ಸೀತಾ ಮೇಲೆ ಸೂರಿಗೆ ಬೇಸರ-ಭಾರ್ಗವಿ ಲೆಕ್ಕಾಚಾರ ; ಆಫೀಸ್ ಗೆ ಎಂಟ್ರಿಕೊಟ್ಟ ಚಾಂದಿನಿ..!
ಸೀತಾರಾಮ ಧಾರಾವಾಹಿಯಲ್ಲಿ ಸೂರಿ ತಾತನಿಗೆ ಮೊಮ್ಮಗ ರಾಮ್ ನನ್ನು ಆಸ್ಪತ್ರೆಯಲ್ಲಿ ನೋಡಿ ಬೇಸರವಾಗಿದೆ. ರಾಮಗೆ ಎಚ್ಚರವಾದ ಕಾರಣ ಅವನನ್ನು ಮನೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದಾರೆ. ಅಶೋಕ್ ಹಗಲು ರಾತ್ರಿ ಎನ್ನದೇ, ರಾಮ ಬೆಂಗಾವಲಾಗಿ ಕಾದಿದ್ದಾನೆ.
ರಾಮಗೆ ಯಾರಿಂದಲೂ ತೊಂದರೆಯಾಗದಂತೆ ಅಶೋಕ ನೋಡಿಕೊಂಡಿದ್ದಾನೆ. ಅಂಜಲಿ ರಾಮನನ್ನು ನೋಡುವ ಸಲುವಾಗಿ ಕ್ಲಿನಿಕ್ ನಿಂದ ಹೊರಟು ಬಂದಿದ್ದಾಳೆ. ಮನೆಗೆ ಹೋಗಿ ನೋಡುವುದಕ್ಕಿಂತಲೂ ಆಸ್ಪತ್ರೆಯಲ್ಲೇ ನೋಡುವುದು ಲೇಸು ಎನ್ನುವುದು ಅಂಜಲಿ ಆಲೋಚನೆ.

ಹೊಸ ಲೆಕ್ಕಾಚಾರದಲ್ಲಿ ಭಾರ್ಗವಿ
ಈಗ ಭಾರ್ಗವಿ ಮುಂದೆ ಹಲವು ಅವಕಾಶಗಳಿವೆ. ರಾಮ ನನ್ನು ಮತ್ತೆಂದೂ ಮೇಲೇಳದಂತೆ ನೋಡಿಕೊಂಡು, ಇಡೀ ಆಸ್ತಿಯನ್ನು ತಾನೇ ಲಪಟಾಯಿಸುವಂತೆ ಮಾಡಲು ಕಾತುರರಾಗಿದ್ದಾಳೆ. ಚಾಂದಿನಿ ಬೇರೆ ಇದೇ ಸಂರ್ಭದಲ್ಲಿ ಎಂಟ್ರಿಕೊಟ್ಟಿರುವುದು ಭಾರ್ಗವಿಗೆ ಪ್ಲಸ್ ಪಾಯಿಂಟ್ ಆಗಿದೆ.
ಹೀಗಾಗಿ ಚಾಂದಿನಿ ದಾರಿಯನ್ನು ಕ್ಲಿಯರ್ ಮಾಡಿಕೊಡುವ ಮೂಲಕ ತನ್ನ ಹಾದಿಯನ್ನು ಸುಲಭ ಮಾಡಿಕೊಂಡಿದ್ದಾಳೆ. ಚಾಂದಿನಿ ಬಂದಿರುವುದರಿಂದಲೇ ರಾಮ್ ಬೇಗ ಗುಣಮುಖನಾಗುತ್ತಿದ್ದಾನೆ ಎಂದು ಅಶೋಕ್ ಬಳಿ ಹೇಳಿದ್ದಾಳೆ. ಆದರೆ, ಅಶೋಕನಿಗೆ ಭಾರ್ಗವಿ ಮಾತನ್ನು ಒಪ್ಪಲು ಇಷ್ಟವಿಲ್ಲ. ಆದರೆ, ಸತ್ಯ ಹೇಳಲು ದಾರಿಯೂ ಇಲ್ಲ. ಹೀಗಾಗಿ ಚಾಂದಿನಿಯನ್ನು ರಾಮನಿಂದ ದೂರ ಇಡಬೇಕು ಎಂದು ಯೋಚಿಸಿದ್ದಾನೆ.

ಅಂಜಲಿ ಕ್ಲಿನಿಕ್ ಗೆ ಬಂದ ರುದ್ರಪ್ರತಾಪ್
ಅಂಜಲಿ , ರಾಮನನ್ನು ನೋಡಲೆಂದು ಹೊರಟಾಗಲೇ ರುದ್ರಪ್ರತಾಪ್ ಅವರ ಕ್ಲಿನಿಕ್ ಗೆ ಆಗಮಿಸಿದ್ದಾನೆ. ಅಲ್ಲಿ ಅಂಜಲಿ ಜೊತೆಗೆ ಅಶೋಕ್ ಮತ್ತು ರಾಮ ಫೋಟೋ ಇರುವುದನ್ನು ನೋಡಿ ಶಾಕ್ ಆಗಿದ್ದಾನೆ. ರಾಮಗೆ ಪಾಠ ಕಲಿಸಲು ಮತ್ಯಾದೋ ಪ್ಲಾನ್ ಮಾಡುತ್ತಿದ್ದಾನೆ.
ರುದ್ರಪ್ರತಾಪ್ ಅಂಜಲಿಗೆ ಸಮಸ್ಯೆ ಮಾಡಿ ರಾಮಗೆ ಕಷ್ಟ ಕೊಡಲು ಯೋಚಿಸುತ್ತಿದ್ದಾನೆ. ಆದರೆ, ರುದ್ರಪ್ರತಾಪ್ ಮನದಲ್ಲಿ ಯಾವ ಆಲೋಚನೆ ಇದೆ. ಅವನು ಮುಂದೆ ಏನು ಮಾಡಬಹುದು ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ.
ಆಫೀಸಿಗೆ ಎಂಟ್ರಿ ಕೊಟ್ಟ ಚಾಂದಿನಿ
ಇತ್ತ ರಾಮ ಮತ್ತು ಅಶೋಕ್ ಬದಲು ಆಫೀಸಿಗೆ ಸೂರಿ ತಾತ ಬಂದಿದ್ದಾರೆ. ಸೀತಾಳನ್ನು ನೋಡಿ ಮಾತನಾಡಬೇಕು ಎಂದುಕೊಂಡಿದ್ದಾರೆ. ಆದರೆ, ಆಫೀಸಿಗೆ ಇದ್ದಕ್ಕಿದ್ದ ಹಾಗೆಯೇ ಚಾಂದಿನಿ ಎಂಟ್ರಿ ಕೊಟ್ಟಿದ್ದಾಳೆ. ಚಾಂದಿನಿಯನ್ನು ಗುರುತಿಸಿದ ಸೂರಿ ತಾತ, ರಾಮ-ಅಶೋಕ್ ಹಾಗೂ ಚಾಂದಿನಿ ಕ್ಲಾಸ್ ಮೇಟ್ಸ್ ಎಂದು ನಂಬಿದ್ದಾರೆ.

ಈ ಹಿಂದೆಯೂ ಇದೇ ಆಫಿಸಿನಲ್ಲಿ ಕೆಲಸ ಮಾಡುತ್ತಿದ್ದ ಚಾಂದಿನಿ ಇದ್ದಕ್ಕಿದ್ದ ಹಾಗೆಯೇ ಮಾಯವಾಗಿರುತ್ತಾಳೆ. ಆದರೆ, ಈಗ ಬಂದು ಹೆಚ್ಚಿನ ಓದಿಗಾಗಿ ನಾನು ಬ್ರೇಕ್ ತೆಗೆದುಕೊಂಡಿದ್ದೆ. ಈಗ ಮತ್ತೆ ಕೆಲಸಕ್ಕೆ ಸೇರಿಕೊಳ್ಳಲು ಬಂದೆ ಎನ್ನುತ್ತಾಳೆ. ಚಾಂದಿನಿಯನ್ನು ನಂಬುವ ಸೂರಿ ತಾತ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.
ಸೀತಾ ಮೇಲೆ ಸೂರಿಗೆ ಬೇಸರ
ಇನ್ನು ಸೀತಾ , ಸೂರಿ ತಾತನನ್ನು ಭೇಟಿ ಆಗುತ್ತಾಳೆ. ಆಗ ಸೂರಿ ತಾತ ತನ್ನ ಮೊಮ್ಮಗನ ಬಗ್ಗೆ ಮಾತನಾಡುತ್ತಾರೆ. ನಿನ್ನನ್ನು ನೋಡುವ ಸಲುವಾಗಿ ನನ್ನ ಮೊಮ್ಮಗ ಬಂದಿದ್ದ. ಅದಾದ ಬಳಿಕವೇ ಅವನಿಗೆ ಅಪಘಾತವಾಗಿದೆ. ನಿನ್ನ ಬಳಿ ಏನು ಮಾತನಾಡಿದ. ಸೈಕಲ್ ನಲ್ಲಿ ನಿಮ್ಮ ಮನೆಗೆ ಬಂದವನು, ಅಲ್ಲೇ ಸೈಕಲ್ ಬಿಟ್ಟು ಯಾಕೆ ನಡೆದುಕೊಂಡು ಹೋದ ಎಂದು ಕೇಳುತ್ತಾರೆ.
ಮುಜುಗರಕ್ಕೊಳಗಾಗುವ ಸೀತಾ, ರಾಮ ನನಗೆ ತುಂಬಾ ಒಳ್ಳೆಯ ಗೆಳೆಯ. ಆದರೆ, ಬಾಸ್ ಒಬ್ಬರು ನಮ್ಮ ಮನೆಗೆ ಬರುತ್ತಾರೆ ಎಂದರೆ ಜನ ತಪ್ಪಾಗಿ ಮಾತನಾಡುತ್ತಾರೆ. ಹಾಗಾಗಿ ರಾಮ ಮನೆಗೆ ಬಂದಾಗ ಏನೂ ಮಾತನಾಡಿಸದೆ, ವಾಪಸ್ ಕಳಿಸಿದೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಸೂರಿ ತಾತನಿಗೆ ಬಹಳ ಬೇಸರವಾಗುತ್ತದೆ. ಮನೆಗೆ ಬಂದವರನ್ನು ನಿಷ್ಠುರದಿಂದ ಕಳಿಸುವುದು ಒಳ್ಳೆಯ ಸಂಸ್ಕಾರವಲ್ಲ ಎಂದು ಭಾವಿಸುತ್ತಾರೆ.


Click it and Unblock the Notifications











