Shrirastu Shubhamasthu: ಅಭಿ ಮದುವೆಗೆ ತುಳಸಿ ಕಷ್ಟ ಪಡುತ್ತಿದ್ದರೆ, ಶಾರ್ವರಿ ಪ್ಲ್ಯಾನ್ ಏನ್ ಗೊತ್ತಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನಿಗೆ ವಯಸ್ಸಾಗಿದ್ದರೂ ಕೂಡ ತಾನಿನ್ನೂ ಯಂಗ್ ಎಂಬಂತೆ ನಡೆದುಕೊಳ್ಳುತ್ತಿರುತ್ತಾರೆ. ಯಾರೂ ಅವರನ್ನು ತಾತ ಎಂದು ಕರೆಯುವುದು ಕೂಡ ಇಷ್ಟವಿಲ್ಲ.
80ರ ಹರೆಯದಲ್ಲೂ ಆಕ್ಟೀವ್ ಆಗಿರುವ ದತ್ತ ತಾತನಿಗೆ ಯಾರೇ ತಪ್ಪು ಮಾಡಿದರೂ ತಿದ್ದಿ ಬುದ್ದಿ ಹೇಳುವುದೆಂದರೆ ಬಹಳ ಇಷ್ಟ. ಅದರಲ್ಲೂ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯನ್ನೂ ಕೊಡುತ್ತಾರೆ.

ದುರಾದೃಷ್ಟಕರವೆಂದರೆ, ಮೊಮ್ಮಗಳು ಸಂಧ್ಯಾ ಪದೇ ಪದೇ ತಪ್ಪು ಮಾಡಿ ಸಿಕ್ಕಿ ಬಿದ್ದರೂ ಯಾವುದೇ ಶಿಕ್ಷೆ ಕೊಡಲು ಆಗುತ್ತಿಲ್ಲ. ಹೇಗಾದರೂ ಸಂಧ್ಯಾ ಎಸ್ಕೇಪ್ ಆಗಿ ಬಿಡುತ್ತಾಳೆ.
ಅತ್ತಿಗೆ ಒಡವೆ ಕದ್ದ ಸಂಧ್ಯಾ
ದತ್ತ ತಾತ ವಾಕಿಂಗ್ ಎಂದು ಶೇಷು ಜೊತೆಗೆ ಹೋಗಿದ್ದಾರೆ. ಸಮರ್ಥ್ ಕೆಲಸಕ್ಕೆ ಸಂದರ್ಶನ ನೀಡಲು ಹೋಗಿದ್ದಾನೆ. ಇದೇ ಸಂದರ್ಭದಲ್ಲಿ ಸಿರಿ ಕೂಡ ಅಂಗಡಿಗೆ ಹೋಗಿದ್ದಾಳೆ. ಇದೇ ಸರಿಯಾದ ಸಮಯ ಎಂದು ತಿಳಿದ ಸಂಧ್ಯಾ ತಾತನ ಕಬೋರ್ಡ್‌ನಲ್ಲಿ ಒಡವೆ ಕದ್ದಿದ್ದಾಳೆ. ಸಿರಿ ಒಡವೆಗಳನ್ನು ತೆಗೆದುಕೊಂಡು ಹೋಗಿ ಮೂರು ಲಕ್ಷ ರೂಪಾಯಿಗೆ ಅಡವಿಟ್ಟಿದ್ದಾಳೆ. ಜೊತೆಗೆ ಅದೇ ರೀತಿಯ ಡುಪ್ಲಿಕೇಟ್ ಒಡವೆಗಳನ್ನು ಮಾಡಿಸಿಕೊಂಡು ಬಂದು ಮತ್ತದೇ ಜಾಗದಲ್ಲಿಟ್ಟಿದ್ದಾಳೆ. ಮೂರು ಲಕ್ಷ ಹಣ ನಂದಿನಿಗೆ ಕೊಟ್ಟು ಡಬಲ್ ಸೈಟ್ ಪಡೆಯಬೇಕು ಎಂದುಕೊಂಡಿದ್ದಾಳೆ. ತನ್ನ ತವರು ಮನೆಯಲ್ಲೇ ಮತ್ತೆ ಮತ್ತೆ ಹಣ ಕದಿಯುತ್ತಿದ್ದಾಳೆ.

ಸಮರ್ಥ್‌ಗೆ ಎಲ್ಲೂ ಕೆಲಸ ಸಿಗುತ್ತಿಲ್ಲ
ಸಂಧ್ಯಾಳನ್ನು ತಾತನ ರೂಮ್‌ನಲ್ಲಿ ನೋಡಿದ ಸಮರ್ಥ್ ಅನುಮಾನಗೊಂಡಿದ್ದಾನೆ. ಕಬೋರ್ಡ್ ತೆಗೆದು ಒಡವೆಗಳನ್ನು ಚೆಕ್ ಮಾಡಿದ್ದಾನೆ. ಆದರೆ ಡುಪ್ಲಿಕೇಟ್ ಒಡವೆಗಳನ್ನು ಇಟ್ಟಿರುವುದು ತಿಳಿಯದೇ, ಒರಿಜಿನಲ್ ಎಂದುಕೊಂಡು ಸುಮ್ಮನಾಗುತ್ತಾನೆ. ಇನ್ನು ಸಮರ್ಥ್ ಕೆಲಸಕ್ಕೆ ಅಪ್ಲೈ ಮಾಡಿದ ಕಡೆಯಲೆಲ್ಲಾ ಸೆಲೆಕ್ಟ್ ಆಗುತ್ತಿದ್ದಾನೆ. ಆದರೆ, ಅವನ ಹಳೆಯ ಕಂಪನಿಯಲ್ಲಿ ತನ್ನ ಬಗ್ಗೆ ಮಾಹಿತಿ ಪಡೆಯಲು ಮುಂದಾದಾಗ ಅಭಿ ಆಫಿಸಿನಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದರಿಂದ ಸಮರ್ಥ್‌ಗೆ ಕೆಲಸವೇ ಸಿಗದಂತಾಗಿದೆ. ಎಲ್ಲೇ ಹೋದರೂ ಅಭಿ ಅಡ್ಡಿಯಾಗುತ್ತಿದ್ದಾನೆ.
ದೀಪಿಕಾ ಬಳಿ ಮಾತನಾಡಿದ ತುಳಸಿ
ಇತ್ತ ತುಳಸಿಗೆ ಅಭಿ ಮತ್ತು ದೀಪಿಕಾ ಮದುವೆ ಮಾಡಿಸುವ ಜವಾಬ್ದಾರಿಯ ಜೊತೆಗೆ ಜನಾರ್ಧನ್ ಅನ್ನು ಮದುವೆಗೆ ಒಪ್ಪಿಸುವುದು ದೊಡ್ಡ ಸವಾಲಾಗಿದೆ. ಜನಾರ್ಧನ್ ಯಾರ ಮಾತನ್ನು ಕೇಳುತ್ತಿಲ್ಲ. ಈಗ ತುಳಸಿ ವನಜಾ ಬಳಿ ಮಾತನಾಡಿ ದೀಪಿಕಾಳನ್ನು ಭೇಟಿ ಮಾಡಲು ಹೊರಟಿದ್ದಾಳೆ. ಪೂರ್ಣಿ ಮತ್ತು ಅವಿನಾಶ್ ಕೂಡ ತುಳಸಿ ಜೊತೆಗೆ ಬಂದಿದ್ದಾರೆ. ದೀಪಿಕಾಳನ್ನು ಅಭಿ ಜೊತೆಗೆ ಮದುವೆಯಾಗಲು ಇಷ್ಟವಿದೆಯಾ? ಎಂದು ಪ್ರಶ್ನೆ ಮಾಡುತ್ತಾಳೆ. ದೀಪಿಕಾ ತನಗೆ ಯಾರೂ ಬೇಡ, ಅಭಿ ಒಬ್ಬ ಇದ್ದರೆ ಸಾಕು. ಅವನನ್ನು ಬಿಟ್ಟಿರಲು ತನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ಹೇಳುತ್ತಾಳೆ.
ಅಭಿ ಮದುವೆಗೆ ಮತ್ತೆ ಅಡ್ಡಿ ಬರುತ್ತಾ..?
ದೀಪಿಕಾ ಮಾತು ಕೇಳಿದ ತುಳಸಿಗೆ ಖುಷಿಯಾಗುತ್ತದೆ. ಅವಿನಾಶ್ ಈಗಲೇ ಅಭಿ ಅನ್ನು ಕರೆಸುತ್ತೇನೆ. ಇಬ್ಬರಿಗೂ ಮದುವೆ ಮಾಡಿಸೋಣ ಎನ್ನುತ್ತಾನೆ. ಆಗ ತುಳಸಿ ಹಾಗೆಲ್ಲಾ ಮಾಡಬಾರದು. ಜನಾರ್ಧನ್ ಅನ್ನು ಒಪ್ಪಿಸಿ ಮದುವೆ ಮಾಡಿಸೋಣ ಎನ್ನುತ್ತಾಳೆ. ಈ ವಿಚಾರ ಕೇಳಿ ಶಾರ್ವರಿ, ಜನಾರ್ಧನ್ ಅನ್ನು ಭೇಟಿ ಮಾಡುತ್ತಾಳೆ. ಈಗ ನೀನು ಸುಮ್ಮನಿದ್ದರೆ, ಇನ್ನು ಕೆಲವೇ ದಿನಗಳಲ್ಲಿ ದೀಪಿಕಾ ಹಾಗೂ ಅಭಿ ಮದುವೆ ನಡೆದು ಹೋಗುತ್ತದೆ. ನಿನಗೆ ಗೊತ್ತಿಲ್ಲದೇ ಈಗಾಗಲೇ ಮದುವೆ ತಯಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾಳೆ. ಈಗ ಅಭಿ ಮದುವೆಗೆ ಶಾರ್ವರಿಯೇ ಅಡ್ಡಿಯಾಗುತ್ತಾಳಾ? ಎಂಬ ಕುತೂಹಲ ಮೂಡಿದೆ.


Click it and Unblock the Notifications











