ಕಿರುತೆರೆಯಲ್ಲಿ ಹೆಸರು ಮಾಡಿದ ಈ ನಟಿಯರು ಯಾರು ಬಲ್ಲಿರೇನು? ಇವರ ಹೆಸರು ಹೇಳುವಿರೇನು?
ಇಂದು ಮಕ್ಕಳ ದಿನಾಚಾರಣೆ. ಎಲ್ಲಾ ಶಾಲೆಗಳಲ್ಲೂ ಮಕ್ಕಳ ದಿನಾಚಾರಣೆಯನ್ನು ಶಿಕ್ಷಕ-ಶಿಕ್ಷಕಿಯರು ವಿಭಿನ್ನವಾಗಿ ಆಚರಿಸುತ್ತಾರೆ. ಪುಟಾಣಿಗಳಿಗೆ ಚಾಕಲೇಟ್ ಕೊಟ್ಟು ಸಂಭ್ರಮಿಸುತ್ತಾರೆ.ಕೆಲ ಶಾಲೆಗಳಲ್ಲಿ ಇವತ್ತು ಆಕ್ಟಿವಿಟೀಸ್ ಕೂಡ ಇರುತ್ತದೆ. ಇದೆಲ್ಲವೂ ಶಾಲೆಗೆ ಹೋಗುವಾಗ ಮಾತ್ರವೇ ನಡೆಯುತ್ತದೆ. ಅದೇ ಬೆಳೆದು ದೊಡ್ಡವರಾಗುತ್ತಿದ್ದಂತೆ ಚಿಲ್ಡ್ರೆನ್ಸ್ ಡೇ ಎನ್ನುವುದು ನೆನಪಾಗಿ ಉಳಿಯುತ್ತದೆ. ಹೀಗಿರುವಾಗ ಹಲವರು ತಾವು ಮಕ್ಕಳಿದ್ದಾಗ ಏನೆಲ್ಲಾ ಮಾಡುತ್ತಿದ್ದೆವು. ಹಾಗೂ ಶಾಲೆಯ ದಿನಗಳನ್ನು ಆಗಾಗ ಮೆಲುಕು ಹಾಕುತ್ತಿರುತ್ತಾರೆ. ಇನ್ನು ನಟ-ನಟಿಯರು ಕೂಡ ಅಷ್ಟೇ.
ನಟಿ ರಜಿನಿ ಪುಟಾಣಿ ಇದ್ದಾಗ ಹೇಗಿದ್ದರು ಗೊತ್ತಾ..?
ಇದೀಗ ಕಿರುತೆರೆ ನಟಿಯರು ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಮಕ್ಕಳ ದಿನಾಚಾರಣೆಯ ದಿನ ತಾವು ಮಕ್ಕಳಾಗಿದ್ದಾಗ ಹೇಗಿದ್ದೆವು ಎಂಬ ಫೋಟೋಗಳನ್ನು ನೋಡುತ್ತಾ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಾಲ್ಯದ ಫೊಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಇದು ನಮ್ಮ ಸ್ವೀಟ್ ಮೆಮೋರಿಸ್ ಎಂದು ಬರೆದುಕೊಂಡಿದ್ದಾರೆ. ನಟಿ ರಜಿನಿ ಅವರು ಕೂಡ ತಮ್ಮ ಬಾಲ್ಯದ ದಿನಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ರಜಿನಿ ಅವರು ತಾವು ಶಾಲೆಯ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದು, ದೇವಿಯಂತೆ ಸಿದ್ಧಗೊಂಡಿದ್ದು, ಯೂನಿಫಾರ್ಮ್ ನಲ್ಲಿ ತೆಗೆಸಿಕೊಂಡ ಫೋಟೋ ಹಾಗೂ ಕುಟುಂಬದ ಜೊತೆಗೆ ಚಿಕ್ಕ ವಯಸ್ಸಿನಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

ಎಲ್ಲರ ನೆಚ್ಚಿನ ಲೀಲಾ ಮುದ್ದು ಫೋಟೋ
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕಿ ಲೀಲಾ ಪಾತ್ರದ ಮೂಲಕ ಕಾನಿಸಿಕೊಂಡ ನಟಿ ಮಲೈಕಾ ಟಿ ವಾಸುಪಾಲ್ ಅವರು, ತಮ್ಮ ನಟನೆಯ ಮೂಲಕವೇ ವೀಕ್ಷಕರ ಮನೆ ಗೆದ್ದಿದ್ದರು. ಅಲ್ಲದೇ, ಉಪಾದ್ಯಕ್ಷ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿ ಸದ್ಯ ಕ್ಯಾಮರಾದಿಂದ ಬ್ರೇಕ್ ಪಡೆದಿದ್ದಾರೆ. ಇಂದು ಮಕ್ಕಳ ದಿನಾಚಾರಣೆ ಹಿನ್ನೆಲೆ ತಮ್ಮ ಬಾಲ್ಯದ ಫೊಟೋವನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
ಅಪ್ಪನ ತೋಳಲ್ಲಿ ನಗುತ್ತಿರುವ ನಟಿ ಆಶಾ
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಆಶಾ ಅಯ್ಯನಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಆಗಾಗ ಮಧುಮಗಳಂತೆ ಸಿಂಗರಿಸಿಕೊಂಡು ವಿವಿಧ ಭಂಗಿಯಲ್ಲಿ ಫೋಟೋಗಳನ್ನು ತೆಗೆಸಿಕೊಳ್ಳುವ ಆಶಾ ಅವರು ಸಾಕಷ್ಟು ರೀಲ್ಸ್ ಗಳನ್ನು ಕೂಡ ಮಾಡುತ್ತಿರುತ್ತಾರೆ. ಇದೀಗ ಮಕ್ಕಳ ದಿನಾಚಾರಣೆ ಹಿನ್ನೆಲೆ ತಮ್ಮ ಬಾಲ್ಯದ ಫೋಟೋವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.
ಗುಂಡಮ್ಮನ ಬಾಲ್ಯದ ನೆನಪು
ಇನ್ನು ಬ್ರಹ್ಮಗಂಟು ಧಾರಾವಾಹಿ ಮೂಲಕ ಗೀತಾ ಭಾರತಿ ಭಟ್ ಕಿರುತರೆಯಲ್ಲಿ ಕಮಾಲ್ ಮಾಡಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗುಂಡಮ್ಮ ಎಂದೇ ಚಿರಪರಿಚಿತರಾಗಿದ್ದಾರೆ. ಇದಲ್ಲದೇ ಹಾಡುಗಾರ್ತಿಯಾಗಿರುವ ಗೀತಾ ಅವರು ಕೆಲ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ರವಿಕೆ ಪ್ರಸಂಗ ಎಂಬ ಕಾಮಿಡಿ ಸಿನಿಮಾದಲ್ಲಿ ನಟಿಸಿರುವ ಗೀತಾ ಅವರು ಇದೀಗ ತಮ್ಮ ಬಾಲ್ಯದ ಫೊಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ತಂದೆ-ತಾಯಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಬಾಲ್ಯವನ್ನು ಮಿಸ್ ಮಾಡಿಕೊಳ್ಳುವ ಗಗನಾ
ನಟಿ ಗಗನಾ ಕುಂಚಿ ಅವರು ಬಾಲ್ಯದಿಂದಲೂ ಬಣ್ಣದ ಲೋಕದಲ್ಲಿದ್ದವರು. ಕನ್ನಡ ಕಿರುತೆರೆಯ ದೊಡ್ಮನೆ ಸೊಸೆ, ಗಟ್ಟಿಮೇಳ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಸಿನಿಮಾಗಳಿಗೂ ಬಣ್ಣ ಹಚ್ಚಿರುವ ನಟಿ ಗಗನಾ ಅವರು ಸದ್ಯ ಕಳೆದ ಒಂದು ವರ್ಷದಿಂದ ಮೇಕಪ್ ಗೆ ರೆಸ್ಟ್ ನೀಡಿದ್ದಾರೆ. ಇಂದು ತಮ್ಮ ಬಾಲ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟಿ, ನಾನು ಮಗುವಾಗಿದ್ದ ರೀತಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇವರಷ್ಟೇ ಅಲ್ಲದೇ, ಇನ್ನು ಹಲವು ನಟಿಯರು ತಮ್ಮ ಬಾಲ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಖುಷಿ ಪಟ್ಟಿದ್ದಾರೆ.


Click it and Unblock the Notifications











