Naa ninna bidalaare ; ದೆವ್ವಕ್ಕೂ ನಿತ್ಯ ಬಟ್ಟೆ ಬದಲಾಯಿಸುವ ಅವಕಾಶ ಕೊಟ್ಟ ಆ ದೇವಿ ಯಾರು ಗೊತ್ತೇ..?
ಸಾಮಾನ್ಯವಾಗಿ ಎಲ್ಲರ ಮನಸಲ್ಲೂ ದೇವರು ಎಂದರೆ ಪಾಸಿಟಿವ್ ಹಾಗೂ ದೆವ್ವ ಎಂದರೆ ನೆಗೆಟಿವ್. ಇಬ್ಬರೂ ಒಂದು ಕಡೆ ಇರಲು ಸಾಧ್ಯವೇ ಇಲ್ಲ.ದೇವರು ಇರುವ ಕಡೆಗೆ ದೆವ್ವ ಬರಲು ಸಾಧ್ಯವೇ ಇಲ್ಲ. ದೆವ್ವಗಳು ಎಲ್ಲಿ ಬೇಕಿದ್ದರೂ ಇರುತ್ತವೆ. ಆದರೆ, ದೇವಸ್ಥಾನಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ ಎಂಬುದನ್ನು ನಂಬಿದ್ದೇವೆ.
ಆದರೆ, ಈ ನಂಬಿಕೆಯನ್ನು ಮೊದಲ ಬಾರಿಗೆ ಧಾರಾವಾಹಿಯೊಂದು ಬ್ರೇಕ್ ಮಾಡಿದೆ. ಸತ್ತು ಅಲೆದಾಡುತ್ತಿರುವ ಆತ್ಮವೊಂದು ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದಲ್ಲದೇ, ದೇವರ ಬಳಿ ತನ್ನ ಬೇಡಿಕೆಗಳನ್ನು ಇಟ್ಟಿದೆ.

ದೆವ್ವಕ್ಕೂ ದೇವಸ್ಥಾನದಲ್ಲಿ ಜಾಗ
ಅಲ್ಲದೇ ಈ ಆತ್ಮಕ್ಕೆ ದೇವರ ಪ್ರಸಾದ ತಿನ್ನುವ ಅವಕಾಶವಿದೆ. ಜೊತೆಗೆ ಈ ಆತ್ಮ ಈಗ ದೇವರಿಗಾಗಿ ಬಳಸಿರುವ ಬಟ್ಟೆಯನ್ನು ಕೂಡ ಧರಿಸಲು ಸಾಧ್ಯವಾಗಿದೆ. ಹಾಗಾದರೆ ಆತ್ಮಗಳಿಗೆ ಇಷ್ಟೆಲ್ಲಾ ಅವಕಾಶ ಮಾಡಿಕೊಟ್ಟ ಆ ದೇವರು ಯಾವುದು. ಅಷ್ಟಕ್ಕೂ ಇದೆಲ್ಲಾ ನಿಜ ಜೀವನದಲ್ಲಿ ನಡೆಯುತ್ತಾ ಎಂದು ಕೇಳುವುದಾದರೆ ಉತ್ತರವಂತೂ ಸಿಗದು. ಆದರೆ, ಹೀಗೆಲ್ಲಾ ನಡೆದಿರುವ ಧಾರಾವಾಹಿ ಸದ್ಯ ಸೂಪರ್ ಆಗಿ ಪ್ರಸಾರವಾಗುತ್ತಿದೆ. ಅದು ಬೇರೆ ಯಾವುದೂ ಅಲ್ಲ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ.
ದುಷ್ಟ ಶಕ್ತಿಗೆ ಬಲಿಯಾಗಿ ಮುಕ್ತಿ ಇಲ್ಲದೇ ಆತ್ಮ ಅಲೆದಾಡುತ್ತಿದ್ದು, ಧಾರಾವಾಹಿಯ ಹೆಸರಿಗೆ ತಕ್ಕಂತೆ ದೇವರನ್ನು ಬಿಡಲಾರದೆಯೇ ಈ ಆತ್ಮ ದೇವಸ್ಥಾನದಲ್ಲೇ ಸುತ್ತಾಡುತ್ತಿದೆ.
ತಂಗಿ ದುರ್ಗಾಳಿಂದ ದೂರಾದ ಅಂಬಿಕಾ
ನಾ ನಿನ್ನ ಬಿಡಲಾರೆ ಧಾರಾವಾಹಿಯದ್ದು ಸಿಂಪಲ್ ಕಥೆ. 22 ವರ್ಷಗಳ ಹಿಂದೆ ದುಷ್ಟ ಶಕ್ತಿಯಿಂದ ಅಕ್ಕ-ತಂಗಿ ಬೇರೆಯಾಗಿರುತ್ತಾರೆ. ಅಕ್ಕಬೇರೆ ಊರಿನಲ್ಲಿ ನೆಲೆಸಿ, ಮದುವೆಯಾಗಿ ಅವಳಿಗೊಂದು ಮಗುವೂ ಇರುತ್ತದೆ. ಆಕೆಯ ಜಾತಕದಿಂದ ಯಾವುದೋ ಶಕ್ತಿಯನ್ನು ತನ್ನದಾಗಿಸಿಕೊಳ್ಳಲು ದುಷ್ಟ ಶಕ್ತಿ ಬೇರೆ ಮಾಡಿರುತ್ತದೆ. ತವರಿನಿಂದ ದೂರಾಗಿರುವ ಅಂಬಿಕ ಈಗ ಅದೇ ದುಷ್ಟ ಶಕ್ತಿಯ ಆಸೆಗಾಗಿ ಅಕಾಲಿಕ ಮರಣವನ್ನು ಹೊಂದಿದ್ದಾಳೆ. ಆದರೆ ಅವಳ ಆತ್ಮಕ್ಕೆ ಮುಕ್ತಿ ಸಿಗದೇ ತನ್ನ ಮಗಳು ಹಾಗೂ ಕುಟುಂಬದ ಒಳಿತಿಗಾಗಿ ಒದ್ದಾಡುತ್ತಿದ್ದಾಳೆ. ತಾನಿಲ್ಲದ ಈ ಸಂದರ್ಭದಲ್ಲಿ ತನ್ನ ಮಗಳಿಗೆ ಕಷ್ಟವಾಗುತ್ತಿದ್ದು, ಹೇಗಾದರೂ ಮಾಡಿ ಅವಳನ್ನು ರಕ್ಷಿಸಬೇಕು ಎಂದು ಸಂಕಟ ಪಡುತ್ತಾಳೆ.

ಅಂಬಿಕಾಳಿಗೆ ದೇವಿಯ ಸಹಾಯ
ತಾನು ನಂಬುವ ದೇವಿಯನ್ನು ಬೇಡಿಕೊಳ್ಳುತ್ತಾಳೆ. ದೇವರು ಆತ್ಮಕ್ಕೆ ದಾರಿಯನ್ನು ತೋರಿಸಿದ್ದು, ದೇವಸ್ಥಾನದಲ್ಲಿ ಅಂಬಿಕಾ ಆತ್ಮ ಬೀಡು ಬಿಡಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ, ಅಂಬಿಕೆ ಚಿಕ್ಕವಳಿದ್ದಾಗ ದೂರಾಗಿದ್ದ ತವರಿಗೇ ಬಂದಿದ್ದು, ಅಲ್ಲಿ ತನ್ನ ತಂಗಿ ದುರ್ಗಾಳನ್ನು ಭೇಟಿಯಾಗಿದ್ದಾಳೆ. ದೇವಿಯೂ ಅಂಬಿಕಾಳ ಆತ್ಮ ದುರ್ಗಾ ಕಣ್ಣಿಗೆ ಕಾನುವಂತೆ ಮಾಡಿದ್ದು, ಈಗ ಅಂಬಿಕ ದೆವ್ವವಾಗಿದ್ದರೂ ಕೂಢ ಧೇವರ ಪ್ರಸಾದವನ್ನು ಸೇವಿಸುವ ಅವಕಾಶ ಸಿಕ್ಕಿದೆ. ಜೊತೆಗೆ ದೇವಿಗೆ ಉಡಿಸಿದ್ದ ಸೀರೆಗಳನ್ನು ಉಡುವಂತೆ ದುರ್ಗಾ ಹೇಳಿದ್ದು, ಇದೇ ಮೊದಲ ಬಾರಿಗೆ ದೆವ್ವವೊಂದು ದೇವಿಯ ಸೀರೆಗಳನ್ನು ಉಟ್ಟಿದೆ.
ಸೀರಿಯಲ್ ಮೆಚ್ಚಿಕೊಂಡ ವೀಕ್ಷಕರು
ಅದರಲ್ಲೂ ಎಲ್ಲಾ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಆತ್ಮ ಅಥವಾ ದೆವ್ವಗಳು ಬಿಳಿ ಉಡುಗೆಯಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಆದರೆ ಈ ಆತ್ಮಕ್ಕೆ ದೇವರ ಸೀರೆಯನ್ನು ನಿತ್ಯ ಬದಲಾಯಿಸುವ ಅವಕಾಶವೂ ದೊರೆತಿದೆ. ಇದೆಲ್ಲವೂ ನಿಜವಾಗಿಯೂ ನಡೆಯುತ್ತದಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಸೌಮ್ಯಾ ಎನ್ನುವವರು ಅಂತೂ ದೆವ್ವ ಕೂಡ ಕಲರ್ ಫುಲ್ ಸೀರೆ ಉಡಬಹುದಾ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಅಂತೂ ಸೀರೆ ಚೇಂಜ್ ಮಾಡಿದ್ರು, ಸೀರೆಗಳನ್ನ ದೆವ್ವ ಯಾವ ವಾಡ್ರೂಬ್ ನಲ್ಲಿ ಇಡುತ್ತೆ ಅಂತೆಲ್ಲಾ ಕಮೆಂಟ್ ಗಳನ್ನು ಮಾಡಿದ್ದು, ವೀಕ್ಷಕರಿಗೆ ನಾ ನಿನ್ನ ಬಿಡಲಾರೆ ಸೀರಿಯಲ್ ಇಷ್ಟವಾಗಿದೆ.


Click it and Unblock the Notifications











