Gauthami Gowda ; ಎರಡೆರಡು ಬಾರಿ ಜೀವನ ಕಟ್ಟಿಕೊಂಡ ನಟಿ ಗೌತಮಿ ಗೌಡ
ಸಿನಿಮಾ, ಧಾರಾವಾಹಿ ಅಂತ ಬಣ್ಣದ ಲೋಕದಲ್ಲಿ ಹಲವು ವರ್ಷಗಳ ಕಾಲ ಸರ್ಕಸ್ ಮಾಡಿ ಕೊನೆಗೆ ಜೀವನಕ್ಕಾಗಿ ಐಟಿಯಲ್ಲಿ ಕೆಲಸಕ್ಕೆ ಸೇರಿದ ನಟಿ ಗೌತಮಿ ಗೌಡ ಅವರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.ಇಂದಿಗೂ ಚಿ ಸೌ ಸಾವಿತ್ರಿ ಧಾರಾವಾಹಿ ಮೂಲಕವೇ ಚಿರಪರಿಚಿತಳಾಗಿರುವ ನಟಿ ಗೌತಮಿ ಗೌಡ ಅವರು ಹತ್ತು ವರ್ಷಕ್ಕೂ ಅಧಿಕ ಸಮಯ ಬಣ್ಣದ ಲೋಕದಲ್ಲಿ ಮಣ್ಣು ಹೊತ್ತಿದ್ದರು.ಬಳಿಕ ಮದುವೆ ಫ್ಯಾಮಿಲಿ ಎಂದು ಬ್ಯುಸಿಯಾದವರು, ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರೂ ಕೂಡ ವಿಧಿ ಮತ್ತೆ ಕುಟುಂಬದತ್ತ ಸೆಳೆದಿತ್ತು.
ಮಗಳೊಂದಿಗೆ ಬ್ಯುಸಿಯಾಗಿರುವ ನಟಿ
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರದ ಮೂಲಕ ಮತ್ತೆ ಎಲ್ಲರ ಗಮನವನ್ನು ಸೆಳೆದಿದ್ದರು. ಆದರೆ, ಗರ್ಬಿಣಿ ಆದ ಹಿನ್ನೆಲೆ ಧಾರಾವಾಹಿಯಿಂದ ಅರ್ಧಕ್ಕೆ ಹೊರ ನಡೆಯಬೇಕಾಯ್ತು. ಸದ್ಯ ಗೌತಮಿ ಗೌಡ ಅವರು ಮುದ್ದಾ ಹೆಣ್ಣು ಮಗಳ ಜೊತೆಗೆ ಜೀವನವನ್ನು ಹಸನಾಗಿಸಿಕೊಂಡಿದ್ದಾರೆ. ಮಗಳೊಂದಿಗೆ ಆಡುತ್ತಾ ತಾವೂ ಬೆಳೆಯುತ್ತಿದ್ದು, ಮತ್ತೆ ಕಿರುತೆರೆಗೆ ಬರಲಿ ಎಂದು ಬಯಸುತ್ತಿರುವ ಅಭಿಮಾನಿಗಳ ಆಸೆಯನ್ನು ನೆರವೇರಿಸುತ್ತಾರಾ ಕಾದು ನೋಡಬೇಕಿದೆ. ಆದರೆ ಈಗಂತೂ ಮನೆ ಸಂಸಾರ ಎಂದು ಬ್ಯುಸಿಯಾಗಿದ್ದು, ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಬ್ಬಗಳ ವೀಡಿಯೋ ಮಾಡುತ್ತಿದ್ದಾರೆ. ಜನ್ಮಾಷ್ಟಮಿ ಮತ್ತು ವರಮಹಾಲಕ್ಷ್ಮೀ ಹಬ್ಬದ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಕಿರುತೆರೆ, ಹಿರಿತೆರೆಯಲ್ಲಿ ನಟಿ ಗೌತಮಿ ಗೌಡ
ಚಿ ಸೌ ಸಾವಿತ್ರಿ, ಅಮ್ಮ ನಿನಗಾಗಿ, ತಾಯವ್ವ, ಚೆಲುವಿ, ಚಲಿಸುವ ಮೋಡಗಳು ಮುಂತಾದ ಧಾರಾವಾಹಿಗಳಲ್ಲಿ ನಟಿಸಿ, ಕುಣಿಯೋಣು ಬಾ, ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸಿಂಗ್ ಸ್ಟಾರ್, ಬಿಗ್ ಬಾಸ್ ಮೊದಲಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಅಲ್ಲದೇ, 'ಅಂಬಿ ನಿಂಗ್ ವಯಸ್ಸಾಯ್ತೋ', 'ಜೆಸ್ಸಿ' ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 2016ರಲ್ಲಿ ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಬಳಿ 2017 ರಲ್ಲಿ ಎಂಜಿನಿಯರಿಂಗ್ ಮುಗಿಸಿ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಜಾರ್ಜ್ ಕ್ರಿಸ್ಟಿ ಅವರನ್ನು 2018ರಲ್ಲಿ ಮದುವೆಯಾಗಿ ತಕ್ಷಣವೇ ಮಲೇಷ್ಯಾಗೆ ಹಾರಿದರು.
ಎಲ್ಲಾ ಬಿಟ್ಟು ಭಾರತಕ್ಕೆ ಮರಳಿದ ಜೋಡಿ
ಮಲೇಷ್ಯಾದಲ್ಲಿ ಕೆಲಸ ಮಾಡುತ್ತಾ ಗಂಡ ಹೆಂಡತಿ ಇಬ್ಬರೂ ಪುಟ್ಟ ಗೂಡು ಕಟ್ಟಿಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದರು. ಜಾರ್ಜ್ ಕ್ರಿಸ್ಟಿ ಅವರು ಈವೆಂಟ್ಸ್ ಆಂಡ್ ಕಾನ್ಫರೆನ್ಸ್ ನಲ್ಲಿ ಇದ್ದರು. ಕೋವಿಡ್ ನಿಂದ ಕೆಲಸಕ್ಕೆ ಬ್ರೇಕ್ ಬಿದ್ದಾಗ ವಿಧಿ ಇಲ್ಲದೇ ಮಲೇಷ್ಯಾದಲ್ಲಿ ತಮ್ಮಮ ಮನೆಯನ್ನು ಹಾಗೆ ಬಿಟ್ಟು ಭಾರತಕ್ಕೆ ಮರಳಿದರು. ಗೌತಮಿ ಅವರಿಗೆ ಮಲೇಷ್ಯಾ ಮನೆಯನ್ನು ಬಿಟ್ಟು ಬಂದಿದ್ದು ಬಹಳ ಬೇಸರವಿದೆ. ಇಲ್ಲಿಗೆ ಬಂದು ಮತ್ತೆ ಹೊಸ ಬದುಕನ್ನು ಕಟ್ಟಿಕೊಂಡ ದಂಪತಿ ಮನೆ, ಕಾರು ಜೊತೆಗೆ ಈಗ ಮುದ್ದಾದ ಮಹಾಲಕ್ಷ್ಮೀಯನ್ನು ವೆಲ್ಕಂ ಮಾಡಿದ್ದಾರೆ. ಗೌತಮಿ ಅವರಿಗೆ ದೇಶ ಸುತ್ತುವ ಆಸೆ ಇದೆ.

ಗೌತಮಿ ಅವರದ್ದು ದೇಶ ಸುತ್ತುವ ಆಸೆ
ಹೀಗಾಗಿ ಈಗಾಗಲೇ ಹಲವು ದೇಶಗಳನ್ನು ಪ್ರವಾಸ ಮಾಡಿದ್ದಾರೆ. ಥೈಲ್ಯಾಂಡ್, ಕ್ರಾಬಿ, ಫುಕೆಟ್, ದುಬೈ, ಮಲೇಷ್ಯಾ, ಸಿಂಗಾಪುರ, ವಿಯೆಟ್ನಾಂ, ಕಾಂಬೋಡಿಯಾ, ಇಂಡೋನೇಷ್ಯಾಗೆ ತೆರಳಿದ್ದಾರೆ. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶಕ್ಕೂ ಗೌತಮಿ ಗೌಡ ಮತ್ತು ಅವರ ಪತಿ ಜೊತೆಗೆ ಮಗಳನ್ನು ಕರೆದುಕೊಂಡು ಪ್ರವಾಸ ಮಾಡಿದ್ದರು. ಇನ್ನಷ್ಟು ದೇಶಗಳನ್ನು ಸುತ್ತುವ ಆಸೆಯನ್ನು ಹೊಂದಿರುವ ಗೌತಮಿ ಅವರು ಮುಂದಿನ ದಿನಗಳಲ್ಲಿ ಅವರ ಆಸೆ ನೆರವೇರಲಿ ಎಂದು ಶುಭ ಹಾರೈಸೋಣ.


Click it and Unblock the Notifications











