Seetha Rama ; ಚಾಂದಿನಿಗೆ ಎದುರುತ್ತರ ಕೊಟ್ಟ ಸೀತಾ ; ಸಿಹಿ ಮನಸ್ಸನ್ನು ಬದಲಾಯಿಸುತ್ತಾನಾ ರಾಮ.?
ಸೀತಾರಾಮ ಧಾರಾವಾಹಿಯಲ್ಲಿ ರಾಮನನ್ನು ಅಪ್ಪನಾಗಿ ಒಪ್ಪಿಕೊಳ್ಳಲು ಸಿಹಿ ಭಯಗೊಂಡಿದ್ದಾಳೆ. ಆದರೆ, ಸಿಹಿ ತನ್ನನ್ನು ಒಪ್ಪಿಕೊಳ್ಳುತ್ತಾಳೆ ಅನ್ನೋ ಅಪಾರವಾದ ನಂಬಿಕೆಯನ್ನು ರಾಮ ಹೊಂದಿದ್ದಾನೆ. ಆಫೀಸ್ ನಲ್ಲಿ ಸೀತಾ ಮತ್ತು ರಾಮ ಪದೇ ಪದೇ ಭೇಟಿ ಮಾಡಿ ಮಾತನಾಡುತ್ತಿರುತ್ತಾರೆ. ರಾಮ ಬೇಕಂತಲೇ 143 ಫೈಲ್ ಎಂದು ಹೇಳುತ್ತಿರುತ್ತಾನೆ. ಆದರೆ ಇದು ಸೀತಾಳಿಗೆ ಅರ್ಥವೇ ಆಗುವುದಿಲ್ಲ. ರಾಮ ಜೊತೆಗೆ ಮಾತನಾಡಲು ಚಾಂದಿನಿ ಬರುತ್ತಾಳೆ. ಸೀತಾಳನ್ನು ಆಚೆಗೆ ಕಳುಹಿಸಿ, ನೀನು ಮತ್ತೆ ಸೀತಾ ಪ್ರೀತಿ ಮಾಡುತ್ತಿರುವುದು ನನಗೆ ಗೊತ್ತು. ನೀವಿಬ್ಬರೂ ನಿಮ್ಮಿಷ್ಟದಂತೆ ಇರಿ ನಾನೇನು ಕೆಡುಕು ಮಾಡುವುದಿಲ್ಲ ಎನ್ನುತ್ತಾಳೆ.
ರಾಮ ಮುಂದೆ ಚಾಂದಿನಿ ಆಕ್ಟಿಂಗ್
ಈ ಮಾತನ್ನು ಕೇಳಿದ ರಾಮಗೆ ಖುಷಿಯಾಗುತ್ತದೆ. ಆದರೆ, ರಾಮನ ಮುಂದೆ ನಾಟಕ ಮಾಡಿದ ಚಾಂದಿನಿ, ಸೀತಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ರಾಮನನ್ನು ನನಗೆ ಬಿಟ್ಟು ಕೊಡುವ ಬದಲು ನೀನು ಅವನನ್ನು ಇಷ್ಟ ಪಡುತ್ತಿದ್ದೀಯಾ. ಇದು ಎಷ್ಟು ಸರಿ ಎಂದೆಲ್ಲಾ ನೋವಾಗುವಂತೆ ಮಾತನಾಡುತ್ತಾಳೆ. ಸೀತಾಳಿಗೆ ಚಾಂದಿನಿ ಮಾತನಾಡಿದ್ದು ಬೇಸರವಾಗುತ್ತದೆ. ಅದೇ ವೇಳೆಗೆ ರಾಮ ಇಬ್ಬರ ಮಧ್ಯೆ ಬಂದಾಗ ಅಶೋಕ್ ಮದುವೆ ಬಗ್ಗೆ ಮಾತನಾಡುತ್ತಿದ್ದೆವು ಎಂದು ಸುಳ್ಳು ಹೇಳುತ್ತಾಳೆ. ರಾಮ ಚಾಂದಿನಿ ಮಾತನ್ನು ನಂಬುತ್ತಾನೆ.

ಚಾಂದಿನಿಗೆ ಟಾಂಗ್ ಕೊಟ್ಟ ಸೀತಾ
ರಾಮ ಹೊರಟ ಮೇಲೆ ಸೀತಾ, ಚಾಂದಿನಿಗೆ ಉತ್ತರ ಕೊಡುತ್ತಾಳೆ. ನೀನು ರಾಮನನ್ನು ಮೊದಲು ಪ್ರೀತಿಸಿದ್ದು ನಿಜವೇ. ಆದರೆ, ಈಗ ರಾಮ ಮನಸ್ಸಿನಲ್ಲಿ ನೀನು ಇಲ್ಲ. ಅವನು ನನ್ನನ್ನು ಪ್ರೀತಿಸುತ್ತಿದ್ದಾನೆ. ನಾನು ಅವನನ್ನು ಪ್ರೀತಿಸುತ್ತಿದ್ದೇನೆ. ನಾವಿಬ್ಬರು ಇಷ್ಟ ಪಡುತ್ತಿದ್ದೇವೆ. ಈಗಲೂ ರಾಮ ನಿನ್ನ ಬಗ್ಗೆ ಫೀಲಿಂಗ್ಸ್ ತೋರಿಸಿಕೊಂಡರೇ, ನಾನೇ ನಿನ್ನ ಅವನ ಮುಂದೆ ಬಿಟ್ಟು ಬರುತ್ತೇನೆ ಎಂದು ಖಡಕ್ ಆಗಿ ಮಾತನಾಡುತ್ತಾಳೆ. ಸೀತಾ ಮಾತನಾಡಿದ್ದನ್ನು ಕೇಳಿದ ಚಾಂದಿನಿಗೆ ಶಾಕ್ ಆಗುತ್ತದೆ. ಆದರೆ, ಅವಳ ಮುಂದೆ ಏನೂ ಮಾತನಾಡುವುದಿಲ್ಲ. ನಾನು ಬಂದಿರುವ ಉದ್ದೇಶವೇ ಬೇರೆ ಇದೆ ಎಂದು ಮನದಲ್ಲೇ ಗುನುಗುತ್ತಾಳೆ. ಇತ್ತ ಇವರಿಬ್ಬರ ಮಾತುಗಳನ್ನೂ ಕೇಳಿಸಿಕೊಳ್ಳುವ ಅಶೋಕ್ , ಸೀತಾ ಮಾತುಗಳಿಗೆ ಫಿದಾ ಆಗುತ್ತಾನೆ.
ಪ್ರೀತಿ ಬಗ್ಗೆ ಹೇಳಿಕೊಂಡ ಸೀತಾ
ಮನೆಗೆ ಹೋಗುವ ಸೀತಾ, ಶಾಂತಜ್ಜಿ ಬಳಿ ರಾಮ ಹಾಗೂ ತಾನು ಇಬ್ಬರೂ ಪ್ರೀತಿಸುತ್ತಿರುವ ಬಗ್ಗೆ ಹೇಳುತ್ತಾಳೆ. ಇದೇ ಮೊದಲ ಬಾರಿಗೆ ನಾನು ನಿಮಗೆ ಖುಷಿಯ ವಿಚಾರವನ್ನು ಹೇಳುತ್ತಿದ್ದೇನೆ. ನಾನು ಹಾಗೂ ರಾಮ ಇಬ್ಬರೂ ಒಬ್ಬನ್ನೊಬ್ಬರು ಇಷ್ವಟಪಟ್ಟಿದ್ದೇವೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಶಾಂತಜ್ಜಿ ಖುಷಿ ಪಡುತ್ತಾರೆ. ಆದರೆ, ಸಿಹಿ ಮನೆಯಲ್ಲಿ ಡಲ್ ಆಗಿ ಇರುತ್ತಾಳೆ. ಸಿಹಿಗೆ ಏನಾಯ್ತು ಎಂದು ನೋಡಲು ಹೋಗುವ ಸೀತಾ ಆಕೆ ಬಿಡಿಸಿದ ಚಿತ್ರವನ್ನು ನೋಡುತ್ತಾಳೆ.

ಮತ್ತೆ ಬೇಸರ ಮಾಡಿಕೊಂಡ ಸಿಹಿ
ಅದರಲ್ಲಿ ಸೀತಾ ಮತ್ತು ಸಿಹಿ ಇಬ್ಬರೇ ಇರುತ್ತಾರೆ. ಅಷ್ಟರಲ್ಲಿ ರಾಮ ಗೊಂಬೆಯನ್ನು ತೆಗೆದುಕೊಂಡು ಬಂದು ಸಿಹಿಗೆ ಸರ್ಪ್ರೈಸ್ ಕೊಡುತ್ತಾನೆ. ಸಿಹಿ ಫುಲ್ ಹ್ಯಾಪಿಯಾಗಿ ಕುಣಿದಾಡುತ್ತಾಳೆ. ರಾಮನನ್ನು ನೋಡಿ ತಬ್ಬಿಕೊಂಡು ಖುಷಿ ಪಡುತ್ತಾಳೆ. ಇದನ್ನು ಗಮನಿಸಿದ ಅಜ್ಜಿ ಹಾಗೂ ಅಜ್ಜ ಕೊನೆಗೆ ನಮ್ಮ ಸಿಹಿಗೆ ಅಪ್ಪ ಸಿಕ್ಕರು ಎಂದು ಮಾತನಾಡುತ್ತಾರೆ. ಆಗ ಸಿಹಿ ಇವರು ನನ್ನ ಬೆಸ್ಟ್ ಫ್ರೆಂಡ್. ಅಪ್ಪ ಅಲ್ಲ ಎಂದು ಜೋರಾಗಿ ಕಿರುಚಿಕೊಂಡು ಬೇಸರದಲ್ಲಿ ರೂಮ್ ಹೊಕ್ಕುತ್ತಾಳೆ. ಸಿಹಿಗೆ ರಾಮನನ್ನು ಅಪ್ಪ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.


Click it and Unblock the Notifications











