ಮಾಸ್ಟರ್ ಆನಂದ್ ಪತ್ನಿಯ ಕಾಲಿಗೆ ಏನಾಯ್ತು ? 2 ಕಾಲಿಗೆ ಬ್ಯಾಂಡೇಜ್ ನೋಡಿ ಫ್ಯಾನ್ಸ್ ಶಾಕ್..!
ಮಾಸ್ಟರ್ ಆನಂದ್ ಮಗಳು ವಂಶಿಕಾ ನಮ್ಮಮ್ಮ ಸೂಪರ್ ಸ್ಟಾರ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಕಮಾಲ್ ಮಾಡಿದ್ದಾರೆ. ಮಾಸ್ಟರ್ ಆನಂದ್ ಅವರನ್ನು ವಂಶಿಕಾ ಅಪ್ಪ ಎಂದೇ ಎಲ್ಲರೂ ಗುರುತಿಸುವ ಮಟ್ಟಕ್ಕೆ ಫೇಮಸ್. ವಂಶಿಕಾ ಜೊತೆಗೆ ಈ ರಿಯಾಲಿಟಿ ಶೋಗೆ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಕೂಡ ಕಿರುತೆರೆಗೆ ಎಂಟ್ರಿಕೊಟ್ಟರು. ಅಮ್ಮ ಮಗಳು ಒಂದೇ ಸಲ ಬನ್ಣ ಹಚ್ಚಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡರು.ಮಗಳು ಎಷ್ಟು ಫೇಮಸ್ ಆಗಿದ್ದಾಳೋ ಇತ್ತೀಚೆಗೆ ಅಮ್ಮ ಯಶಸ್ವಿನಿ ಕೂಡ ಅಷ್ಟೇ ಫೇಮಸ್ ಆಗುತ್ತಿದ್ದಾರೆ. ಯಶಸ್ವಿನಿ ಅವರು ಸದ್ಯ ಆಗಾಗ ಸುದ್ದಿಯಲ್ಲಿರುತ್ತಾರೆ.
ಪತಿಯಂತೆ ಆಂಕರಿಂಗ್ ನಲ್ಲಿ ಬ್ಯುಸಿ
ಚಿಕ್ಕ ವಯಸ್ಸಿಗೆ ಮದುವೆಯಾಗಿ, ಇಬ್ಬರು ಮಕ್ಕಳಿಗೆ ತಾಯಿಯಾಗಿರುವ ಯಶಸ್ವಿನಿ ಅವರು ಈ ಫಿಟ್ನೆಸ್ ಕಡೆಗೆ ಹೆಚ್ಚು ಒಲವು ಕೊಟ್ಟಿದ್ದಾರೆ. ಫುಲ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು, ಮಗಳ ಜೊತೆಗೆ ಅಮ್ಮನು ಶೈನ್ ಆಗ್ತಾ ಇದಾರೆ. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಂತು ಅಮ್ಮ ಮಗಳದ್ದೇ ಹವಾ ಜೋರಾಗಿದೆ. ದಿನೇ ದಿನೇ ಫಾಲೋವರ್ಸ್ ಕೂಡ ಹೆಚ್ಚಾಗುತ್ತಿದ್ದಾರೆ. ಲೈಫ್ ನ ಕೂಲ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಇದರ ಜೊತೆಗೆ ಮಾಸ್ಟರ್ ಆನಂದ್ ರೀತಿಯೇ ಪತ್ನಿ ಯಶಸ್ವಿನಿ ಕೂಡ ಆಂಕರಿಂಗ್ ಶುರು ಮಾಡಿದ್ದಾರೆ. ಯೂಟ್ಯೂಬ್ ನಲ್ಲಿ ಪಾಡ್ ಕಾಸ್ಟ್ ಅನ್ನು ಯಶಸ್ವಿನಿ ಅವರು ಶುರು ಮಾಡಿದ್ದಾರೆ. ಇತರೆ ಪಾಡ್ ಕಾಸ್ಟ್ ಗಿಂತಲೂ ಯಶಸ್ವಿನಿ ಶುರು ಮಾಡಿರುವುದು ಕೊಂಚ ವಿಭಿನ್ನವಾಗಿದೆ. ಇದರಲ್ಲಿ ಹೆಚ್ಚು ಕಾಮಿಡಿ ಇದ್ದು, ಕನೆಕ್ಟ್ ಕನ್ನಡ ಎಂಬ ಹೆಸರಿನಲ್ಲಿದೆ.

ಬೇಸರದಲ್ಲಿರುವ ಯಶಸ್ವಿನಿ
ಇದಷ್ಟೇ ಅಲ್ಲದೇ ನಟಿ ಯಶಸ್ವಿನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ರೀಲ್ಸ್ ಗಳನ್ನು ಮಾಡುತ್ತಿದ್ದಾರೆ. ಅಮ್ಮ ಮಗಳು ರೀಲ್ಸ್ ನಲ್ಲಿ ಬ್ಯುಸಿಯಾಗಿದ್ದರೆ, ಅಪ್ಪ ಮಾಸ್ಟರ್ ಆನಂದ್ ಆಂಕರಿಂಗ್ ನಲ್ಲಿ ಬ್ಯುಸಿ. ಇನ್ನು ಮಗ ಓದಿನಲ್ಲಿ ಬ್ಯುಸಿಯಾಗಿದ್ದಾನೆ. ಇನ್ನು ಇದೀಗ ಯಶಸ್ವಿನಿ ಅವರು ಸಮಸ್ಯೆ ಒಂದಕ್ಕೆ ಸಿಲುಕಿದ್ದಾರೆ. ಇದರಿಂದ ಬೇಸರ ಮಾಡಿಕೊಂಡು ಯಾರ ಕೆಟ್ಟ ಕಣ್ಣು ಬಿತ್ತೋ ಎಂದು ಹೇಳಿದ್ದಾರೆ. ಅದೇನೆಂದರೆ ಸದ್ಯ ಯಶಸ್ವಿನಿ ಅವರ ಎರಡೂ ಕಾಲುಗಳಿಗೆ ಬ್ಯಾಂಡೇಜ್ ಬಂದಿದೆ.
ಸಣ್ಣ ಅಪಘಾತದಿಂದ ದೊಡ್ಡ ಸಮಸ್ಯೆ
ಮಾಸ್ಟರ್ ಆನಂದ್ ಕೆಲಸದ ನಿಮಿತ್ತ ಬೆಂಗಳೂರಿನಿಂದ ಹೊರಗಡೆ ಹೋಗಿದ್ದು, ಈ ಸಮಯದಲ್ಲೇ ಯಶಸ್ವಿನಿ ಅವರು ಸ್ಟೀಮ್ ತೆಗೆದುಕೊಳ್ಳುವಾಗ ಅಪಘಾತ ಸಂಭವಿಸಿದೆ. ಕುದಿಯುತ್ತಿದ್ದ ಬಿಸಿ ಬಿಸಿ ನೀರು ಅಕಸ್ಮಾತ್ ಆಗಿ ಯಶಸ್ವಿನಿ ಅವರ ಕಾಲುಗಳ ಮೇಲೆ ಚೆಲ್ಲಿದೆ. ಇದರಿಂದ ಯಶಸ್ವಿನಿ ಅವರಿಗೆ ಕಾಲು ತುಂಬ ಉರಿಯುತ್ತಿದ್ದಕ್ಕೆ ತಕ್ಷಣವೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಬ್ಯಾಂಡೇಜ್ ಹಾಕಿ ಕಳಿಸಿದ್ದಾರೆ. ಸದ್ಯ ಏನೂ ಆಗಿಲ್ಲ ಎಂದುಕೊಂಡಿದ್ದರೆ. ಮಾರನೇಯ ದಿನ ಯಶಸ್ವಿನಿ ಅವರ ಕಾಲುಗಳಲ್ಲಿ ಬೊಬ್ಬೆಗಳು ಎದ್ದಿವೆ.
ಯಶಸ್ವಿನಿ ಕಾಲುಗಳಿಗೆ ಪೆಟ್ಟು
ಇದನ್ನು ತೋರಿಸಲು ಹೋದಾಗ ವೈದ್ಯರು ಮತ್ತೆ ಟ್ರೀಟ್ ಮೆಂಟ್ ಕೊಟ್ಟು ಕಳಿಸಿದ್ದಾರೆ. ಆದರೆ, ಯಶಸ್ವಿನಿ ಅವರು ಬಹಳ ನೋವು ಅನುಭವಿಸಿದ್ದು, ಪತಿ ಮಾಸ್ಟರ್ ಆನಂದ್ ಮನೆಗೆ ಬಂದು ಈಗ ಹೆಂಡತಿಯ ಸೇವೆ ಮಾಡುತ್ತಿದ್ದಾರಂತೆ. ಮನೆ ಕೆಲಸದಿಂದ ಹಿಡಿದು, ಪ್ರತಿಯೊಂದನ್ನೂ ಆನಂದ್ ಅವರೇ ಮಾಡುತ್ತಿದ್ದಾರಂತೆ. ಈ ಬಗ್ಗೆ ಯಶಸ್ವಿನಿ ಅವರೇ ವೀಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಹೀಗಾಗಿದೆ ಎಂದು ಬೇಸರ ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ಯಶಸ್ವಿನಿ ಅವರು ಗುಣಮುಖರಾಗಲಿ.


Click it and Unblock the Notifications











