Seetha Rama ; ಸೀತಾ ಬಳಿ ಸೂರಿ ಹಾಕಿದ ಆ ಒಂದು ಕಂಡೀಷನ್ ಏನು..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಅಂಜಲಿ ರುದ್ರ ಪ್ರತಾಪ್ ಗೆ ಬಾಕ್ಸ್ ತೆಗೆದುಕೊಂಡು ಹೋಗುತ್ತಾಳೆ. ಪ್ರಿಯಾ ಅಂಜಲಿ ಬಳಿ ಬಂದು ನಿನಗೆ ರುದ್ರ ಪ್ರತಾಪ್ ಎಂಬಾತ ಗೊತ್ತಾ ಎಂದು ಕೇಳುತ್ತಾಳೆ.ಅಂಜಲಿ ಬಳಿ ರುದ್ರ ಪ್ರತಾಪ್ ತನ್ನ ಹೆಸರು ರಾಮು ಎಂದು ಹೇಳಿಕೊಂಡಿರುವ ಕಾರಣ ಅಂಜಲಿ ಗೊತ್ತಿಲ್ಲ ಎನ್ನುತ್ತಾಳೆ. ಇದರಿಂದ ಪ್ರಿಯಾ ಹಾಗೂ ಅಶೋಕ್ ಕೂಡ ಸಮಾಧಾನಗೊಂಡಿದ್ದಾರೆ.ಇತ್ತ ಭಾರ್ಗವಿಗೆ ವಿಲ್ ನಲ್ಲಿ ಏನಿದೆ ಎಂಬ ಪ್ರಶ್ನೆ ಅತೀಯಾಗಿ ಕಾಡುತ್ತಿದೆ. ಕನಸಿನಲ್ಲಿಯೂ ಕೂಡ ವಾಣಿ ಬಂದಿದ್ದು, ಭಾರ್ಗವಿಗೆ ವಾರ್ನಿಂಗ್ ಕೊಟ್ಟಿದ್ದಾಳೆ.

ಭಾರ್ಗವಿಯನ್ನು ಕಾಡಿದ ವಾಣಿ

ಸೀತಾ ತುಂಬಾ ಒಳ್ಳೆಯ ಹುಡುಗಿ. ನನ್ನ ಮಗನ ಹೆಂಡತಿಯಾಗಿ ಈ ಮನೆಗೆ ಬರುತ್ತಾಳೆ. ನನ್ನ ಸೊಸೆ ನಿನಗೆ ಕಾಟ ಕೊಡುತ್ತಾಳೆ. ನೀನು ಮಾಡಿದ ಪಾಪದ ಕೊಡ ತುಂಬಿದೆ. ಅದಕ್ಕೆ ನನ್ನ ಸೊಸೆ ನಿನಗೆ ಪಾಠ ಕಲಿಸಲು ಬರುತ್ತಿದ್ದಾಳೆ. ನಿನಗೆ ನೆಮ್ಮದಿ ಅನ್ನೋದು ಮರೀಚಿಕೆ. ನಿನಗೆ ಈ ಆಸ್ತಿಯಲ್ಲಿ ಒಂದು ಅಂಗುಲವೂ ಸಿಗುವುದಿಲ್ಲ ಎಂದೆಲ್ಲಾ ಹೇಳುತ್ತಾಳೆ. ಇದರಿಂದ ಭಾರ್ಗವಿ ಸಿಕ್ಕಾಪಟ್ಟೆ ಹೆದರಿಕೊಂಡಿದ್ದಾಳೆ. ಬೆಳಗ್ಗೆ ಎದ್ದು ಸಾಧನಾ ಸೀತಾ ಮನೆಗೆ ಬರುತ್ತಿದ್ದಾಳೆ. ಊಟಕ್ಕೆ ಇರುತ್ತಾಳಾ..? ಅವಳಿಗೆ ಎಂದು ಸ್ಪೆಷಲ್ ಆಗಿ ಏನಾದರೂ ಮಾಡಬೇಕಾ ಎಂದೆಲ್ಲಾ ಪ್ರಶ್ನೆ ಮಾಡುತ್ತಾಳೆ. ಅಲ್ಲದೇ, ಸೀತಾ ತುಂಬಾ ಒಳ್ಳೆಯ ಹುಡುಗಿ, ಅವಳು ರಾಮ್ ಗೆ ಸರಿಯಾದ ಜೋಡಿ ಎಂದೆಲ್ಲಾ ಮಾತನಾಡಿದಾಗ ಭಾರ್ಗವಿಗೆ ಕೋಪ ಬರುತ್ತದೆ. ಕೈಯಲ್ಲಿದ್ದ ಬಿಸಿ ಕಾಫಿಯನ್ನು ಸಾಧನಾ ಮುಖಕ್ಕೆ ಎರಚುತ್ತಾಳೆ. ಇದರಿಂದ ಸಾಧನಾಳಿಗೆ ಗಾಬರಿಯಾಗುತ್ತದೆ.

written-update-on-episode-30-april-seetha-rama-serial

ಭಾರ್ಗವಿಗೆ ಸಮಾಧಾನ ಮಾಡಿದ ರಾಮ

ಸತ್ಯ ಸಾಧನಾ ಮುಖಕ್ಕೆ ಕ್ರೀಮ್ ಹಚ್ಚುತ್ತಾನೆ. ಇದಾದ ಬಳಿಕ ಸಾಧನಾಳಿಗೆ ಭಾರ್ಗವಿ ಬಳಿ ಹೋಗುವುದಕ್ಕೇ ಭಯವಾಗುತ್ತದೆ. ಜ್ಯೂಸ್ ಕೊಡಲು ಹೆದರಿಕೊಳ್ಳುತ್ತಾಳೆ. ಆಗ ಪಕ್ಕದಲ್ಲೇ ಇದ್ದ ರಾಮ್ ಬಳಿ ಅಕ್ಕ ಬೆಳಗ್ಗಿನಿಂದ ಬಹಳ ಟೆಂಷನ್ ಮಾಡಿಕೊಂಡಿದ್ದಾರೆ. ಏನೋ ಯೋಚಿಸುತ್ತಿದ್ದಾರೆ ಎಂದಾಗ ಜ್ಯೂಸ್ ತೆಗೆದುಕೊಂಡು ರಾಮ ಚಿಕ್ಕಿ ಬಳಿ ಮಾತನಾಡುತ್ತಾನೆ. ಸೀತಾ ಬಗ್ಗೆಯೇ ಯೋಚಿಸುತ್ತಿದ್ದೀರಾ ಅಂತ ನನಗೆ ಗೊತ್ತಿದೆ. ನನ್ನ ಸೀತಾ ಮದುವೆಗೆ ತಾತ ಒಪ್ಪುತ್ತಾರೆ. ಯಾವ ಸಮಸ್ಯೆಯೂ ಆಗುವುದಿಲ್ಲ. ನೀವು ಹೆದರಬೇಡಿ ಚಿಕ್ಕಿ ಎಂದು ಸಮಾಧಾನ ಮಾಡುತ್ತಾನೆ. ರಾಮ ಆಡುವ ಒಂದೊಂದು ಮಾತೂ ಕೂಡ ಭಾರ್ಗವಿಗೆ ಕೋಪವನ್ನು ಹೆಚ್ಚು ಮಾಡುತ್ತಿದ್ದರೂ ಸುಮ್ಮನಿರುತ್ತಾಳೆ.

ಸೂರಿ ಜೊತೆಗೆ ಮಾತನಾಡಿದ ಸೀತಾ

ಸೀತಾ ತಾತನನ್ನು ಭೇಟಿ ಮಾಡುವ ಮುನ್ನ ರಾಮ್ ಯಾವುದೇ ಕಾರಣಕ್ಕೂ ನನ್ನ ಕೈ ಬಿಡಬೇಡಿ. ನನಗೆ ನಿಮ್ಮನ್ನು ಬಿಟ್ಟಿರಲು ಆಗುವುದಿಲ್ಲ ಎಂದು ಎಮೋಷನಲ್ ಆಗಿ ಮಾತನಾಡಿ ಕಳಿಸುತ್ತಾನೆ. ತಾತನ ಬಳಿ ಸೀತಾ ಮಾತು ಶುರು ಮಾಡುತ್ತಾಳೆ. ನಿಮಗೆ ಸಿಹಿ ಬಗ್ಗೆ ಪ್ರಶ್ನೆಗಳಿವೆ ಗೊತ್ತು. ಅವಳನ್ನು ನಾನು ಒಂದು ಕ್ಷಣವೂ ಬಿಟ್ಟಿರಲಾರೆ. ಅವಳು ನನ್ನನ್ನು ಬಿಟ್ಟಿರೋದಿಲ್ಲ ಎಂದು ಹೇಳುತ್ತಾಳೆ. ತಾತ ಅದಕ್ಕೆ ನನಗೂ ಸಿಹಿ ಎಂದರೆ ಇಷ್ಟ ಎನ್ನುತ್ತಾರೆ.

written-update-on-episode-30-april-seetha-rama-serial

ಸೀತಾಳಿಗೆ ಕಂಡೀಷನ್ ಹಾಕಿದ ಸೂರಿ

ಸಿಹಿ ಈ ಮನೆಯ ಸದಸ್ಯೆ ಆಗುವುದರಲ್ಲಿ ನನಗೆ ಸಮಸ್ಯೆ ಇಲ್ಲ. ಸಿಹಿ ತಂದೆ ಬಗ್ಗೆ ಮಾಹಿತಿ ಕೇಳಿದ್ದಕ್ಕೆ, ಸೀತಾ ಆತ ಇದ್ದಾರೆ, ಎಲ್ಲಿದ್ದಾರೆ ಹೇಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎನ್ನುತ್ತಾಳೆ. ಆದರೆ, ನನ್ನದೊಂದು ಕಂಡೀಷನ್ ಇದೆ ಎಂದು ಹೇಳುತ್ತಾರೆ. ಅದೇನು ಎಂದು ಕೇಳಿದ್ದಕ್ಕೆ, ಸಿಹಿ ಜೊತೆಗೆ ರಾಮ್ ಮತ್ತು ನಿನ್ನ ಮಗು ಬೇಕು. ಒಬ್ಬ ವಾರಸುದಾರ ಬೇಕು ಎಂದು ಕೇಳುತ್ತಾರೆ. ಇದಕ್ಕೆ ಸೀತಾ ಕೂಡ ಓಕೆ ಎಂದಿದ್ದಾಳೆ. ಅಲ್ಲಿಗೆ ಇಬ್ಬರ ಮದುವೆ ಗ್ಯಾರಂಟಿ ಎಂದಾಗಿದೆ.

More from Filmibeat

English summary
written-update-on-episode-30-april-seetha-rama-serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X