹಿ ಮನೆಗೆ ಬರುತ್ತಾನೆ. ಆದರೆ, ಸಿಹಿ ಮಲಗಿದ್ದ ಕಾರಣ ಸೀತಾಳಿಗೆ ಆಕಾಶ ಬುಟ್ಟಿ ಕೊಟ್ಟು ಹೊರಡುತ್ತಾನೆ. ಇದನ್ನು ಗಮನಿಸುವ ಅಜ್ಜಿ ರಾಮನಿಗೆ ಬುದ್ಧಿ ಹೇಳುತ್ತಾಳೆ. ಈ ವಯಸ್ಸಲ್ಲಿ ನೀನು ಒಂಟಿಯಾಗಿರುವುದು ಸರಿಯಲ್ಲ. ಸೀತಾ ಕೂಡ ಒಂಟಿ ಇರಬಾರದು. ಅವಳು ಮದುವೆಯಾಗಬೇಕು ಎಂದು ಏನೇನೋ ಹೇಳುತ್ತಾರೆ. ರಾಮನಿಗೆ ಮನದಲ್ಲೇ ಖುಷಿಯಾಗುತ್ತದೆ.
ಮನೆಗೆ ನೌಕರರನ್ನು ಕರೆಸಿದ ರಾಮ್
ಇನ್ನು ರಾಮ ಹೊಸ ಮನೆಗೆ ಶಿಫ್ಟ್ ಆದ ಖುಷಿಯಲ್ಲಿ ನೌಕರರನ್ನೆಲ್ಲರನ್ನು ಮನೆಗೆ ಕರೆಸುತ್ತಾನೆ. ಪ್ರಿಯಾಳಿಗೆ ಇದು ನನ್ನ ಮನೆ. ಮುಂದೆ ಈ ಮನೆಗೆ ನಾನು ಒಬ್ಬಳು ಸದಸ್ಯೆ ಎಂಬಂತೆ ಖುಷಿಯಾಗಿರುತ್ತಾಳೆ. ಎಂಪ್ಲಾಯ್‌ಗಳನ್ನು ಅದು ಮುಟ್ಟಬೇಡಿ ಇದು ಮುಟ್ಟಬೇಡಿ ಎಂದು ಹೇಳುತ್ತಿರುತ್ತಾಳೆ. ಅಶೋಕ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಾಳೆ. ಬಾಸ್‌ನ ಬಿಟ್ಟು ಅಶೋಕ್ ಜೊತೆಗೆ ಎಲ್ಲಾ ನೌಕರರು ಫೋಟೋ ತೆಗೆಸಿಕೊಂಡಿದ್ದು ಯಾಕೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ.
ನಿಜವಾದ ಬಾಸ್ ರಾಮ್ ಎಂದು ಗೊತ್ತಾಗುತ್ತಾ..?
ತಾತ ಡಯಾಸ್ ಮೇಲೆ ನಿಂತು ಎಲ್ಲರನ್ನೂ ಉದ್ದೇಶಿಸಿ ಮಾತನಾಡುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ಭಾರ್ಗವಿ, ಅಪ್ಪು ನೀನು ತಾತನ ಪಕ್ಕ ನಿಲ್ಲು ಹೋಗು ಎನ್ನುತ್ತಾರೆ. ಆದರೆ, ಈಗ ರಾಮ ಅಲ್ಲಿ ಹೋದರೆ, ಆಫೀಸ್‌ನಲ್ಲಿ ಬಾಸ್ ಆಗಿರುವ ಅಶೋಕ್ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತಾ..? ಇಲ್ಲ ತಾತನೇ ಅಶೋಕ್ ಮತ್ತು ರಾಮ ಇಬ್ಬರನ್ನು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು ಸಂದರ್ಭವನ್ನು ನಿಭಾಯಿಸುತ್ತಾನಾ ಕಾದು ನೋಡಬೇಕಿದೆ.


Click it and Unblock the Notifications











