ಪರಭಾಷೆಯಿಂದ ಮತ್ತೆ ಕನ್ನಡ ಕಿರುತೆರೆಗೆ ಮರಳುತ್ತಿರುವ ನಟಿಯರು..!

By ಪ್ರಿಯಾ ದೊರೆ

ಒಬ್ಬರ ಹಿಂದೆ ಮತ್ತೊಬ್ಬರಂತೆ ಕನ್ನಡ ನಟಿಯರು ಬೇರೆ ಭಾಷೆ ಕಡೆ ಹೆಜ್ಜೆಯಿಡುವುದು ಹೊಸತೇನೂ ಅಲ್ಲ. ಕನ್ನಡದ ಹಲವು ನಟಿಯರು ಪರಭಾಷಾ ಸಿನಿಮಾ ಹಾಗೂ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕೆಲವರು ಮೊದಲು ಕನ್ನಡದಲ್ಲಿ ನಟಿಸಿ ನಂತರ ಪರಭಾಷೆಯತ್ತ ಮುಖ ಮಾಡಿದ್ರೆ, ಇನ್ನು ಕೆಲವರು ನೇರವಾಗಿ ಪರಭಾಷೆಯ ಮೂಲಕವೇ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಇತ್ತೀಚೆಗಂತೂ ಕನ್ನಡ ಕಿರುತೆರೆಯ ನಟಿಯರು ನೆರೆ ರಾಜ್ಯಗಳ ನಟನಾ ಲೋಕದಲ್ಲೇ ಸೆಟಲ್ ಕೂಡ ಆಗಿದ್ದಾರೆ. ಈ ನಡುವೆ ಪರಭಾಷೆಯಲ್ಲಿರುವ ಕೆಲ ನಟಿಯರು ಮರಳಿ ಕನ್ನಡಕ್ಕೆ ಆಗಮಿಸಿದ್ದಾರೆ.

written-update-on-kannada-tv-actress-come-back

ಮುದ್ದು ಸೊಸೆಯಾಗಿ ಮರಳಿದ ಪ್ರತಿಮಾ

ಕನ್ನಡ ಕಿರುತೆರೆಯ ಸಾಕಷ್ಟು ಕಲಾವಿದರು ಪರಭಾಷೆಗಳಲ್ಲಿ ಕಮಾಲ್ ಮಾಡುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂನ ಕಿರುತೆರೆಯಲ್ಲಿ ಕನ್ನಡದ ಕಲಾವಿದರೆ ಹೆಚ್ಚಿದ್ದಾರೆ. ಕೆಲ ಯುವ ನಟ-ನಟಿಯರು ಕೂಡ ಪರಭಾಷೆಗಳತ್ತ ಮುಖ ಮಾಡುತ್ತಿದ್ದಾರೆ. ಇವರಲ್ಲಿ ಇತ್ತೀಚೆಗೆ ಕೆಲವರು ಧಾರಾವಾಹಿಗಳ ಮೂಲಕ ಮತ್ತೆ ಕನ್ನಡ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಸದ್ಯ ಅಂತರಪಟ್, ದೊರೆಸಾನಿ ಧಾರಾವಾಹಿಗಳಲ್ಲಿ ನಟಿಸಿದ ನಟಿ ಪ್ರತಿಮಾ ಅವರು ತೆಲುಗು ಅಂಗಳದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿನ ಸಿವಾಂಗಿ ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರತಿಮಾ ಅವರು ಇದೀಗ ಎರಡು ದೋಣಿ ಮೇಲೆ ಕಾಲಿಡಲು ನಿರ್ಧರಿಸಿದ್ದಾರೆ. ಹೀಗಾಗಿ ಅತೀಶೀಘ್ರದಲ್ಲಿ ಪ್ರಸಾರವಾಗಲಿರುವ ಕನ್ನಡದ ಹೊಸ ಧಾರಾವಾಹಿ ಮುದ್ದು ಸೊಸೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮುದ್ದು ಸೊಸೆ ಧಾರಾವಾಹಿ ಪ್ರಸಾರವದ ದಿನಾಂಕ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

ಕನ್ನಡಕ್ಕೆ ಮರಳಿ ಬಂದ ಚೈತ್ರಾ

ಇನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶಾರದೆ ಎಂಬ ಹೊಸ ಧಾರಾವಾಹಿ ಶುರುವಾಗಿದೆ. ಇದರಲ್ಲೂ ಕಾಣಿಸಿಕೊಂಡಿರುವ ನಟಿ ಚೈತ್ರಾ ಸಕ್ಕೇರಿ ಅವರು ಕನ್ನಡದವರೇ. ಆದರೆ, ಈ ಹಿಂದೆ ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ನಟಿ ಚೈತ್ರಾ ಸಕ್ಕೇರಿ ಅವರು ಈ ಹಿಂದೆ ನಯನತಾರ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ತೆಲುಗಿನ ದೇವತಾಲಾರ ದೀವಿಂಚಂಡಿ ಸೀರಿಯಲ್ ಗೆ ಬಣ್ಣ ಹಚ್ಚಿದರು. ತದನಂತರ ತಮಿಳು ಸೆಲ್ವಿ ಎಂಬ ತಮಿಳು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಶಾರದೆ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ಪರಭಾಷೆಯಲ್ಲಿ ಕಮಾಲ್ ಮಾಡಿದ ನಿಶಾ & ದುರ್ಗಶ್ರೀ

ಇನ್ನು ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಧು ಧಾರಾವಾಹಿಯ ನಾಯಕಿ ಕೂಡ ಮೂಲತಃ ಕನ್ನಡದವರೇ. ನಟಿ ದುರ್ಗಶ್ರೀ ಅವರು ಈ ಮೊದಲು ನೇತ್ರಾವತಿ ಸೀರಿಯಲ್ ನಲ್ಲಿ ನಟಿಸಿ ಬಳಿಕ ಪರಭಾಷೆಯತ್ತ ಮುಖ ಮಾಡಿದ್ದರು. ತೆಲುಗಿನ ವೈಷ್ಣವಿ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಮಧುರ ನಗರಿಲೋ ಹಾಗೂ ಅರ್ಧಾಂಗಿ ಸೀರಿಯಲ್ ನಲ್ಲೂ ಕಾಣಿಸಿಕೊಂಡಿದ್ದರು. ಇದೀಗ ವಧು ಧಾರಾವಾಹಿ ಮೂಲಕ ಮರಳಿ ಬಂದಿದ್ದಾರೆ. ಇನ್ನು ನಟಿ ನಿಶಾ ರವಿಕೃಷ್ಣನ್ ಅವರ ಬಗ್ಗೆ ಹೇಳುವುದೇ ಬೇಕಿಲ್ಲ. ಕನ್ನಡದಲ್ಲಿ ಪ್ರಸಾರವಾದ ಗಟ್ಟಿಮೇಳ ಧಾರಾವಾಹಿ ಮೂಲಕ ಅಭಿಮಾನಿಗಳ ಮನ ಗೆದ್ದ ನಟಿ ತೆಲುಗಿನಲ್ಲೂ ಕಮಾಲ್‌ ಮಾಡಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಎರಡು ಮೂರು ಧಾರಾವಾಹಿಯಲ್ಲಿ ನಟಿಸಿದ್ದರು, ಸದ್ಯ ಅಮ್ಮಾಯಿಗಾರು ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಇದರಲ್ಲಿ ನಟಿಸುತ್ತಲೇ ಈಗ ಅಣ್ಣಯ್ಯ ಧಾರಾವಾಹಿ ಮೂಲಕ ಮತ್ತೆ ಕನ್ನಡಾಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.

ತೆಲುಗು ಲೋಕದಲ್ಲಿ ಕನ್ನಡದ ಪ್ರೀತಿ

ಇನ್ನು ತೆಲುಗು ಹಾಗೂ ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನ ಗೆದ್ದಿರುವ ನಟಿ ಪ್ರೀತಿ ಶ್ರೀನಿವಾಸ್ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿದ್ದಾರೆ. ಸರಸ್ವತಿ-ಲಕ್ಷ್ಮೀ ಪ್ರಿಯೆ, ಜೀವನ ಚೈತ್ರ, ವರಲಕ್ಷ್ಮಿ ಸ್ಟೋರ್ಸ್ ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ತೆಲುಗಿನ ಅಂಗಳದಲ್ಲಿ ಸೆಟಲ್ ಆಗಿದ್ದಾರೆ. ತೆಲುಗಿನಲ್ಲಿ ಅನ್ನಪೂರ್ಣ, ರಾಮ ಸೀತಾ ಎಕ್ಕಡ, ಗಂಗಮಂಗ, ಪಡಮಟ್ಟಿ ಸಂಧ್ಯಾರಾಗಂ, ಜಗದ್ಧಾತ್ರಿ, ಝಾನ್ಸಿ ಸೀರಿಯಲ್ ನಲ್ಲಿ ನಟಿಸಿದ್ದು, ಸದ್ಯ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X