Seetha Raama ; ಕೊನೆಗೂ 'ರಾಮ'ನಿಗೆ ಪ್ರಜ್ಞೆ ಬಂತು, ರಾಮನ 'ಪ್ರೀತಿ' ಒಪ್ಪಿಕೊಳ್ತಾಳಾ ಸೀತಾ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಚಾಂದಿನಿಯನ್ನು ಭೇಟಿಯಾದ ಭಾರ್ಗವಿ ಅವಳಿಗೆ ಮತ್ತೆ ರಾಮ್ ನನ್ನು ಪ್ರೀತಿಸಲು ಅವಕಾಶ ಮಾಡಿಕೊಟ್ಟಿದ್ದಾಳೆ. ತನ್ನ ಹಣದ ಹಂಗಿನಲ್ಲಿರುವ ಚಾಂದಿನಿ ತನ್ನ ಕೈ ಅಡಿಯಲ್ಲೇ ಇರುತ್ತಾಳೆ. ಆಗ ರಾಮ ನನ್ನು ಬುಗರಿಯಂತೆ ಆಡಿಸುವುದು ಸುಲಭ. ಇದರಿಂದ ಸೀತಾ ಕೂಡ ದೂರ ಆಗುತ್ತಾಳೆ ಎಂದು ಭಾರ್ಗವಿ ಪ್ಲಾನ್ ಮಾಡಿದ್ದಾಳೆ. ಇನ್ನು ರುದ್ರಪ್ರತಾಪ್ ಸೀತಾ ಅಣ್ಣನ ಮನೆಗೆ ಬಂದು ಠಿಕಾಣಿ ಹೂಡಿದ್ದಾನೆ. ಸೀತಾಳನ್ನು ಅದೇ ಮಂಟಪದಲ್ಲಿ ಅದೇ ಜನರ ಎದುರು ಮದುವೆಯಾಗುವುದಾಗಿ ಶಪಥ ಮಾಡಿದ್ದಾನೆ.

ರಾಮ ಕಾವಲುಗಾರನಾದ ಅಶೋಕ

ಕೆಲಸ ಹಾಳಾಗಿ ಹೋದರೂ ಪರವಾಗಿಲ್ಲ. ರಾಮ ಹುಷಾರಾಗುವವರೆಗೂ ಯಾವುದೇ ಕಾರಣಕ್ಕೂ ಆಸ್ಪತ್ರೆ ಬಿಟ್ಟು ಕದಲುವುದಿಲ್ಲ ಎಂದು ಅಶೋಕ ತೀರ್ಮಾನಿಸಿದ್ದಾನೆ. ಆಫೀಸಿಗೆ ಸೂರಿ ತಾತನಿಗೆ ಹೋಗಲು ತಿಳಿಸಿದ್ದಾನೆ. ಸೀತಾ, ಸೂರಿನ ಭೇಟಿಯೂ ಮಾಡಿಲ್ಲ. ಅಲ್ಲದೇ, ಫೋನ್ ಕೂಡ ರಿಸೀವ್ ಮಾಡುತ್ತಿಲ್ಲ. ಎಲ್ಲಿಗೆ ಹೋಗಿದ್ದಾರೆ ಎಂಬುದು ತಿಳಿಯದೇ, ಅಶೋಕ್ ಪ್ರಿಯಾ ಜೊತೆ ಮಾತನಾಡುತ್ತಾನೆ. ಆಗ ಪ್ರಿಯಾ ಸಿಹಿ ಕಾಣೆಯಾಗಿದ್ದು, ಸೀತಾ ಮತ್ತು ಸಿಹಿ ಇಬ್ಬರೂ ದೇವಸ್ಥಾನಕ್ಕೆ ಹೋದ ವಿಚಾರವನ್ನು ತಿಳಿಸುತ್ತಾಳೆ. ಇನ್ನು ಸೀತಾ ಮತ್ತು ಸಿಹಿ ಇಬ್ಬರೂ ದೇವಸ್ಥಾನದಲ್ಲಿ ಬೆಳ್ಳಿಗ್ಗೆಯಿಂದ ಸಂಜೆಯವರೆಗೂ ದೇವರ ಸೇವೆ ಮಾಡಿ ಪ್ರಸಾದವನ್ನು ತೆಗೆದುಕೊಂಡು ಬಂದಿದ್ದಾರೆ.

written update on episode 27 February seetha rama serial

ಹೆದರಿದ ಸಿಹಿಗೆ ಸಮಾಧಾನ ಮಾಡಿದ ಅಶೋಕ್

ಸಿಹಿ ಮನೆಗೆ ಬಂದ ಮೇಲೂ ಕೂಡ ಊಟ ಮಾಡದೇ ಹಠ ಮಾಡಿದ್ದಾಳೆ. ತಾನು ತನ್ನ ಫ್ರೆಂಡ್ ರಾಮ್ ನನ್ನು ನೋಡಲೇಬೇಕು ಎಂದು ಹಠ ಹಿಡಿದಿದ್ದಾಳೆ. ಸೀತಾ ಅವರ ಮನೆಯವರು ಜೊತೆಗೆ ಇರುವಾಗ ನಾವು ಹೋಗುವುದು ಸರಿಯಲ್ಲ ಎಂದು ಹೇಳುತ್ತಾಳೆ. ಬೇರೆ ದಾರಿ ಕಾಣದೇ, ಸಿಹಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೀತಾ ತೀರ್ಮಾನಿಸುತ್ತಾಳೆ. ಆಗ ಸಿಹಿ ಫ್ರೆಂಡ್ ಗಾಗಿ ಡ್ರಾಯಿಂಗ್ ಮಾಡಿಕೊಂಡು ಹೋಗುತ್ತಾಳೆ. ಆಸ್ಪತ್ರೆಯಲ್ಲಿ ಸಿಹಿ ಮತ್ತು ಸೀತಾಳನ್ನು ಬಾಡಿ ಗಾರ್ಡ್ಸ್ ಬಿಡುವುದಿಲ್ಲ. ಕೊನೆಗೆ ಅಶೋಕ್ ಬಂದು ಕರೆದುಕೊಂಡು ಹೋಗುತ್ತಾನೆ. ಆದರೆ, ಸಿಹಿ ದೂರದಿಂದಲೇ ರಾಮ ಸ್ಥಿತಿಯನ್ನು ಕಂಡು ಹೆದರುತ್ತಾಳೆ. ಅಲ್ಲಿಂದ ಓಡಿ ಹೋಗುತ್ತಾಳೆ. ಅಶೋಕ ಸಿಹಿ ಅನ್ನು ಸಮಾಧಾನ ಮಾಡುತ್ತಾನೆ.

written update on episode 27 February seetha rama serial

ಸೀತೆಯೊಂದಿಗೆ ಮಾತನಾಡಿದ ರಾಮ

ನೀನೇ ನಿನ್ನ ಫ್ರೆಂಡ್ ರಾಮ ಗೆ ಪವರ್ ಕೊಡಬೇಕು. ಈಗ ರಾಮ ಗೆ ಹುಷಾರಿಲ್ಲ. ನೀನು ರಾಮನನ್ನು ನೋಡದೇ, ಅವನಿಗೆ ಪವರ್ ಕೊಡದೇ ಹೋದರೆ, ನಿನ್ನ ಫ್ರೆಂಡ್ ಎಚ್ಚರವಾಗುವುದಿಲ್ಲ ಎಂದು ಅಶೋಕ್ ಸಿಹಿಗೆ ಅರ್ಥವಾಗುವಂತೆ ಹೇಳುತ್ತಾನೆ. ಈ ಸಂದರ್ಭದಲ್ಲಿ ಸೀತಾ ರಾಮ ಹಣೆಗೆ ದೇವರ ಕುಂಕುಮವನ್ನು ಇಟ್ಟು ಸಿಹಿ, ರಾಮ ಗೋಸ್ಕರ ಹೆಜ್ಜೆ ನಮಸ್ಕಾರ ಮಾಡಿದ್ದನ್ನು ಹೇಳುತ್ತಾಳೆ. ಸೀತಾ ತಾನು ಮಾಡಿದ ತಪ್ಪಿನಿಂದ ಬೇಸರಗೊಂಡು ಕಣ್ಣೀರು ಹಾಕುತ್ತಿರುತ್ತಾಳೆ. ಸೀತಾ ಕಣ್ಣೀರಿನ ಹನಿ ರಾಮನ ಪಾದದ ಮೇಲೆ ಬಿದ್ದಾಗ ರಾಮ ಗೆ ಪ್ರಜ್ಞೆ ಬರುತ್ತದೆ. ಸೀತಾ ಜೊತೆ ಮಾತನಾಡಿಸಲು ಯತ್ನಿಸುತ್ತಾನೆ.

written update on episode 27 February seetha rama serial

ಮನದ ಪ್ರೀತಿಯನ್ನು ಹೇಳಿಕೊಂಡ ರಾಮ

ತನ್ನ ಮನದ ಮಾತುಗಳನ್ನು ರಾಮ ಹೇಳಿಕೊಳ್ಳುತ್ತಾನೆ. ನನ್ನ ಜೀವನವನ್ನು ಸಿಹಿ ಮತ್ತು ನಿಮ್ಮ ಜೊತೆಗೆ ಕಳೆಯಬೇಕು. ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಾನೆ. ಆದರೆ, ರಾಮ ಗೆ ಮಾತನಾಡಲು ಆಗುವುದಿಲ್ಲ. ಎಲ್ಲವನ್ನೂ ಹಾವ ಭಾವದ ಮೂಲಕ ಹೇಳುತ್ತಾನೆ. ಆದರೆ, ರಾಮ ಮಾತುಗಳು ಯಾವುದು ಸೀತಾಳಿಗೆ ಅರ್ಥವಾಗುವುದಿಲ್ಲ. ಬರೆದು ತೋರಿಸಲು ರಾಮ್ ಯತ್ನಿಸುತ್ತಾನೆ. ಆದರೆ, ಅವನ ಕೈಯಲ್ಲಿ ಶಕ್ತಿಯೂ ಇರುವುದಿಲ್ಲ. ಮನದ ಪ್ರೀತಿಯನ್ನು ಹೇಳಿಕೊಂಡ ರಾಮ ನನ್ನು ಸೀತಾ ಅರ್ಥ ಮಾಡಿಕೊಳ್ಳುತ್ತಾಳಾ ಎಂದು ಕಾದು ನೋಡಬೇಕಿದೆ

More from Filmibeat

English summary
Seetha comes to see ram. Ram wakes up and says about his love to seetha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X