Annayya ; ಅಣ್ಣಯ್ಯನನ್ನು ವೆಲ್ಕಂ ಮಾಡಲು ವೀಕ್ಷಕರು ರೆಡಿ : ನಟಿಯರು ಯಾರು ಯಾರು ಗೊತ್ತೇ..?
ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ನಾಳೆಯಿಂದ ಶುರುವಾಗಲಿದೆ. ಅಣ್ಣಯ್ಯನನ್ನು ವೆಲ್ಕಂ ಮಾಡಲು ಕೂಡ ವೀಕ್ಷಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ನಾಳೆ ಸಂಜೆ 7.30ಕ್ಕೆ ಅಣ್ಣಯ್ಯ ಎಲ್ಲರ ಮನೆಗೆ ಘ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾನೆ. ಹ್ಯಾಟ್ರಿಕ್ ಹೀರೋ ಶಿವಣ್ಣನ ಹೆಸರೇ ಅಣ್ಣಯ್ಯನಿಗೆ ಇಟ್ಟಿದ್ದು, ಇನ್ನಷ್ಟು ಮೆರುಗು ನೀಡಿದಂತಾಗಿದೆ. ಸಿನಿಮಾ ನಟರು, ನಟಿಯರು ಸೇರಿದಂತೆ ಹಲವರು ಅಣ್ಣಯ್ಯನಿಗೆ ವಿಶ್ ಮಾಡಿದ್ದಾರೆ, ಅಣ್ಣಯ್ಯ ತಂಗಿಯರ ಜೊತೆಗೆ ನಾಳೆ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಂಗಿಯರಿಗಾಗಿ ಮಿಡಿಯುವ ಅಣ್ಣಯ್ಯ
ಇಷ್ಟು ವರ್ಷ ಬರುತ್ತಿದ್ದ ಧಾರಾವಾಹಿಗಳು ಹೆಚ್ಚಾಗಿ ಅಕ್ಕ, ಅತ್ತೆ, ಸೊಸೆಯಂದಿರ ಮೇಲೆ ಅವಲಂಬಿತವಾಗಿರುತ್ತಿತ್ತು. ಇದೀಗ ಮೊದಲ ಬಾರಿಗೆ ಜೀ ಕನ್ನಡ ವಾಹಿನಿ ಅಣ್ಣನ ಬದುಕಿನ ಜೊತೆಗೆ ಹೆಣೆದುಕೊಂಡಿರುವ ನಾಲ್ಕು ಸಹೋದರಿಯರ ಜೀವನವನ್ನೂ ರೂಪಿಸಬೇಕಿದೆ. ಇತ್ತೀಚೆಗಷ್ಟೇ ಜೀ ವಾಹಿನಿಯಲ್ಲಿ ಬ್ರಹ್ಮಗಂಟು ಹೊಸ ಸೀರಿಯಲ್ ಪ್ರಾರಂಭವಾಗಿದ್ದು, ಇದೀಗ ಅಣ್ಣಯ್ಯ ಬರುತ್ತಿದ್ದಾನೆ. ಅಣ್ಣಯ್ಯ ತಂಗಿಯರು ಚೆನ್ನಾಗಿರಬೇಕು ಎಂದು ಕಷ್ಟಪಡುತ್ತಿದ್ದಾನೆ. ತನಗೆ ಓದಲು ಸಾಧ್ಯವಾಗಿಲ್ಲ ವಾದರೂ ತನ್ನ ತಂಗಿಯರು ಓದಿ, ಒಳ್ಳೆಯ ಮನೆಯನ್ನು ಸೇರಬೇಕು. ಒಳ್ಳೆಯ ಹುಡುಗರನ್ನು ನೋಡಿ ತಂಗಿಯರ ಮದುವೆ ಮಾಡಬೇಕು ಎಂದು ಅಣ್ಣಯ್ಯ ಕನಸು ಕಾಣುತ್ತಿದ್ದಾನೆ. ಸಹೋದರಿಯರಿಗೋಸ್ಕರ ಅಣ್ಣಯ ಕಷ್ಟಪಡುತ್ತಿದ್ದು, ತಂದೆ-ತಾಯಿ ಇಲ್ಲದ ಮನೆಯಲ್ಲಿ ಈ ಐವರು ಒಡಹುಟ್ಟಿದವರು ಒಬ್ಬರಿಗೊಬ್ಬರು ಖುಷಿ ಖುಷಿಯಾಗಿ ಬದುಕುತ್ತಿದ್ದಾರೆ.

ಶಿವಣ್ಣನಿಗೆ ಆಲ್ ದಿ ಬೆಸ್ಟ್ ಎಂದ ಅಭಿಮಾನಿಗಳು
ಈಗಾಗಲೇ ಪ್ರಸಾರವಾಗಿರುವ ಪ್ರೋಮೋ ಪ್ರಕಾರ ಅಣ್ಣಯ್ಯ ಮೊದಲು ಸಹೋದರಿಯರ ಮದುವೆ ಮಾಡಬೇಕು ಎಂದು ಆಸೆ ಪಟ್ಟಿದ್ದಾನೆ. ಜಾತಕ ತೋರಿಸಿದಾಗ ತನಗೇ ಮೊದಲು ಮದುವೆಯಾಗುವುದು ಎಂದು ಹೇಳಿದ್ದಾರೆ. ಅಲ್ಲದೇ, ಅಣ್ಣಯ್ಯ ಪಾರ್ವತಿ ಮೇಲೆ ಕಣ್ಣೀಟ್ಟಿದ್ದು, ಶಿವಣ್ಣನಿಗೆ ಪಾರು ಸಿಗುತ್ತಾಳಾ ಎಂಬ ಕುತೂಹಲವನ್ನೂ ಮೂಡಿಸಿದೆ. ಪಾರ್ತಿ ವೈದ್ಯೆ ಆಗಿದ್ದು, ಜನರ ಸೇವೆ ಮಾಡುವ ಆಸೆ ಅವಳದ್ದು. ಆದರೆ ಅವರ ತಂದೆ ಹೆಸರಿಗೆ ಮಗಳನ್ನು ಓದಿಸಿದ್ದು, ಪ್ರತಿಷ್ಠೆಯೇ ದೊಡ್ಡದು ಎಂದು ನಂಬಿರುವಾತ. ಹೀಗಿರುವಾಗ ಈ ಎರಡೂ ಜೋಡಿಗಳು ಹೇಗೆ ಒಂದಾಗುತ್ತಾರೆ. ಅಣ್ಣಯ್ಯನ ಆಸೆ ಕನಸುಗಳೆಲ್ಲಾ ನನಸಾಗುತ್ತಾ ಎಂದು ಕಾದು ನೋಡಬೇಕಿದೆ. ಅಭಿಮಾನಿಗಳಂತೂ ಧಾರಾವಾಹಿಗೆ ಫುಲ್ ಸಪೋರ್ಟ್ ಮಾಡಿದ್ದು, ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಧಾರಾವಾಹಿಯ ನಟಿಯರ ನಿಜವಾದ ಹೆಸರು
ಇನ್ನು ಈ ಧಾರಾವಾಹಿಯಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ಕಾಣಿಸಿಕೊಂಡಿದ್ದು, ಇವರಿಗೆ ಜೋಡಿಯಾಗಿ ಎಲ್ಲರ ನೆಚ್ಚಿನ ಅಮುಲ್ ಬೇಬಿ ನಿಶಾ ರವಿಕೃಷ್ಣನ್ ನಟಿಸುತ್ತಿದ್ದಾರೆ. ನಟಿ ನಿಶಾ ಅವರು ಈಗಾಗಲೇ ಗಟ್ಟಿಮೇಳ, ಅಮ್ಮಾಯಿಗಾರು ಸೇರಿದಂತೆ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಎಲ್ಲರ ಮನೆ ಮಾತಾಗಿದ್ದು, ಈಗ ಅಣ್ಣಯ್ಯ ಮೂಲಕ ಮತ್ತೆ ವೀಕ್ಷಕರ ಎದುರು ಕಾಣಿಸಿಕೊಳ್ಳುತ್ತಿದ್ದಾರೆ. ನಟ ವಿಕಾಸ್ ಅವರು ಶಾರ್ಟ್ ಮೂವಿಸ್ ಸೇರಿದಂತೆ ಮೇರಿ ಎಂಬ ಚಿತ್ರಕ್ಕೂ ಬಣ್ಣ ಹಚ್ಚಿದ್ದು, ಇದೀಗ ನಾಯಕನಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕಾಸ್ ಶಿವಣ್ಣ ಪಾತ್ರದಲ್ಲಿ ನಟಿಸಿದ್ದು, ನಿಶಾ ಅವರು ಪಾರ್ವತಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅಣ್ಣಯ್ಯನ ಸಹೋದರಿಯರಾದ ರತ್ನ, ರಶ್ಮಿ, ರಾಣಿ, ರಮ್ಯಾ ಆಗಿ ನಾಲ್ಕು ಪ್ರಮುಖ ಪಾತ್ರಗಳಿವೆ.

ಸಿನಿಮಾ, ರಂಗಭೂಮಿಯಿಂದ ಬಂದ ನಟಿಯರು
ರತ್ನಯಾಗಿ ನಟಿಸಿರುವ ನಾಗಶ್ರೀ ಬೇಗಾರ್ ಅವರು ಈಗಾಗಳೇ ಸಿನಿಮಾ ಲೋಕದಲ್ಲಿ ಕಾಣಿಸಿಕೊಂಡಿದ್ದಾರೆ. ಹುಚ್ಚಕ್ಕಿ, ವೈಶಂಪಾಯನ ತೀರ ಮತ್ತು ಜಲಪಾತ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಶ್ಮಿ ಪಾತ್ರದಲ್ಲಿ ನಟಿ ಪ್ರತೀಕ್ಷಾ ಶ್ರೀನಾಥ್ ನಟಿಸಿದ್ದು, ರಂಗಭೂಮಿಯಲ್ಲಿರುವ ಇವರು ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಇನ್ನು ರಾಣಿ ಪಾತ್ರದಲ್ಲಿ ರಾಘವಿ ಎಂಬಾಕೆ ಕಾಣಿಸಿಕೊಂಡಿದ್ದು ಇವರು ಪ್ರಾಯಶಃ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಮ್ಯಾ ಪಾತ್ರದಲ್ಲಿ ಅಂಕಿತಾ ಮೀನಾ ನಟಿಸುತ್ತಿದ್ದು, ಇವರು ಕಾಟೇರಾ ಚಿತ್ರ ಹಾಗೂ ಕೆಲಸ ಸೀರಿಯಲ್ ಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











