Rajani Praveen ; ಸುಪ್ರೀತಾ ಅಲಿಯಾಸ್ ರಜನಿ ಪ್ರವೀಣ್ ಗೆ ಇಂದು ಸ್ಪೆಷಲ್ ಡೇ..!

By ಪ್ರಿಯಾ ದೊರೆ

ಇವತ್ತು ಲಕ್ಷ್ಮೀಗೆ ಸಪೋರ್ಟ್ ಮಾಡುತ್ತಾ ಕಾವೇರಿ ನಡೆಯನ್ನು ಹೀಯಾಳಿಸುವ ಸುಪ್ರೀತಾ ಅಲಿಯಾಸ್ ನಟಿ ರಜನಿ ಪ್ರವೀಣ್ ಅವರ ಹುಟ್ಟು ಹಬ್ಬ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮೊದಲು ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡು ಈಗ ಕಾವೇರಿಗೆ ಮಾತ್ರ ವಿಲನ್ ಆಗಿರುವ ಸುಪ್ರೀತಾ ಅವರ ನಿಜವಾದ ಹೆಸರು ರಜನಿ ಪ್ರವೀಣ್. ರಜನಿ ಪ್ರವೀಣ್ ಅವರು ತಾನು ನಟಿಯಾಗಬೇಕು ಎಂಬ ಆಸೆಯನ್ನು ಎಂದೂ ಹೊಂದಿದವರಲ್ಲ. ಆದರೂ ಕೆರಿಯರ್ ಹುಡುಕಾಟದಲ್ಲಿದ್ದಾಗ ಕಂಡಿದ್ದು ನಟನೆಯಂತೆ.

ಟೀಚರ್ ಆಗಿದ್ದ ರಜನಿ ಪ್ರವೀಣ್

ರಜನಿ ಪ್ರವೀಣ್ ಅವರ ಮನೆಯಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಅಂತೆ. ಓದುವಾಗ ಯಾವುದೇ ಚಟುವಟಿಕೆಗಳಲ್ಲೂ ಭಾಗಿಯಾಗದ ರಜನಿ ಅವರು ಓದು ಬಿಟ್ಟರೆ ಸ್ಪೋರ್ಟ್ಸ್ ನಲ್ಲಿ ಇದ್ದದ್ದಷ್ಟೇ ಅಂತೆ. ಆರ್ಥೊಡಕ್ಸ್ ಫ್ಯಾಮಿಲಿ ಆಗಿದ್ದರು ಕೂಡ ರಜನಿ ಅವರು ಟಾಮ್ ಬಾಯ್ ನಂತೆ ಇರುತ್ತಿದ್ದರಂತೆ. ಓದು ಮುಗಿಸಿ ಕೆಲಸದ ಬಗ್ಗೆ ಯೋಚಿಸುವಾಗ ಟೀಚಿಂಗ್ ಜಾಬ್ ಅನ್ನು ಒಪ್ಪಿಕೊಳ್ಳಬೇಕಾಯ್ತಂತೆ. ಟೀಚಿಂಗ್ ನಲ್ಲಿ ಸರ್ಕಾರಿ ಕೆಲಸ ಪಡೆದು ನೆಮ್ಮದಿಯಾಗಿರುವುದಷ್ಟೇ ಆಲೋಚನೆ ಇತ್ತಂತೆ. ಅಷ್ಟರಲ್ಲಿ ರಜನಿ ಅವರ ಮದುವೆಯೂ ನಡೆದು ಹೋಯಿತಂತೆ. ಮದುವೆಯಾದ ಬಳಿಕ ಇವರ ಪತಿ ರಜನಿ ಅವರಿಗೆ ಎಲ್ಲಾ ವಿಚಾರಕ್ಕೂ ಫುಲ್ ಸಪೋರ್ಟ್ ಮಾಡುತ್ತಿದ್ದರಂತೆ

written-update-on-laksmi-baramma-serial-actress-rajani-praveen

ಪತಿಯ ಸಪೋರ್ಟ್ ನಿಂದ ನಟನೆಗೆ ಎಂಟ್ರಿ

ನಟಿ ರಜನಿ ಪ್ರವೀಣ್ ಅವರು ಉಷಾ ಭಂಡಾರಿ ಅವರ ನಟನಾ ಶಾಲೆಗೆ ಸೇರಿಕೊಂಡು ಕಾಂಟ್ಯಾಂಕ್ಟ್ ಬೆಳೆಸಿಕೊಂಡರು. ನಂತರ ರಂಗಭೂಮಿ ಮೂಲಕ ಆಡಿಷನ್ ಗಳನ್ನು ನೀಡಿ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಹರ ಹರ ಮಹಾದೇವ ಇವರ ನಟನೆಯ ಮೊದಲ ಧಾರಾವಾಹಿ. ಎಂದೂ ಒಬ್ಬರೇ ಮನೆಯಿಂದ ಆಚೆ ಹೋಗದ ರಜನಿ ಅವರು ಮೊದಲ ಬಾರಿಗೆ ಈ ಧಾರಾವಾಹಿಗಾಗಿ ಮುಂಬೈಗೆ ಶೂಟಿಂಗ್ ಗೆಂದು ಹೋಗಿದ್ದರಂತೆ. ರಜನಿ ಅವರ ಪತಿ ನಟನೆಗೂ ತುಂಬಾ ಸಪೋರ್ಟ್ ಮಾಡುತ್ತಾರಂತೆ ರಜನಿ ಅವರಿಗೂ ಸುಮ್ಮನೆ ಕೂಡುವುದು ಇಷ್ಟವಿಲ್ಲವಂತೆ ಹಾಗಾಗಿ ಶೂಟಿಂಗ್ ಇದ್ದರೆ, ಖುಷಿ ಆಗುತ್ತದೆ ಎಂದು ಹೇಳುತ್ತಾರೆ.

ಹೆಚ್ಚು ನೆಗೆಟಿವ್ ಪಾತ್ರಗಳಲ್ಲಿ ನಟನೆ

ಒಮ್ಮೆ ರಜನಿ ಅವರಿಗೆ ವಿನು ಬಳಂಜ ಅವರು ನಿಮಗೆ ನೆಗೆಟಿವ್ ಶೇಡ್ ಸೂಟ್ ಆಗುತ್ತೆ ಎಂದು ಹೇಳಿದ್ದರಂತೆ. ಇಂದಿನವರೆಗೂ ರಜನಿ ಅವರು ನೆಗೆಟಿವ್ ಶೇಡ್ ನಲ್ಲಿ ನಟಿಸುತ್ತಿದ್ದಾರಂತೆ. ಹರ ಹರ ಮಹಾದೇವ್, ಮಹಾದೇವಿ, ರಾಜಿ, ಅಮ್ಮನ್ ಸೇರಿದಂತೆ ಒಟ್ಟು 7 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಅಮ್ಮನ್ ಧಾರಾವಾಹಿ ತಮಿಳಿನದ್ದು, ಮಹಾದೇವಿ ಅಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು, ಇದೊಂದೆ ಪಾಸಿಟಿವ್ ರೋಲ್ ಆಗಿತ್ತಂತೆ.

written-update-on-laksmi-baramma-serial-actress-rajani-praveen

ವರ್ಕೌಟ್ ಬಗ್ಗೆ ಕಾಳಜಿ ಹೊಂದಿರುವ ನಟಿ

ಇನ್ನು ಇವರಿಗೆ ಮದುವೆಯಾಗಿ 11 ವರ್ಷವಾಗಿದ್ದು, 9-10 ವರ್ಷದ ಮಗನಿದ್ದಾನೆ. ಪ್ರೆಗ್ನೆನ್ಸಿಯಲ್ಲಿ 120 ಕೆಜಿ ಇದ್ದ ರಜನಿ ಅವರು ವರ್ಕೌಟ್ ಮಾಡಿ ಈಗ ಸ್ಲಿಮ್ ಲುಕ್ ಗೆ ಬಂದರಂತೆ. ರಜನಿ ಅವರಿಗೆ ವರ್ಕೌಟ್ ಮಾಡುವುದು, ಬಾಡಿ ಫಿಟ್ ಆಗಿರುವುದು, ತಮ್ಮ ಆರೋಗ್ಯಕ್ಕಾಗಿ ಡಯಟ್ ಮಾಡುವುದು ಎಂದರೆ ಇಷ್ಟವಂತೆ. ಸದ್ಯ ಇಂದು ಅವರ ಹುಟ್ಟು ಹಬ್ಬವಿದ್ದು, ಸಹ ಕಲಾವಿದರು ಸೇರಿದಂತೆ ಎಲ್ಲರೂ ವಿಶ್ ಮಾಡಿ ಶುಭ ಹಾರೈಸಿದ್ದಾರೆ.

More from Filmibeat

English summary
lakshmi baramma serial actress rajani Praveen small screen and personal life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X