Maja Talkies ; ಯೋಗರಾಜ್ ಭಟ್ರ ಜೊತೆ ಸೃಜಾ ಮಜಾ,ಯಾವಾಗ ಶುರುವಾಗುತ್ತೆ ಮಜಾ ಟಾಕೀಸ್..?
ಹತ್ತು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಮಿಡಿ ಶೋ ಒಂದು ಪ್ರಾರಂಭವಾಗಿತ್ತು. ಸೃಜನ್ ಲೋಕೇಶ್ ಹೊಸ ಸಾಹಸಕ್ಕೆ ಕೈ ಹಾಕಿದ್ದರು. ಮಜಾ ಟಾಕೀಸ್ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಸೂಪರ್ ಹಿಟ್ ಆಯ್ತು. ಅದರಲ್ಲಿ ಒನ್ ಆಂಡ್ ಒನ್ಲಿ ವರಲಕ್ಷ್ಮೀ ಹಾಗೂ ರಾಣಿ ಪಾತ್ರಗಳು ಎಲ್ಲರಿಗೂ ಇಷ್ಟವಾಯ್ತ.ಯಾವುದಾದರು ಒಂದು ಎಪಿಸೋಡ್ನಲ್ಲಿ ಅಪರ್ಣಾ ಕಾಣಿಸಿಕೊಳ್ಳದಿದ್ದರೆ, ವೀಕ್ಷಕರು ಬೇಸರ ಮಾಡಿಕೊಳ್ಳುವಷ್ಟು ವರಲಕ್ಷ್ಮೀ ಪಾತ್ರವನ್ನು ಅಪರ್ಣಾ ಅವರು ಅದ್ಭುತವಾಗಿ ನಿರ್ವಹಿಸಿದ್ದರು.
ಹತ್ತು ವರ್ಷದ ಬಳಿಕ ಹೊಸ ಸೀಸನ್
ಆದರೆ, ಹತ್ತು ವರ್ಷಗಳ ಬಳಿಕ ಈಗ ಮತ್ತೆ ಮಜಾ ಟಾಕೀಸ್ ಕಾರ್ಯಕ್ರಮ ಶುರುವಾಗುತ್ತಿದೆ. ಆದರೆ, ಈ ಸಲ ವರಲಕ್ಷ್ಮೀ ಪಾತ್ರವನ್ನು ಯಾರು
ನಿಭಾಯಿಸುತ್ತಾರೋ ಗೊತ್ತಿಲ್ಲ. ಅಪರ್ಣ ಅವರು ನಮ್ಮನ್ನೆಲ್ಲಾ ಅಗಲಿ ಅದಾಗಲೇ ಆರೇಳು ತಿಂಗಳುಗಳೇ ಕಳೆದಿದೆ. ಈಗ ಮಜಾ ಟಾಕೀಸ್ ಅನ್ನು ಸೃಜನ್ ಲೋಕೇಶ್ ಪುನಃ ಹೊಸ ಸೀಸನ್ ಶುರು ಮಾಡುತ್ತಿದ್ದಾರೆ. ಮಜಾ ಟಾಕೀಸ್ ನ ಮೊದಲ ಸೀಸನ್ ಮುಗಿದು ಹತ್ತು ವರ್ಷ ಕಳೆಯುತ್ತಿದೆ. ಈ ಸಂದರ್ಭದಲ್ಲಿ ಹೊಸ ಸೀಸನ್ ಪ್ರಾರಂಭವಾಗುತ್ತಿದೆ. ಮೊದಲ ಸೀಸನ್ ಮುಗಿದ ಬಳಿಕ ಕೆಲ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದ ಸೃಜನ್ ಲೋಕೇಶ್ ಅವರು, ನಂತರದ ದಿನಗಳಲ್ಲಿ ಹಲವು ಕಾರ್ಯಕ್ರಮಗಳಿಗೆ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಹೀಗೆ ಬ್ಯುಸಿಯಾಗಿದ್ದ ಸೃಜನ್ ಅವರು ಈಗ ಬಿಡುವು ಮಾಡಿಕೊಂಡು ಮತ್ತೆ ಹೊಸ ಸೀಸನ್ ಪ್ರಾರಂಭಿಸಿದ್ದಾರೆ.

ಹಳಬರಿಲ್ಲದ ಹೊಸ ಸೀಸನ್
ಈ ಬಾರಿ ಮಜಾ ಟಾಕೀಸ್ ಕುಟುಂಬವೂ ದೊಡ್ಡದಾಗಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ ವರಲಕ್ಷ್ಮೀಯಾಗಿದ್ದ ಅಪರ್ಣಾ, ರಾಣಿಯಾಗಿ ಕಾಣಿಸಿಕೊಂಡಿದ್ದ ಶ್ವೇತಾ ಚೆಂಗಪ್ಪ, ಮುದ್ದು ಸರೋಜಾ ಎಂದೇ ಪ್ರಸಿದ್ಧಿಯಾಗಿದ್ದ ಪವನ್, ಭಟ್ಟರಾಗಿದ್ದ ವಿ ಮನೋಹರ್, ಮಂಡ್ಯ ರಮೇಶ್ , ಇಂದ್ರಜಿತ್ ಲಂಕೇಶ್ ಸೇರಿದಂತೆ ಇನ್ನು ಕೆಲವರು ಇದ್ದರು. ಅದೇ ಈ ಬಾರಿಯ ಮಜಾ ಟಾಕೀಸ್ ನಲ್ಲಿ ಯಾರು ಯಾರು ಇರಲಿದ್ದಾರೆ ಎಂಬ ವಿಚಾರ ಇದೀಗ ರಿವೀಲ್ ಆಗಿದೆ. ಹೊಸ ಟೀಂ ಅನ್ನು ಸೃಜನ್ ಅವರು ಸಿದ್ಧಪಡಿಸಿಕೊಂಡಿದ್ದಾರೆ. ಮಜಾ ಟಾಕೀಸ್ ನ ಮತ್ತೊಂದು ಪ್ರೊಮೋ ರಿಲೀಸ್ ಆಗಿದೆ. ಇದರಲ್ಲಿ ಯಾರೆಲ್ಲಾ ಇದ್ದಾರೆ ಎಂಬುದನ್ನು ಈ ಪ್ರೊಮೋದಲ್ಲಿ ತೋರಿಸಲಾಗಿದೆ.
ಸೃಜನ್ ಹೊಸ ಟೀಂನಲ್ಲಿ ಯಾರಿದ್ದಾರೆ..?
ಬಿಗ್ ಬಾಸ್ ಹಾಗೂ ಅಗ್ನಿಸಾಕ್ಷಿ ನಟಿ ಪ್ರಿಯಾಂಕಾ ಶಿವಣ್ಣ, ಗಿಚ್ಚ ಗಿಲಿಗಿಲಿಯ ಹಾಸ್ಯ ನಟಿ ಪ್ರಿಯಾಂಕಾ ಕಾಮತ್, ಯೋಗರಾಜ್ ಭಟ್, ಕುರಿ ಪ್ರತಾಪ್, ಚಂದ್ರಪ್ರಭ, ವಿಶ್ವಾಸ್, ತುಕಾಲಿ ಸಂತೋಶ್, ಶಿವು, ವಿನೋದ್ ಗೊಬ್ರಗಾಲ ಮಜಾ ಟಾಕೀಸ್ ಪ್ರಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಈ ಹೊಸ ಪ್ರೊಮೋದಲ್ಲಿ ಯಾವಾಗಿನಿಂದ ಶುರುವಾಗಲಿದೆ ಎಂಬುದನ್ನು ಕೂಡ ಹೇಳಲಾಗಿದೆ. ಫೆಬ್ರವರಿ 1ರಿಂದ ಶುರುವಾಗಲಿದೆ. ಇನ್ನು ಸ್ಲಾಟ್ ಸಮಯವನ್ನು ಮಾತ್ರ ತಿಳಿಸಿಲ್ಲ.
ಮಜಾ ಟಾಕೀಸ್ ನೋಡಲು ಕಾಯುತ್ತಿರುವ ವೀಕ್ಷಕರು
ಬಿಗ್ ಬಾಸ್ ಸೀಸನ್ ಅಂತ್ಯವಾಗುವ ಸಮಯ ಬಂದಿದೆ. ಇದೇ ತಿಂಗಳು 25-26ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹಾಗಾಗಿ ಫೆಬ್ರವರಿ ತಿಂಗಳ ಮೊದಲ ವಾರದಿಂದಲೇ ಮಜಾ ಟಾಕೀಸ್ ಪ್ರಾರಂಭವಾಗಲಿದೆ. ಈಗಿರುವ ಹೊಸ ಟೀಂನಲ್ಲಿ ನಟಿ ಪ್ರಿಯಾಂಕ ಶಿವಣ್ಣ ಹೊರತು ಪಡಿಸಿ ಮಿಕ್ಕವರೆಲ್ಲಾ ಕಾಮಿಡಿ ಶೋಗಳಿಂದಲೇ ಫೇಮಸ್ ಆಗಿದ್ದಾರೆ. ಇನ್ನು ವಿ ಮನೋಹರ್ ಅವರ ಜಾಗವನ್ನು ಯೋಗರಾಜ್ ಭಟ್ ಅವರು ತುಂಬಲಿದ್ದು, ಈ ಹೊಸ ಸೀಸನ್ ಅನ್ನು ನೋಡಲು ವೀಕ್ಷಕರು ಕಾದು ಕುಳಿತಿದ್ದಾರೆ.


Click it and Unblock the Notifications











