Seetha Raama: ಒಂದ್ಕಡೆ ಸೀತಾ ಮದುವೆ ತಯಾರಿ, ಮತ್ತೊಂದು ಕಡೆ ಮಲೇಷಿಯಾಗೆ ಹೊರಟ ರಾಮ್
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಮುಂದೆ ನಿಂತು ಸೀತಾಳ ಮದುವೆಗೆ ಒಪ್ಪಿಸಿದ್ದಾನೆ. ಸಿಹಿ ಬಾಳಲ್ಲಿ ಖುಷಿ ಇರಲಿ, ಸೀತಾಳಿಗೆ ಕಷ್ಟವಾಗಬಾರದು ಎಂದು ಹಾಗೆ ಮಾಡಿದ್ದಾನೆ.
ರುದ್ರ ಪ್ರತಾಪ್ ಉದ್ದೇಶವೇ ಇನ್ನೂ ಯಾರಿಗೂ ಗೊತ್ತಾಗಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಗೆ ವಠಾರವನ್ನು ಮಾರಾಟ ಮಾಡುವ ಸಲುವಾಗಿ ಆತ ಸೀತಾಳನ್ನು ಮದುವೆಯಾಗುತ್ತಿದ್ದಾನೆ.
ಇನ್ನು ರುದ್ರಪ್ರತಾಪ್‌ಗೆ ಸಿಹಿ ಎಂದರೂ ಇಷ್ಟವಾಗುವುದಿಲ್ಲ. ಅಲ್ಲದೇ, ರುದ್ರಪ್ರತಾಪ್ ಸ್ಯಾಡಿಸ್ಟ್ ಕೂಡ ಹೌದು. ಆದರೆ ಇದ್ಯಾವುದೂ ತಿಳಿಯದೇ ಸೀತಾ ಮದುವೆಗೆ ಒಪ್ಪಿದ್ದಾಳೆ.

ರಾಮನ ಪ್ರೀತಿಗೆ ಸೀತಾ ಫುಲ್ ಖುಷ್
ಇನ್ನು ರಾಮ್‌ಗೆ ಮದುವೆಯ ಆಮಂತ್ರಣವನ್ನು ಕೊಡಲು ಆಫಿಸಿನಲ್ಲಿ ಹುಡುಕುತ್ತಾಳೆ. ಕಾಣದೇ ಇದ್ದಾಗ ಅಶೋಕನ ಬಳಿ ಹೋಗಿ ರಾಮ್ ಎಲ್ಲಿ ಎಂದು ಕೇಳಿದಾಗ, ಬೇಸರದಲ್ಲಿ ಇದ್ದ ಅಶೋಕ್, ಅವನು ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂದು ಹೇಳಿ ಬಿಡುತ್ತಾನೆ. ಆದರೆ, ಸೀತಾ ಸರಿಯಾಗಿ ಅರ್ಥ ಮಾಡಿಕೊಳ್ಳದೇ, ರಾಮ್ ಬಳಿ ಹೋಗಿ ಯಾರು ಆ ಹುಡುಗಿ ನನಗೆ ತೋರಿಸು ಎಂದೆಲ್ಲಾ ಕೇಳಿದಾಗ. ರಾಮ್ ತಾನು ಪ್ರೀತಿಸುತ್ತಿರುವುದು ನಿಜ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ, ಅದು ಸೀತಾಳೇ ಎಂಬ ಸತ್ಯವನ್ನು ಹೇಳುವುದಿಲ್ಲ. ಸೀತಾ ಮದುವೆ ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಬರುತ್ತಾಳೆ.
ವಠಾರದಲ್ಲಿ ಮದುವೆ ಸಂಭ್ರಮ
ಶಾಂತಮ್ಮನ ವಠಾರದಲ್ಲಿ ಸೀತಾ ಮದುವೆಯ ಸಂಭ್ರಮ ಮನೆ ಮಾಡಿರುತ್ತದೆ. ಡ್ಯಾನ್ಸ್, ಮ್ಯೂಸಿಕ್, ಮೆಹಂದಿ ಹೀಗೆ ಎಲ್ಲಾ ರೀತಿಯಲ್ಲೂ ತಯಾರಿ ನಡೆಯುತ್ತಿರುತ್ತದೆ. ಸಿಹಿ ಪ್ರಿಯಾ ಬಳಿ ಮೆಹಂದಿ ಹಾಕಿಸಿಕೊಂಡು ಎಂಜಾಯ್ ಮಾಡುತ್ತಿರುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ರಾಮ್ ಬರುತ್ತಾನೆ. ರಾಮ್ ಅನ್ನು ನೋಡಿದ ಸಿಹಿಗೆ ಫುಲ್ ಖುಷಿಯಾಗುತ್ತದೆ. ರಾಮ್‌ಗೆ ಮೆಹಂದಿ ಹಾಕಿಸಿಕೊಳ್ಳುವಂತೆ ಬಲವಂತ ಮಾಡಿ ತನ್ನ ಹೆಸರಿನ ಮೊದಲ ಅಕ್ಷರವನ್ನು ಮೆಹಂದಿ ಹಾಕಿಸುತ್ತಾಳೆ.

ಫೀಲಿಂಗ್‌ನಲ್ಲಿರುವ ರಾಮ್-ಸಿಹಿ
ರಾಮ್ ಬಹಳ ಫೀಲಿಂಗ್‌ನಲ್ಲಿ ಇರುತ್ತಾನೆ. ಸಿಹಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂಬುದರ ಜೊತೆಗೆ ಸೀತಾಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ದುಃಖದಲ್ಲಿರುತ್ತಾನೆ. ಆದರೆ, ತನ್ನ ಫೀಲಿಂಗ್ಸ್ ಅಶೋಕನಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಸಿಹಿ ಜೊತೆಗೆ ಸ್ವಲ್ಪ ಸಮಯ ಕಾಲ ಕಳೆದ ರಾಮ್ ಸೀದಾ ಸೀತಾಳನ್ನು ಮಾತನಾಡಿಸಲು ಹೋಗುತ್ತಾನೆ. ರಾಮ್ ಬಂದಿದ್ದಕ್ಕೆ ಸೀತಾಳಿಗೆ ಖುಷಿಯಾಗುತ್ತದೆ. ಆದರೆ, ರಾಮ್ ತಾನು ಮಲೇಷಿಯಾಗೆ ಹೋಗುತ್ತಿರುವುದಾಗಿ ಹೇಳಿದಾಗ ಸೀಥಾಳಿಗೆ ನೋವಾಗುತ್ತದೆ. ಸಿಹಿಯೂ ಈ ಮಾತನ್ನು ಕೇಳಿ ಅಳುತ್ತಾಳೆ. ಆದರೆ, ಮಲೇಷಿಯಾ ಬ್ರ್ಯಾಂಚ್‌ನಲ್ಲಿ ಸಮಸ್ಯೆ ಆಗಿದೆ ಹೋಗಲೇಬೇಕು ಎನ್ನುತ್ತಾನೆ.
ಮಲೇಷಿಯಾಗೆ ಹೊರಟ ರಾಮ್
ಸೀತಾ ನಾಳೆ ಒಂದು ದಿನ ಇದ್ದು ಹೋಗಿ ಎಂದರೂ ಕೇಳುವುದಿಲ್ಲ. ಸಿಹಿ ಅಂತೂ ಹಠ ಮಾಡುತ್ತಾಳೆ. ಆದರೆ, ರಾಮ್ ಬೇರೆ ದಾರಿ ಇಲ್ಲದೇ ಹೊರಡುತ್ತಾನೆ. ಇನ್ನು ಅಶೋಕ್ ರಾಮ್ ನಿರ್ಧಾರ ಕೇಳಿ ಬೈಯುತ್ತಾನೆ. ನೀನು ಮಾಡುತ್ತಿರುವುದು ತಪ್ಪು ಎನ್ನುತ್ತಾನೆ. ರಾಮ್ ಮನೆಯಲ್ಲಿ ಎಲ್ಲರೂ ಬೇಸರ ಮಾಡಿಕೊಳ್ಲುತ್ತಾರೆ. ಭಾರ್ಗವಿ ಮಾತ್ರ ಓವರ್ ಆಕ್ಟಿಂಗ್ ಮಾಡುತ್ತಾಳೆ. ಮನದಲ್ಲಿ ಮತ್ತೆ ರಾಮ್ ಬರದಂತೆ ಹೋಗಲಿ ಎಂದು ಬಯಸಿದರೂ ಮೇಲ್ನೋಟಕ್ಕೆ ನೀನು ಎಲ್ಲಿಗೂ ಹೋಗಬೇಡ ರಾಮ್ ಎಂದು ಕಣ್ಣೀರು ಹಾಕುತ್ತಾಳೆ. ಆದರೂ ರಾಮ್ ಹೊರಟು ನಿಂತಿದ್ದಾನೆ. ಸೀತಾ ಮದುವೆ ರುದ್ರಪ್ರತಾಪ್ ಜೊತೆಗೆ ನಡೆಯುತ್ತಾ ಇಲ್ಲ ರಾಮ್ ವಾಪಸ್ ಬರುತ್ತಾನಾ? ಮುಂದೆ ಏನು ಆಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.


Click it and Unblock the Notifications











