Seetha Rama ; ಫ್ರೆಂಡ್ ಅಪ್ಪ ಆಗುವುದು ಬೇಡ ಎಂದ ಸಿಹಿ : ಇಬ್ಬಂದಿಯಲ್ಲಿ ಸಿಲುಕಿದ ಸೀತಾ ರಾಮ..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಆಫೀಸ್ ನವರೆಲ್ಲರೂ ರಾಮ, ಮನೆಗೆ ಬಂದು ಹೋಲಿ ಆಚರಿಸಿದ್ದಾರೆ. ಇದೇ ವೇಳೆಯಲ್ಲಿ ಪ್ರಿಯಾ ಮತ್ತು ಅಶೋಕನ ಪ್ರೀತಿ ಬಗ್ಗೆ ರಾಮ ಹೇಳಿದ್ದಾನೆ. ಇಷ್ಟರಲ್ಲೇ ಇಬ್ಬರ ಮದುವೆಯೂ ನೆರವೇರುವುದಾಗಿ ಮಾಹಿತಿಯನ್ನೂ ನೀಡುತ್ತಾನೆ. ಪ್ರಿಯಾಳನ್ನು ಕಂಡ ಭಾರ್ಗವಿ ಹೊಟ್ಟೆಯಲ್ಲಿ ಬೆಂಕಿ ಬಿದ್ದಿದ್ದು, ಚಾಂದಿನಿ ಬಾರದಿದ್ದಕ್ಕೆ ಕೋಪವೂ ಬಂದಿದೆ. ಆದರೆ, ಎಲ್ಲರ ಎದುರಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾಳೆ.


ಮೊದಲ ಬಾರಿಗೆ ಹೋಳಿ ಆಚರಿಸಿದ ಸೀತಾ

ಸೀತಾಳಿಗೆ ಹೋಳಿ ಆಡುವುದೆಂದರೆ ಇಷ್ಟವೇ ಆಗುವುದಿಲ್ಲ. ಹೀಗಾಗಿ ಹೋಳಿ ಆಚರಿಸಲು ಬಯಸಿಲ್ಲ. ಆದರೆ, ಸೀತಾಳಿಗೆ ರಾಮ ಬಣ್ಣ ಹಚ್ಚಿ ಅವಳ ಜೀವನವನ್ನು ಕಲರ್ ಫುಲ್ ಮಾಡಬೇಕು ಎಂದು ಬಯಸಿದ್ದಾನೆ. ಹೀಗಾಗಿ ತನ್ನ ಮನೆಯನ್ನು ತೋರಿಸುವ ನೆಪದಲ್ಲಿ ಸೀತಾಳ ಕೆನ್ನೆಗೆ ಗುಲಾಬಿ ಬಣ್ಣವನ್ನು ಬಳಿದಿದ್ದಾನೆ. ಸೀತಾಳಿಗೂ ರಾಮ ಬಳಿ ಬಣ್ಣ ಹಚ್ಚಿಸಿಕೊಂಡಿದ್ದು ಖುಷಿ ಕೊಟ್ಟಿದೆ. ಮನೆಗೆ ಬಂದ ಸೀತಾಳ ಕೆನ್ನೆಯಲ್ಲಿ ರಂಗು ನೋಡಿ ಸಿಹಿ ಆಶ್ಚರ್ಯ ಪಟ್ಟಿದ್ದಾಳೆ. ಅಮ್ಮನಲ್ಲಿ ಆಗಿರುವ ಬದಲಾವಣೆಗಳು ಸಿಹಿಗೆ ಕೊಂಚ ಗೊಂದಲವನ್ನು ಮೂಡಿಸಿದೆ. ರಾಮ ತಮ್ಮ ಜೊತೆಯಲ್ಲೇ ಇದ್ದರೆ ಚೆಂದ ಅಲ್ವಾ ಎಂದು ಸಿಹಿಯನ್ನು ಸೀತಾ ಪ್ರಶ್ನೆ ಮಾಡಿದ್ದಾಳೆ. ಆದರೆ, ಸೀತಾ ಮಾತುಗಳ್ಯಾವುದೂ ಸಿಹಿಗೆ ಅರ್ಥವಾಗಲಿಲ್ಲ.

written update on episode 27 March seetha rama serial

ಚಾಂದಿನಿಗೆ ಸಮಾಧಾನ ಮಾಡಿದ ಭಾರ್ಗವಿ

ರಾಮನ ನಡವಳಿಕೆ ಚಾಂದಿನಿಗೆ ಬಹಳ ಬೇಸರವನ್ನುಂಟು ಮಾಡಿದೆ. ತಾನೆಂದರೆ ರಾಮ ತೀರಾ ತಿರಸ್ಕಾರ ಮಾಡುತ್ತಾನೆ. ಹಾಗಿದ್ದು, ಭಾರ್ಗವಿ ಅತ್ತಿಗೆ ತನ್ನನ್ನು ಹೋಲಿ ಸೆಲಬ್ರೇಷನ್ ಗೆ ಕರೆದಿದ್ಯಾಕೆ ಎಂದು ಕೇಳಿದ್ದಕ್ಕೆ, ಭಾರ್ಗವಿ ನೀನು ಸ್ನೇಹಿತೆಯಂತೆ ಇದ್ದು ಬಿಡು. ಅಶೋಕನ ಮದುವೆಯ ದಿನ ಎಲ್ಲವೂ ನಿರ್ಧಾರವಾಗುತ್ತದೆ. ಅಂದು ರಾಮ ಮದುವೆ ನಿನ್ನ ಜೊತೆಗೆ ನೆರವೇರುವುದು ಪಕ್ಕಾ ಎಂದು ಭರವಸೆ ಕೊಟ್ಟಿದ್ದಾಳೆ. ಆದರೆ, ಭಾರ್ಗವಿ ಮಾತುಗಳು ಅರ್ಥವಾಗದಿದ್ದರೂ ದೇಸಾಯಿ ಕುಟುಂಬಕ್ಕೆ ಸೇರುವ ಚಾಂದಿನಿ ಆಸೆ ದುಪ್ಪಟ್ಟಾಗಿದೆ.


ಸಿಹಿ ಬಳಿ ಮದುವೆಗೆ ಒಪ್ಪಿಗೆ ಕೇಳಿದ ರಾಮ

ಇತ್ತ ಸಿಹಿಯನ್ನು ಭೇಟಿ ಮಾಡಲು ರಾಮ ಬಂದಿದ್ದಾನೆ. ತನ್ನ ಹಾಗೂ ಸೀತಾಳ ಮದುವೆಯ ಬಗ್ಗೆ ಮಾತನಾಡಲು ಯತ್ನಿಸಿದ್ದಾನೆ. ನಾನು ನಿಮ್ಮ ಕುಟುಂಬದಲ್ಲಿ ಒಬ್ಬನಾಗಬಹುದಾ..? ನಿಮ್ಮ ಜೊತೆಗೆ ಜೀವನ ಪೂರ್ತಿ ಇರಬಹುದಾ..? ನಿನ್ನ ಹೋಮ್ ವರ್ಕ್, ಪ್ಯಾಲೆಸ್ ಮಾಡಲು ನಾನು ಜೊತೆಗಿದ್ದು ಸಹಾಯ ಮಾಡಬಹುದಾ ಎಂದು ಸಿಹಿಯನ್ನು ಕೇಳುತ್ತಾನೆ. ಮೊದ ಮೊದಲು ರಾಮನ ಮಾತುಗಳನ್ನು ಅರ್ಥ ಮಾಡಿಕೊಳ್ಳದ ಸಿಹಿ, ಹು ಎಂದು ಒಪ್ಪಿಗೆ ಕೊಡುತ್ತಾಳೆ. ಆದರೆ, ಸೀತಮ್ಮನನ್ನು ಮದುವೆಯಾಗಬಹುದಾ ಎಂದು ರಾಮ ನೇರವಾಗಿ ಪ್ರಶ್ನೆ ಮಾಡಿದಾಗ ಸಿಹಿ ಮುಖ ಸಪ್ಪೆಯಾಗುತ್ತದೆ.

written update on episode 27 March seetha rama serial
ಅಪ್ಪ ಬೇಡ ಫ್ರೆಂಡ್ ಸಾಕು ಎಂದ ಸಿಹಿ

ಸೀತಮ್ಮನನ್ನು ಮದುವೆಯಾದರೆ ನೀನು ನನಗೆ ಅಪ್ಪ ಆಗುತ್ತೀಯಾ ಅಲ್ವಾ ಫ್ರೆಂಡ್ ಎಂದು ಸಿಹಿ ಮರು ಪ್ರಶ್ನೆ ಮಾಡುತ್ತಾಳೆ. ಹೌದು ಎಂದ ರಾಮ ಉತ್ತರಕ್ಕೆ ಸಿಹಿ ಕಣ್ಣಿರು ಹಾಕುತ್ತಾ, ನೀನು ಯಾವತ್ತೂ ನನಗೆ ಅಪ್ಪ ಆಗಲೇಬೇಡ. ನನ್ನ ಜೊತೆಗೆ ಅಪ್ಪ ಇರುವುದಿಲ್ಲ. ನನ್ನನ್ನು ಬಿಟ್ಟು ಹೋಗುತ್ತಾರೆ. ಆದರೆ, ನೀನು ಫ್ರೆಂಡ್ ಆಗಿ ಸದಾ ಕಾಲ ನನ್ನ ಜೊತೆಗಿರು ಎಂದು ಕೇಳಿಕೊಳ್ಳುತ್ತಾಳೆ. ಸಿಹಿ ಮಾತುಗಳನ್ನು ಆಲಿಸಿದ ಸೀತಾ ಹಾಗೂ ರಾಮ ಗೆ ನೋವಾಗುತ್ತದೆ. ಆದರೆ, ಮುಂದೇನು ಮಾಡುವುದು, ಸಿಹಿಗೆ ಇನ್ನು ಹೇಗೆ ಅರ್ಥ ಮಾಡಿಸುವುದು ಎಂಬುದು ತಿಳಿಯದೇ ಸುಮ್ಮನಾಗುತ್ತಾರೆ.

More from Filmibeat

English summary
ram asks permission to marry seethe. But sihi rejects ram as father
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X