Seetha Raama: ಸೀತಮ್ಮನ ಮದುವೆ ಮುಗಿದ ಕೂಡಲೇ ರುದ್ರಪ್ರತಾಪ್ ಸಿಹಿಯನ್ನು ಎಲ್ಲಿ ಕಳಿಸಲು ನಿರ್ಧರಿಸಿದ್ದಾನೆ..?
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಯಾರ ಮಾತಿಗೂ ಬೆಲೆ ಕೊಡದೇ ಮಲೇಷಿಯಾಗೆ ಹೊರಟು ನಿಂತಿದ್ದಾನೆ. ಇದು ಎಲ್ಲರಿಗೂ ಬೇಸರವನ್ನುಂಟು ಮಾಡಿದೆ.
ಸೂರಿ ತಾತನಿಗೆ ಕೂಡ ಮೊಮ್ಮಗ ಇಲ್ಲಿರುವುದಾಗಿ ಹೇಳಿದವನು, ಈಗ ಇದ್ದಕ್ಕಿದ್ದ ಹಾಗೆಯೇ ಹೀಗೆ ಮಲೇಷಿಯಾಗೆ ಹೊರಟಿರುವುದು ಬಹಳ ನೋವುಂಟು ಮಾಡಿದೆ.

ರಾಮ್ ಎಲ್ಲರ ಮನಸ್ಸು ನೋವು ಮಾಡಿ ವಿದೇಶಕ್ಕೆ ಹೊರಟಿದ್ದಾನೆ. ಸಿಹಿ ಮತ್ತು ಸೀತಾಳಿಂದ ದೂರ ಇರಲಾಗದೇ ರಾಮ್ ಈ ನಿರ್ಧಾರ ಕೈಗೊಂಡಿದ್ದಾನೆ.
ಅಶೋಕನ ಮಾತು ಕೇಳದ ರಾಮ್
ಏರ್‌ಪೋರ್ಟ್‌ಗೆ ಹೋಗುವ ದಾರಿಯಲ್ಲಿ ಅಶೋಕ್ ತನಗೆ ಆಫಿಸ್ ಕೆಲಸವಿದ್ದು, ಸದ್ಯಕ್ಕೆ ಮಲೇಷಿಯಾಗೆ ಬರುವುದಿಲ್ಲ ಎನ್ನುತ್ತಾನೆ. ಅಷ್ಟೇ ಅಲ್ಲದೇ, ಈಗಲೂ ಮನಸ್ಸು ಮಾಡು ವಾಪಸ್ ಹೋಗೋಣ. ಸೀತಾಳಿಗೆ ಇನ್ನೂ ಮದುವೆ ಆಗಿಲ್ಲ. ಈಗಲೂ ನಿನ್ನ ಭಾವನೆಗಳನ್ನು ಹೇಳೋದಕ್ಕೆ ಅವಕಾಶವಿದೆ ಎಂದು ಹೇಳುತ್ತಾನೆ. ಆದರೆ, ರಾಮ್ ಮಾತ್ರ ಅಶೋಕನ ಮಾತನ್ನು ಕೇಳಲು ತಯಾರಿರುವುದಿಲ್ಲ. ಇನ್ನು ಸಿಹಿ, ರಾಮ್‌ಗೆ ಫೋನ್ ಮಾಡುತ್ತಾಳೆ. ರಾಮ್, ಫೋನ್ ರಿಸೀವ್ ಮಾಡದೇ, ಸ್ವಿಚ್ ಆಫ್ ಮಾಡುತ್ತಾನೆ. ತಾನು ಮಲೇಷಿಯಾ ಸೇರುವವರೆಗೂ ಫೋನ್ ಆನ್ ಮಾಡುವುದಿಲ್ಲ. ನೀನು ಆಫಿಸಿಗೆ ಸೀತಾ ಬಂದರೆ ಮ್ಯಾನೇಜ್ ಮಾಡು ಎಂದು ಹೇಳುತ್ತಾನೆ.

ಭಾರ್ಗವಿ ಆಟ ಶುರುವಾಗುತ್ತಾ..?
ಇತ್ತ ರಾಮ್ ಮನೆಯಿಂದ ಹೊರಟ ಕೂಡಲೇ ಭಾರ್ಗವಿ ತನ್ನ ಆಟ ಮುಂದುವರೆಸುತ್ತಾಳೆ. ಸುಳ್ಳಿನ ಕಣ್ಣೀರು ಹಾಕುತ್ತಾ, ಪರೋಕ್ಷವಾಗಿ ಮತ್ತೆ ನೀನು ಬಂದೇ ಬರುತ್ತೀಯಾ. ನೋಡುತ್ತಿರು ನಿನಗೆ ನಮ್ಮನ್ನು ಬಿಟ್ಟಿರೋದಕ್ಕೆ ಆಗೋದಿಲ್ಲ ಎಂದು ಚಾಲೆಂಜ್ ಮಾಡುವಂತೆ ಹೇಳುತ್ತಾಳೆ. ರಾಮ್ ಹೊರಟ ಕೂಡಲೇ ಚರಣ್‌ಡಿಗೆ ಕರೆ ಮಾಡಿ, ಇನ್ಮುಂದೆ ಆಫಿಸಿಗೆ ಬಾಸ್ ಬರುವುದಿಲ್ಲ. ಎಲ್ಲವೂ ಮೊದಲಿನಂತೆಯೇ ನಡೆಯುತ್ತದೆ. ತಾನು ಹೇಳಿದಂತೆ ಮಾಡಬೇಕು. ಆಫಿಸಿನಲ್ಲಿ ನಡೆಯುವ ಪ್ರತಿಯೊಂದು ವಿಚಾರ ತನಗೆ ಅಪ್ ಡೇಟ್ ಮಾಡಬೇಕು ಎಂದು ಹೇಳುತ್ತಾಳೆ. ಆದರೆ, ಮುಂದೇನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.
ಮದುವೆಯ ಗುಟ್ಟು ಅರಿತ ಸಿಹಿ
ಸಿಹಿ ಮದುವೆ ಮನೆಯಲ್ಲಿ ಗೆಳೆಯರ ಜೊತೆಗೆ ಆಟವಾಡುತ್ತಿರುತ್ತಾಳೆ. ಇದೇ ಸಂದರ್ಭದಲ್ಲಿ ಯಾರೋ ಇಬ್ಬರು ಬಂದು ಸೀತಾ ಮನೆಯನ್ನು ಮಾರಾಟಕ್ಕಿಡಲಾಗಿದೆ, ನಾವು ನೋಡಬೇಕಿತ್ತು ಎಂದು ಕೇಳಿಕೊಂಡು ಬರುತ್ತಾರೆ. ಆಗ ಸೀತಾಳ ಅತ್ತಿಗೆ ಅವರಿಬ್ಬರನ್ನು ಮನೆಗೆ ಕರೆದುಕೊಂಡು ಹೋಗಿ ತೋರಿಸುತ್ತಾಳೆ. ರುದ್ರಪ್ರತಾಪ್ ಅನ್ನು ಕರೆದು ಇಷ್ಟು ಆತುರದಲ್ಲಿ ಯಾಕೆ ಇವರನ್ನೆಲ್ಲಾ ಕರೆಸಿದ್ದೀರಾ. ಸೀತಾಳಿಗೆ ಗೊತ್ತಾದರೆ ಕಷ್ಟವಾಗುತ್ತದೆ ಎನ್ನುತ್ತಾಳೆ. ರುದ್ರಪ್ರತಾಪ್ ಕೂಡ ರಿಯಲ್ ಎಸ್ಟೇಟ್ ಏಜೆಂಟ್ ಮೇಲೆ ಕೋಪ ಮಾಡಿಕೊಳ್ಳುತ್ತಾನೆ. ಜೊತೆಗೆ ಈ ಮದುವೆಯಾಗುತ್ತಿದ್ದಂತೆ ಸಿಹಿ ಅನ್ನು ಅನಾಥಾಶ್ರಮಕ್ಕೆ ಸೇರಿಸಬೇಕು ಎಂದು ರುದ್ರಪ್ರತಾಪ್ ಹೇಳುತ್ತಾನೆ. ಈ ಮಾತನ್ನು ಸಿಹಿ ಕೇಳಿಸಿಕೊಂಡು ಬಿಡುತ್ತಾಳೆ.
ಅಮ್ಮನಿಗೆ ಸತ್ಯ ಹೇಳಿ ಮದುವೆ ನಿಲ್ಲಿಸುತ್ತಾಳಾ..?
ಸೀತಮ್ಮನ ಮದುವೆಯಾದ ಕೂಡಲೇ ತಾನು ಸೀತಮ್ಮನಿಂದ ದೂರ ಹೋಗಬೇಕು. ಅನಾಥಾಶ್ರಮ ಸೇರಿಕೊಳ್ಳಬೇಕಾ ಎಂದು ಸಿಹಿ ಒಬ್ಬಳೇ ಕಣ್ಣೀರು ಹಾಕಲು ಶುರು ಮಾಡುತ್ತಾಳೆ. ಸಿಹಿ, ಸೀತಾಳ ಮದುವೆ ನಡೆಯುವ ಮುನ್ನವೇ ಸತ್ಯ ಹೇಳಿ ಮದುವೆ ನಿಲ್ಲಿಸುತ್ತಾಳಾ..? ಇಲ್ಲ ಮದುವೆಯಾದ ಮೇಲೆ ಸೀತಾ ಹಾಗೂ ಸಿಹಿ ದೂರವಾಗಿ ಮುಂದೆ ಸಾಗುತ್ತಾರಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಎದ್ದಿದ್ದರೆ, ಅಶೋಕ ಯಾವುದಾದರೂ ಪವಾಡವಾಗಿ ರಾಮ್ ಇಲ್ಲೇ ಉಳಿದುಕೊಳ್ಳಲಿ ಹಾಗೂ ಸೀತಾ-ರಾಮ್ ಒಂದಾಗಲಿ ಎಂದು ಬಯಸುತ್ತಿದ್ದಾನೆ. ಇದರಲ್ಲಿ ಯಾವುದು ನಡೆಯುತ್ತದೆಯೋ ಗೊತ್ತಿಲ್ಲ.


Click it and Unblock the Notifications











