Seetha Rama ; ನಾನೇ ಸೀತಾ ಮಗಳು ಎಂದ ಸಿಹಿ ಮಾತು ಕೇಳಿ ಕಂಗಾಲಾದ ಸೂರಿ..!
ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್ ಮತ್ತು ಪ್ರಿಯಾ ಮದುವೆಯಾಗಿದ್ದು, ಇಬ್ಬರೂ ಖುಷಿಯಾಗಿದ್ದಾರೆ. ಆದರೆ, ಪ್ರಿಯಾ ತಾಯಿ ಪ್ರೇಮಾ ಪ್ರತಿಯೊಂದು ವಿಚಾರದಲ್ಲೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಂಜಲಿ ಎಮರ್ಜೆನ್ಸಿ ಎಂದು ರಾತ್ರಿ ಕ್ಲಿನಿಕ್ ಗೆ ಹೋಗಿ ಬೆಳಗ್ಗೆ ಬಂದಿದ್ದಾಳೆ. ಬೆಳಗ್ಗೆ ಬಂದವಳೇ ಮತ್ತೆ ಆಸ್ಪತ್ರೆಗೆ ತೆರಳಿದ್ದಾಳೆ. ಇದನ್ನು ನೋಡಿ ಪ್ರೇಮಾ ಕೈಯಲ್ಲಿ ಸಹಿಸಲಾಗುತ್ತಿಲ್ಲ. ಪ್ರಿಯಾಳಿಗೆ ಫೋನ್ ಮಾಡಿ ಈ ವಿಚಾರದ ಬಗ್ಗೆ ಮಾತನಾಡಿದ್ದಾಳೆ. ಇದು ಪ್ರಿಯಾಳಿಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ. ಅಮ್ಮನಿಗೆ ಬೈದು ಬುದ್ಧಿ ಹೇಳುತ್ತಾಳೆ.
ನಾನೇ ಸೀತಮ್ಮನ ಮಗಳು ಎಂದ ಸಿಹಿ
ಸೂರಿ ತಾತನಿಗೆ ಸಿಹಿ ಫೋನ್ ಮಾಡಿ ಶೂಟಿಂಗ್ ಆಟವಾಡುತ್ತಿದ್ದು, ನೋಡಲು ಬನ್ನಿ ಎಂದು ಕರೆದಿದ್ದಾಳೆ. ಮಗು ಕರೆದಿದೆ ಎಂದು ಪ್ರೀತಿಯಿಂದ ವಠಾರಕ್ಕೆ ಬಂದಿದ್ದಾರೆ. ತಾತನನ್ನು ನೋಡಿದ ಸಿಹಿಗೆ ಬಹಳ ಖುಷಿಯಾಗುತ್ತದೆ. ಶಾಂತಜ್ಜಿ. ಮೂರ್ತಿ ತಾತ ಸೇರಿಕೊಂಡು ಸೂರಿಯನ್ನು ಸ್ವಾಗತಿಸುತ್ತಾರೆ. ಸಿಹಿ ಕರೆದಿದ್ದಕ್ಕೆ ಬಂದೆ ಎಂದು ಹೇಳಿ ಖುಷಿ ಪಡುತ್ತಾರೆ. ಸೀತಾ ಮನೆಗೆ ಹೋಗಬೇಕು ಎಂದು ಸೂರಿ ಕೇಳುತ್ತಾರೆ. ಆಗ ಸಿಹಿ ತಾನೇ ಸೀತಮ್ಮನ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕರೆದುಕೊಂಡು ಹೋಗುತ್ತಾಳೆ. ಸಿಹಿಯ ಸಂಭ್ರಮವನ್ನು ಕಂಡು ಎಲ್ಲರಿಗೂ ಖುಷಿಯಾಗುತ್ತದೆ. ಸೀತಾ ಮನೆಯೊಳಗೆ ಹೋಗಲು ಸೂರಿ ಒಪ್ಪುವುದಿಲ್ಲ. ಮನೆಯಲ್ಲಿ ಯಾರೂ ಇಲ್ಲದಾಗ ಹೋಗಬಾರದು ಎಂದು ಹೇಳುತ್ತಾರೆ. ಆದರೆ ಸಿಹಿ ಇದು ತನ್ನದೇ ಮನೆ, ತಾನೇ ಸೀತಾಳ ಮಗಳು ಎಂದು ಹೇಳುತ್ತಾಳೆ.

ಸತ್ಯ ಮುಚ್ಚಿಟ್ಟಿದ್ದಕ್ಕೆ ಸೂರಿ ಕೆಂಡಾಮಂಡಲ
ಸಿಹಿ ನಾನೇ ಸೀತಮ್ಮನ ಮಗಳು. ಈ ಮನೆಯಲ್ಲಿ ನಾನು ಸೀತಾ ಮಾತ್ರ ಇರುವುದು ಎಂದು ಹೇಳುತ್ತಾಳೆ. ಈ ಮಾತು ಸೂರಿ ತಾತನಿಗೆ ಘಾಸಿಗೊಳಿಸುತ್ತದೆ. ಇದೇನಿದು ಹೀಗಾಯ್ತಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಸಿಹಿ ಬಲವಂತವಾಗಿ ಮನೆಯೊಳಗೆ ಕರೆದುಕೊಂಡು ಹೋಗಿ ನೀರು ಕೊಡುತ್ತಾಳೆ. ಇದು ಸೂರಿಯನ್ನು ಚಿಂತೆಗೀಡು ಮಾಡುತ್ತದೆ. ಇಷ್ಟು ಒಳ್ಳೆ ಮಗು ಮದುವೆ ಮನೆಯಲ್ಲಿ ಇದ್ದರೂ ಯಾರೂ ತನ್ನ ಬಳಿ ಸತ್ಯ ಹೇಳಲಿಲ್ಲ. ಇವಳೇ ಸೀತಾಳ ಮಗಳು ಎಂದು ಮನೆಯವರೆಲ್ಲಾ ಮುಚ್ಚಿಟ್ಟಿದ್ದಾರೆ. ಇದು ಎಷ್ಟು ಸರಿ ಎಂದು ಕೆಂಡಮಂಡಲವಾಗುತ್ತಾರೆ.
ಸೀತಾಳಿಗೆ ಗರಂ ಆಗಿ ಉತ್ತರಿಸಿದ ಸೂರಿ
ಸೀತಾಳ ಬಳಿ ಗರಂ ಆಗಿ ಉತ್ತರ ಕೊಡುತ್ತಾರೆ. ನಿನ್ನ ಜೊತೆಗೆ ನಾನು ವ್ಯೆಯಕ್ತಿಕವಾಗಿ ಮಾತನಾಡುವುದಿದೆ. ಆದಷ್ಟು ಬೇಗ ಸಮಯ ಮಾಡಿಕೊಂಡು ನನಗೆ ಸಿಗು ಎಂದು ಹೇಳುತ್ತಾರೆ. ಹಾಗೆ ಹೇಳಿದ್ದೇ ತಡ ಮನೆಯಿಂದ ಹೊರಟು ಬಿಡುತ್ತಾರೆ. ಸಿಹಿ ಬಗ್ಗೆ ಸೂರಿ ಅವರಿಗೆ ಗೊತ್ತಿರಲಿಲ್ಲ. ಅದಕ್ಕೆ ಈಗ ಬೇಸರ ಮಾಡಿಕೊಂಡಿದ್ದಾರೆ ಎಂದು ಶಾಂತಜ್ಜಿ ಹಾಗೂ ಮೂರ್ತಿ ತಾತನ ಬಳಿ ಸೀತಾ ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ಸಿಹಿಗೆ ಆಘಾತವಾಗುತ್ತದೆ. ತನ್ನಿಂದಲೇ ಅಮ್ಮನ ಮದುವೆ ಆಗುತ್ತಿಲ್ಲ ಎಂದು ನೊಂದುಕೊಂಡಿದ್ದಾಳೆ.

ಕೋಪ ಮಾಡಿಕೊಂಡ ಸೂರಿ ತಾತ
ಇನ್ನು ಈ ವಿಚಾರ ರಾಮಗೆ ಗೊತ್ತಾಗುತ್ತದೆ. ರಾಮಗೂ ಮನೆಗೆ ಬರುವಂತೆ ಹೇಳಿ ಹೊರಡುತ್ತಾರೆ. ಮನೆಯಲ್ಲಿ ಎಲ್ಲರ ಮುಂದೆಯೂ ಜಗಳ ಮಾಡುತ್ತಾರೆ. ಸೀತಾಳಿಗೆ ಒಂದು ಮಗು ಇರುವುದನ್ನು ಹೇಳದೇ ಮುಚ್ಚಿಟ್ಟಿದ್ಯಾಕೆ. ಅಂತಹ ಅಗತ್ಯವೇನಿತ್ತು ಎಂದು ಕೂಗಾಡುತ್ತಾರೆ. ನಿಮಗೆ ಆರೋಗ್ಯ ಸಮಸ್ಯೆ ಇದ್ದಿದ್ದಕ್ಕೆ ಮುಚ್ಚಿಟ್ಟೆವು ಎಂದು ಹೇಳುತ್ತಾರೆ. ನಾನು ಸೀತಾ ಜೊತೆಗೆ ಒಬ್ಬನೇ ವ್ಯೆಯಕ್ತಿಕವಾಗಿ ಮಾತನಾಡುವುದಿದೆ. ಆಕೆಯನ್ನು ಆದಷ್ಟು ಬೇಗ ಕರೆಸಿ ಎಂದು ತಾಕೀತು ಮಾಡುತ್ತಾರೆ.


Click it and Unblock the Notifications











