ವಧು, ಯಜಮಾನ ಧಾರಾವಾಹಿಗಳು ಪ್ರಸಾರ ಕಾಣುವ ಮುನ್ನವೇ ಮತ್ತೊಂದು ಹೊಸ ಸೀರಿಯಲ್, ಯಾವುದು ಅದು ?

By ಪ್ರಿಯಾ ದೊರೆ

ಇಂದಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು ಶುರುವಾಗುತ್ತಿವೆ.ಯಜಮಾನ ಮತ್ತು ವಧು ಧಾರಾವಾಹಿಗಳು ಪ್ರಸಾರವಾಗಲು ಸಜ್ಜಾಗಿವೆ.ಈ ಎರಡು ಹೊಸ ಧಾರಾವಾಹಿಗಳ ಪ್ರಸಾರಕ್ಕೂ ಮುನ್ನವೇ ಕಲರ್ಸ್ ಕನ್ನಡ ವಾಹಿನಿ ಈಗ ಮತ್ತೊಂದು ಹೊಸ ಸೀರಿಯಲ್ ನ ಪ್ರೊಮೋವನ್ನು ಹರಿಬಿಟ್ಟಿದೆ.ವಧು ಧಾರಾವಾಹಿಯೂ ರಾತ್ರಿ 9.30ಕ್ಕೆ ಪ್ರಾರಂಭವಾಗಲಿದೆ.ಇನ್ನು ಯಜಮಾನ ಧಾರಾವಾಹಿಯನ್ನು ರಾತ್ರಿ 10.00 ಗಂಟೆಯ ಸ್ಲಾಟ್ ಗೆ ಹಾಕಲಾಗಿದೆ.

ನಿನ್ನೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದೊಂದು ಧಾರಾವಾಹಿಯ ಪ್ರೋಮೋವನ್ನು ಪ್ರಸಾರ ಮಾಡಲಾಗಿತ್ತು. ಧಾರಾವಾಹಿಯಲ್ಲಿ ಹೊಸ ನಾಯಕಿ ಕಾಣಿಸಿಕೊಂಡಿದ್ದಾಳೆ. ಭಾರ್ಗವಿ LLb ಹೆಸರಿನಲ್ಲಿ ಹೊಸ ಧಾರಾವಾಹಿ ಪ್ರಸಾರವಾಗಲು ಸಜ್ಜಾಗುತ್ತಿದೆ.ಈ ಹೊಸ ಧಾರಾವಾಹಿಯ ಪ್ರೊಮೋದಲ್ಲಿ ನಾಯಕಿಯನ್ನು ತೋರಿಸಲಾಗಿದೆ.ಈ ಧಾರಾವಾಹಿಯಲ್ಲಿ ತಂದೆ ಲಾಯರ್ ಆಗಿದ್ದಾಗ ಅವಮಾನವಾಗಿರುತ್ತದೆ. ತನ್ನ ತಂದೆಗೆ ನ್ಯಾಯ ಕೊಡಸಬೇಕು ಎಂದು ಅಪ್ಪನ ಆಸೆಯಂತೆ ಎಲ್ ಎಲ್ ಬಿ ಓದಿದ ನಾಯಕಿ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾಳೆ.ಅನ್ಯಾಯವಾಗಿರುವ ನನ್ನ ಅಪ್ಪನಿಗೆ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ ಎಂದು ಹೇಳಿದ್ದಾಳೆ.ಈಗಾಗಲೇ ಇದೇ ರೀತಿಯಲ್ಲಿ ವಧು ಧಾರಾವಾಹಿಯೂ ಇದೆ.ಇದರಲ್ಲೂ ನಾಯಕಿ ಲಾಯರ್ ಆಗಿದ್ದಾಳೆ.ಈಗ ಅದೇ ಕೋರ್ಟ್ ಕಥೆಯನ್ನು ಹೊತ್ತು ಮತ್ತೊಂದು ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದೆ.

written update on new serial bhargavi LLb

ಇನ್ನೂ ಈ ಹೊಸ ಧಾರಾವಾಹಿಯ ಪ್ರೊಮೋವನ್ನು ಕಲರ್ಸ್ ಕನ್ನಡ ವಾಹಿನಿಯೂ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿಲ್ಲ. ಅದಾಗಲೇ ಈ ಧಾರಾವಾಹಿಯೂ ರಿಮೇಕ್ ಎಂದು ನೆಟ್ಟಿಗರು ಹೇಳಿದ್ದಾರೆ.ಈ ಧಾರಾವಾಹಿಯೂ ಮೂಲತಃ ಮರಾಠಿಯಲ್ಲಿ ಪ್ರಸಾರವಾಗಿದ್ದು, ಅದನ್ನು ತೆಲುಗುವಿನಲ್ಲಿ ರಿಮೇಕ್ ಮಾಡಲಾಗಿದೆ. ತೆಲುಗುವಿನಲ್ಲಿ ಗೀತಾ LLB ಎಂದು ಧಾರಾವಾಹಿ ಪ್ರಸಾರವಾಗುತ್ತಿದೆ. ಈಗ ಇದನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗಿದೆ. ಇನ್ನು ನಾಯಕಿಯನ್ನು ರಿವೀಲ್ ಮಾಡಿದ್ದು, ಕೆಲವರು ಬೇಸರ ಮಾಡಿಕೊಂಡಿದ್ದಾರೆ.

ಬೇಸರ ಮಾಡಿಕೊಳ್ಳಲು ಕಾರಣ ನಾಯಕಿಯ ಪಾತ್ರ. ಹೌದು. ನಾಯಕಿಯಾಗಿ ನಟಿ ರಾಧಾ ಭಗವತಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಎಲ್ಲರೂ ಖುಷಿ ಪಟ್ಟಿದ್ದಾರೆ. ಆದರೆ, ಈಗಾಗಲೇ ನಟಿ ರಾಧಾ ಅವರು ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಆ ಪಾತ್ರದಿಂದ ಹೊರ ಬರುತ್ತಾರೆ ಎಂದು ಬೇಸರ ಮಾಡಿಕೊಂಡಿದ್ದಾರೆ. ಹೌದು ನಟಿ ರಾಧಾ ಭಾರ್ಗವಿ ಅವರು ಈಗಾಗಲೇ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿಯೂ ಇವರು ನಟಿಸಿದ್ದರು. ರಾಮಾಚಾರಿಯ ತಂಗಿ ಶೃತಿ ಪಾತ್ರವನ್ನು ಮಾಡುತ್ತಿದ್ದರು ನಟಿ ರಾಧಾ ಭಗವತಿ ಅವರು, ಸದ್ಯ ಅಮೃತಧಾರೆ ಸೀರಿಯಲ್ ನಲ್ಲಿ ಮಲ್ಲಿ ಪಾತ್ರದ ಮೂಲಕ ಫೇಮಸ್ ಆಗಿದ್ದಾರೆ.

ಹಳ್ಳಿಯಲ್ಲಿ ಬೆಳದ ದಡ್ಡಿಯಂತೆ ಕಾಣಿಸಿಕೊಂಡಿರುವ ಮಲ್ಲಿ ಪಾತ್ರಕ್ಕೆ ರಾಧಾ ಅವರು ಅದ್ಭುತವಾಗಿ ಹೊಂದಿಕೊಂಡಿದ್ದಾರೆ. ಈಗ ಭಾರ್ಗವಿ LLB ಧಾರಾವಾಹಿಯಲ್ಲಿ ನಟಿಸುವ ಸಲುವಾಗಿ ಅಮೃತಧಾರೆ ಧಾರಾವಾಹಿಯನ್ನು ಬಿಡಬಹುದು ಎಂದು ಎಲ್ಲರೂ ಗೆಸ್ ಮಾಡಿದ್ದು, ಬೇಡ ಎಂದು ಕೇಳುತ್ತಿದ್ದಾರೆ. ಇನ್ನು ನಟಿ ರಾಧಾ ಅವರು ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆ 90 ದಿನಗಳು, ಒಂದ್ಸಲ ಮೀಟ್ ಮಾಡೋಣ, ವಸಂತ ಕಾಲದ ಹೂವುಗಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸದ್ಯ ಅಪಾಯವಿದೆ ಎಚ್ಚರಿಕೆ ಸಿನಿಮಾದಲ್ಲಿ ನಾಯಕಿಯಾಗಿದ್ದು, ಚಿತ್ರದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ, ರಾಧಾ ಅವರು ಎರಡು ಸಿನಿಮಾಗಳಿಗೆ ಎರಡು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ಸೀರಿಯಲ್ ಒಂದಕ್ಕೆ ನಾಯಕಿ ಪಾತ್ರಕ್ಕೆ ಕಂಠದಾನ ಕೂಡ ಮಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X