SeethaRaama: ಸೀತಾ ಮನೆ ಮೇಲೆ ಭಾರ್ಗವಿ ಕಣ್ಣು: ಪ್ರೀತಿಯ ದೋಣಿಯಲ್ಲಿ ಅಶೋಕ-ಪ್ರಿಯಾ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಆಫಿಸಿನಲ್ಲಿ ಆಗುತ್ತಿರುವ ಫ್ರಾಡ್ ಅನ್ನು ತಡೆಗಟ್ಟುವ ಸಲುವಾಗಿ ಪ್ರಾಣ ಸ್ನೇಹಿತ ಅಶೋಕ್‌ನನ್ನೇ ಸಿಇಓ ಆಗಿ ಮಾಡಿದ್ದಾನೆ.

ಸ್ನೇಹಿತ ಅಶೋಕ್ ಬಾಡಿಗೆ ರೂಮ್‌ನಲ್ಲಿ ಇರುವುದು ಸರಿಯಲ್ಲ ಎಂದು ತಿಳಿದು ಹೊಸ ಮನೆಯನ್ನು ಕೂಡ ರಾಮ್ ಗಿಫ್ಟ್ ಮಾಡಿದ್ದಾನೆ.

Written update on episode 25th January seetha raama serial

ರಾಮ್ ನಡೆ ಸಹಜವಾಗಿಯೇ ಭಾರ್ಗತವಿಗೆ ಸಿಟ್ಟು ಬರುವಂತೆ ಮಾಡಿದೆ. ಆದರೆ, ಇದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದ ಕಾರಣ ರಾಮ್ ನಿರ್ಧಾರ ಸರಿಯಾಗಿದೆ ಎಂಬಂತೆ ನಡೆದುಕೊಂಡಿದ್ದಾಳೆ.

ಅಶೋಕ್-ಪ್ರಿಯಾ ಲವ್ ಸ್ಟಾರ್ಟ್

ಇನ್ನು ಪ್ರಿಯಾಗೆ ಅಶೋಕನ ಮೇಲೆ ಮೊದಲಿನಿಂದಲೂ ಪ್ರೀತಿ ಇದ್ದರೂ ಕೂಡ ಸುಳ್ಳು ಹೇಳಿದ ಕಾರಣ ಕೋಪಿಸಿಕೊಂಡಿದ್ದಳು. ಆದರೂ ಪ್ರಿಯಾಳಿಗೆ ಅಶೋಕನನ್ನು ಮಾತನಾಡಿಸದೇ ಇರಲು ಆಗುತ್ತಿರಲಿಲ್ಲ. ಇತ್ತ ಅಶೋಕನಿಗೂ ಪ್ರಿಯಾಳ ಬೇಸರವನ್ನು ಕಂಡು ನೊಂದುಕೊಂಡಿದ್ದ. ಆದರೆ, ಈಗ ಪ್ರಿಯಾಳಿಗೆ ಅವರ ತಾಯಿ ಒಂದು ಸಂಬಂಧವನ್ನು ನೋಡಿದ್ದು, ಆತನ ಬಳಿ ಹಣ, ಐಶ್ವರ್ಯ, ಅಂದ ಎಲ್ಲವೂ ಇದೆ ಒಪ್ಪಿಕೊ ಎಂದು ಬಲವಂತ ಮಾಡುತ್ತಾರೆ. ಆದರೆ, ಪ್ರಿಯಾ ಸುತಾರಾಂ ಇಲ್ಲ ಎಂದು ಹೇಳುತ್ತಾಳೆ. ಈ ವಿಚಾರವನ್ನು ಅಶೋಕನಿಗೂ ತಿಳಿಸಿದ್ದು, ತನಗೆ ಆತನ ಮೇಲೆ ಪ್ರೀತಿ ಹುಟ್ಟಿದೆ ಎಂಬ ಸತ್ಯವನ್ನು ಅರ್ಥ ಮಾಡಿಸಲು ಯತ್ನಿಸಿದ್ದಾಳೆ. ಅಶೋಕನಿಗೂ ಪ್ರಿಯಾ ಮಾತು ಅರ್ಥವಾಗಿದೆ. ಇನ್ನು ಇಬ್ಬರ ನಡುವಿನ ಪ್ರೇಮದ ಬಗ್ಗೆ ರಾಮ್ ತಿಳಿದುಕೊಂಡಿದ್ದು, ಅಶೋಕನಿಗೆ ರೇಗಿಸಲು ಶುರು ಮಾಡಿದ್ದಾನೆ.

ಫ್ರೆಂಡ್‌ಗೆ ಸಂದೇಶ ಕಳಿಸಿದ ಸಿಹಿ

ಇತ್ತ ಸಿಹಿಗೆ ತನ್ನ ಫ್ರೆಂಡ್ ರಾಮ್ ಅನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಅತ್ತ ರಾಮ್ ಕಥೆಯೂ ಇದೆ ಆಗಿದೆ. ಆದರೆ, ಸೀತಾಳ ಕೋಪ ತಣ್ಣಗಾಗುವವರೆಗೂ ಇಬ್ಬರೂ ಬೇರೆ ಆಗಿರಲೇಬೇಕಿದೆ. ಸಿಹಿ, ಸೀತಮ್ಮನ ಒಪ್ಪಿಗೆ ಇಲ್ಲದೇ ರಾಮ್‌ಗೆ ಫೋನ್ ಮಾಡುವಂತಿಲ್ಲ. ಹಾಗಾಗಿ ಈಗ ರಾಮ್‌ಗೆ ಪತ್ರವನ್ನು ಬರೆದು ಪೋಸ್ಟ್ ಮಾಡಿದ್ದಾಳೆ. ಶ್ರೀರಾಮ್ ದೇಸಾಯಿ ಬೆಂಗಳೂರು, ಎಂದು ಅಡ್ರೆಸ್ ಬರೆದಿದ್ದಾಳೆ. ಈ ಪತ್ರ ಮೊದಲು ಭಾರ್ಗವಿ ಕೈ ತಲುಪಿದ್ದು, ರಾಮ್ ನೋಡಿದ್ದಾನೆ.

Written update on episode 25th January seetha raama serial

ಸಿಹಿಗೆ ಪತ್ರ ಪಡೆದ ರಾಮ್

ಸಿಹಿ ಬರೆದ ಪತ್ರವನ್ನು ನೋಡಿ ರಾಮ್ ಖುಷಿಪಟ್ಟಿದ್ದಾನೆ. ಸಿಹಿ ಪತ್ರ ಬರೆದಿರುವ ವಿಚಾರವನ್ನು ಸೀತಾಗೆ ಹೇಳಬೇಕು ಎಂದು ರಾಮ್ ಯತ್ನಿಸುತ್ತಾನೆ. ಆದರೆ ಸೀತಾ ಅವಕಾಶವೇ ಮಾಡಿಕೊಡುವುದಿಲ್ಲ. ಇನ್ನು ಸಿಹಿ, ಫ್ರೆಂಡ್‌ಗೆ ಪತ್ರ ತಲುಪಿತೋ ಇಲ್ಲವೋ ಎಂಬ ಆತಂಕದಲ್ಲಿ ದಿನ ದೂಡಿದ್ದಾಳೆ. ಈ ನಡುವೆ ಭಾರ್ಗವಿಗೆ ರಾಮ್‌ಗೆ ಬಂದ ಪತ್ರ ಯಾವುದು ಎಂಬ ಕುತೂಹಲದ ಜೊತೆಗೆ ಅನುಮಾನವೂ ಶುರುವಾಗಿದೆ.

ಸೀತಾ ಮನೆ ಮೇಲೆ ಭಾರ್ಗವಿ ಕಣ್ಣು

ಇತ್ತ ಸೀತಾ ಮನೆ ಬ್ಯಾಂಕ್ ಹರಾಜು ಇರುವುದರ ಬಗ್ಗೆ ಅರಿತ ಭಾರ್ಗವಿ ಸೀತಾಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಮುಂದಾಗಿದ್ದಾಳೆ. ಸೀತಾಳಿಗೂ ಬ್ಯಾಂಕ್‌ನಿಂದ ಹರಾಜು ನೋಟಿಸ್ ಬಂದಿದೆ. ಮನೆ ಹರಾಜಾಗುವುದು ಖಚಿತವಾಗಿದೆ. ಭಾರ್ಗವಿ ಹರಾಜಿನಲ್ಲಿ ಆ ಮನೆಯನ್ನು ಖರೀದಿಸಲು ಮುಂದಾಗಿದ್ದಾಳೆ. ಈ ಬಗ್ಗೆ ಮಾವ ಸೂರ್ಯ ಪ್ರಕಾಶ್ ಬಳಿ ಒಪ್ಪಿಗೆ ಪಡೆಯಲು ಯತ್ನಿಸಿದ್ದಾಳೆ. ಆದರೆ, ಸೂರಿ ತಾತ ರಾಮ್ ಅನ್ನು ಕೇಳಿ ಮುಂದುವರಿ ಎಂದು ಹೇಳಿದ್ದು, ಇದು ಭಾರ್ಗವಿ ಇನ್ನಷ್ಟು ಕೋಪ ಬರುವಂತೆ ಮಾಡಿದೆ. ಸೀತಾ ಮನೆಯನ್ನು ರಾಮ್ ಉಳಿಸಿಕೊಡುತ್ತಾನಾ? ಇಲ್ಲ ಭಾರ್ಗವಿ, ಸೀತಾಳಿಗೆ ಸಮಸ್ಯೆ ತಂದೊಡ್ಡುತ್ತಾಳಾ? ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Seetha house in bank auction bhargavi planned to buy that house;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X