ಒಂದೇ ಶೋನಲ್ಲಿ ದಚ್ಚು-ಕಿಚ್ಚ-ಯಶ್ ; ಇದು ಸಾಧ್ಯನಾ..? ಚಮಕ್ಕಾ ಅಥವಾ..?

By ಪ್ರಿಯಾ ದೊರೆ

ಜೀ ಕನ್ನಡ ವಾಹಿನಿ ತನ್ನದೇ ಪ್ರೊಡಕ್ಷನ್ ನಿಂದ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಈಗಷ್ಟೇ ಪ್ರಾರಂಭವಾಗಿರುವ ಹೊಸ ರಿಯಾಲಿಟಿ ಶೋ ಮೂಲಕವೇ ನಾಯಕಿಯನ್ನು ಆಯ್ಕೆ ಮಾಡಿಕೊಳ್ಳಲಿದೆ. ಹೌದು, ಮಹಾನಟಿ ಎಂಬ ಹೊಸ ರಿಯಾಲಿಟಿ ಶೋನ ಜೀ ಕನ್ನಡ ಪ್ರಾರಂಭಿಸಿದೆ. ಇದರಲ್ಲಿ ಗೆಲ್ಲುವ ನಾಯಕಿಗೆ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶವೂ ಅದಾಗಲೇ ಸಜ್ಜಾಗಿದೆ. ಕಳೆದ ಶನಿವಾರ ಹಾಗೂ ಭಾನುವಾರ ನಡೆದ ಮೆಗಾ ಆಡಿಶನ್ ನಲ್ಲಿ ಸ್ಪರ್ಧಿಗಳನ್ನು ಆರಿಸಿಕೊಳ್ಳಲಾಗಿದೆ. ಹೊಸ ರಿಯಾಲಿಟಿ ಶೋ ಶುರುವಾಗುತ್ತಿದ್ದಂತೆಯೇ ಈಗ ಮತ್ತೊಂದು ಕಾರ್ಯಕ್ರಮದ ಪ್ರೊಮೋ ರಿಲೀಸ್ ಆಗಿದೆ.

ಮಹಾನಟಿ ಆಯ್ತು.. ಈಗ ಮತ್ತೊಂದು ಶೋ..!

ಜೀ ಕನ್ನಡ ವಾಹಿನಿ ಈಗಾಗಲೇ ಕಾಮಿಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋನ ಕಳೆದ ಕೆಲ ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಇದರಿಂದ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಜೀ ಕನ್ನಡದ ವೀಕ್ಷಕರಿಗೂ ಕಾಮಿಡಿ ಕಿಲಾಡಿಗಳು ಶೋ ಅಂದರೆ ಅಚ್ಚುಮೆಚ್ಚು. ಇದೀಗ ಈ ಶೋ ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ವಾಹಿನಿ ಮಾಡಿದೆ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಆರಂಭಿಸುವುದಾಗಿ ವಾಹಿನಿ ಪ್ರೊಮೋ ರಿಲೀಸ್ ಮಾಡಿದೆ. ಇದನ್ನು ನೋಡಿದ ವೀಕ್ಷಕರ ಕುತೂಹಲ ಡಬಲ್ ಆಗಿದೆ.

Written update on new reality show

ಕಾಮಿಡಿ ಕಿಲಾಡಿಗಳು ಪ್ರಿಮೀಯರ್ ಲೀಗ್..!

ಅದರಲ್ಲೂ ಈ ರಿಯಾಲಿಟಿ ಶೋನಲ್ಲಿ ಮತ್ತೊಂದು ಸ್ಪೆಷಲ್ ವಿಚಾರವಿದೆ. ಅದೇನೆಂದರೆ, ನಮ್ಮ ಸ್ಯಾಂಡಲ್ ವುಡ್ ನ ಟಾಪ್ ನಾಯಕ ನಟರು ಈ ರಿಯಾಲಿಟಿ ಶೋ ನಲ್ಲಿ ಜಡ್ಜ್ ಗಳಾಗಿ ಬರುತ್ತಿದ್ದಾರೆ. ಮೂವರು ವಜ್ರಗಳ ಜೊತೆಗೆ ಶೋ ಮಾಡುವ ಆಸೆ ನಮಗೂ ಇದೆ. ಆದ್ರೆ.. ! ಎಂದು ಅರ್ಧಕ್ಕೆ ಏನೂ ಹೇಳದ ಜೀ ವಾಹಿನಿ ಮೊಟ್ಟ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂವರು ಒಟ್ಟಿಗೆ ಕಾಣಿಸಿಕೊಳ್ಳುವಂತಹ ರಿಯಾಲಿಟಿ ಶೋ ಪ್ರಾರಂಭಿಸಲು ಮುಂದಾಗಿದೆ. ಈ ಪ್ರೋಮೋ ನೋಡಿದವರೆಲ್ಲರೂ ಶಾಕ್ ಆಗಿದ್ದಾರೆ, ಅದರ ಜೊತೆಗೆ ಸಂತಸವನ್ನೂ ಹಂಚಿಕೊಂಡಿದ್ದು, ಇದು ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳನ್ನು ಕೂಡ ಇಟ್ಟುಕೊಂಡಿದ್ದಾರೆ.

Written update on new reality show

ಮೂವರು ದಿಗ್ಗಜರು ಒಂದೇ ಶೋನಲ್ಲಿ..?

ರಾಕಿಂಗ್ ಸ್ಟಾರ್ ಯಶ್ ಅವರು ಈಗ ಟಾಕ್ಸಿಕ್ ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ಯಶ್ ಅವರು ನ್ಯಾಷನಲ್ ಹೀರೋ ಆಗಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿ ಇರುವ ಯಶ್ ಅವರು ರಿಯಾಲಿಟಿ ಶೋ ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಎದ್ದಿದೆ. ಹಾಗಂತ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಕೂಡ ಬ್ಯುಸಿ ಇಲ್ಲ ಅಂತೇನಲ್ಲ. ಅವರೂ ಕೂಡ ಕನ್ನಡದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುವ ಬಿಗ್ ಬಾಸ್ ರಿಯಾಲಿಟಿ ಶೋ ನ ಅದಾಗಲೇ ಸುದೀಪ್ ಅವರು ಹೋಸ್ಟ್ ಮಾಡುತ್ತಿದ್ದಾರೆ. ಇನ್ನು ಜೀ ವಾಹಿನಿಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂದು ಹಲವರು ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದಾರೆ.

Written update on new reality show

ಹೊಸ ಪ್ರಯತ್ದಲ್ಲಿ ಜೀ ಕನ್ನಡ ..!

ಇದುವರೆಗೂ ದರ್ಶನ್ ಅವರಂತೂ ಯಾವುದೇ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಿಲ್ಲ. ಹೀಗಿರುವಾಗ ಜೀ ಕನ್ನಡ ವಾಹಿನಿಯ ಕಿರುತೆರೆ ಶೋ ಒಂದರಲ್ಲಿ ಕಾಣಿಸಿಕೊಳ್ಳುತ್ತಾರಾ ಎಂದು ಅಭಿಮಾನಿಗಳು ಆಲೋಚಿಸುತ್ತಿದ್ದಾರೆ. ಹಾಗಿದ್ದರೂ ಕೂಡ ಜೀ ಕನ್ನಡ ವಾಹಿನಿ ಒಂದು ದೊಡ್ಡ ಮಟ್ಟದ ಸಾಹಸ ಮಾಡಲು ಮುಂದಾಗಿದ್ದು, ಮೂವರು ದಿಗ್ಗಜರನ್ನು ಒಂದೇ ಕಾರ್ಯಕ್ರಮದಲ್ಲಿ, ಒಂದೇ ಸಮಯದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವುದು ಸಾಧ್ಯವೇ ಎಂಬುದು ಗೊತ್ತಿಲ್ಲ. ಆದರೆ, ಜೀ ವಾಹಿನಿಯ ಸಾಹಸಕ್ಕೆ ಕರುನಾಡಿಗರ ಸಪೋರ್ಟ್ ಅಂತೂ ಇದ್ದೇ ಇರುತ್ತದೆ.

More from Filmibeat

English summary
zee kannada new reality showcomedy kiladigalu premium league
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X