Seetharama: ಸೀತಾಳಿಗೆ ಅವಾರ್ಡ್ ಕೊಟ್ಟ ಭಾರ್ಗವಿ: ಇವಳೇ ಮನೆ ಸೊಸೆ ಎಂದ ತಾತ
ಸೀತಾ ರಾಮ ಧಾರಾವಾಹಿಯಲ್ಲಿ ತಾತ ಆಫೀಸ್ ನೌಕಕರನ್ನು ಹೊಸ ಮನೆಗೆ ಕರೆದು ಹಬ್ಬದ ಊಟ ಹಾಕಿಸಲು ಮುಂದಾಗಿದ್ದಾರೆ. ಆದರೆ, ಈಗ ನಿಜವಾದ ಬಾಸ್ ರಾಮ್ ಎಂಬ ಸತ್ಯ ಗೊತ್ತಾಗುತ್ತಾ ಎಂಬ ಕುತೂಹಲವೂ ಮೂಡಿದೆ.
ಆಫೀಸ್‌ನಲ್ಲಿ ಅಶೋಕ್ ಬಾಸ್ ಆಗಿದ್ದು, ರಾಮ್ ಸಾಮಾನ್ಯ ನೌಕರ ಆಗಿದ್ದಾನೆ. ಈ ಸತ್ಯ ಸೂರಿ ತಾತನಿಗೆ ಮಾತ್ರವೇ ತಿಳಿದಿರುವುದು. ಅದು ಬಿಟ್ಟರೆ, ವಿಶ್ವ ಚಿಕ್ಕಪ್ಪನಿಗೆ ಗೊತ್ತಾಗಿದೆ. ಆದರೆ, ವಿಶ್ವ ಚಿಕ್ಕಪ್ಪನಿಗೆ ಗೊತ್ತಿರುವುದು ಬೇರೆ ಯಾರಿಗೂ ಗೊತ್ತಿಲ್ಲ. ಇನ್ನು ಭಾರ್ಗವಿ, ರಾಮ್‌ನನ್ನು ಅಪ್ಪು ಎಂದು ಕರೆಯುತ್ತಿದ್ದಾಳೆ.
ರಾಮ್ ಎಂದು ಹೆಸರಿಟ್ಟು ಕರೆದಾಗ ನಿಜವಾದ ಬಾಸ್ ಯಾರು ಎಂಬುದು ಗೊತ್ತಾಗುವುದು ಸತ್ಯ. ಸೂರಿ ಅಜ್ಜ ಡಯಾಸ್ ಮೇಲೆ ನಿಂತು ನೌಕರರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.

ಪರಿಸ್ಥಿತಿ ಸಂಬಾಳಿಸಿದ ತಾತ
ಈ ಮನೆಗೆ ಒಂದು ಇತಿಹಾಸವಿದೆ. ಹಬ್ಬಕ್ಕೆ ನಿಮ್ಮನ್ನೆಲ್ಲಾ ಕರೆಸಬೇಕಿತ್ತು. ಆದರೆ, ಆಗಲಿಲ್ಲ ಎಂದು ಮಾತನಾಡುವಾಗ ಭಾರ್ಗವಿ ರಾಮ್ ನನ್ನು ಅಪ್ಪು ನೀನು ಡಯಾಸ್ ಮೇಲೆ ಹೋಗಿ ನಿಂತುಕೋ ಎಂದು ಹೇಳುತ್ತಾಳೆ. ಆಗ ರಾಮ್ ಮತ್ತು ಅಶೋಕ್ ಇಬ್ಬರೂ ತಬ್ಬಿಬ್ಬಾಗುತ್ತಾರೆ. ಸೂರಿ ತಾತ ಸಮಯಕ್ಕೆ ಸರಿಯಾಗಿ ಇಬ್ಬರು ಬನ್ನಿ ಎಂದು ಡಯಾಸ್ ಮೇಲೆ ಕರೆಯುತ್ತಾರೆ. ಆಗ ಅಶೋಕ್ ಥ್ಯಾಂಕ್ಸ್ ಕೇಳುತ್ತಾನೆ.
ಬೆಸ್ಟ್ ಎಂಪ್ಲಾಯ್ ಅವಾರ್ಡ್
ಮತ್ತೆ ಆಫಿಸಿನಿಂದ ಬಂದವರಿಗೆಲ್ಲಾ ರಿಟರ್ನ್ ಗಿಫ್ಟ್ ಅನ್ನು ಮೊಮ್ಮೊಗ ಕೊಡಲಿ ಎಂದು ಭಾರ್ಗವಿ ಹೇಳುತ್ತಾಳೆ. ಆಗಲೂ ತಾತ ಬೇಕಂತಲೇ ಭಾರ್ಗವಿ ಮಗನನ್ನು ಕರೆದು ಕೊಡಿಸುತ್ತಾರೆ. ಇದೆಲ್ಲವನ್ನೂ ನೋಡಿ ವಿಶ್ವ ಚಿಕ್ಕಪ್ಪ ಮಜಾ ತೆಗೆದುಕೊಳ್ಳುತ್ತಿರುತ್ತಾರೆ. ತಾತನಿಗೂ ಸತ್ಯ ಗೊತ್ತಿದೆ ಎಂಬುದು ವಿಶ್ವ ಚಿಕ್ಕಪ್ಪನಿಗೆ ಸ್ಪಷ್ಟವಾಗುತ್ತದೆ. ನೌಕಕರನ್ನು ಪ್ರೋತ್ಸಾಹಿಸುವ ಸಲುವಾಗಿ ಬೆಸ್ಟ್ ಎಂಪ್ಲಾಯ್ ಅವಾರ್ಡ್ ಅನ್ನು ನೀಡಲು ತಾತ ಮುಂದಾಗುತ್ತಾರೆ. ಆಗ ಭಾರ್ಗವಿ ಇದನ್ನಾದರೂ ಅಪ್ಪು ಕೊಡಲಿ ಎಂದು ಹೇಳುತ್ತಾಳೆ.
ಸೀತಾಳಿಗೆ ಅವಾರ್ಡ್ ಕೊಟ್ಟ ಭಾರ್ಗವಿ
ಪ್ರತಿ ಸಲ ತಾತ ಪ್ಲಾನ್ ಮಾಡಿ ಎಸ್ಕೇಪ್ ಆಗಲು ಸಾಧ್ಯವಿಲ್ಲ ಎಂದು ತಿಳಿದ ವಿಶ್ವ ಚಿಕ್ಕಪ್ಪ ತಾನೇ ಮುಂದೋಗಿ ನೀನೇ ಕೊಡು ಭಾರ್ಗವಿ ಎಂದು ಭಾರ್ಗವಿ ಅನ್ನು ಡಯಾಸ್ ಮೇಲೆ ಕಳಿಸುತ್ತಾನೆ. ಭಾರ್ಗವಿ ಬೇರೆ ದಾರಿ ಇಲ್ಲದೇ, ಅವಾರ್ಡ್ ಕೊಡಲು ಮುಂದಾಗುತ್ತಾಳೆ. ಆದರೆ, ಬೆಸ್ಟ್ ಎಂಪ್ಲಾಯ್ ಅವಾರ್ಡ್‌ನಲ್ಲಿ ಸೀತಾ ಹೆಸರು ಇರುವುದನ್ನು ಕಂಡು ಬೇಸರ ಮಾಡಿಕೊಳ್ಳುತ್ತಾಳೆ. ತಾನೇ ಸೀತಾಳಿಗೆ ಅವಾರ್ಡ್ ಕೊಟ್ಟು ಕಂಗ್ರಾಟ್ಸ್ ಹೇಳುತ್ತಾಳೆ.

ಸೀತಾ ಈ ಮನೆ ಸೊಸೆ ಎಂದ ಸೂರಿ
ಸೀತಾಳಿಗೆ ಅವಾರ್ಡ್ ಸಿಕ್ಕಿದ್ದು ಖುಷಿಯಾಗುತ್ತದೆ. ಆದರೆ, ಅವಳಿಗೆ ಬ್ಯಾಂಕ್‌ನಿಂದ ಫೋನ್ ಕರೆ ಬರುತ್ತದೆ. ಹೀಗಾಗಿ ಸೀತಾ ಅರ್ಜೆಂಟ್ ಆಗಿ ಹೊರಡಬೇಕು ಎನ್ನುತ್ತಾಳೆ. ಆದರೆ, ಅಶೋಕ್ ನೀವು ನನ್ನ ತಂಗಿಯಂತೆ ಅಣ್ಣನ ಮಾತಿಗೆ ಬೆಲೆ ಕೊಟ್ಟು ಊಟ ಮಾಡಿಕೊಂಡು ಹೋಗಿ ಎನ್ನುತ್ತಾನೆ. ಇನ್ನು ಸೀತಾಳನ್ನು ನೋಡಿದ ಸೂರಿ ತಾತ ರಾಮನಿಗೆ ಅವಳು ಈ ಮನೆ ಸೊಸೆಯಾಗಿ ಬರಬೇಕು ಅಷ್ಟೇ ಎಂದು ಹೇಳುತ್ತಾರೆ. ರಾಮನಿಗೆ ಈ ಮಾತನ್ನು ಕೇಳಿ ಖುಷಿಯಾಗುತ್ತದೆ.
ಮದುವೆ ವಿಚಾರ ಮಾತನಾಡಿದ ರುದ್ರಪ್ರತಾಪ್
ಇತ್ತ ಸೀತಾಳ ವಠಾರಕ್ಕೆ ರುದ್ರಪ್ರತಾಪ್ ಬಂದಿರುತ್ತಾನೆ. ಅಜ್ಜಿ ತಾತನ ಬಳಿ ಸೌಮ್ಯವಾಗಿ ಮಾತನಾಡುತ್ತಾ ತನ್ನ ಮದುವೆಯ ವಿಚಾರವನ್ನು ತೆಗೆಯುತ್ತಾನೆ. ಅಜ್ಜ ಅಜ್ಜಿ ಕೂಡ ಸೀತಾಳನ್ನು ನೀನು ಮದುವೆಯಾಗುವುದು ನಮಗೂ ಇಷ್ಟ. ಅವಳಿಗೊಬ್ಬಳು ಆಸರೆಯಾಗಿದ್ದರೆ, ನಮಗೂ ನೆಮ್ಮದಿ. ಆದಷ್ಟು ಬೇಗ ಸೀತಾ ಬಳಿ ಈ ವಿಚಾರವನ್ನು ಮಾತನಾಡಿ, ನಿಮ್ಮಿಬ್ಬರ ಮದುವೆಯನ್ನು ಮಾಡಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಸೀತಾಳಿಗೆ ಮದುವೆಯಾಗುವುದೇ ಇಷ್ಟವಿಲ್ಲ. ಮುಂದೇನಾಗುತ್ತೋ ಕಾದುನೋಡಬೇಕಿದೆ.


Click it and Unblock the Notifications











