ಮಗಳ ಜೊತೆಗೆ ಹೊರದೇಶದಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಗೌತಮಿ ಗೌಡ

By ಪ್ರಿಯಾ ದೊರೆ

ನಟಿ ಗೌತಮಿ ಗೌಡ ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದು, ಇದೀಗ ಪತಿ ಹಾಗೂ ಮಗುವಿನ ಜೊತೆಗೆ ಹೊರ ದೇಶಕ್ಕೆ ಹಾರಿದ್ದಾರೆ. ಗರ್ಭಿಣಿ ಎಂಬ ಕಾರಣಕ್ಕೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಶ್ರೇಷ್ಠ ಪಾತ್ರದಿಂದ ಹೊರ ನಡೆದ ಬಳಿಕ ವೀಕ್ಷಕರು ಗೌತಮಿ ಗೌಡ ಅವರನ್ನು ಬಹಳ ಮಿಸ್ ಮಾಡಿಕೊಂಡರು. ಹಲವು ವರ್ಷಗಳ ಗ್ಯಾಪ್ ಪಡೆದು ಮತ್ತೆ ಕಿರುತೆರೆಗೆ ರಿ-ಎಂಟ್ರಿ ಕೊಟ್ಟಿದ್ದರು. ಆದರೆ, ಅರ್ಧಕ್ಕೆ ಸೀರಿಯಲ್ ಬಿಟ್ಟು ಈಗ ಫುಲ್ ಟೈಂ ಬೇಬಿ ಜೊತೆಗೆ ಟೈಂ ಪಾಸ್ ಮಾಡುತ್ತಿದ್ದಾರೆ.

ಪತಿ ಹಾಗೂ ಮಗಳ ಜೊತೆ ಟ್ರಿಪ್

ನಟಿ ಗೌತಮಿ ಗೌಡ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. 2015ರಲ್ಲಿ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ಇಬ್ಬರೂ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿ ಪ್ರೀತಿಸಿ ಮದುವೆಯಾದರು. 2018ರಲ್ಲಿ ಮದುವೆಯಾದ ಈ ಜೋಡಿಗಳಿಗೆ ಹೊರ ದೇಶಗಳನ್ನು ಸುತ್ತುವುದೆಂದರೆ ಬಹಳ ಇಷ್ಟವಂತೆ. ಇಬ್ಬರೂ ಇದುವರೆಗೂ 7 ದೇಶಗಳನ್ನು ಸುತ್ತಿದ್ದಾರೆ. ಉತ್ತರ ಭಾರತ, ಕೇರಳ ಹಾಗೂ ರೋಡ್ ಟ್ರಿಪ್ ಹೋಗುತ್ತಿರುತ್ತಾರಂತೆ. ತನ್ನ ಸೀಮಂತದ ದಿನದಂದೇ ತನ್ನ ಗಂಡನ ಫೋಟೋವನ್ನು ಆಭಿಮಾನಿಗಳಿಗೆ ಮೊದಲ ಬಾರಿಗೆ ತೋರಿಸಿದ್ದರು ಈ ನಟಿ. ಜಾರ್ಜ್ ಅವರು ಮಲೇಶಿಯನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

written update on gouthami gowda travel story

ದುಬೈನಲ್ಲಿ ಎಂಜಾಯ್ ಮಾಡಿದ ನಟಿ

ಸದ್ಯ ಗೌತಮಿ ಹಾಗೂ ಜಾರ್ಜ್ ಕ್ರಿಸ್ಟಿ ಅವರು ತಮ್ಮ ಹೆಣ್ಣು ಮಗು ಜೊತೆ ಮೊದಲ ವಿದೇಶ ಪ್ರವಾಸವನ್ನು ಕೈಗೊಂಡಿದ್ದಾರೆ. ದುಬೈಗೆ ಮಗಳ ಜೊತೆಗೆ ಟ್ರಾವೆಲ್ ಮಾಡಿದ್ದು, ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಾಮ್ ಐಲ್ಯಾಂಡ್, ಮ್ಯಾಜಿಕಲ್ ಗಾರ್ಡೆನ್, ಮರಳುಗಾಡು, ದುಬೈ ಫ್ರೆಮ್ ಸೇರಿದಂತೆ ಹಲವೆಡೆ ಸುತ್ತಾಡಿದ್ದಾರೆ. ದುಬೈ ಟ್ರಿಪ್ ಅನ್ನು ಗೌತಮಿ ಅವರು ಫುಲ್ ಎಂಜಾಯ್ ಮಾಡಿದ್ದಾರೆ. ಇನ್ನು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರದಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದರು.

ಗೌತಮಿ ನಟಿಸಿದ ಧಾರಾವಾಹಿಗಳು

ಚಿ ಸೌ ಸಾವಿತ್ರಿ ಅಂತಹ ಧಾರಾವಾಹಿಯಲ್ಲಿ ಮುಗ್ಧವಾಗಿ ನಟಿಸಿದ್ದ ಗೌತಮಿ ಅವರು ಮದುವೆಯಾದ ನಂತರ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಕಿರುತೆರೆಗೆ ಕಮ್ ಬ್ಯಾಕ್ ಮಾಡಿ ಈಗ ಮತ್ತೆ ನಟನೆಯಿಂದ ಮರೆಯಾದರು. ತಾಯವ್ವ, ಮುತ್ತಿನ ಪಲ್ಲಕ್ಕಿ, ಚೆಲುವಿ, ಚಲಿಸುವ ಮೋಡಗಳು ಮುಂತಾದ ಧಾರಾವಾಹಿಗಳಲ್ಲಿ ನಟನೆಯನ್ನು ಮಾಡಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಗೌತಮಿ ಗೌಡ ಅವರಿಗೆ ಚಿ ಸೌ ಸಾವಿತ್ರಿ ಧಾರಾವಾಹಿ ಸಾಕಷ್ಟು ಹೆಸರು ತಂದು ಕೊಟ್ಟಿತ್ತು.

written update on gouthami gowda travel story

ಬಿಗ್ ಬಾಸ್ ನಲ್ಲೂ ಭಾಗವಹಿಸಿದ್ದ ನಟಿ

ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲೂ ಮಿಂಚಿದರು. ಕುಣಿಯೋಣು ಬಾ, ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸಿಂಗ್ ಸ್ಟಾರ್, ಬಿಗ್ ಬಾಸ್ ಮೊದಲಾದ ರಿಯಾಲಿಟಿ ಶೋಗಳಲ್ಲಿ ಈಕೆ ಭಾಗವಹಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು. ಮಾತುಕತೆ, ದಿ ಪ್ಲಾನ್, ಮಳೆ, ಜೆಸ್ಸಿ, ಅಂಬಿ ನಿಂಗ್ ವಯಸ್ಸಾಯ್ತೋ ಮುಂತಾದ ಸಿನಿಮಾಗಳಲ್ಲಿಯೂ ನಟಿ ಗೌತಮಿ ಗೌಡ ಅಭಿನಯ ಮಾಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲೂ ಗೌತಮಿ ಅವರು ಭಾಗವಹಿಸಿದ್ದರು. ಬಳಿಕ ಎಂಗೇಜ್ ಮೆಂಟ್ ಮಾಡಿಕೊಂಡು ವ್ಯೆಯಕ್ತಿಕ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದರು. ಚಿ ಸೌ ಸಾವಿತ್ರಿ, ಇನ್ನು ಮತ್ತೆ ನಟಿಸುವ ಆಸೆ ಇದ್ದು, ಪತಿ ಸಪೋರ್ಟ್ ಕೂಡ ಇದೆಯಂತೆ. ಗರ್ಭಿಣಿಯಾಗಿದ್ದಾಗಲೂ ಗೌತಮಿ ಅವರು ನಟನೆ ಜೊತೆಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ನಂತರ ಹಲವು ತಿಂಗಳ ಕಾಲ ಕೆಲಸ ಮಾಡಿದ್ದರಂತೆ.

More from Filmibeat

English summary
actress gouthami gowda life and her family trip for dubai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X