Shrirastu Shubhamasthu: ಅಭಿ-ದೀಪಿಕಾ ಮದುವೆಗೆ ದೊಡ್ಡ ಪ್ಲ್ಯಾನ್ ಮಾಡಿರುವ ಜನಾರ್ಧನ್

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಿತ್ಯ ಸಮರ್ಥ್ ಕೆಲಸಕ್ಕಾಗಿ ಪರದಾಡುತ್ತಿದ್ದಾನೆ. ಆದರೆ, ಅವನ ಪ್ರಯತ್ನವೆಲ್ಲಾ ವ್ಯರ್ಥವಾಗುತ್ತಲೇ ಇದೆ.

ಸಂಧ್ಯಾ ತಾನು ಗರ್ಭಿಣಿ ಎಂದು ಸುಳ್ಳು ಹೇಳಿ, ತವರು ಮನೆಯವರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದಾಳೆ. ಪದೇ ಪದೇ ಹಣ ಲಪಟಾಯಿಸುತ್ತಿರುವ ಸಂಧ್ಯಾ ಸ್ವಂತ ಮನೆ ಕಟ್ಟಿಸುವ ಕನಸು ಕಾಣುತ್ತಿದ್ದಾಳೆ.

ಬೆಂಗಳೂರಿನಲ್ಲಿನ ಕೇವಲ 13 ಲಕ್ಷ ರೂಪಾಯಿಗೆ ಡಬಲ್ ಸೈಟ್ ತನ್ನದಾಗಿಸಿಕೊಂಡು, ಅಲ್ಲಿ ಮನೆ ಕಟ್ಟಿ ತಾನು ಮತ್ತೆ ತನ್ನ ಗಂಡ ಇಬ್ಬರೇ ಸಂಸಾರ ಮಾಡುವ ಆಸೆ ಸಂಧ್ಯಾಳದ್ದು.

written update on episode 28 December Shrirastu Shubhamasthu serial

ಪದೇ ಪದೇ ನಾಮ ಹಾಕಿಸಿಕೊಳ್ಳುತ್ತಿರುವ ಸಂಧ್ಯಾ

ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ ಎಂಬಂತೆ. ಸಂಧ್ಯಾ ಕದ್ದು ತರುತ್ತಿರುವ ಹಣವನ್ನು ನಂದಿನಿ ಲಪಟಾಯಿಸಿ ಮಜಾ ಮಾಡುತ್ತಿದ್ದಾಳೆ. ಹಣ ಡಬಲ್ ಮಾಡಿಕೊಡುವ ನೆಪದಲ್ಲಿ ಸಂಧ್ಯಾ ಬಳಿ ಹಣ ಪೀಕಿದ್ದಲ್ಲದೇ, ಈಗ ಡಬಲ್ ಸೈಟ್ ಕೊಡಿಸುವ ಆಸೆ ತೋರಿಸಿದ್ದಾಳೆ. ಸಂಧ್ಯಾ ಕೂಡ ನಂದಿನಿ ಮಾತನ್ನು ನಂಬಿ ಪದೇ ಪದೇ ಮೋಸ ಹೋಗುತ್ತಿದ್ದಾಳೆ. ಈಗ ಯಾರಿಗೂ ತಿಳಿಯದಂತೆ ಮತ್ತೆ ಭೇಟಿ ಮಾಡಿ ಮನೆಯಲ್ಲಿ ಕದ್ದ ಒಡವೆಯಿಂದ ಬಂದ ಮೂರು ಲಕ್ಷ ರೂಪಾಯಿ ಹಣವನ್ನೂ ನಂದಿನಿಗೆ ಕೊಟ್ಟಿದ್ದಾಳೆ. ಆದರೆ, ನಂದಿನಿ ಯಾವಾಗ ಮೋಸ ಮಾಡಿದ ವಿಷಯ ಸಂಧ್ಯಾಳಿಗೆ ಅರ್ಥವಾಗುತ್ತದೋ ಕಾದು ನೋಡಬೇಕಿದೆ.

ಮದುವೆಗೆ ಜನಾರ್ಧನ್ ಗ್ರೀನ್ ಸಿಗ್ನಲ್

ಇತ್ತ ಜನಾರ್ಧನ್ ತನ್ನ ಮಗಳು ದೀಪಿಕಾಳನ್ನು ಅಭಿಗೆ ಕೊಟ್ಟು ಮದುವೆ ಮಾಡಲು ಒಪ್ಪಿಕೊಂಡಿದ್ದಾನೆ. ಹೀಗಾಗಿ ತಾನೇ ಸ್ವತಃ ಮಾಧವ್ ಮನೆಗೆ ಬಂದಿದ್ದಾನೆ. ತಾಂಬೂಲ ನೀಡಿ, ಇಷ್ಟು ದಿನ ನಾನು ನಿಮಗೆ ಮಾಡಿದ ಅವಮಾನಕ್ಕೆ ಕ್ಷಮೆ ಇರಲಿ. ನನ್ನ ಮಗಳು ಅಭಿ ಅನ್ನು ಬಿಟ್ಟಿರೋದಿಲ್ಲ ಎಂದು ಹಠ ಮಾಡಿದ್ದಾಳೆ. ಅವಳ ಭವಿಷ್ಯ ಚೆನ್ನಾಗಿರಬೇಕು ಎಂದು ಹೇಳಿ ತಾಂಬೂಲ ಕೊಟ್ಟು, ಇಬ್ಬರ ಮದುವೆಗೂ ಒಪ್ಪಿಗೆ ಸೂಚಿಸಿದ್ದಾನೆ. ಜನಾರ್ಧನ್ ಮಾತು ಕೇಳಿದ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ತುಳಸಿಯಿಂದಲೇ ಇದೆಲ್ಲವೂ ಸಾಧ್ಯವಾಯ್ತು ಎಂದು ಎಲ್ಲರೂ ತುಳಸಿ ಅನ್ನು ಹೊಗಳುತ್ತಿದ್ದಾರೆ. ತುಳಸಿಗೂ ತನ್ನ ಮದುವೆಯಿಂದ ದೂರವಾಗಿದ್ದ ಸಂಬಂಧ ಈಗ ಮತ್ತೆ ಒಂದಾಗುತ್ತಿದೆ ಎಂದು ಖುಷಿಯಾಗಿದ್ದಾಳೆ.

written update on episode 28 December Shrirastu Shubhamasthu serial

ಶಾರ್ವರಿ ಪ್ಲಾನ್ ಆಗುತ್ತಾ ಸಕ್ಸಸ್

ಅಷ್ಟಕ್ಕೂ ಜನಾರ್ಧನ್ ದೀಪಿಕಾ ಮತ್ತು ಅಭಿ ಮದುವೆಗೆ ಒಪ್ಪಲು ಕಾರಣ ಶಾರ್ವರಿ. ತುಳಸಿಯನ್ನು ಮಟ್ಟ ಹಾಕಬೇಕು ಎಂದು ಸೈಲೆಂಟ್ ಆಗಿ ಪ್ಲಾನ್ ಮಾಡಿರುವ ಶಾರ್ವರಿ ಬೇಕಂತಲೇ ಜನಾರ್ಧನ್‌ಗೆ ಹೊಸ ಐಡಿಯಾ ಕೊಟ್ಟಿದ್ದಾಳೆ. ಮದುವೆಗೆ ಒಪ್ಪಿ, ಬಳಿಕ ಅವಮಾನ ಮಾಡಿ ಎಂದು ಹೇಳಿಕೊಟ್ಟಿದ್ದಾಳೆ. ಜನಾರ್ಧನ್ ಕೂಡ ಶಾರ್ವರಿ ಮಾತನ್ನು ನಂಬಿ ಈಗ ಮಗಳ ಮದುವೆ ತಯಾರಿ ನಡೆಸುತ್ತಿದ್ದಾನೆ. ಆದರೆ, ಈ ಮದುವೆಯನ್ನು ಮುಂದೆ ಅವನೇ ಮುರಿಯಲಿದ್ದಾನೆ.

ದೀಪಿಕಾ-ಅಭಿ ಫುಲ್ ಖುಷ್

ಅಸಲಿ ವಿಚಾರ ತಿಳಿಯದ ದೀಪಿಕಾ ಮತ್ತು ಅಭಿ ಅಂತೂ ಫುಲ್ ಖುಷಿ ಪಟ್ಟಿದ್ದಾರೆ. ಮತ್ತೆ ಯಾವತ್ತೂ ಒಂದಾಗುವುದಿಲ್ಲ ಎಂದು ಕೊರಗುತ್ತಿದ್ದ ದೀಪಿಕಾ ಮತ್ತು ಅಭಿ ಜೋಡಿ ಈ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಜನಾರ್ಧನ್, ದೀಪಿಕಾ ಬಳಿ ಗುಟ್ಟಾಗಿ ಮಾತನಾಡಿದ್ದಾನೆ. ನಿನ್ನ ತಂದೆಗೆ ಅವಮಾನ ಮಾಡಿದ ಕುಟುಂಬಕ್ಕೆ ನಾನೂ ಅವಮಾನ ಮಾಡಬೇಕು. ನಾಳೆ ಅವರಿಗೆ ತೊಂದರೆಯಾಗುವಂತೆ ಮಾಡಬೇಕು ಎಂದು ಮಗಳ ಮನವೊಲಿಸಲು ಮುಂದಾಗಿದ್ದಾನೆ. ಆದರೆ ದೀಪಿಕಾ ಇದಕ್ಕೆ ಒಪ್ಪುತ್ತಾಳಾ?ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

More from Filmibeat

English summary
Shrirastu Shubhamasthu kannada serial today episode; Janardhan agrees for deepika and abhi marriage after listening to sharvari plan;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X