ಪಲ್ಲವಿ ಗೌಡಗೆ ಮದುವೆಯಾಗಿದೆಯಾ ? ಎರಡೆರಡು ಧಾರಾವಾಹಿಗಳಲ್ಲಿ ಬ್ಯುಸಿಯಾದ ನಟಿ ಹೇಳಿದ್ದೇನು..?

By ಪ್ರಿಯಾ ದೊರೆ

ತಮ್ಮ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನದಲ್ಲಿ ಸ್ಥಾನ ಪಡೆದುಕೊಂಡ ಚೆಲುವೆ ಪಲ್ಲವಿ ಗೌಡ. ನೋಡುವುದಕ್ಕೆ ಸೌಂದರ್ಯದ ಗಣಿಯಂತೆಯೇ ಕಾಣುವ ಪಲ್ಲವಿ ಗೌಡ ಖಳನಾಯಕಿಯ ಪಾತ್ರದಲ್ಲಿಯೂ ಕೂಡ ಫೇಮಸ್. ಇನ್ನೂ ಪರಭಾಷೆಯಲ್ಲಿ ಖಳನಾಯಕಿಗಿಂತಲೂ ನಾಯಕಿ ಪಾತ್ರದಲ್ಲಿ ಹಲವು ವರ್ಷಗಳಿಂದ ಒಂದಾದ ಮೇಲೆ ಒಂದು ಧಾರಾವಾಹಿಯಲ್ಲಿ ನಟಿಸುತ್ತಲೇ ಇದ್ದಾರೆ.

ಸಿನಿಮಾ, ಕಿರುತೆರೆಯಲ್ಲೇ ಬ್ಯುಸಿಯಾಗಿರುವ ನಟಿ

ಕನ್ನಡ ಕಿರುತೆರೆಯಿಂದ ದೂರವಾಗಿ ವರುಷಗಳೇ ಕಳೆದರೂ ಇಂದಿಗೂ ಕನ್ನಡ ವೀಕ್ಷಕರ ಫೇವರಿಟ್ ಆಕ್ಟರ್ ಆಗಿರುವ ನಟಿ ಪಲ್ಲವಿ ಗೌಡ ತೆಲುಗಿನ ಎರಡೆರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಹುಡುಗಿ ತೆಲುಗು ಅಂಗಳದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

 written update on kannada serial actress pallavi gowda

ಸವಿರುಚಿ ಕಾರ್ಯಕ್ರಮ ಹಾಗೂ ಸೇವಂತಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಚಿರಪರಿಚಿತರಾದ ಪಲ್ಲವಿ ಗೌಡ ಅವರು ಇಂದಿಗೂ ಪರಭಾಷೆಯ ಬಹುಬೇಡಿಕೆಯ ನಟಿ. ಕೇವಲ ಕಿರುತೆರೆಗಷ್ಟೇ ಮೀಸಲಾಗಿರದ ಪಲ್ಲವಿ ಗೌಡ ಅವರು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ.

ಹಲವು ಸಿನಿಮಾಗಳಲ್ಲಿ ಮಿಂಚಿದ್ದು, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗು, ಮಳಯಾಳಂ ಭಾಷೆಗಳಲ್ಲೂ ಪಲ್ಲವಿ ಗೌಡ ಅವರು ನಟಿಸಿದ್ದಾರೆ. ಸದಾ ಆಕ್ಟೀವ್ ಆಗಿರುವ ಪಲ್ಲವಿ ಗೌಡ ಅವರು ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ.

ಡ್ಯಾನ್ಸ್ ಮಾಡಲು ಇಷ್ಟ

ನಟಿ ಪಲ್ಲವಿಗೌಡ ಅವರು ಏಕಕಾಲಕ್ಕೆ ಎರಡರಿಂದ ಮೂರು ಸೀರಿಯಲ್ ಗಳಲ್ಲಿ ಒಟ್ಟಿಗೆ ನಟಿಸುತ್ತಾರೆ. ಕಿರುತೆರೆಯಲ್ಲಿ ಈ ಮಟ್ಟದಲ್ಲಿ ಹೆಸರು ಪಡೆಯಲು ಪಲ್ಲವಿ ಗೌಡ ಅವರು ತುಂಬಾನೇ ಕಷ್ಟಪಟ್ಟಿದ್ದಾರೆ. ಅತಿಹೆಚ್ಚು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಲ್ಲವಿ ನಟನೆಯ ಜೊತೆಗೆ ನೃತ್ಯವನ್ನು ಕೂಡ ಮಾಡುತ್ತಾರೆ.

 written update on kannada serial actress pallavi gowda

ಡ್ಯಾನ್ಸ್ ಮಾಡಲು ಇಚ್ಛಿಸುವ ಪಲ್ಲವಿ ಗೌಡ ಅವರು ಸದಾ ರೀಲ್ಸ್ ಮಾಡಿ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಇನ್ನು ಪಲ್ಲವಿ ಗೌಡ ಅವರಿಗೆ ಕಿರುತೆರೆಯಲ್ಲಿ ಅತ್ಯಂತ ಬೇಡಿಕೆ ಇದ್ದು, ಒಟ್ಟೊಟ್ಟಿಗೆ ಎರಡೆರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಕಡಿಮೆಯಾಗದ ಆಫರ್ ಗಳು

ಚಂದ್ರ ಚಕೋರಿ, ಮನೆಯೊಂದು ಮೂರು ಬಾಗಿಲು, ಗಾಳಿಪಟ, ಸೇವಂತಿಗೆ, ಜೋಡಿಹಕ್ಕಿ, ಪರಿಣಯ, ಸೇರಿದಂತೆ ಹಲವು ಮೆಗಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಳಿಕ ಪರಭಾಷೆಗೆ ಹಾರಿದ ಈ ಬೆಡಗಿ ಈಗಲೂ ಬಹುಬೇಡಿಕೆಯ ನಾಯಕಿ. ತೆಲುಗು ಹಾಗೂ ಮಳಯಾಳಂ ಭಾಷೆಯಲ್ಲೂ ನಟಿಸಿರುವ ಪಲ್ಲವಿ ಗೌಡ ಅವರು, ಪಸುಕು ಕುಂಕುಮ, ಅಲ್ಲಿ ಆಂಬೆಲ್, ಚದುರಂಗಂ ಮುಂತಾದ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

ತೆಲುಗಿನ ಕಿರುತೆರೆಯಿಂದ ಪಲ್ಲವಿ ಗೌಡ ಅವರಿಗೆ ಆಫರ್ ಬಂದಾಗ ಭಾಷೆ ಬರುತ್ತಿರಲಿಲ್ಲವಂತೆ. ಆದರೆ, ನಟನೆ ಆರಂಭಿಸಿದ ಹದಿನೆಂಟೇ ದಿನಕ್ಕೆ ತೆಲುಗು ಕಲಿತಿದ್ದು ಹೆಮ್ಮೆಯ ವಿಷಯವೇ ಸರಿ. ಪಲ್ಲವಿ ಗೌಡ ಅವರು ಹೆಚ್ಚು ಲೀಡ್ ರೋಲ್ ನಲ್ಲೀ ನಟಿಸಿದ ನಟಿ. ಇನ್ನು ಪಲ್ಲವಿ ಅವರಿಗೆ ಖಳನಾಯಕಿ ಪಾತ್ರಗಳೆಂದರೆ ಇಷ್ಟವಂತೆ.

 written update on kannada serial actress pallavi gowda

ಸದ್ಯ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಪಲ್ಲವಿ ಅವರಿಗೆ ಒಳ್ಳೊಳ್ಳೆಯ ಪಾತ್ರವಿರುವ ಧಾರಾವಾಹಿಗಳಿಂದಲೂ ಆಫರ್ ಗಳು ಬರುತ್ತಿವೆಯಂತೆ. ಸದ್ಯ ತೆಲುಗಿನ ನಿಂಡು ನೂರೆಲ್ಲಾ ಸಾವಾಸಮ್ ಹಾಗೂ ಏವೊಂಡಾಯ್ ಶ್ರೀಮತಿಗಾರು ಎಂಬ ಎರಡು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಿಂಡು ನೂರೆಲ್ಲಾ ಸಾವಾಸಮ್ ಜೀ ತೆಲುಗಿನಲ್ಲಿ ಪ್ರಸಾರವಾಗುತ್ತಿದ್ದು, ಏವೊಂಡಾಯ್ ಶ್ರೀಮತಿಗಾರು ಧಾರಾವಾಹಿಯೂ ಜೆಮಿನಿ ವಾಹಿನಿಯಲ್ಲಿ ಮೂಡಿ ಬರುತ್ತಿದೆ. ಎರಡರಲ್ಲೂ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಒಂಟಿಯಾಗಿರಲು ಬಯಸುವ ನಟಿ

ಪ್ರೇಮ ಗೀಮ ಜಾನೆ ದೋ ಚಿತ್ರದ ಮೂಲಕ ಪಲ್ಲವಿ ಅವರು ಬೆಳ್ಳಿ ತೆರೆಗೆ ಎಂಟ್ರಿಕೊಟ್ಟರು. ಬಳಿಕ ಕಿಡಿ, ಜೋಡಿಹಕ್ಕಿ ಹಾಗೂ ನಮ್ ಗಣಿ ಬಿಕಾಂ ಪಾಸು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ನಟಿ ಪಲ್ಲವಿ ಗೌಡ ಅವರು ಕನ್ನಡದ ಕಿರುತೆರೆಯ ಧಾರಾವಾಹಿಯೊಂದರಲ್ಲಿ ನಟಿಸಬೇಕಿತ್ತು.

ಆದರೆ, ಅದು ಕೈತಪ್ಪಿದ್ದು, ಸದ್ಯ ತೆಲುಗು ಅಂಗಳದಲ್ಲೇ ಇದ್ದಾರೆ. ಇನ್ನು ಹಲವರು ನಟಿ ಪಲ್ಲವಿ ಗೌಡ ಅವರಿಗೆ ಮದುವೆಯಾಗಿದೆ. ಮಗುವೂ ಇದೆ ಎಂದು ನಂಬಿದ್ದಾರೆ. ಆದರೆ, ಪಲ್ಲವಿ ಅವರು ಸಿಂಗಲ್ ಆಗಿದ್ದು ಯಾವುದೇ ಕಾರಣಕ್ಕೂ ಮಿಂಗಲ್ ಆಗಲು ತಯಾರಿಲ್ಲ.

ಒಂಟಿಯಾಗಿಯೇ ಇರಲು ಬಯಸುತ್ತಾರಂತೆ. ಸಿಂಗಲ್ ಆಗಿರುವುದೇ ಬೆಸ್ಟ್. ನನಗೆ ಹೀಗಿರುವುದಕ್ಕೇ ಇಷ್ಟ ಎಂದು ಹೇಳಿದ್ದಾರೆ. ಒಟ್ನಲ್ಲಿ ಪಲ್ಲವಿ ಅವರಿಗೆ ಮದುವೆಯಾಗಿದೆ ಎಂದು ನಂಬಿದ್ದವರಿಗೆ ಈಗ ಸತ್ಯ ಗೊತ್ತಾಗಿದೆ.

More from Filmibeat

English summary
kannada serial actress pallavi gowda serials, films, and her other details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X