ಪತಿ ಸುಹಾಸ್ ಜೊತೆ ಸ್ಕೂಬಾ ಡೈವಿಂಗ್ ಮಾಡಿದ ಕಮಲಿ ಖ್ಯಾತಿಯ ಗ್ಯಾಬಿ ಎಲಾ ಸ್ಮಿತ್..!
ನಟಿ ಗ್ಯಾಬಿ ಎಲಾ ಸ್ಮಿತ್ ಅವರು ತಮ್ಮ ಎರಡನೇ ವರ್ಷದ ವೆಡ್ಡಿಂಗ್ ಆನಿವರ್ಸರಿಯನ್ನು ಆಚರಿಸಿಕೊಂಡಿದ್ದು, ಪತಿ ಜೊತೆಗೆ ಸಮುದ್ರ ತೀರದಲ್ಲಿ ಹೆಜ್ಜೆ ಹಾಕಿದ್ದಾರೆ. ಕಮಲಿ ಧಾರಾವಾಹಿಯಲ್ಲಿ ಅನಿಕಾ ಪಾತ್ರವನ್ನು ನಿರ್ವಹಿಸಿದ ನಟಿ ಗ್ಯಾಬಿ ಎಲಾ ಸ್ಮಿತ್ ಅವರು ತಮ್ಮ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸನ್ನು ಗೆದ್ದಿದ್ದರು. ಕಮಲಿ ಮುಗಿಯುತ್ತಿದ್ದಂತೆ ಮದುವೆಯಾದ ನಟಿ, ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಜೊತೆಗೆ ನಟಿಸಿದ್ದ ನಟನನ್ನು ಪ್ರೀತಿಸಿ ಸ್ಮಿತ್ ಅವರು ಮದುವೆಯಾಗಿದ್ದರು.
ನಟಿ ಗ್ಯಾಬಿ ಎಲಾ ಸ್ಮಿತ್ ಬಣ್ಣದ ಲೋಕದ ಪಯಣ
ಕಮಲಿ ಧಾರಾವಾಹಿ ಮೂಲಕ ಚಿರಪರಿಚಿತರಾದ ನಟಿ ಗ್ಯಾಬಿ ಎಲಾ ಸ್ಮಿತ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ವರ್ಷ ಕಳೆದಿದೆ. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ಈ ಚೆಂದುಳ್ಳಿ ಚೆಲುವೆ, ಚಿಕ್ಕವಯಸ್ಸನಿಂದಲೂ ನಟಿಯಾಗುವ ಆಸೆ ಇತ್ತಂತೆ. ಶಾಲೆ ಮುಗಿಸುತ್ತಿದ್ದಂತೆ ಮಾಡೆಲಿಂಗ್ ಗೆ ಬಂದ ಸ್ಮಿತ್ ಅವರು ವರದನಾಯಕ ಸಿನಿಮಾಗೆ ಆಡಿಶನ್ ಕೊಟ್ಟು ಆಯ್ಕೆಯಾಗುತ್ತಾರೆ. ಇಲ್ಲಿಂದ ರಚನಾ ಅವರ ಬಣ್ಣದ ಲೋಕದ ಪಯಣ ಶುರುವಾಗುತ್ತದೆ. ಇಲ್ಲಿಂದ ಸಿನಿಮಾ ಪಯಣ ಶುರುವಾಯಿತು. ಮುರುಗ ಅಲಿಯಾಸ್ ಮುನಿಕೃಷ್ಣ ನಟನೆಯ ಮುರುಗಾ ಕಾನೂನು, ವಿಕ್ಟರಿ, ಗೆಸ್ಟ್ ಹೌಸ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಾಮಿಡಿ ಮಾಡುತ್ತಾ ನಗಿಸುತ್ತಿರುವ ನಟಿ
ಅಲ್ಲದೇ ತೆಲುಗು ಸಿನಿಮಾ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದರು. ತೆಲುಗಿನ ಕೆಲ ಸಿನಿಮಾಗಳಲ್ಲೂ ರಚನಾ ಅವರು ಮಿಂಚಿದ್ದಾರೆ. ಇದಷ್ಟೇ ಅಲ್ಲದೇ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲೈಫ್ ಸೂಪರ್ ಗುರು ರಿಯಾಲಿಟಿ ಶೋ ನಲ್ಲೂ ಕಾಣಿಸಿಕೊಂಡಿದ್ದರು. ಇನ್ನು ಇದೀಗ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರಿಮಿಯರ್ ಲೀಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಕಾಮಿಡಿ ಮಾಡುತ್ತಾ ವೀಕ್ಷಕರನ್ನು ನಗಿಸುತ್ತಿರುವ ಸ್ಮಿತ್ ಅವರು ಮತ್ತೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲಿ, ತಮ್ಮ ಮುದ್ದಾದ ನಟನೆಯ ಮೂಲಕ ರಂಜಿಸಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ.
ಮತ್ತೆ ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ
ಇನ್ನು ನಟಿ ಗ್ಯಾಬಿ ಎಲಾ ಸ್ಮಿತ್ ಅವರು ಕಮಲಿ ಧಾರಾವಾಹಿಯಲ್ಲಿ ಶಂಭು ಪಾತ್ರದಲ್ಲಿ ನಟಿಸುತ್ತಿದ್ದ ಸುಹಾಸ್ ಅವರನ್ನು ಪ್ರೀತಿಸುತ್ತಿದ್ದರು. ಮೂರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. 2022ರ ಅಕ್ಟೋಬರ್ ತಿಂಗಳಲ್ಲಿ ಸಪ್ತಪದಿ ತುಳಿದಿದ್ದರು. ಇಬ್ಬರ ಎಂಗೇಜ್ ಮೆಂಟ್ ಹಾಗೂ ಮದುವೆಯನ್ನು ಸಿಂಪಲ್ ಆಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿತ್ತು. ಇಬ್ಬರ ಫೋಟೋಗಳನ್ನು ಕಂಡು ಎಲ್ಲರೂ ಶಾಕ್ ಆಗಿದ್ದರು. ಮದುವೆಯಾದ ಬಳಿಕ ನಟಿ ಗ್ಯಾಬಿ ಅವರು ನಟನೆಯಿಂದ ಕೆಲಕಾಲ ದೂರ ಉಳಿದಿದ್ದರು. ಸದ್ಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಎರಡನೇ ವರ್ಷದ ವೆಡ್ಡಿಂಗ್ ಆನಿವರ್ಸರಿ
ಗ್ಯಾಬಿ ಅವರು ಪತಿ ಜೊತೆಗೆ ಆಗಾಗ ಪ್ರವಾಸಗಳಿಗೆ ತೆರಳುತ್ತಿರುತ್ತಾರೆ. ಸುಹಾಸ್ ಮತ್ತು ಗ್ಯಾಬಿ ಅವರು ತಮ್ಮ ಎರಡನೇ ವರ್ಷದ ಆನಿಸವರ್ಸರಿ ಸೆಲಬ್ರೇಷನ್ ಮೂಡ್ ನಲ್ಲಿದ್ದಾರೆ. ಅಂಡಮಾನ್ ಗೆ ತೆರಳಿರುವ ಈ ಜೋಡಿಗಳು ಬೀಚ್ ನಲ್ಲಿ ಓಡಾಡಿಕೊಂಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಆನಿವರ್ಸರಿ ಸೆಲಬ್ರೇಷನ್ ಗೆ ಬಂಡೀಪುರಕ್ಕೆ ತೆರಳಿದ್ದರು. ಈ ವರ್ಷ ಇಬ್ಬರೂ ಅಂಡಮಾನ್ ಗೆ ತೆರಳಿದ್ದಾರೆ. ಅಲ್ಲಿ ರಾಧಾನಗರ ಬೀಚ್ ನಲ್ಲಿ ಎಂಜಾಯ್ ಮಾಡಿದ್ದಾರೆ. ಸಮುದ್ರ ದಡದಲ್ಲಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಅಲ್ಲದೇ, ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಇದರ ಎಲ್ಲಾ ಫೋಟೋಗಳನ್ನು ನಟಿ ಗ್ಯಾಬಿ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದವರು ಇಬ್ಬರಿಗೂ ಅಭೀಮಾನಿಗಳು ವಿಶ್ ಮಾಡಿದ್ದಾರೆ.


Click it and Unblock the Notifications











