Seetha Rama ; ಇದ್ದಕ್ಕಿದ್ದ ಹಾಗೆ ಆಸ್ತಿಯಲ್ಲಿ ಪಾಲು ಕೇಳಿದ ಸೂರಿ ಮಕ್ಕಳು..!
ಸೀತಾರಾಮ ಧಾರಾವಾಹಿಯಲ್ಲಿ ಸಿಹಿಗಾಗಿ ರಾಮ ನೇಮಿಸಿರುವ ಬಾಡಿಗಾರ್ಡ್ಸ್ ಈಗ ಸಿಹಿ ಹೇಳಿದ ಕೆಲಸವನ್ನೆಲ್ಲಾ ಮಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ವಠಾರದ ಜನಕ್ಕೆ ಹೊಟ್ಟೆ ಉರಿ ಇದೆ. ಸೀತಾ ಆಫೀಸಿಗೆ ಹೋಗುವುದನ್ನು ನೋಡಿ ಸುಮ್ಮನಿರದೇ ಮಾತನಾಡಿಸಿದ್ದಾರೆ. ಕಂಪನಿ ಬಾಸ್ ಜೊತೆಗೆ ಮದುವೆಯಾಗುವಾಗ ನೀನು ಕೆಲಸಕ್ಕೆ ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ.ಸೀತಾಳಿಗೆ ಯಾವ ಉತ್ತರವೂ ಕೊಡಲಾಗದೇ, ತನ್ನ ಪಾಡಿಗೆ ತಾನು ಕೆಲಸಕ್ಕೆ ಹೊರಟಿದ್ದಾರೆ. ಸೀತಾ ಮುಖ ಭಾವನೆಯನ್ನು ಕಂಡು ಎಲ್ಲರೂ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಆಸ್ತಿ ವಿಚಾರಕ್ಕೆ ಕಿತಾಪತಿ
ಸೂರಿ ತಾತನಿಗೆ ಮೊಮ್ಮಗನ ಮದುವೆ ಮಾಡುವ ಆತುರ. ಆದರೆ, ರಾಮ, ಸಿಹಿ ಬಗ್ಗೆ ಸೂರಿ ತಾತನಿಗೆ ತಿಳಿಸಿ ಹೇಳಲು ಮುಂದಾಗಿದ್ದಾನೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಭಾರ್ಗವಿ ಅದಾಗಲೇ ಪ್ಲಾನ್ ಮಾಡಿದ್ದಾಳೆ. ವಿಶ್ವನನ್ನು ತಯಾರಿ ಮಾಡಿದ್ದು, ತನ್ನ ಜೊತೆಗೆ ಕೈ ಜೋಡಿಸಿದರೆ, ಡೀಲ್ ನಲ್ಲಿ ಫಿಫ್ಟಿ ಫಿಫ್ಟಿ ಕೊಡುವುದಾಗಿ ಸುಳ್ಳು ಭರವಸೆಯನ್ನು ಕೊಟ್ಟಿದ್ದಾಳೆ. ರಾಮ, ಸಿಹಿ ಬಗ್ಗೆ ಹೇಳಲು ಹೊರಟಾಗಲೇ ವಿಶ್ವ ತನಗೆ ಆಸ್ತಿ ಬಗ್ಗೆ ಮಾಹಿತಿ ಬೇಕು ಎಂದು ಕೇಳಿದ್ದಾನೆ. ಆಸ್ತಿಯಲ್ಲಿ ಯಾರು ಯಾರಿಗೆ ಎಷ್ಟೆಷ್ಟು ಪಾಲು ಬರುತ್ತದೆ ಎಂಬುದು ಗೊತ್ತಾಗಬೇಕು ಎಂದು ಕೇಳುತ್ತಾನೆ.

ನೊಂದುಕೊಂಡ ಸೂರಿ
ವಿಶ್ವ ಕೇಳಿದ ಮಾತಿನಿಂದ ಸೂರಿಗೆ ಬೇಸರವಾಗುತ್ತದೆ. ಆದರೆ, ವಿಶ್ವ ಅಪ್ಪನ ನಂತರ ನಮಗೆ ಯಾರಿಗೆ ಎಷ್ಟು ಆಸ್ತಿ ದಕ್ಕುತ್ತದೆ ಎಂಬ ಕ್ಲಾರಿಟಿ ಇಲ್ಲದೇ ಹೋದರೆ ಸಮಸ್ಯೆ ಆಗುತ್ತದೆ. ಈ ಬಗ್ಗೆ ಲಾಯರ್ ಅನ್ನು ಕರೆಸಿ ಸ್ಪಷ್ಟ ಮಾಹಿತಿ ಕೊಟ್ಟರೆ ಒಳ್ಳೆಯದು. ಎಲ್ಲರೂ ಒಟ್ಟಿಗೆ ಕೂಡಿ ಬಾಳುವುದು ಬೇರೆ. ಆದರೆ, ನಮ್ಮ ಆಸ್ತಿ ಬಗ್ಗೆ ನಮಗೂ ಕ್ಲಾರಿಟಿ ಇರಬೇಕು ಎಂದು ಹೇಳುತ್ತಾನೆ. ಆಗ ರಾಮ್ ಆಯ್ತು ವಿಶ್ವ ಚಿಕ್ಕಪ್ಪ. ತಾತನ ಆಸ್ತಿಯಲ್ಲಿ ನಿಮಗೂ ಸತ್ಯ ಚಿಕ್ಕಪ್ಪನಿಗೂ ಅರ್ಧ ಅರ್ಧ ಪಾಲು ಸಿಗುತ್ತದೆ. ಇನ್ನೂ ಕ್ಲಾರಿಟಿ ಬೇಕು ಎಂದರೆ, ಇವತ್ತೇ ನಾನು ಲಾಯರ್ ಬಳಿ ಮಾತನಾಡುತ್ತೇನೆ. ಮನೆಗೆ ಕರೆಸಿ ನಿಮಗೆ ಸ್ಪಷ್ಟನೆ ಕೊಡಿಸುತ್ತೇನೆ ಎಂದು ಹೇಳುತ್ತಾನೆ.
ಸೀತಾ ಮನೆಗೆ ಬಂದ ಸೂರಿ ತಾತ
ಆದರೆ, ಆಸ್ತಿ ವಿಚಾರವಾಗಿ ವಿಶ್ವ ಮಾತನಾಡಿದ್ದಕ್ಕೆ ಸೂರಿ, ರಾಮ್, ಸತ್ಯ ಎಲ್ಲರಿಗೂ ಬೇಸರವಾಗುತ್ತದೆ. ಭಾರ್ಗವಿ ಒಳ್ಳೆಯದಾಯಿತು ಎಂದು ಖುಷಿ ಪಡುತ್ತಾಳೆ. ಇನ್ನು ವಿಶ್ವನಿಗೆ ಭಾರ್ಗವಿ ಆಟವೇ ಅರ್ಥವಾಗುತ್ತಿಲ್ಲ. ಭಾರ್ಗವಿ ಯಾರ ಜೊತೆಗೆ ರಾಮ್ ಮದುವೆ ಮಾಡಿಸುತ್ತಾಳೆ ಎಂಬ ಅನುಮಾನ ಮೂಡಿದೆ. ಒಂದು ಕಡೆ ನೋಡಿದರೆ, ಚಾಂದಿನಿಗೆ ಭರವಸೆ ಕೊಟ್ಟಿದ್ದು, ಮನೆಯಲ್ಲಿ ಸೀತಾಳನ್ನು ಒಪ್ಪಿಕೊಂಡಿದ್ದಾಳೆ. ಇನ್ನು ಸಿಹಿ ಸೂರಿ ತಾತನಿಗೆ ಫೋನ್ ಮಾಡಿ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಾಳೆ. ಇದರಿಂದ ಸೂರಿ ತಾತನಿಗೆ ಖುಷಿಯಾಗುತ್ತದೆ. ಸಿಹಿಯನ್ನು ನೋಡುವ ಸಲುವಾಗಿಯೋ ಅಥವಾ ಸೀತಾಳನ್ನು ಭೇಟಿಯಾಗಲೋ ಇದ್ದಕ್ಕಿದ್ದ ಹಾಗೆಯೇ ಸೂರಿ ತಾತ ಶಾಂತಮ್ಮನ ವಠಾರಕ್ಕೆ ಬಂದಿದ್ದಾರೆ.

ಸೂರಿಗೆ ಸಿಹಿ ಹುಟ್ಟಿನ ಬಗ್ಗೆ ಗೊತ್ತಾಗುತ್ತಾ..?
ಸಿಹಿ ಅಂತೂ ತಾತನನ್ನು ನೋಡಿ ಫುಲ್ ಖುಷಿ ಪಟ್ಟಿದ್ದಾಳೆ. ಆದರೆ, ಸೂರಿ ತಾತ ಸೀತಾ ಮನೆಯನ್ನು ತೋರಿಸಿ ಎಂದಿದ್ದು, ಈಗ ಸಿಹಿನೇ ಸೀತಾಳ ಮಗಳು ಎಂಬ ಸತ್ಯ ಗೊತ್ತಾಗುತ್ತಾ..? ಹಾಗೊಂದು ವೇಳೆ ಸತ್ಯ ತಿಳಿದರೆ, ರಾಮ ಮತ್ತು ಸೀತಾ ಮದುವೆಗೆ ಸೂರಿ ಒಪ್ಪಿಗೆ ಕೊಡುತ್ತಾರಾ. ಈ ಕಹಿ ಸತ್ಯವನ್ನು ಸೂರಿ ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











