Radha Bhagavati ; ಮನೆ ಬದಲಿಸಿದ ಮಲ್ಲಿ,ನೀವು ಇಲ್ಲಿಯೇ ಇರಬೇಕಿತ್ತು ಎಂದ ಪ್ರೇಕ್ಷಕರು-ರಾಧಾಗೆ ಫುಲ್ ಡಿಮ್ಯಾಂಡ್..!

By ಪ್ರಿಯಾ ದೊರೆ

ಭಾರ್ಗವಿ LLB ಧಾರಾವಾಹಿಯೂ ಇಂದಿನಿಂದ ಶುರುವಾಗಲಿದೆ. ಇಷ್ಟು ದಿನಗಳ ಕಾಲ ನಟಿ ರಾಧಾ ಭಾಗವತಿ ಅವರು ಮಲ್ಲಿ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಹಳ್ಳಿ ಹುಡುಗಿ, ದಡ್ಡಿಯಂತೆ ನಟಿಸಿ, ಅಕ್ಕೋರೆ ಅಕ್ಕೋರೆ ಎಂದು ಹೇಳುತ್ತಲೇ ಮಾತು ಶುರು ಮಾಡುತ್ತಿದ್ದ ಮಲ್ಲಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ರಾಧಾ ಭಾಗವತಿ ಅವರು ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯಾಗಿ ನಟಿಸುತ್ತಿದ್ದರು. ಆದರೆ ಇನ್ನು ಮುಂದೆ ಭಾರ್ಗವಿ LLB ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಲ್ಲಿ ಪಾತ್ರಕ್ಕಾಗಿ ಹೆಚ್ಚಿದ ಬೇಡಿಕೆ

ನಟಿ ರಾಧಾ ಭಗವತಿ ಅವರು ಪ್ರಮೋಷನ್ ಪಡೆದು ನಾಯಕಿಯಾಗಿ ನಟಿಸುತ್ತಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಇದೆ. ಆದರೂ ಕೂಡ ಮಲ್ಲಿಯನ್ನು ಇನ್ನು ಮುಂದೆ ನೋಡಲು ಸಾಧ್ಯವಿಲ್ಲ ಎಂದು ಕೂಡ ಬೇಸರ ಮಾಡಿಕೊಂಡಿದ್ದಾರೆ. ನಟಿ ರಾಧಾ ಅವರಿಗೆ ಸಾಕಷ್ಟು ನೆಟ್ಟಿಗರು ಮಲ್ಲಿಯಾಗಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಕಮೆಂಟ್ ಗಳ ಮೇಲೆ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ನೀವು ಮತ್ತೆ ಮಲ್ಲಿಯಾಗಿ ಬರೋದಿಲ್ವಾ, ಭಾರ್ಗವಿ ನೋ - ಮಲ್ಲಿ ಎಸ್, ಮಲ್ಲಿ ನೀನ್ ಏನ್ ಇಲ್ಲಿ. ನೀನು ಇಲ್ಲ ಅಂತ ಜೈದೇವ್ ದಿಯಾ ಜೊತೆ ಸುತ್ತುತಾ ಇದಾನೆ. ಮಲ್ಲಿ ತಾತನ ಮನೆಯಿಂದ ಒಳ್ಳೆ ಗೆಟಪ್ ನಲ್ಲಿ ಬರ್ತೀರಾ ಅಂತ ಕಾಯ್ತಾ ಇದೀವಿ. ಆದರೆ ನೀವು ಇಲ್ಲಿದ್ದೀರಾ ಎಂದೆಲ್ಲಾ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

written-update-on-malli-character-in-amruthadhaare

ಮಲ್ಲಿಯ ನಟನೆಯನ್ನು ಮೆಚ್ಚಿದ ವೀಕ್ಷಕರು

ಇನ್ನು ಇದೇ ಧಾರಾವಾಹಿಯಲ್ಲಿ ರಾಧಾ ಅವರ ತಂದೆಯಾಗಿ ಹಿರಿಯ ನಟ ಹನುಮಂತೇ ಗೌಡ್ರು ಕಾಣಿಸಿಕೊಳ್ಳುತ್ತಿದ್ದು, ಇವರು ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಂದ್ರ ಭೂಪತಿಯಾಗಿ ನೆಗೆಟಿವ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಈಗ ವೀಕ್ಷಕರು ರಾಜೇಂದ್ರ ಭೂಪತಿ ಪಾತ್ರಧಾರಿಯೂ ಬದಲಾಗುತ್ತಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಮಲ್ಲಿ ಮತ್ತು ರಾಜೇಂದ್ರ ಭೂಪತಿ ಜೈದೇವ್ ಗೆ ಚಳ್ಳೆ ಹಣ್ಣು ತಿನ್ನಿಸಿ ಒಂದಾಗಿದ್ದಾರಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಒಟ್ನಲ್ಲಿ ಮಲ್ಲಿ ಪಾತ್ರವನ್ನು ವೀಕ್ಷಕರು ಬಹಳ ಇಷ್ಟ ಪಡುತ್ತಾರೆ ಎಂಬುದು ಇದರಿಂದ ಪಕ್ಕಾ ಆಗಿದೆ.

ರಾಧಾ ಭಾಗವತಿಯ ಪ್ರಾಜೆಕ್ಟ್ ಗಳು

ನಟಿ ರಾಧಾ ಭಾರ್ಗವಿ ಅವರು ಈಗಾಗಲೇ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿಯೂ ಇವರು ನಟಿಸಿದ್ದರು. ರಾಮಾಚಾರಿಯ ತಂಗಿ ಶೃತಿ ಪಾತ್ರವನ್ನು ಮಾಡುತ್ತಿದ್ದರು ನಟಿ ರಾಧಾ ಭಗವತಿ ಅವರು, ಸದ್ಯ ಅಮೃತಧಾರೆ ಸೀರಿಯಲ್ ನಲ್ಲಿ ಮಲ್ಲಿ ಪಾತ್ರದ ಮೂಲಕ ಫೇಮಸ್ ಆಗಿದ್ದಾರೆ. ಇನ್ನು ಅಪಾಯವಿದೆ ಎಚ್ಚರಿಕೆ ಎಂಬ ಸಿನಿಮಾದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕಳೆದ ಶುಕ್ರವಾರವಷ್ಟೇ ರಿಲೀಸ್ ಆಗಿದೆ.

ಭಾರ್ಗವಿ LLB ಧಾರಾವಾಹಿಯ ಪಾತ್ರಗಳು

ಭಾರ್ಗವಿ LLB ಧಾರಾವಾಹಿಯಲ್ಲಿ ನಟ ಮನೋಜ್ ಕುಮಾರ್ ಎಂಬುವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ನಟ ಮನೋಜ್ ಕುಮಾರ್ ಅವರು ಕೂಡ ಕನ್ನಡದವರೇ ಮೂಲತಃ ಮಂಗಳೂರಿನವರು. ಮನೋಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಮಲ್ಲಮ್ಮ ಟಾಕ್ಸ್ ಎಂಬ ಪೇಜ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇನ್ನು ನಾಯಕ ನಾಯಕಿ ಹೊರತು ಪಡಿಸಿ ನಾಯಕಿಯ ತಂದೆ ಪಾತ್ರದಲ್ಲಿ ಹಿರಿಯ ಕಲಾವಿದ ಹನುಮಂತೇಗೌಡ್ರು ನಟಿಸುತ್ತಿದ್ದಾರೆ. ತಾಯಿ ಪಾತ್ರದಲ್ಲಿ ಹಿರಿಯ ನಟಿ ಅರುಣ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯ ಎದುರಾಳಿ ಹಾಗೂ ನಾಯಕನ ತಂದೆಯ ಪಾತ್ರದಲ್ಲಿ ಕೀರ್ತಿಬಾನು ಅವರು ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಯಲ್ಲಿ ನಟಿ ಕೀರ್ತಿ ಭಟ್ ಕೂಡ ಕಾಣಿಸಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X