ತನ್ನ ಹೆಗಲ ಮೇಲೆ ಹದ್ದು ಕುಳಿತರೂ ಹೆದರದ ನಾಗಿಣಿ : ಮರಳು ಗಾಡಿನಲ್ಲಿ ಕೆಂಗುಲಾಬಿಯಂತೆ ಮಿಂಚಿದ ಶಿವಾನಿ..!

By ಪ್ರಿಯಾ ದೊರೆ

ನಮ್ರತಾ ಗೌಡ ಅವರು ನಾಗಿಣಿ ಧಾರಾವಾಹಿ ಮುಕ್ತಾಯಗೊಂಡ ಬಳಿಕ ಬೇರೆ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ನಮ್ರತಾ ಅವರು ಬಿಗ್ ಬಾಸ್ ನಲ್ಲಿ ನಟಿಸಿ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದಾರೆ. ನಾಗಿಣಿ ಧಾರಾವಾಹಿ ಮುಕ್ತಾಯಗೊಂಡ ಮೇಲೆ ನಟಿ ನಮ್ರತಾ ಗೌಡ ಬಹಳ ಫ್ರೀ ಆಗಿದ್ದಾರೆ. ಸತತವಾಗಿ ಮೂರು ವರ್ಷಗಳಿಗೂ ಹೆಚ್ಚು ಸಮಯ ಪ್ರಸಾರಗೊಂಡ ನಾಗಿಣಿ ಮೂಲಕ ಪ್ರೇಕ್ಷಕರಿಗೆ ಚಿರ ಪರಿಚಿತರಾದರು. ಬಾಲ ನಟಿ ಆಗಿ ಬಣ್ಣದ ಲೋಕದ ಪಯಣ ಆರಂಭಿಸಿದರೂ, ಹೆಸರು ತಂದು ಕೊಟ್ಟಿದ್ದು ಮಾತ್ರ ಶಿವಾನಿ ಪಾತ್ರ.

ನೆಗೆಟಿವ್ ವಿಚಾರಕ್ಕೆ ಬೇಸರಿಸಿಕೊಂಡಿದ್ದ ಬೆಡಗಿ

ಇತ್ತೀಚೆಗೆ ನಟಿ ನಮ್ರತಾ ಗೌಡ ಅವರು ಕೆಲ ವಿಚಾರಗಳಿಗೆ ಬೇಸರ ಮಾಡಿಕೊಂಡಿದ್ದರು. ಬಣ್ಣದ ಲೋಕದಲ್ಲಿ ಏನೆಲ್ಲಾ ನಡೆಯುತ್ತೆ, ಅದರಿಂದ ತಮ್ಮ ವ್ಯೆಯಕ್ತಿಕ ಬದುಕಿಗೆ ಎಷ್ಟೆಲ್ಲಾ ಸಮಸ್ಯೆ ಆಗುತ್ತೆ ಎಂದು ಕಣ್ಣೀರು ಹಾಕಿದ್ದರು. ಇನ್ನು ನಟಿಯರ ಬಗ್ಗೆ ಕೆಲವರಿಗೆ ಇರುವ ಕೆಟ್ಟ ಅಭಿಪ್ರಾಯಗಳು ಕೂಡ ತಮ್ಮ ವಯಕ್ತಿಕ ಬದುಕಿನ ಮೇಲೆ ಬಹಳ ಪರಿಣಾಮ ಬೀರುತ್ತದೆ ಎಂಬುದನ್ನು ಸೋಶೀಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಕಳೆದ ಎರಡು ಮೂರು ಬಾರಿ ನೆಗೆಟಿವ್ ವಿಚಾರದ ಬಗ್ಗೆ ಚರ್ಚಿಸುತ್ತಲೇ ನಮ್ರತಾ ಅವರು ಸುದ್ದಿಯಾಗಿದ್ದೂ ಇದೆ. ಆದರೆ ಈಗ ನಟಿ ನಮ್ರತಾ ಅವರು ಎಲ್ಲದರಿಂದ ಬ್ರೇಕ್ ಪಡೆದು ದುಬೈಗೆ ಹಾರಿದ್ದಾರೆ.

written-update-on-namratha-gowda-in-dubai

ಮರುಳು ಗಾಡಲ್ಲಿ ಕೆಂಗುಲಾಬಿಯಾದ ನಮ್ಮು

ಹೌದು ನಟಿ ನಮ್ರತಾ ಗೌಡ ಅವರು ಹಲವು ದಿನಗಳ ಬಳಿಕ ಪ್ರವಾಸ ಕೈಗೊಂಡಿದ್ದಾರೆ. ಯಾರ ಜೊತೆಗೆ ತೆರಳಿದ್ದಾರೆ ಎಂಬ ಮಾಹಿತಿ ಗೊತ್ತಾಗಿಲ್ಲವಾದರೂ, ಮರಳುಗಾಡಿನಲ್ಲಿ ಕೆಂಪು ಬಟ್ಟೆ ಧರಿಸಿ ಕೆಂಗುಲಾಬಿಯಂತೆ ಕಂಗೊಳಿಸಿದ್ದಾರೆ. ಸೀರೆ, ಮಾಡ್ರನ್ ಎಲ್ಲಾ ಬಗೆಯ ಬಟ್ಟೆಯಲ್ಲೂ ಸುಂದರವಾಗಿ ಕಾಣುವ ನಟಿ ನಮ್ರತಾ ಅವರು ಮರಳುಗಾಡಿನ ಮಧ್ಯೆ ನಿಂತು ತೆಗೆಸಿಕೊಂಡ ಫೋಟೋ ನಿಜಕ್ಕೂ ಗುಲಾಬಿಯಂತೆ ಕಾಣುತ್ತಿದೆ. ಅದರಲ್ಲೂ ಹದ್ದನ್ನು ತಮ್ಮ ಹೆಗಲ ಮೇಲೆ ಇರಿಸಿಕೊಂಡಿರುವುದು ನೋಡುವುದೇ ಚೆಂದ. ಬಹಳ ದಿನಗಳ ಬಳಿಕ ಹೊರ ದೇಶಕ್ಕೆ ತೆರಳಿರುವ ನಮ್ರತಾ ಅವರ ಅಪ್ ಡೇಟ್ಸ್ ಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಅಭಿಮಾನಿಗಳ ಬಳಿ ಹಂಚಿಕೊಳ್ಳುವ ನಟಿ

ಇನ್ನು ನಮ್ರತಾ ಗೌಡ ಅವರಿಗೆ ಪ್ರವಾಸ ಹೋಗುವುದು, ಹೊಸ ಹೊಸ ಜಾಗವನ್ನು ನೋಡುವುದು ಎಂದರೆ ಬಹಳ ಇಷ್ಟವಂತೆ. ಹಾಗಾಗಿ ಅವರು ಆಗಾಗ ಟ್ರಿಪ್ ಗಳಿಗೆ ಹೋಗುತ್ತಿರುತ್ತಾರೆ. ಎಲ್ಲಿಗೆ ಹೋಗಿದ್ದರು ಎಂಬ ಬಗ್ಗೆ ವೀಡಿಯೋ ಕೂಡ ಮಾಡಿ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಅಲ್ಲದೇ, ನಮ್ರತಾ ಅವರು ಶಾಪಿಂಗ್ ಮಾಡಿದರೆ ಆ ವೀಡಿಯೋವನ್ನು ಶೇರ್ ಮಾಡುತ್ತಾರೆ. ಮೇಕಪ್ ಮಾಡಿಕೊಳ್ಳುವುದು ಹೇಗೆ ಎಂದೂ ಕೂಡ ಹೇಳುತ್ತಾರೆ. ತಮ್ಮ ಜೀವನದ ಪ್ರತಿಯೊಂದು ವಿಚಾರವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ.

ಬೋಲ್ಡ್ ಲುಕ್ ನಲ್ಲಿ ನಟಿ

ನಟಿ ನಮ್ರತಾ ಅವರು ದಿನ ದಿನಕ್ಕೂ ಹೆಚ್ಚೆಚ್ಚು ಬೋಲ್ಡ್ ಆಗುತ್ತಿದ್ದಾರೆ. ನಟನೆಯಿಂದ ಬ್ರೇಕ್ ಪಡೆದಿದ್ದರೂ ಕೂಡ ಫೋಟೋಶೂಟ್ ಗಳನ್ನು ನಿಲ್ಲಿಸಿಲ್ಲ. ಆಗಾಗ ಡಿಫರೆಂಟ್ ಆಗಿ ಫೋಟೋ ಶೂಟ್ ಗಳನ್ನು ಮಾಡಿಸುತ್ತಿರುತ್ತಾರೆ. ಇದನ್ನೆಲ್ಲಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ನಮ್ರತಾ ಗೌಡ ಅವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದು, ಈಗ ನಮ್ರತಾ ಅವರ ಬೋಲ್ಡ್ ಫೋಟೋಗಳಿಗೆ ಹಾಟೀ ಎಂದೆಲ್ಲಾ ಕಮೆಂಟ್ ಮಾಡುತ್ತಿರುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X