ಮರಳಿ ಮನೆಗೆ ಬಂದ ಕಿರಣ್ ರಾಜ್, ಕರ್ಣನಿಗೆ ಹೊರಗಡೆ ಹೊಗಳಿಕೆಯ ಹೂಮಳೆ,ಮನೆಯೊಳಗಿದ್ದರೆ ಬೈಗುಳದ ಸುರಿಮಳೆ !

By ಪ್ರಿಯಾ ದೊರೆ

ಜೀ ಕನ್ನಡ ವಾಹಿನಿಯಲ್ಲಿ ಒಂದು ಧಾರಾವಾಹಿ ಮುಕ್ತಾಯವಾಗಿ ಮತ್ತೊಂದು ಹೊಸ ಧಾರಾವಾಹಿ ಯುಗಾದಿ ಹಬ್ಬಕ್ಕೆ ಶುರುವಾಗುವ ಲಕ್ಷಣಗಳೂ ಕಾಣುತ್ತಿವೆ.ಕಲರ್ಸ್ ಕನ್ನಡದಲ್ಲಿ ಈಗಾಗಲೇ ಕಳೆದ ಮೂರು ತಿಂಗಳಿನಿಂದ ಮೂರು ಹೊಸ ಧಾರಾವಾಹಿಗಳು ಶುರುವಾಗಿದ್ದು, ಇನ್ನೂ ಒಂದು ಹೊಸ ಧಾರಾವಾಹಿ ಬರಲು ಸಜ್ಜಾಗಿದೆ. ಹೀಗಿರುವಾಗ ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಿದ್ದು, ಇದೀಗ ಮತ್ತೊಂದು ನೂತನ ಧಾರಾವಾಹಿಯನ್ನು ಶುರು ಮಾಡಲು ಮುಂದಾಗಿದೆ. ಈ ಧಾರಾವಾಹಿಯ ಪ್ರೊಮೋ ಕೂಡ ರಿಲೀಸ್ ಆಗಿದೆ.

ಹರ್ಷ ಇನ್ಮುಂದೆ ಕರ್ಣ

ಕಿರುತೆರೆಯಲ್ಲೇ ಬಹುಬೇಡಿಕೆಯ ಟಾಪ್ ನಟ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಂತೂ ಫುಲ್ ಹ್ಯಾಪಿ ಆಗಿದ್ದಾರೆ. ಅಲ್ಲದೇ, ನಾಳೆಯಿಂದಲೇ ಧಾರಾವಾಹಿ ಶುರುವಾಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಅಂತಹ ಟಾಪ್ ನಟ ಯಾರು ಎಂದು ಯೋಚಿಸುತ್ತಿದ್ದೀರಾ..? ಬೇರೆ ಯಾರೂ ಅಲ್ಲ,ಅವರು ನಿಮ್ಮೆಲ್ಲರ ನೆಚ್ಚಿನ ನಟ ಹರ್ಷ ಅಲಿಯಾಸ್ ಕಿರಣ್ ರಾಜ್. ಹೌದು, ಕಲರ್ಸ್ ಕನ್ನಡ ವಾಹಿನಿಯೊಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿಯ ಹರ್ಷ ಇನ್ಮುಂದೆ ಕರ್ಣನಾಗಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಹೀರೋ ಸೆಂಟ್ರಿಕ್ ಕಥೆಗಾಗಿ ಕಾಯುತ್ತಿದ್ದ ನಟ ಕಿರಣ್ ರಾಜ್ ಅವರು ಇದೀಗ ಕರ್ಣನಾಗಿ ಎಂಟ್ರಿಕೊಟ್ಟಿದ್ದಾರೆ. ನಟ ಕಿರಣ್ ರಾಜ್ ಅವರ ಈ ಹೊಸ ಪಾತ್ರದ ಹೆಸರೂ ಕರ್ಣ, ಧಾರಾವಾಹಿಯ ಹೆಸರೂ ಕರ್ಣ.

written-update-on-new-serial-karna

ಹೊರಗೆ ಡಾಕ್ಟರ್ ಮನೆಯಲ್ಲಿ ಮೇಡ್

ಪ್ರೊಮೋದಲ್ಲಿ ದೊಡ್ಡ ವೈದ್ಯನಾಗಿರುವ ಕರ್ಣನಿಗೆ ಹೊರಗಡೆ ಅವಾರ್ಡ್ ಗಳ ಸುರಿಮಳೆ ಹಾಗೂ ಹೊಗಳಿಕೆಯ ಕಾರ್ಪೆಟ್ ಅನ್ನು ಹಾಸುತ್ತಿದ್ದರೆ, ಮನೆಯಲ್ಲಿ ಅನಾಥ, ತಿಪ್ಪಿಗುಂಡಿಯಲ್ಲಿದ್ದವನು ಎಂಬ ಬೈಗುಳ ಹಾಗೂ ಮನೆ ಕೆಲಸದವನಂತೆ ನೋಡುವ ಮನೆಯವರೇ ಇದ್ದಾರೆ. ಯಾರು ಏನೇ ಅಂಧೃಊ ನಗುಮುಖದಲ್ಲೇ ಇರುವ ಕರ್ಣ ಮನೆಯಲ್ಲಿ ಅಡುಗೆ ಕೆಲಸ, ಮನೆಯವರ ಸೇವೆಯನ್ನು ಮಾಡುತ್ತಾ ಖುಷಿಖುಷಿಯಾಗಿರುತ್ತಾನೆ. ಇನ್ನು ಪ್ರೊಮೋದಲ್ಲಿ ದೊಡ್ಡ ತಾರಾಬಳಗವನ್ನೇ ತೋರಿಸಲಾಗಿದೆ. ನಿರ್ದೇಶಕ, ನಿರ್ಮಾಪಕ, ನಟ, ರಂಗಕರ್ಮಿ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ನಟಿ ವರಲಕ್ಷ್ಮೀ ಶ್ರೀನಿವಾಸ್, ನಟ ಸುಂದರ್ ವೀಣಾ, ನಟಿ ವೀಣಾ ರಾವ್ ಮತ್ತು ನಟ ಶ್ಯಾಮ್ ಸಿಮ್ರನ್ ನಟಿಸುತ್ತಿದ್ದಾರೆ.

ನಾಯಕಿಗಾಗಿ ವೀಕ್ಷಕರ ಕಿತ್ತಾಟ

ಸದ್ಯ ನಾಯಕಿ ಯಾರೆಂದು ಇನ್ನೂ ತೋರಿಸಿಲ್ಲ. ಅದಾಗಲೇ ಅಭಿಮಾನಿಗಳು, ನಟಿ ರಂಜಿನಿ ರಾಘವನ್, ಮೋಕ್ಷಿತಾ ಪೈ, ಭವ್ಯ ಗೌಡ ನಾಯಕಿಯಾಗಲಿ ಎಂದು ಚರ್ಚೆ ಮಾಡುತ್ತಿದ್ದಾರೆ. ಅಲ್ಲದೇ ಈ ಧಾರಾವಾಹಿಗಾಗಿ ಬಹಳ ದೊಡ್ಡ ಮಟ್ಟದಲ್ಲಿ ಸೆಟ್ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ನಟ ಕಿರಣ್ ರಾಜ್ ಅವರು ಮೂಲತಃ ಮೈಸೂರಿನವರಾಗಿದ್ದು, ದೇವತೆ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಡ್ಯಾನ್ಸರ್, ಜ್ಯೂನಿಯರ್ ಆರ್ಟಿಸ್ಟ್ ಆಗಿದ್ದವರು, ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗುಂಡ್ಯನ ಹೆಂಡತಿ, ಕಿನ್ನರಿ, ಚಂದ್ರಮುಖಿ. ಕನ್ನಡತಿ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದು, ರಿಯಾಲಿಟಿ ಶೋ ಗಳಲ್ಲಿ ಕಿರಣ್ ಕಾಣಿಸಿಕೊಂಡಿದ್ದಾರೆ.

ಕರ್ಣನಿಗಾಗಿ ಕಾಯುತ್ತಿರುವ ಫ್ಯಾನ್ಸ್

ಇನ್ನು ಅಸತೋಮ ಸದ್ಗಮಯ, ಬಡ್ಡೀಸ್, ಭರ್ಜರಿ ಗಂಡು, ರಾನಿ, ಮೇಘ ಚಿತ್ರಗಳಲ್ಲಿ ನಟಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕನ್ನಡತಿ ಧಾರಾವಾಹಿ ಮೂಲಕ ಫೇಮಸ್ ಆಗಿದ್ದು, ಹರ್ಷ ಅಂತಲೇ ಎಲ್ಲಾ ಕಡೆ ಚಿರಪರಿಚಿತರಾಗಿದ್ದಾರೆ. ವಯಕ್ತಿಕವಾಗಿ ನಟ ಕಿರಣ್ ರಾಜ್ ಅವರಿಗೆ ಕಾರುಗಳ ಬಗ್ಗೆ ವಿಶೇಷ ಪ್ರೇಮವಿದೆ. ಇನ್ನೋವಾ, ಮಾರುತಿ ಏರ್ಟಿಗಾ, ಮರ್ಸಿಡೀಸ್ ಬೆಂಜ್ ಕಾರುಗಳನ್ನು ಕಿರಣ್ ರಾಜ್ ಅವರು ಹೊಂದಿದ್ದಾರೆ. ಸದ್ಯ ಕರ್ಣ ಆಗಿ ಬರುತ್ತಿರುವ ಕಿರಣ್ ರಾಜ್ ಅವರನ್ನು ವೆಲ್ ಕಮ್ ಮಾಡಲು ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X