Anu Pallavi ; ಹೊಸ ಧಾರಾವಾಹಿ 'ಅನುಪಲ್ಲವಿ'ಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?

By ಪ್ರಿಯಾ ದೊರೆ

ಸೋಮವಾರದಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿಯೊಂದು ಪ್ರಸಾರವಾಗಲಿದೆ. ಈ ಹೊಚ್ಚ ಹೊಸ ಧಾರಾವಾಹಿಯ ಹೆಸರು ಅನುಪಲ್ಲವಿ. ಹೊಸ ಕಥೆಯ ಮೂಲಕ ಅನುಪಲ್ಲವಿ ಧಾರಾವಾಹಿಯೂ ವೀಕ್ಷಕರನ್ನು ರಂಜಿಸಲಿದೆ. ಇದೇ ತಿಂಗಳ 17ರಿಂದ ಉದಯ ಟಿವಿಯಲ್ಲಿ ರಾತ್ರಿ 9.30ಕ್ಕೆ ಅನುಪಲ್ಲವಿ ಧಾರಾವಾಹಿ ಶುರುವಾಗಲಿದೆ. ಈ ಧಾರಾವಾಹಿಯು ಗಂಡ-ಹೆಂಡತಿ ಹಾಗೂ ಮಗುವಿನ ಕಥೆಯನ್ನು ಒಳಗೊಂಡಿದ್ದು, ಪತಿ-ಪತ್ನಿ ಬೇರೆಯಾಗಿರುತ್ತಾರೆ. ಆದರೆ, ತಾಯಿ ತನ್ನ ಮಗುವಿನ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ.

ನಟ ದರ್ಶಕ್‌ ನಟನೆಯ ಅನುಪಲ್ಲವಿ

ನಾಯಕಿ ಅನುಪಲ್ಲವಿ ಐಎಎಸ್‌ ಆಫಿಸರ್‌ ಆಗಿದ್ದು, ಸತ್ಯ-ನ್ಯಾಯಕ್ಕಾಗಿ ಹೋರಾಡುವ ಹೆಣ್ಣು. ನಾಯಕಿ ಪಾತ್ರದಲ್ಲಿ ನಟಿ ಅನುಷಾ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕನಾಗಿ ದರ್ಶಕ್ ಗೌಡ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪದ್ಮಾವತಿ ಧಾರಾವಾಹಿ ಮೂಲಕ ದರ್ಶಕ್‌ ಗೌಡ ನಟನೆಯ ನಂಟು ಬೆಳೆಸಿಕೊಂಡರು. ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಬಳಿಕ ಕಣ್ಮಣಿ, ಬೆಟ್ಟದ ಹೂ, ಕಾವ್ಯಾಂಜಲಿ ಧಾರಾವಾಹಿಗಳಲ್ಲಿ ನಾಯಕನಾಗಿ ಮಿಂಚಿದರು. ಇನ್ನು ಪರಭಾಷೆಯಲ್ಲೂ ಸಕ್ರಿಯವಾಗಿರುವ ನಟ ದರ್ಶಕ್‌ ಅವರು ತಮಿಳಿನ ಅರುಂಧತಿ ಧಾರಾವಾಹಿಯಲ್ಲಿ ನಟಿಸಿದ್ದರು. ಸದ್ಯ ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸಿಂಗಪೆಣ್ಣೆ ಧಾರಾವಾಹಿಯಲ್ಲಿ ದರ್ಶಕ್‌ ಅವರು ನಟಿಸುತ್ತಿದ್ದಾರೆ. ಇದರ ಜೊತೆ ಜೊತೆಗೆ ಮತ್ತೆ ಕನ್ನಡ ಕಿರುತೆರೆಗೆ ಕಮ್‌ ಬ್ಯಾಕ್‌ ಮಾಡಿದ್ದಾರೆ.

written update on new serial anupallavi

ಹೊಸ ಲುಕ್ ನಲ್ಲಿ ನಟಿ ವನಿತಾ ವಾಸು

ಇನ್ನು ಅಮೃತಧಾರೆ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುತ್ತಿರುವ ಹಿರಿಯ ನಟಿ ವನಿತಾ ವಾಸು ಅವರು ಕೂಡ ಈ ಧಾರಾವಾಇಗೆ ಬಣ್ಣ ಹಚ್ಚಿದ್ದಾರೆ. ಇದರಲ್ಲೂ ನೆಗೆಟಿವ್ ರೋಲ್ ಅನ್ನೇ ಆಯ್ಕೆ ಮಾಡಿಕೊಂಡಿರುವ ವನಿತಾ ವಾಸು ಅವರು, ತಮ್ಮ ಲುಕ್ ಅನ್ನು ಬದಲಿಸಿಕೊಂಡಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋವನ್ನು ವಾಹಿನಿ ರಿಲೀಸ್ ಮಾಡಿದ್ದು, ಅದರಲ್ಲಿ ವಿಭಿನ್ನ ಲುಕ್ ಮೂಲಕ ವನಿತಾ ವಾಸು ಅವರು ಗಮನ ಸೆಳೆದಿದ್ದಾರೆ. ಇನ್ನು ನಟಿ ವನಿತಾ ವಾಸು ಅವರು ಸ್ಯಾಂಡಲ್ ವುಡ್ ನಲ್ಲಿ ಹತ್ತಾರು ಸಿನಿಮಾಗಳಲ್ಲಿ ನಟಿಸಿದವರು, ಇದರ ಜೊತೆ ಜೊತೆಗೆ ಕಿರುತೆರೆಯಲ್ಲೂ ಕಮಾಲ್ ಮಾಡಿದ್ದಾರೆ. ಮನೆಯೊಂದು ಮೂರು ಬಾಗಿಲು ಅಂತಹ ಮೆಗಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.


ಧಾರಾವಾಹಿಗಳಲ್ಲಿ ವನಿತಾ ವಾಸು ಬ್ಯುಸಿ

ಸಂಘರ್ಷ, ಸರಸ್ವತಿ ಲಕ್ಷ್ಮೀ ಪ್ರಿಯೆ, ಬ್ರಹ್ಮಗಂಟು, ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಗಲಲಿ ಕಾಣಿಸಿಕೊಂಡಿದ್ದಾರೆ. ಇನ್ನು ಆಗಂತುಕ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ವನಿತಾ ವಾಸು ಅವರು ಹಿರಿಯ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಗೀತಾ-ಗೋವಿಂದ ಎಂಬ ಪಾತ್ರವೂ ಇದೆ. ಈ ಅನುಪಲ್ಲವಿ ಎಂಬ ಧಾರಾವಾಹಿಗೆ ನಟಿ ಅನುಪಲ್ಲವಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಗೀತಾ ಅವತಾರದಲ್ಲಿ ಅನುಪಲ್ಲವಿ

ಗೀತಾ ಎಂಬ ಪಾತ್ರದ ಮೂಲಕ ನಟಿ ಅನುಪಲ್ಲವಿ ಅವರು ನಟಿಸಲಿದ್ದು, ಇವರಿಗೆ ಜೋಡಿಯಾಗಿ ನಟ ರಜನಿಕಾಂತ್ ಅವರು ಗೋವಿಂದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದ್ದು, ಇನ್ನೂ ತಮ್ಮ ಪಾತ್ರಗಳ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಇನ್ನು ನಟಿ ಅನುಪಲ್ಲವಿ ಅವರು ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದು, ಬೃಂದಾವನ ಧಾರಾವಾಹಿ ಮೂಲಕ ಘಾಟಿ ಅತ್ತಿಗೆ ಎಂದೇ ಚಿರಪರಿಚಿತರಾದರು. ಸದ್ಯ ನೂರು ಜನ್ಮಕೂ ಧಾರಾವಾಹಿಯಲ್ಲಿ ಛಾಯಾ ಆಗಿ ನಟಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X