Bhargavi LLB ; ಲಾಯರ್ ಭಾರ್ಗವಿಗೆ ಜೋಡಿಯಾಗಲಿರುವ ನಾಯಕ ಯಾರು ಗೊತ್ತಾ..?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾರ್ಗವಿ LLB ಎಂಬ ಹೊಸ ಧಾರಾವಾಹಿಯ ಪ್ರೊಮೋವನ್ನು ಈಗಾಗಲೇ ನೀವೆಲ್ಲಾ ನೋಡೇ ಇದೀರಾ. ಈ ಧಾರಾವಾಹಿಯ ನಾಯಕಿ ಬಗ್ಗೆಯೂ ಎಲ್ಲರಿಗೂ ಗೊತ್ತಾಗಿದೆ. ಇದೀಗ ನಾಯಕನ ಬಗ್ಗೆ ತಿಳಿಯುವ ಸರದಿ.
ಭಾರ್ಗವಿ LLB ಧಾರಾವಾಹಿಯ ಕಥೆಯ ಎಳೆಯ ಜೊತೆಗೆ ನಾಯಕ ಯಾರು ಎಂಬುದನ್ನೂ ವಾಹಿನಿ ತಿಳಿಸಿಕೊಟ್ಟಿದೆ. ಹೊಸ ಪ್ರೊಮೋ ನೋಡಿದ ವೀಕ್ಷಕರು ಕಥೆಯ ಸಾರಾಂಶವನ್ನು ಕಂಪ್ಲೀಟ್ ಆಗಿ ಅರ್ಥ ಮಾಡಿಕೊಂಡಿದ್ದಾರೆ. ತೆಲುಗು ಕಿರುತೆರೆಗೆ ಕನ್ನಡದ ಕಲಾವಿದರು ಹೋಗುವುದು ಸರ್ವೇ ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ತೆಲುಗು ಕಿರುತೆರೆಯ ನಟ ಕನ್ನಡ ಧಾರಾವಾಹಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಭಾರ್ಗವಿಗೆ ಜೋಡಿಯಾದ ಮನೋಜ್
ಭಾರ್ಗವಿ LLB ಧಾರಾವಾಹಿಯಲ್ಲಿ ನಟ ಮನೋಜ್ ಕುಮಾರ್ ಎಂಬುವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ನಟ ಮನೋಜ್ ಕುಮಾರ್ ಅವರು ಕೂಡ ಕನ್ನಡದವರೇ ಮೂಲತಃ ಮಂಗಳೂರಿನವರು. ಮನೋಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಮಲ್ಲಮ್ಮ ಟಾಕ್ಸ್ ಎಂಬ ಪೇಜ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇದೀಗ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ವೀಕ್ಷಕರ ಮನಸ್ಸನ್ನು ಗೆಲ್ಲುವುದಂತೂ ಪಕ್ಕಾ ಆಗಿದೆ.
ಅಪ್ಪನ ಶತ್ರು ಜೊತೆಗೆ ಲವ್
ಇನ್ನು ಪ್ರೊಮೋ ಪ್ರಕಾರ, ನಾಯಕನ ತಂದೆಯೇ ನಾಯಕಿ ವಿರುದ್ಧ ಕೋರ್ಟ್ ನಲ್ಲಿ ವಾದ ಮಾಡಲು ಮುಂದಾಗಿದ್ದು, ಭಾರ್ಗವಿಗೆ ಎಚ್ಚರಿಕೆ ಕೊಟ್ಟಿದ್ದಾನೆ. ಈ ಹಿಂದೆ ಭಾರ್ಗವಿ ತಂದೆ ಲಾಯರ್ ಆಗಿದ್ದಾಗ ಅವಮಾನವಾಗಿರುತ್ತದೆ. ತನ್ನ ತಂದೆಗೆ ನ್ಯಾಯ ಕೊಡಸಬೇಕು ಎಂದು ಅಪ್ಪನ ಆಸೆಯಂತೆ ಎಲ್ ಎಲ್ ಬಿ ಓದಿದ ನಾಯಕಿ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾಳೆ. ಎದುರಾಳಿ ಲಾಯರ್ ಮಾತಿಗೆ ಜಗ್ಗದ ಭಾರ್ಗವಿ ತನ್ನ ತಂದೆಗೋಸ್ಕರ ಹೋರಾಟ ನಡೆಸುತ್ತಿದ್ದು, ಅದೇನೇ ಆಗಲೀ ನನಗೆ ಆಗೋಲ್ಲ ಅನ್ನುವವರೆಗೂ ನನ್ನ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇನೆ ಎಂದಿದ್ದಾಳೆ. ಇನ್ನು ಈಗಾಗಲೇ ಹೀರೋಗೆ ಹೀರೋಯಿನ್ ಮೇಲೆ ಲವ್ ಆಗಿದೆ. ನಾಯಕಿ ಭಾರ್ಗವಿಯ ಧೈರ್ಯಕ್ಕೆ ಮೆಚ್ಚಿ ಅವಳನ್ನು ಹುಡುಕಿಕೊಂಡು ಕೋರ್ಟ್ ಗೆ ಬಂದಿದ್ದಾನೆ. ನಾಯಕಿಗೆ ನಾನು ನಿಮ್ಮ ಫ್ಯಾನ್ ಎಂದು ಹೇಳಿಕೊಂಡಿದ್ದು, ಆಲ್ ದಿ ಬೆಸ್ಟ್ ಹೇಳಿದ್ದಾನೆ.
ಹಳೆ ಕಥೆಗೆ ಹೊಸ ಪ್ರೀತಿ ಕೊಡಲಿದೆಯ ನ್ಯಾಯ
ಇತ್ತ ಸ್ವಾಭಿಮಾನಕ್ಕೆ ಹೆಚ್ಚು ಒತ್ತು ಕೊಡುವ ಲಾಯರ್ ಭಾರ್ಗವಿಯನ್ನು ನಾಯಕ ಪ್ರೀತಿಸುತ್ತಿದ್ದು, ತಂದೆಯ ಶತ್ರುಗಳು ತನಗೂ ಶತ್ರು ಎಂದು ಭಾವಿಸಿದ್ದಾನೆ. ಹೀಗಿರುವಾಗ ಇವರಿಬ್ಬರ ಪ್ರೀತಿ ಯಾರಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಧಾರಾವಾಹಿಗೆ ಆರ್.ಆರ್. ಆರ್ ಪ್ರೋಡಕ್ಷನ್ ಹೌಸ್ ಬಂಡವಾಳ ಹೂಡಿದ್ದು, ಸ್ವಪ್ನ ಕೃಷ್ಣ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಧಾರಾವಾಹಿಯೂ ಮೂಲತಃ ಮರಾಠಿಯಲ್ಲಿ ಪ್ರಸಾರವಾಗಿದ್ದು, ಅದನ್ನು ತೆಲುಗುವಿನಲ್ಲಿ ರಿಮೇಕ್ ಮಾಡಲಾಗಿದೆ. ತೆಲುಗುವಿನಲ್ಲಿ ಗೀತಾ LLB ಎಂದು ಧಾರಾವಾಹಿ ಪ್ರಸಾರವಾಗುತ್ತಿದೆ. ಈಗ ಇದನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗಿದೆ.
ಸಿನಿಮಾ ರಿಲೀಸ್ ಬ್ಯುಸಿಯಲ್ಲಿ ರಾಧಾ
ನಟಿ ರಾಧಾ ಭಾರ್ಗವಿ ಅವರು ಈಗಾಗಲೇ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿಯೂ ಇವರು ನಟಿಸಿದ್ದರು. ರಾಮಾಚಾರಿಯ ತಂಗಿ ಶೃತಿ ಪಾತ್ರವನ್ನು ಮಾಡುತ್ತಿದ್ದರು. ನಟಿ ರಾಧಾ ಭಗವತಿ ಅವರು, ಸದ್ಯ ಅಮೃತಧಾರೆ ಸೀರಿಯಲ್ ನಲ್ಲಿ ಮಲ್ಲಿ ಪಾತ್ರದ ಮೂಲಕ ಫೇಮಸ್ ಆಗಿದ್ದಾರೆ. ಸದ್ಯ ಕೆಲ ದಿನಗಳಿಂದ ಅಮೃತಧಾರೆ ಧಾರಾವಾಹಿಯಿಂದಲೂ ಕಾಣೆಯಾಗಿದ್ದಾರೆ. ಇನ್ನು ಇದೇ ತಿಂಗಳು ರಿಲೀಸ್ ಆಗಲು ಸಜ್ಜಾಗಿರುವ ಅಪಾಯವಿದೆ ಎಚ್ಚರಿಕೆ ಎಂಬ ಸಿನಿಮಾದಲ್ಲಿ ರಾಧಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











